Kailasha: ಶಿವ ಕೈಲಾಸದಲ್ಲಿ ನಡೆಯುತ್ತೆ ಇಂದಿಗೂ ವಿಸ್ಮಯ : ಕೈಲಾಸದ ಒಳಗೆ ಏನು ನಡೆಯುತ್ತೆ ಗೊತ್ತಾ?

ಕೈಲಾಸ ( Kailasha), ಇದು ಹಿಮಾಲಯದ ಮೇರು ಶಿಖರ . ಶಿವ ನಿವಾಸ, ಹಿಂದೂ ಆಸ್ತಿಕರ ಪಾಲಿಗಂತು ಇದು ಮುಕ್ತಿ ಫತಕ್ಕೆ ದಾರಿ. ಇಲ್ಲಿ ಸ್ವತಹ ಸದಾಶಿವ ರುದ್ರನೇ ನೆಲೆ ನಿಂತಿದ್ದಾನೆ ಅನ್ನೋ ನಂಬಿಕೆ ಪುರಾಣಗಳಿಂದಲೂ ಇದೆ. ಭಾರತ ಹಲವು ನದಿಗಳ ಮೂಲ ಇದು. ಇದು ಕೇವಲ ಹಿಂದುಗಳಿಗೆ ಮಾತ್ರವಲ್ಲ ಬದಲಾಗಿ ಜೈನ ಹಾಗೂ ಬೌದ್ಧರಿಗೂ ಆಸ್ಥೆಯ ಕೇಂದ್ರ. ಜೈನ ಪ್ರಕಾರ ಮೊದಲ ತೀರ್ಥಂಕರ ಇಲ್ಲಿ ತಪಸ್ಸು ಮಾಡಿ ಜ್ಞಾನವನ್ನು ಪಡೆದ್ರು ಅನ್ನೋ ನಂಬಿಕೆ ಇದೆ.

ಇದು ಪುರಾಣದ ವಿಚಾರವಾದ್ರೆ ವಿಜ್ಞಾನಗಳ ಪಾಲಿಗೂ ಇದೊಂದು ವಿಸ್ಮಯದ ತಾಣ. ಈ ಶಿಖರದ ಕುರಿತು ಹಲವಾರು ವಿಚಾರಗಳನ್ನು ಇವತ್ತಿಗೂ ವಿಜ್ಞಾನಿಗಳಿಂದ ಭೇಧಿಸಲಾಗಿಲ್ಲ. ಅಂತಹ ಕೆಲವು ವಿಸ್ಮಯಗಳನ್ನು ಇಲ್ಲಿದೆ ನೋಡಿ ಕೈಲಾಸ, ಹಿಮಾಲಯದ ಹಿಮ ಶ್ರೇಣಿಯಲ್ಲಿ ಇರೋದಾದ್ರು ಇದು ಹಿಮಾಲಯದ ಅತಿ ದೊಡ್ಡ ಶಿಖರವೇನೂ ಅಲ್ಲ. ಸಮುದ್ರ ಮಟ್ಟದಿಂದ ಸುಮಾರು 6656 ಮೀಟರ್ ಎತ್ತರದಲ್ಲಿರುವ ಈ ಶಿಖರವನ್ನು ಪೂರ್ಣವಾಗಿ ಹತ್ತಿರೋರು ಒಬ್ಬರು ಮಾತ್ರ ಅಂತ ಹೇಳಲಾಗುತ್ತೆ. ಹಲವರು ಈ ಶಿಖರವನ್ನು ಹತ್ತೋಕೆ ಪ್ರಯತ್ನ ಪಟ್ರು ಅವರಿಂದ ಕೈಲಾಸ ಪರ್ವತವನ್ನು ಪೂರ್ಣವಾಗಿ ಹತ್ತೋಕೆ ಆಗಲಿಲ್ಲ. ಇನ್ನು ಬೌದ್ಧ ಬಿಕ್ಕು ಒಬ್ಬರು ಮಾತ್ರ ಕೈಲಾಸದ ತುದಿಯವರೆಗೆ ಹತ್ತಿದ್ರು ಅಂತ ಹೇಳಲಾಗುತ್ತೆ.

(Shiva walking in Kailaasa is still awe: You know what is happening inside Kailash)

Kailasha : ಮಾನವ ನಿರ್ಮಿತ ಪಿರಾಮಿಡ್ ?

ಕೈಲಾಸ ಮಾನವ ನಿರ್ಮಿತ ಪಿರಮಿಡ್ ? ಹೀಗೊಂದು ವಾದ ವಿಜ್ಞಾನಿಗಳಲ್ಲಿದೆ. ಇದಕ್ಕೆ ಕಾರಣ ಕೈಲಾಸ ಪರ್ವವಿರುವ ರೀತಿ. ಕೈಲಾಸ ಪರ್ವತ ಚಿಕ್ಕ ಚಿಕ್ಕ ಕಲ್ಲುಗಳಿಂದ ನಿರ್ಮಿತವಾದ ಶಿಖರವಾಗಿದೆ. ಇದರ ತುದಿಯಲ್ಲಿ ಪಿರಮಿಡ್ ನಂತೆ ಕಾಣುತ್ತೆ. ಹೀಗಾಗಿ ಈ ಪರ್ವದ ಒಳಗೆ ಪಿರಮಿಡ್ ನಂತಹ ರಚನೆ ಇರಬಹುದು ಅಂತಾರೆ ವಿಜ್ಞಾನಿಗಳು. ಆದ್ರೆ ಇದಕ್ಕೆ ತಕ್ಕಂತಹ ಸಾಕ್ಷಿ ಯಾವುದು ಸಿಕ್ಕಿಲ್ಲ.

(Shiva walking in Kailaasa is still awe: You know what is happening inside Kailash)

Kailasha : ವಿಸ್ಮಯದ ಗೂಡು ಶಿವ ನಿವಾಸ

ಕೈಲಾಸ ಎಷ್ಟು ಸುಂದರವೋ ಅಷ್ಟೇ ನಿಗೂಢ. ಯಾಕಂದ್ರೆ ಇಲ್ಲಿ ಪರ್ವತ ಏರೋಕೆ ಹೋದ ಹಲವರು ವಾಪಸ್ ಬಂದಿಲ್ಲ. ಇನ್ನು ಪರ್ವತ ಏರೋಕೆ ಪ್ರಯತ್ನಿಸಿದ ಚಾರಣಿಕರಿಗೆ ವಿಚಿತ್ರ ಅವುಭವಗಳಾಗಿದೆ. ಅವರು ಹೇಳೋ ಪ್ರಕಾರ ಕೈಲಾಸ ಪರ್ವತದ ತಳದಲ್ಲಿ ಉಳಿದುಕೊಂಡಾಗ ರಾತ್ರಿ ವೇಳೆ ಯಾರೋ ಪಿಸು ಮಾತಿನಲ್ಲಿ ಮಾತಾಡುವ ಅವುಭವಾಗಿದೆ. ಜೊತೆಗೆ ಪರ್ವತ ಏರುತ್ತಾ ಸಾಗಿದಂತೆ ಗಂಟೆ ಶಬ್ಥ ಹಾಗೂ ಮಂತ್ರೋಚ್ಚಾರಣೆ ಕೇಳಿ ಬಂದ ಅನುಭವವನ್ನು ಚಾರಣಿಕರು ಹಂಚಿಕೊಂಡಿದ್ದಾರೆ . ಇದರ ಮತ್ತೊಂದು ವಿಸ್ಮಯ ಎಂದರೆ ಪರ್ವತ ಏರೋಕೆ ಶುರು ಮಾಡಿನ ನಂತರ ಉಗುರು ಹಾಗೂ ಕೂದಲು ಮಾಮೂಲಿಗಿಂತ ವೇಗವಾಗಿ ಬೆಳೆಯುತ್ತಂತೆ. ಇನ್ನು ಕೆಲವರ ಪ್ರಕಾರ ಪರ್ವತ ಏರುತ್ತಿದಂತೆ ವಯಸ್ಸು ಏರಿಕೆ ಯಾಗುತ್ತಂತೆ . ಈ ಹಿಂದೆ ಪರ್ವತ ಏರಿದ ಹಲವು ವಿದೇಶಿ ಚಾರಣಿಕರಿಗೆ ಈ ಅನುಭವ ಆಗಿತಂತೆ.

(Shiva walking in Kailaasa is still awe: You know what is happening inside Kailash)

Kailasha : ಭೂಮಿಗೆ ಶಕ್ತಿ ಕೈಲಾಸ

ಈ ಕೈಲಾಸ ಪರ್ವತವನ್ನು ಭೂ ಶಕ್ತಿಯ ಕೇಂದ್ರ ಎಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಕಾರಣ ಭೂಮಿಯ ದೃವಗಳು ಮತ್ತು ಕೈಲಾಸಕ್ಕೆ ಇರುವ ಅಂತರ. ಇಲ್ಲಿ ಕೈಲಾಸ ಉತ್ತರ ದೃವದಿಂದ 6666 ಕಿ.ಮೀ. ದೂರದಲ್ಲಿದೆ. ಅದೇ ದಕ್ಷಿಣ ದೃವಕ್ಕೆ13332 ಕಿ.ಮೀ ದೂರದಲ್ಲಿದೆ . ಅಂದ್ರೆ ಉತ್ತರ ದೃವದ ದೂರದ ಎರಡು ಪಟ್ಟು ಹೀಗಾಗಿ ಇದು ಭೂಮಿ ಕೇಂದ್ರ ಅಂತ ಹೇಳಲಾಗುತ್ತೆ. ಹೀಗಾಗಿ ಇಲ್ಲಿ ಭೂಮಿಯ ಅತಿ ಹೆಚ್ಚಿನ ಶಕ್ತಿ ಕೇಂದ್ರಿಕೃತವಾಗಿದೆ ಅನ್ನೋದು ಹಲವರ ಅಭಿಪ್ರಾಯ.

ಇದನ್ನೂ ಓದಿ : Sudha Murty : ಬಡವರಿಗಾಗಿ ಆರೋಗ್ಯ ಸೇವೆ :103 ಕೋಟಿ ವೆಚ್ಚ, 350 ಹಾಸಿಗೆ ಆಸ್ಪತ್ರೆ ನಿರ್ಮಿಸಿದ ಸುಧಾಮೂರ್ತಿ

ಸದ್ಯಕ್ಕೆ ಚೀನಾ ಹಾಗೂ ಭಾರತ ಸರ್ಕಾರವೇ ಚಾರಣಿಕರ ಹಿತ ದೃಷ್ಟಿ ಹಾಗೂ ಜನರ ನಂಬಿಕೆಗಾಗಿ ಕೈಲಾಸ ಪರ್ವತದ ಚಾರಣವನ್ನು ನಿಷೇಧಿಸಿದೆ. ಆದ್ರೆ ಇಂದಿಗೂ ಕೈಲಾಸದ ಕುರಿತು ತಿಳಿಯೋಕೆ ಅಲ್ಲಿಗೆ ಬರುವ ಜನರು ಹಾಗೂ ವಿಜ್ಞಾನಿಗಳ ದಂಡು ಇದ್ದೇ ಇದೆ. ಒಟ್ಟಾರೆ ಹೇಳಬೇಕಾದ್ರೆ ಆಸ್ತಿಕರ ಪಾಲಿಗೆ ಇದು ಶ್ರದ್ಧಾಕೇಂದ್ರವಾದ್ರೆ . ವಿಜ್ಞಾನದ ಪಾಲಿಗೆ ವಿಸ್ಮಯದ ಗೂಡು.

ಇದನ್ನೂ ಓದಿ : ಭಾರತದ ಪುರಾತನ ಹಾಗೂ ವಿಶೇಷವಾದ ಶಿವಲಿಂಗ ಎಲ್ಲಿದೆ ಗೊತ್ತಾ ?

(Shiva walking in Kailaasa is still awe: You know what is happening inside Kailash)

Comments are closed.