Kanive Maramma Temple : ಬೆರಳ ತುದಿಯಲ್ಲಿ ಹಿಡಿದಿದ್ದಾಳೆ ಡ್ಯಾಂ : ಆಣೆಕಟ್ಟು ಕಾಯೋಕೆ ನಿಂತಿದ್ದಾಳೆ ಕಣಿವೆ ಮಾರಮ್ಮ

ಯಾವುದೇ ಕೆಲಸ ಮಾಡೋಕು ಮುನ್ನ ದೇವರನ್ನು ನೆನೆದರೆ ಅವನು ಕಾಪಾಡಿಯೇ ಕಾಪಾಡುತ್ತಾನೆ ಅನ್ನೋ ನಂಬಿಕೆ ನಮ್ಮಲ್ಲಿ ಮೊದಲಿನಿಂದಲೂ ಬೆಳೆದು ಬಂದಿದೆ. ಆ ಕೆಲಸ ಚಿಕ್ಕದೇ ಆಗಲಿ ದೊಡ್ಡದೇ ಆಗಲಿ. ಇದಕ್ಕೆ ಸಾಕ್ಷಿಯಾಗಿ ನಿಂತಿರೋದೆ ಈ (Kanive Maramma Temple) ದೇವಾಲಯ. ಇಲ್ಲಿ ತಾಯಿ ಅಂಬಿಕೆನೇ ಆಣೆಕಟ್ಟು ಕಾಯೋಕೆ ನಿಂತದ್ದಾಳೆ.

 ಹೌದು  ಇದೇ ಈ ದೇವಾಲಯದ ವಿಶೇಷ ,  ಇಲ್ಲಿ  ತಾಯಿಯ ಪಾದಕ್ಕೆ ತಾಗಿ ಆಣೆಕಟ್ಟು ನಿಂತಿದೆ.  ಮಾರಿಕಾಂಬೆಯೇ   ತನ್ನ ಪಾದದ ಮೂಲಕ ಆ ಆಣೆಕಟ್ಟು ಹಿಡಿದು ನಿಂತಿದ್ದಾಳೆ ಅನ್ನೋದು ಭಕ್ತರ ನಂಬಿಕೆ.  ಅದಕ್ಕೆ ಇರಬೇಕು ಆಣೆಕಟ್ಟಿಗೆ  ಮಾರಿಕಣಿವೆ  ಡ್ಯಾಂ ಅಂತಾನೆ ಕರಿಯೋದು. ಇದು ಮಾರಿ ಕಣಿವೆ ಡ್ಯಾಂ ಅಂತಾನೆ ಕರಿಸಿಕೊಳ್ಳೋ ವಾಣಿವಿಲಾಸ ಆಣೆಕಟ್ಟಿನ  ಬಳಿಯಿರೋ  ಮಾರಿಕಾಂಬ ಅಥವಾ  ಕಣಿವೆ ಮಾರಮ್ಮ ದೇವಾಲಯ . ಆಣೆಕಟ್ಟಿಗೆ ತಾಗಿಕೊಂಡೇ ಇರು ಈ ದೇವಾಲಯವೇ   ಇದು .  ಇಲ್ಲಿರುವ ಮಾರಿಕಾಂಬೆ ಈ ಡ್ಯಾಂಗೆ ಯಾವುದೇ ರೀತಿಯ ತೊಂದರೆ ಬರದ ರೀತಿಯಲ್ಲಿ ಕಾಯುತ್ತಾಳೆ ಅನ್ನೋದು ಇಲ್ಲಿಯ ಜನರ ನಂಬಿಕೆ.

 ಇದಕ್ಕೆ ಇನ್ನೊಂದು ಕಾರಣನೂ ಇದೆ. ಸಾಮಾನ್ಯ ವಾಗಿ ಎಲ್ಲಾ ದೇವಾಲಯಗಳ ಮೂರ್ತಿಗಳು ಗರ್ಭಗುಡಿ ಬಾಗಿಲಿಗೆ ಮುಖ ಮಾಡಿದ್ರೆ, ಇಲ್ಲಿ ಮಾತ್ರ  ಮಾರಿಕಾಂಬೆ ಬೆನ್ನು ಮಾಡಿ ಕುಳಿದ್ದಾಳೆ.  ಇನ್ನು ತಾಯಿಯ ಕಾಲ ಹೆಬ್ಬೆರಳಗಳು  ಆಣೆಕಟ್ಟೆಗೆ ಒತ್ತಿ ಹಿಡಿದಂತಿದೆ.  ಹೀಗಾಗಿ ತಾಯಿ ಆಣೆಕಟ್ಟನ್ನು ತನ್ನ ಬೆರಳಿನಲ್ಲಿ ಒತ್ತೊ ಹಿಡಿದು ಕಾಯುತ್ತಿದ್ದಾಳೆ ಅನ್ನೋದು ಭಕ್ತ ನಂಬಿಕೆ. ಇಲ್ಲಿ ತಾಯಿಯ ಬೆನ್ನ ಬದಿಯ ಭಾಗಕ್ಕೆ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತೆ. ಇನ್ನು ಈ ದೇವಾಲಯದ ಇತಿಹಾಸಕ್ಕೆ ಬರೋದಾದ್ರೆ  ಇದನ್ನು ವಿಜಯ ನಗರದ ಅರಸರು  14- 15 ನೇ ಶತಮಾನದಲ್ಲಿ  ಸ್ಥಾಪಿಸಿದರು ಎನ್ನಲಾಗ್ತಿದೆ.  ಇದಾದ ಬಳಿಕ ಮೈಸೂರು ಅರಸರು ಡ್ಯಾಂ ಕಟ್ಟಿದ ಬಳಿಕ ಇದನ್ನು ಪುನರ್ ಸ್ಥಾಪಿಸಿದರು.

 ಇನ್ನು ಈ ಡ್ಯಾಂ ಬಗ್ಗೆ ಹೇಳೋದಾದ್ರೆ , ಇನ್ನು ಬಯಲು ಸೀಮೆಯ  ಜಿಲ್ಲೆಗಳಿಗೆ ನೀರುಣಿಸುವ ಸಾಗರ.  ಇದನ್ನು ವೇದವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಮೈಸೂರಿನ ರಾಣಿ ಕಟ್ಟಿಸಿದ್ರು ಅನ್ನೋ ಮಾತಿದೆ. ಅದಕ್ಕೆ ವಾಣಿವಿಲಾಸ ಸಾಗರ ಅಂತನೇ ಹೆಸರಿಡಲಾಗಿದೆ. ಇನ್ನು ಇದರ  ನಿರ್ಮಾಣದ ವೇಳೆ ಹಣದ ಕೊರತೆ ಉಂಟಾದಾಗ ರಾಣಿಯ ಒಡವೆಯನ್ನೇ ಒತ್ತೆಇಟ್ಟು ಈ ಆಣೆಕಟ್ಟು ನಿರ್ಮಾಣ ಮಾಡಿದರಂತೆ.  ಈ ಆಣೆಕಟ್ಟಿನ ಮತೊಂದು ವಿಶೇಷ ಅಂದ್ರೆ  ಒಂದು ಭಾಗದಿಂದ ಇದು ಭಾರತದ ಭೂಪಟದಂತೆ ಕಾಣುತ್ತೆ

ಮಾರಿಕಾಂಬ ದೇವಾಲಯದ ವಿಚಾರಕ್ಕೆ ಬರೋದಾದ್ರೆ  ಇಲ್ಲಿ  ಮಾರ್ಚ್‌  ತಿಂಗಳಲ್ಲಿ ಜಾತ್ರೆ ನಡೆಯುತ್ತೆ .ನವರಾತ್ರೆಯಲ್ಲಿ ತಾಯಿಗೆ ವಿಶೇಷ ಪೂಜೆ  ಮಾಡಲಾಗುತ್ತೆ. ಆಗ ಆಂದ್ರಪ್ರದೇಶ  ಸೇರಿದಂತೆ ವಿವಿಧ ಕಡೆಗಳಿಂದ ಭಕ್ತರ ದಂಡೇ ಆಗಮಿಸುತ್ತೆ. ಇನ್ನು ದೇವಾಲಯಕ್ಕೆ  ಹೋದರೆ ದೇವರ ದರ್ಶನ ಜೊತೆಗೆ ಪ್ರಕೃತಿಯ ವಿಹಂಗಮ ನೋಟನೂ ನೋಡಬಹುದು. ಜೊತೆಗೆ ನಮ್ಮ ಮಣ್ಣಿನ ವಿಜ್ಞಾನದಲ್ಲಿ ನಿರ್ಮಾಣವಾದ ಆಣೆಕಟ್ಟಿನ ನೋಟವನ್ನು ಸವಿಯಬಹುದು.

ಇದನ್ನೂ ಓದಿ : ದುರ್ಗಮ ಗುಹೆಯಲ್ಲಿ ನೆಲೆನಿಂತ ಮಹಾದೇವ ; ಈತನ ಪ್ರಸಾದದಿಂದ ಸರ್ವರೋಗ ಮಾಯ

ಇದನ್ನೂ ಓದಿ : ಬಿಸಿನೀರಿನಲ್ಲಿ ದೇವರಿಗೆ ಅಭಿಷೇಕ ; ಭಕ್ತರ ಮುಂದೆಯೇ ಪವಾಡ ಮಾಡ್ತಾನೆ ನಾರಾಯಣ

(Kanive Maramma Temple in Chitradurga)

Comments are closed.