Indian Army New Uniform: ವೈರಿಗಳ ಹುಟ್ಟಡಗಿಸಲು ಹೊಸ ಸಮವಸ್ತ್ರ ಧರಿಸಲಿದೆ ಭಾರತೀಯ ಸೇನೆ

ನವದೆಹಲಿ: ಬ್ರಿಟಿಷರ ಕಾಲದಿಂದ ಇದ್ದ ಕದನ ಭೂಮಿಯ ಸಮವಸ್ತ್ರದ ವರ್ಣವನ್ನು ರಕ್ಷಣಾ ಸಚಿವಾಲಯ ಕಳೆದ ತಿಂಗಳೇ ಬದಲಿಸಿದ್ದು, ಹೊಸ ಸಮವಸ್ತ್ರವು ಶನಿವಾರ ನಡೆದ ಸೇನೆಯ 74ನೇ ಸಂಸ್ಥಾಪನಾ ದಿನಾಚರಣೆಯ ವೇಳೆ ಸಾರ್ವಜನಿಕವಾಗಿ ಅನಾವರಣಗೊಂಡಿದೆ. ಆಲಿವ್ ಹಾಗೂ ಮಣ್ಣಿನ ಬಣ್ಣದ ಈ ಯೂನಿಫಾರ್ಮಮ್‌ಗಳನ್ನು (Indian Army New Uniform) ಧರಿಸಿದ ಪ್ಯಾರಾಚೂಟ್ ರಿಜಿಮೆಂಟ್‌ನ ಯೋಧರು ದೆಹಲಿ ಕಂಟೋನ್ಮೆಂಟ್ನಲ್ಲಿ ನಡೆದ ಪರೇಡ್‌ನಲ್ಲಿ ಭಾಗಿಯಾಗಿದ್ದರು.

ಯೋಧರನ್ನು ಉದೇಶಿಸಿ ಮಾತನಾಡಿದ ಭೂಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನವರವಣೆ, ದೇಶದ ಪೂರ್ವ ಗಡಿಯಲ್ಲಿ ಸಂದಿಗ್ಧ ಪರಿಸ್ಥಿತಿ ಇದೆ. ಹೀಗಾಗಿ ಹೊಸ ವರ್ಷ ಬಹಳ ಮಹತ್ವದ್ದಾಗಿದೆ. ಯಾವುದೇ ಕಾರಣಕ್ಕೂ ನೆರೆಯ ದೇಶಕ್ಕೆ ಗಡಿಯಲ್ಲಿನ ಯಥಾಸ್ಥಿತಿಯನ್ನು ಬದಲಿಸಲು ಬಿಡುವುದಿಲ್ಲ ಎಂದರು. ಸೇನಾ ದಿನ ಶುಭಕಾಮನೆಗಳನ್ನು ಯೋಧರಿಗೆ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ, ಸೇನೆಯ ಶೌರ್ಯ, ಸಾಹಸ ಮತ್ತು ವೃತ್ತಿಪರತೆ ಶ್ಲಾಘನೀಯ. ತಾಯ್ನಾಡಿನ ಸುರಕ್ಷತೆಗೆ ಸೈನಿಕರು ಸಲ್ಲಿಸುವ ನಿಸ್ವಾರ್ಥ ಸೇವೆಯನ್ನು ಪದಗಳಲ್ಲಿ ವಣಿರ್ಸಲಾಗದು. ಹವಾಮಾನ ವೈಪರೀತ್ಯದಲ್ಲಿ, ವಿವಿಧ ಭೌಗೋಳಿಕ ಪ್ರದೇಶದಲ್ಲಿ, ನೈಸರ್ಗಿಕ ವಿಕೋಪದಲ್ಲಿ, ಮಾನವೀಯ ಬಿಕ್ಕಟ್ಟಿನ ಸನ್ನಿವೇಶದಲ್ಲಿ, ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿ ಭಾರತೀಯ ಯೋಧರ ಸೇವಾ ತತ್ಪರತೆ ಅನನ್ಯ ಎಂದಿದ್ದಾರೆ.

ನೌಕಾ ಸೇನೆ ಕಳೆದ ವರ್ಷವೇ ಹೊಸ ಕ್ಯಾಮ್ಲೇಜ್ ಸಮವಸ್ತ್ರ ಪರಿಚಯಿಸಿದೆ. ಅರ್ಧ ತೋಳಿನ ತಿಳಿ ನೀಲಿ ಬಣ್ಣದ ಅಂಗಿ ಮತ್ತು ನೇವಿ ಬ್ಲೂ ಪ್ಯಾಂಟ್ ಬದಲು ನೂತನ ಡಿಜಿಟಲ್ ಕ್ಯಾಮ್ಲೇಜ್ ಯೂನಿಫಾರ್ಮ್ ಬಳಕೆಗೆ ತಂದಿದೆ. ರಣರಂಗದಲ್ಲಿ ಬಳಸುವ ಕ್ಯಾಮ್ಲೇಜ್ ಸಮವಸ್ತ್ರದೊಂದಿಗೆ ಹೊಸ ರೆಗ್ಯುಲರ್ ಸಮವಸ್ತ್ರವನ್ನೂ ರೂಪಿಸಲಾಗಿದೆ.

ಆರಾಮದಾಯಕ ಯೂನಿಫಾರ್ಮ್
ಹಗುರವಾದ ಹಾಗೂ ಪರಿಸರ ಸ್ನೇಹಿಯಾದ ಸಮರ ಸಮವಸ್ತ್ರವನ್ನು “ಡಿಜಿಟಲ್ ಡಿಸ್ರಪ್ಟಿವ್’ ಪ್ಯಾರ್ಟನ್’ ಪರಿಕಲ್ಪನೆಯಡಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಸಮರಾಂಗಣದಲ್ಲಿ ಗುರುತು ಮರೆಮಾಚುವಂತೆ ಮಾಡುವ (ಕ್ಯಾಮ್ಲೇಜ್) ಉದ್ದೇಶದಿಂದ ದೀರ್ಘ ಕಾಲ ಬಾಳಿಕೆ ಬರುವಂತಹ ಮತ್ತು ಬೇಸಿಗೆ ಹಾಗೂ ಚಳಿಗಾಲದಲ್ಲಿ ಯೋಧರಿಗೆ ಆರಾಮದಾಯಕವಾಗುವ ಯೂನಿಫಾರರ್ಮ್ ಇದಾಗಿದೆ. ರಾಷ್ಟ್ರೀಯ ಫ್ಯಾಷನ್ ಟೆಕ್ನಾಲಜಿ ಸಂಸ್ಥೆ (ಎನ್ಐಎಫ್‌ಟಿ) ಸೇರಿ ವಿವಿಧ ಸಂಸ್ಥೆಗಳ ಜತೆ ಸಮಾಲೋಚನೆ ನಡೆಸಿ ಹಾಗೂ ನಾನಾ ದೇಶಗಳ ಸೇನಾ ಸಮವಸ್ತ್ರಗಳನ್ನು ಅಧ್ಯಯನ ನಡೆಸಿ ಈ ಸಮವಸ್ತ್ರವನ್ನು ಅಂತಿಮಗೊಳಿಸಿಲಾಗಿದೆ.

ಸೇನಾ ದಿನ ವಿಶೇಷ
ದೇಶ ಸ್ವಾತಂತ್ರಗೊಂಡ ಕೆಲವು ವರ್ಷಗಳಾದರೂ ಸೇನೆ ಬ್ರಿಟಿಷ್ ಅಧಿಕಾರಿಗಳ ನಾಯಕತ್ವದಲ್ಲೇ ಇತ್ತು. ಕೊಡಗಿನ ಕನ್ನಡಿಗರಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಈ ಕಾರ್ಯಭಾರವನ್ನು 1949ರ ಜನವರಿ 15ರಂದು ಬ್ರಿಟಿಷ್ ಕಮಾಂಡರ್-ಇನ್ ಚೀಫ್ ಅವರಿಂದ ಅಧಿಕಾರ ವಹಿಸಿಕೊಂಡು ಮೂರೂ ಸೇನೆಗಳ ಮುಖ್ಯ ದಂಡನಾಯಕರಾದರು. ಹೀಗಾಗಿ ಪ್ರತಿವರ್ಷ ಜ.15 ಅನ್ನು ಸೇನಾ ಸಂಸ್ಥಾಪನಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಇದನ್ನೂ ಓದಿ: Work From Home Gadgets: ವರ್ಕ್ ಫ್ರಂ ಹೋಂ ಮಾಡುವವರೇ ಗಮನಿಸಿ; ಈ ಉಪಕರಣಗಳು ನಿಮ್ಮಲ್ಲಿರಲಿ

ಇದನ್ನೂ ಓದಿ: How to build Own App: ನಿಮ್ಮದೇ ಸ್ವಂತ ಆ್ಯಪ್ ರೂಪಿಸುವುದು ಹೇಗೆ?

(Indian Army New Uniform things must know)

Comments are closed.