Acne breakouts : ಚಳಿಗಾಲದಲ್ಲಿ ಕಾಡುವ ಮೊಡವೆ ಸಮಸ್ಯೆಗೆ ಇಲ್ಲಿದೆ ಪರಿಹಾರ

Acne breakouts : ಮೊಡವೆಯು ಹೇಗೆ ಉಂಟಾಗುತ್ತದೆ ಎಂದು ಹೇಳಲು ವಿಶೇಷ ವಿವರಣೆ ಬೇಕಿಲ್ಲ. ಇದು ಎಲ್ಲರಿಗೂ ತಿಳಿದಿರುವ ವಿಚಾರವೇ. ಅಂದಹಾಗೆ ಈ ಮೊಡವೆಯು ನಿಮ್ಮ ದೇಹದ ಯಾವುದೇ ಭಾಗದಲ್ಲಿ ಬೇಕಿದ್ದರೂ ಉಂಟಾಗಬಹುದು. ಆದರೆ ಸಾಮಾನ್ಯವಾಗಿ ಮೊಡೆಯು ನಿಮ್ಮ ಮುಖ, ತೋಳು, ಎದೆ ಇಂತಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮೊಡವೆಯು ನಿಮ್ಮ ತ್ವಚೆಯ ಅಂದವನ್ನು ಕೆಡಿಸುತ್ತದೆ. ಅದರಲ್ಲಿಯೂ ಚಳಿಗಾಲದಲ್ಲಿ ಮೊಡವೆ ಸಮಸ್ಯೆ ಇನ್ನಷ್ಟು ಹೆಚ್ಚಾಗಿ ಕಾಡುತ್ತದೆ. ಹಾಗಾದರೆ ಮೊಡವೆ ಸಮಸ್ಯೆಯಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ಏನೆಲ್ಲ ಮಾಡಬೇಕು ಎಂಬುದಕ್ಕೆ ಇಲ್ಲಿದೆ ಮಾಹಿತಿ :

ಸದಾ ನೀರು ಕುಡಿಯಿರಿ :
ಚಳಿಗಾಲದಲ್ಲಿ ನಿಮ್ಮ ಮುಖ ಹೆಚ್ಚು ಶುಷ್ಕವಾಗುತ್ತದೆ. ಒಣಗಾಳಿಯಿಂದಾಗಿ ತ್ವಚೆಯಲ್ಲಿ ಬಿರುಕು ಮೂಡುತ್ತದೆ. ಹೀಗಾಗಿ ಈ ಅವಧಿಯಲ್ಲಿ ಸಾಕಷ್ಟು ನೀರನ್ನು ಕುಡಿಯಿರಿ. ಇದರಿಂದ ವಿಷ ಅಂಶಗಳು ನಿಮ್ಮ ದೇಹದಿಂದ ವಿಸರ್ಜನೆಯಾಗುತ್ತದೆ.

ಮುಖವನ್ನು ಸ್ವಚ್ಛವಾಗಿಟ್ಟುಕೊಳ್ಳಿ :
ಈ ಅವಧಿಯಲ್ಲಿ ಕೇವಲ ನೀರು ಕುಡಿಯುವುದು ಮಾತ್ರವಲ್ಲ ಸದಾ ಮುಖವನ್ನು ಸ್ವಚ್ಛವಾಗಿಯೂ ಇಟ್ಟುಕೊಳ್ಳಬೇಕು. ಇದಕ್ಕಾಗಿ ಒಳ್ಳೆಯ ಕ್ಲೆನ್ಸರ್​ ಹಾಗೂ ಟೋನರ್​ಗಳನ್ನು ಆಯ್ಕೆ ಮಾಡಿಕೊಳ್ಳಿ. ಮುಖ ತೊಳೆಯಲು ಉತ್ತಮ ಗುಣಮಟ್ಟದ ಫೇಸ್​ ವಾಶ್​ಗಳನ್ನು ಬಳಕೆ ಮಾಡಿ.

ಮುಖವನ್ನು ಮಾಯಿಶ್ಚುರೈಸ್​ ಮಾಡಲು ಮರೆಯದಿರಿ :
ನಾವು ಆಗಲೇ ಹೇಳಿದಂತೆ ಚಳಿಗಾಲದಲ್ಲಿ ತ್ವಚೆಯು ಹೆಚ್ಚು ಶುಷ್ಕವಾಗಿ ಇರುತ್ತದೆ. ಇಂತಹ ಸಮಯದಲ್ಲಿ ನೀವು ಮಾಯಿಶ್ಚುರೈಸರ್​ನ್ನು ಹೆಚ್ಚಾಗಿ ಬಳಸಬೇಕು. ಆದರೆ ಅನೇಕ ಯುವತಿಯರು ಮಾಯಿಶ್ಚುರೈಸರ್​ ಆಯ್ಕೆ ವಿಚಾರದಲ್ಲಿ ಎಡವುತ್ತಾರೆ. ನೀವು ಮೊಡವೆ ಸಮಸ್ಯೆಯಿಂದ ಬಳಲುವವರಾಗಿದ್ದರೆ ಎಂದಿಗೂ ಆಯಿಲ್​ ಬೇಸಡ್​​ ಮಾಯಿಶ್ಚುರೈಸರ್ ಆಯ್ಕೆ ಮಾಡಿಕೊಳ್ಳಬೇಡಿ. ಬದಲಾಗಿ ವಾಟರ್​ ಬೇಸ್ಡ್​​ ಮಾಯಿಶ್ಚುರೈಸರ್​ ಆಯ್ಕೆ ಮಾಡಿಕೊಳ್ಳಿ.

ಮೊಡವೆ ಬಾರದಂತೆ ತಡೆಯಲು ಏನೆಲ್ಲ ಮಾಡಬೇಕು..?
ಹೆಚ್ಚು ಬಿಸಿಯಾದ ನೀರಿನಲ್ಲಿ ಸ್ನಾನ ಮಾಡಬೇಡಿ. ಎಂದಿಗೂ ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಿ
ಮುಖದಲ್ಲಿ ಎಣ್ಣೆ ಅಂಶವನ್ನು ಹೆಚ್ಚಿಸುವಂತಹ ಯಾವುದೇ ಸೌಂದರ್ಯವರ್ಧಕಗಳ ಬಳಕೆ ಬೇಡ
ಅತ್ಯಂತ ಗಾಢವಾದ ಸುಗಂಧ ಹೊಂದಿರುವ ಸುಗಂಧ ದ್ರವ್ಯಗಳನ್ನು ಬಳಕೆ ಮಾಡಬೇಡಿ.

ಇದನ್ನು ಓದಿ : Kitchen Vaastu Tips : ಮನೆಯ ಯಾವ ದಿಕ್ಕಿನಲ್ಲಿ ಅಡುಗೆಕೋಣೆ ಇರಬೇಕು ಎಂಬುದಕ್ಕೆ ಇಲ್ಲಿದೆ ಮಾಹಿತಿ

ಇದನ್ನೂ ಓದಿ : Vaastu tips for bedroom : ಮಲಗುವ ಕೋಣೆಯ ವಿಚಾರದಲ್ಲಿ ಎಂದಿಗೂ ಮಾಡಬೇಡಿ ಈ ತಪ್ಪು

Acne breakouts in winter? Here’s how you can deal with them

Comments are closed.