radhika narayan posed backless : ಬ್ಯಾಕ್​ಲೆಸ್​ ಟಾಪ್​ನಲ್ಲಿ ಗಮನ ಸೆಳೆದ ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್​

radhika narayan posed backless : ಸ್ಯಾಂಡಲ್​ವುಡ್​ ನಟಿ ರಾಧಿಕಾ ಚೇತನ್​ ರಂಗಿತರಂಗ ಸಿನಿಮಾ ಮೂಲಕವೇ ಹೆಚ್ಚು ಚಿರಪರಿಚಿತರು. ಯೂ ಟರ್ನ್​, ರಂಗಿತರಂಗದಂತಹ ಡಿಫರೆಂಟ್​ ಸಿನಿಮಾಗಳಲ್ಲಿ ಕಾಣಿಸಿಕೊಂಡು ಸಾಲು ಸಾಲು ಯಶಸ್ಸನ್ನು ಮುಡಿಗೇರಿಸಿಕೊಂಡಿರುವ ನಟಿ ರಾಧಿಕಾ ಚೇತನ್​ ಇದೀಗ ಮತ್ತೆ ಅದೇ ರೀತಿಯ ಯಶಸ್ಸನ್ನು ಸಾಧಿಸಲು ಚಿತ್ರರಂಗದಲ್ಲಿ ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದಾರೆ.


ಯೂ ಟರ್ನ್​ ಹಾಗೂ ರಂಗಿತರಂಗ ಸಿನಿಮಾಗಳ ಬಳಿಕ ಸ್ಯಾಂಡಲ್​ವುಡ್​ನಲ್ಲಿ ಇವರು ನಟಿಸಿದ ಇನ್ಯಾವುದೇ ಸಿನಿಮಾಗಳು ಥಿಯೇಟರ್​ನಲ್ಲಿ ಅಂತಹ ಸದ್ದೇನು ಮಾಡಿಲ್ಲ. ಆದರೂ ಅದೃಷ್ಟ ಪರೀಕ್ಷೆಗೆ ನಿಂತಿರುವ ನಟಿ ರಾಧಿಕಾ ಚೇತನ್ ಸಧ್ಯ ಚೇಸ್ ಸಿನಿಮಾದ ಶೂಟಿಂಗ್​ ಪೂರ್ಣಗೊಳಿಸಿ, ಶಿವಾಜಿ ಸುರತ್ಕಲ್​ – 2 ನ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.


ರಾಧಿಕಾ ಚೇತನ್​ ಎಂದು ಸ್ಯಾಂಡಲ್​ವುಡ್​ಗೆ ಪರಿಚಿತರಾಗಿದ್ದ ಇವರು ಇದೀಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೆಸರನ್ನು ರಾಧಿಕಾ ನಾರಾಯಣ್​ ಎಂದು ಬದಲಾಯಿಸಿಕೊಂಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ರಾಧಿಕಾ ಚೇತನ್​ ಬ್ಯಾಕ್​ಲೆಸ್​ ಟಾಪ್​ ಒಂದನ್ನು ಧರಿಸಿ ಪೋಸ್​ ನೀಡಿದ್ದಾರೆ.


ಮೊದಲ ಫೋಟೋಗೆ ನಟಿ ರಾಧಿಕಾ 7 ಚಕ್ರಗಳನ್ನು ಸಕ್ರಿಯಗೊಳಿಸುತ್ತಿದ್ದೇನೆ ಎಂದು ಬರೆದು ಕೊಂಡಿದ್ದರೆ ಮತ್ತೊಂದು ಫೋಟೋಗೆ ಚಕ್ರದ ಬಳಿಕ ಮುಖದಲ್ಲಿನ ಕಾಂತಿ ಹೆಚ್ಚಿದೆ ಎಂಬರ್ಥದಲ್ಲಿ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಇವರು ಮೊದಲು ಪೋಸ್ಟ್​ ಮಾಡಿರುವ ಫೋಟೋದಲ್ಲಿ ಸಂಪೂರ್ಣ ಬೆನ್ನು ಕಾಣುತ್ತಿದೆ. ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಇದನ್ನು ಓದಿ : Malayalam Actor Sahana : ಖ್ಯಾತ ನಟಿ ಸಹನಾ ನಿಗೂಢ ಸಾವು : ಪತಿ‌ ಸಜ್ಜದ್ ಅರೆಸ್ಟ್‌, ತಾಯಿ ಬಹಿರಂಗ ಹೇಳಿಕೆ

ಇದನ್ನೂ ಓದಿ : Rashmika Mandanna : ಸ್ನೇಹಿತೆಯ ಮದುವೆಯಲ್ಲಿ ರಶ್ಮಿಕಾ ಮಿಂಚಿಂಗ್​​ : ಕೊಡವರ ಶೈಲಿಯ ಸೀರೆ ಧರಿಸಿದ ಕಿರಿಕ್​ ಬೆಡಗಿ

radhika narayan posed backless for camera and posted instagram-

Comments are closed.