Sabarimala : ಶಬರಿಮಲೆ ದರ್ಶನಕ್ಕೆ 13 ಲಕ್ಷ ಭಕ್ತರಿಂದ ನೋಂದಣಿ : ಮಂಡಲ-ಮಕರವಿಳಕ್ಕು ಯಾತ್ರೆಗೆ ಮಳೆಯ ಭೀತಿ

ಶಬರಿಮಲೆ : ಧರ್ಮಶಾಸ್ತ ಶಬರಿಮಲೆ ಶ್ರೀ ಅಯ್ಯಪ್ಪನ (Sabarimala Ayyappa )ಸನ್ನಿಧಿಯಲ್ಲೀಗ ಮಂಡಲ ಮರಕವಿಳಕ್ಕು ಯಾತ್ರೆ ಆರಂಭಗೊಂಡಿದೆ. ಈ ಬಾರಿ ಅಯ್ಯಪ್ಪನ ದರ್ಶನಕ್ಕೆ ಬರೋಬ್ಬರಿ 13 ಲಕ್ಷ ಭಕ್ತರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಯಾತ್ರೆಗೆ ಇದೀಗ ಮಳೆಯ ಭೀತಿ ಎದುರಾಗಿದ್ದು, ಆತಂಕ ಬೇಡ ಎಂದು ಕೇರಳ ಸರಕಾರ ಹೇಳಿದೆ.

ಶಬರಿಮಲೆಯಲ್ಲಿ ಸಭೆಯನ್ನು ನಡೆಸಿದ ಕೇರಳ ಸರಕಾರದ ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್‌ ಅವರು, ಈ ಬಾರಿಯ ಶಬರಿಮಲೆ ಯಾತ್ರೆಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಎಲ್ಲಾ ಭಕ್ತರಿಗೆ ಶಬರಿಮಲೆ ದರ್ಶನಕ್ಕ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಯಾವುದೇ ಭಕ್ತರು ಕೂಡ ಆತಂಕ ಪಡುವುದು ಬೇಡ ಎಂದಿದ್ದಾರೆ.

ಇದೀಗ ಮಂಡಲ ಮರಕವಿಳಕ್ಕು ಯಾತ್ರೆ ಆರಂಭಗೊಂಡಿದೆ. ಆದರೆ ಕೇರಳದಲ್ಲಿ ಭಾರೀ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಅಲ್ಲದೇ ಮಳೆಯ ಅಬ್ಬರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪಂಪಾನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಹೀಗಾಗಿ ಅಯ್ಯಪ್ಪ ಭಕ್ತರು ಪಂಪಾ ನದಿಗೆ ಇಳಿಯವುದನ್ನು ನಿಷೇಧಿಸಲಾಗಿದೆ. ಭಕ್ತರು ನೀಲಿಮಲೆ ಹಾಗೂ ಅಪಾಚೆಮೇಡುವಿನ ಸಾಂಪ್ರದಾಯಿಕ ಮಾರ್ಗದ ಮೂಲಕ ಶಬರಿಮಲೆ ರಸ್ತೆ ಮಾರ್ಗವನ್ನು ತೆರೆಯಲಾಗುವುದು. ಅಲ್ಲದೇ ಎರಡು ಆರೋಗ್ಯ ಕೇಂದ್ರಗಳನ್ನು ಈ ಮಾರ್ಗದಲ್ಲಿ ತೆರೆಯಲಾಗುವುದು ಎಂದಿದ್ದಾರೆ.

ಮಳೆಯಿಂದಾಗಿ ಭಕ್ತರಿಗೆ ಸಮಸ್ಯೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಎರಡೂ ಮಾರ್ಗಕ್ಕೆ ಬೆಳಕಿನ ವ್ಯವಸ್ಥೆಯ ಜೊತೆಗೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ : ಪುನೀತ್‌ ಅಗಲಿಕೆಯ ನೋವಲ್ಲೂ ಅಭಿಮಾನಿಗಳ ಕಾಳಜಿ : ಪತ್ರದಲ್ಲಿ ಅಶ್ವಿನಿ ಹೇಳಿದ್ದೇನು ಗೊತ್ತಾ?

ಇದನ್ನೂ ಓದಿ : ಗುಂಡ್ಮಿ ಶ್ರೀ ಮಾಣಿಚನ್ನಕೇಶವ ದೇವರಿಗೆ ಸ್ವರ್ಣಲೇಪಿತ ರಜತ ಮುಖವಾಡ ಸಮರ್ಪಣೆ

(13 Lakh Devotees Booked for Darshna in Sabarimala no Need To Panic Over rains Minister Radhakrishna)

Comments are closed.