Ghee Benefits : ತುಪ್ಪದ ಪ್ರಯೋಜನ ಕೇಳಿದ್ರೆ ಬೆರಗಾಗ್ತಿರಾ

  • ಅಂಚನ್ ಗೀತಾ

Ghee Benefits : ತುಪ್ಪ… ವಾವ್ ಹೆಸರು ಕೇಳಿದ್ರೆನೆ ಬಾಯಲ್ಲಿ ನೀರೂರುತ್ತೆ ಅಲ್ವ. ಹೌದು, ತುಪ್ಪದ ಘಮ ನೇ ಹಾಗೆ. ಹೀಗಾಗಿ ಬಹಳಷ್ಟು ಜನ ತುಪ್ಪ ಇಷ್ಟಪಟ್ರೆ ಇನ್ನು ಕೆಲವರು ತುಪ್ಪ ಅಂದ್ರೆ ಆಗೋದಿಲ್ಲ. ಆದ್ರೆ ತುಪ್ಪದ ಸೇವನೆ ಎಷ್ಟು ಅಗತ್ಯವನ್ನೋದನ್ನ ತಿಳಿದುಕೊಳ್ಳಿ.

Ghee benefits for health beauty
Ghee benefits : ತುಪ್ಪದ ಪ್ರಯೋಜನ ಕೇಳಿದ್ರೆ ಬೆರಗಾಗ್ತಿರಾ 6

ವೈರಸ್ ಮತ್ತು ಬ್ಯಾಕ್ಟೀರಿಯದ ವಿರುದ್ದ ಹೋರಾಡುವ ಗುಣ ಮತ್ತು ಆಂಟಿ ಆಕ್ಸಿಡೆಂಟ್ ಜೊತೆಗೆ ಕೊಂಚ ಕೊಬ್ಬಿನ ತೈಲವನ್ನ ಹೊಂದಿದೆ. ತುಪ್ಪವನ್ನು ಪ್ರತಿ ಊಟದೊಂದಿಗೆ ಚಿಕ್ಕ ಪ್ರಮಾಣದಲ್ಲಿ ಸೇವಿಸಿದರೆ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ.

Ghee benefits for health beauty
Ghee benefits : ತುಪ್ಪದ ಪ್ರಯೋಜನ ಕೇಳಿದ್ರೆ ಬೆರಗಾಗ್ತಿರಾ 7

ತುಪ್ಪದಲ್ಲಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳು ಆರೋಗ್ಯಕರವಾಗಿರಲು ಹಾಗೂ ಸದ್ರಢವಾಗಿರಲು ನೆರವಾಗುತ್ತೆ. ತುಪ್ಪ ಸೇವನೆಯಿಂದ ಮಧುಮೇಹ ಮತ್ತು ಹೃದಯದ ರೋಗಗಳನ್ನು ತಡೆಗಟ್ಟಬಹುದು. ಮೂಗಿನಲ್ಲಿ ರಕ್ತ ಬರುವ ಕಾಯಿಲೆ ಇರುವವರು ಕರಗಿದ ತುಪ್ಪವನ್ನು ಮೂಗಿನ ಹೊಳ್ಳೆಗಳ ಒಳ ಹಚ್ಚಿದರೆ ರಕ್ತ ಸೊರುವುದು ಕಡಿಮೆಯಾಗುತ್ತದೆ.

Ghee benefits for health beauty
Ghee benefits : ತುಪ್ಪದ ಪ್ರಯೋಜನ ಕೇಳಿದ್ರೆ ಬೆರಗಾಗ್ತಿರಾ 8

ತುಪ್ಪ ಸೇವನೆಯಿಂದ ಸ್ಮರಣಶಕ್ತಿ ಮತ್ತು ಬುದ್ದಿ ಮತ್ತೆ ಹೆಚ್ಚಾಗಲು ನೆರವಾಗುತ್ತೆ. ದಿನ ನಿತ್ಯ ತುಪ್ಪ ಸೇವಿಸಿದ್ರೆ ಕ್ಯಾನ್ಸರ್ ಬರುವ ಪ್ರಮಾಣ ಕಡಿಮೆ ಆಗುತ್ತದೆ. ತ್ವಚೆಯ ಕಾಂತಿ ಕೂಡ ಇಮ್ಮಡಿಗೊಳ್ಳುತ್ತದೆ. ರೊಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ. ಕಾಲುಗಳಲ್ಲಿ ರಕ್ತ ಸಂಚಾರ ಕಡಿಮೆಯಾಗಿ ಅಥವಾ ರಕ್ತ ನಾಳಗಳ ತಡೆಯಿಂದಾಗುವ ಸಿಡಿತ, ನೋವಿದ್ದರೆ ಕಾಲಿಗೆ ತುಪ್ಪ ಹಚ್ಚಬೇಕು.

Ghee benefits for health beauty
Ghee benefits : ತುಪ್ಪದ ಪ್ರಯೋಜನ ಕೇಳಿದ್ರೆ ಬೆರಗಾಗ್ತಿರಾ 9

ಹೆರಿಗೆ ನೋವು ಪ್ರಾರಂಭ ಆದ ತಕ್ಷಣ ಬಿಸಿ ಗಂಜಿಗೆ ತುಪ್ಪ ಹಾಕಿ ಸೇವಿಸಿದರೆ ಸುಖ ಪ್ರಸವಕ್ಕೆ ಸಹಕಾರಿ. ಅತಿಯಾದ ಜ್ವರ ಬಂದಾಗ ತುಪ್ಪವನ್ನು ಅಂಗೈ,ಪಾದ ಮತ್ತು ಹಣೆಗೆ ಹಚ್ಚಿದರೆ ಜ್ವರ ಬೇಗ ಶಮನವಾಗುತ್ತದೆ. ತರಚು ಗಾಯ,ಸುಟ್ಟ ಗಾಯಗಳಿಗೆ ತುಪ್ಪ ಹಚ್ಚಿದರೆ ಉರಿ ಕಮ್ಮಿಯಾಗುತ್ತೆ. ರಾತ್ರಿ ಮಲಗುವ ಮುನ್ನ ಬಿಸಿ ಹಾಲಿಗೆ ಕೊಂಚ ತುಪ್ಪ ಸೇರಿಸಿ ಕುಡಿದರೆ ಉತ್ತಮ ನಿದ್ದೆ ಬರುತ್ತೆ.

Ghee benefits for health beauty
Ghee benefits : ತುಪ್ಪದ ಪ್ರಯೋಜನ ಕೇಳಿದ್ರೆ ಬೆರಗಾಗ್ತಿರಾ 10

ಅರ್ಧ ಚಮಚ ಮೆಂತೆ ಕಾಳನ್ನು ತುಪ್ಪದಲ್ಲಿ ಹುರಿದು ಪುಡಿ ಮಾಡಿ ಮಜ್ಜಿಗೆಗೆ ಹಾಕಿ ಕುಡಿದರೆ ಪಿತ್ತದಿಂದ ಉಂಟಾದ ಹೊಟ್ಟೆ ನೋವು ಕಡಿಮೆಯಾಗುತ್ತದೆ.

ಇದನ್ನೂ ಓದಿ : Indoor Plants : ಮನೆಯ ಒಳಗೆ ಗಿಡ ಬೆಳೆಸಿ; ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ!!

ಇದನ್ನೂ ಓದಿ : Gyan Mudra : ಜ್ಞಾನ ಮುದ್ರೆ : ನಿದ್ರಾಹೀನತೆ ಮತ್ತು ಮಧುಮೇಹ ಸಮಸ್ಯೆಗೆ ಉತ್ತಮ ಪರಿಹಾರ !!

Ghee Benefits for Health Beauty

Comments are closed.