Save Water at Home : ಮನೆಯಲ್ಲಿ ನೀರಿನ ಸದ್ಬಳಕೆ ಮಾಡುವುದಾದರೂ ಹೇಗೆ? ಇಲ್ಲಿದೆ ಸರಳ ಟಿಪ್ಸ್‌

ಬೇಸಿಗೆ (Summer) ಬಂತೆಂದರೆ ನೀರಿನ ಅಭಾವ ಎಲ್ಲಡೆ ಕಾಣಿಸುತ್ತದೆ. ಅದರಲ್ಲೂ ಬೇಸಿಗೆ ಕೊನೆಯ ದಿನಗಳಲ್ಲಂತೂ ಬಹಳ ಸಮಸ್ಯೆ ಎದುರಿಸಬೇಕಾಗುತ್ತದೆ (Save Water at Home). ಅತಿಯಾದ ತಾಪಮಾನದಿಂದ ಜಲಾಶಯಗಳಲ್ಲಿನ ನೀರು ಕನಿಷ್ಠ ಮಟ್ಟಕ್ಕೆ ಬಂದಿರುತ್ತದೆ. ನಮ್ಮ ಮನೆಗಳಿಗೆ ತಲುಪುವ ನೀರು ಗಮನಾರ್ಹವಾಗಿ ಕಡಿಮೆಯಾಗಿರುತ್ತದೆ.

ಹವಾಮಾನದ ಬದಲಾವಣೆ (Climate Change) ಯಿಂದ ಈ ಪರಿಣಾಮಗಳನ್ನು ನಾವು ಎದುರಿಸುತ್ತಿದ್ದೇವೆ. ನೀರನ್ನು ಸಂರಕ್ಷಿಸುವುದು ಹೆಚ್ಚು ಮುಖ್ಯವಾಗಿದೆ. ನೀರಿನ ಉಳಿತಾಯ ಹಣದ ಉಳಿತಾಯವೂ ಆಗಿದೆ. ನೀರಿಗಾಗಿ ನಾವು ಎಷ್ಟಲ್ಲಾ ಹಣವನ್ನು ಖರ್ಚು ಮಾಡುತ್ತಿದ್ದೇವೆ. ನಮ್ಮ ದೈನಂದಿನ ಜೀವನದಲ್ಲಿ ನಾವು ನೀರನ್ನು ಬಳಸುವ ವಿಧಾನವನ್ನು ಬದಲಾಯಿಸಿ ಕೊಳ್ಳುವುದರಿಂದ ನೀರಿನ ಕೊರತೆಯಿಂದ ಪಾರಾಗಬಹುದಾಗಿದೆ. ಅಡುಗೆ ಮನೆ, ಬಾತ್ರೂಮ್‌, ಅಂಗಳ ಮತ್ತು ಮನೆಯ ಸುತ್ತ ಕೆಲವು ನೀರಿನ ಪ್ರಜ್ಞೆಯನ್ನು ಅಳವಡಿಸಿಕೊಳ್ಳಬಹುದು.

  • ಎಲ್ಲಾದರೂ ನೀರಿನ ಸೋರಿಕೆ ಇದೆಯೇ ಎಂದು ಗಮನಿಸಿ :
    ನೀರಿನ ಪೈಪ್‌ಗಳಲ್ಲಿ ಎಲ್ಲಾದರೂ ಸೋರಿಕೆ ಇದೆಯೇ ಎಂದು ಗಮನಿಸಿ. ಫ್ಲಶ್‌ ಟ್ಯಾಂಕ್‌ಗಳಿಂದ ನೀರು ಅಧಿಕವಾಗಿ ಸೋರಿಕೆಯಾಗುತ್ತಿದೆಯೇ ಎಂದು ನೋಡಿ. ಒಂದು ವೇಳೆ ಹಾಗಿದ್ದರೆ ಅದನ್ನು ತಕ್ಷಣ ರಿಪೇರ್‌ ಮಾಡಿಸಿ.
  • ನೀರಿನ ಮರು ಬಳಕೆ ಮಾಡಿ :
    ಸಿಂಕ್‌ನಲ್ಲಿ ಹಣ್ಣು ಮತ್ತು ತರಕಾರಿಗಳನ್ನು ತೊಳೆಯುವಾಗ, ನೀರನ್ನು ಚರಂಡಿಗೆ ಹರಿಯಲು ಬಿಡುವ ಬದಲು ಒಂದು ಬೇಸಿನ್‌ನಲ್ಲಿ ಸಂಗ್ರಹಿಸಿ. ಒಳಾಂಗಣ ಅಥವಾ ಹೊರಾಂಗಣ ಸಸ್ಯಗಳಿಗೆ ನೀರುಣಿಸಲು ಅದನ್ನು ಬಳಸಿ.

ಇದನ್ನೂ ಓದಿ : Flavored Water Benefits: ಸಾದಾ ನೀರಿಗೆ ಪರ್ಯಾಯವಾಗಿ ಟ್ರೈ ಮಾಡಿ ಫ್ಲೇವರ್ಡ್ ನೀರು; ರುಚಿಗೂ ಆರೋಗ್ಯಕ್ಕೂ ಬೆಸ್ಟ್

  • ಮಳೆ ನೀರು ಸಂಗ್ರಹದ ಉಪಯೋಗ ಮಾಡಿ :
    ಕಾರ್‌, ಬೈಕ್‌ ತೊಳೆಯಲು ಸಂಗ್ರಹಿಸಿದ ಮಳೆ ನೀರನ್ನೇ ಉಪಯೋಗಿಸಿ. ಕುಡಿಯಲು ಬಳಸಬೇಡಿ ಬದಲಿಗೆ, ಇತರೆ ಕೆಲಸಗಳಿಗೆ ಸಮರ್ಪಕವಾಗಿ ಬಳಸಿಕೊಳ್ಳಿ.
  • ನೀರಿನ ಬಕೆಟ್‌ ಹೊಂದಿಸಿಕೊಳ್ಳಿ:
    ಅರ್ಧ ಕುಡಿದ ನೀರು ಚರಂಡಿಗೆ ಸೇರುವ ಬದಲು ಅವುಗಳನ್ನು ಒಂದು ಬಕೆಟ್‌ಗೆ ಹಾಕಿ. ಮನೆಯ ಗಿಡಗಳಿಗೆ ತಾಜಾ ನೀರುಣಿಸುವ ಬದಲು ಈ ನೀರುಗಳನ್ನು ಉಪಯೋಗಿಸಿ. ಸಿಂಕ್‌ಗಳನ್ನು ತೊಳೆಯಲು ಉಪಯೋಗಿಸಿಬಹುದು.
  • ಸಂವೇದನಾಶೀಲ ಅಡಿಗೆ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ :
    ನೀರನ್ನು ಮಿತವ್ಯಯವಾಗಿ ಬಳಸುವುದು ಅಷ್ಟೊಂದು ಕಷ್ಟವೇನೂ ಅಲ್ಲ.ನೀರು ವ್ಯರ್ಥವಾಗದಂತೆ ನೋಡಿಕೊಳ್ಳಲು ಕೆಲವೊಂದು ಬದಲಾವಣೆಗಳನ್ನು ಅಳವಡಿಸಿಕೊಳ್ಳಿ. ಬಿಸಿಯಾದ ವಸ್ತುಗಳನ್ನು ತಣಿಸಲು ನೀರಿನ್ನು ಹರಿಸುವ ಬದಲು ಫ್ರೀಜ್‌ನಲ್ಲಿಟ್ಟ ನೀರನ್ನು ಬಳಸಿ, ನಂತರ ಆ ನೀರನ್ನು ಮುಂದಿನ ಉಪಯೋಗಕ್ಕಾಗಿ ಪುನಃ ಶೇಖರಿಸಿಟ್ಟುಕೊಳ್ಳಿ. ಪಾತ್ರೆಗಳನ್ನು ಬಹಳ ಹೊತ್ತಿನವರೆಗೆ ಒಣಗಲು ಬಿಡಬೇಡಿ, ಆಗಿಂದಾಗ್ಗೇ ತೊಳೆದುಕೊಳ್ಳಿ.
  • ಸ್ನಾನಕ್ಕೆ ನಿಗದಿತ ಸಮಯ ಹೊಂದಿಸಿಕೊಳ್ಳಿ:
    ಗಂಟೆಗಟ್ಟಲೆ ಸ್ನಾನ ಮಾಡುವ ಬದಲು ಸ್ನಾನಕ್ಕೆಂದೇ ನಿಗದಿತ ಸಮಯ ಹೊಂದಿಸಿಕೊಳ್ಳಿ. ಬಾತ್‌ ಟಬ್‌ ಬಳಕೆ ಮಾಡುವುದರ ಬದಲಿಗೆ ಕಡಿಮೆ ಹರಿವಿರುವ ಶಾವರ್‌ ಬಳಸಿ.

ಇದನ್ನೂ ಓದಿ : Water Shortage alert : ಬೆಂಗಳೂರಿಗರಿಗೆ ಕಾದಿದೆ ಶಾಕ್ : ಜಲಗಂಡಾಂತರದ ಎಚ್ಚರಿಕೆ ಕೊಟ್ಟ ತಜ್ಞರು

(Save Water at Home how to save water at home)

Comments are closed.