Kodi Festival: ಕೊಡಿ ಹಬ್ಬದ ಸಂಭ್ರಮದಲ್ಲಿ ಕೋಟೇಶ್ವರದ ಕೋಟಿಲಿಂಗೇಶ್ವರ ಸ್ವಾಮಿ

(Kodi Festival) ಪರಶುರಾಮ ಸೃಷ್ಠಿಯ ಸಪ್ತ ಮೋಕ್ಷದಾಯಕ ಕ್ಷೇತ್ರಗಳ ಪೈಕಿ ಒಂದಾದ ಧ್ವಜಪುರ ಖ್ಯಾತಿಯ ಕೋಟಿಲಿಂಗೇಶ್ವರ ದೇವಸ್ಥಾನವು ಪುರಾಣ ಪ್ರಸಿದ್ದ ಶಿವಕ್ಷೇತ್ರ. ಭಕ್ತಾದಿಗಳಿಂದ ದಕ್ಷಿಣದ ಕಾಶಿ ಎಂದು ಕರೆಯಲ್ಪಡುವ ಶ್ರೀ ಕ್ಷೇತ್ರವು ಕೋಟಿಲಿಂಗ ಸ್ವರೂಪಿಯಾದ ಈವನ ದಿವ್ಯ ತಾಣ. ಷಣ್ಮುಖನು ಕೋಟಿ ಸಂಖ್ಯಾಖ ಅವಯುವಗಳುಳ್ಳ ಕೋಟೇಶ್ವರನ ಕುರಿತು ತಪಸ್ಸು ಆಚರಿಸಿದ್ದ. ತಪೋಜ್ವಾಲೆಯು ತ್ರಿಲೋಕವನ್ನು ವ್ಯಾಪಿಸಲು ಶಿವನು ಕೋಟಿಲಿಂಗ ಸ್ವರೂಪದಲ್ಲಿ ಇಲ್ಲಿ ಪ್ರತ್ಯಕ್ಷನಾದ ಎಂಬುದನ್ನು ಶರಾನೀಕ ಮಹಾರಾಜನಿಗೆ ಶೌನಕರು ವಿವರಿಸಿರುವುದು ಪದ್ಮ ಪುರಾಣದ ಪುಷ್ಕರ ಕಾಂಡದಲ್ಲಿ ಉಲ್ಲೇಖಿತಗೊಂಡಿದೆ.

ಇನ್ನೊಂದು ಮೂಲದ ಪ್ರಕಾರ ಹೇಳುವುದಾದರೆ ಕೋಟಿ ೯Kodi Festival) ಋಷಿಗಳು ಒಂದಾಗಿ ಈ ಪುಣ್ಯಭೂಮಿಯಲ್ಲಿ ತಪಸ್ಸನ್ನಾಚರಿಸಿ ಶಿವನನ್ನು ಒಲೊಸಿಕೊಂಡಿದ್ದರು. ಈ ಕಾರಣದಿಂದಾಗಿ ಇಲ್ಲಿ ಪರಶಿವನು ಕೋಟಿಲಿಂಗೇಶ್ವರ ನಾಗಿ ನೆಲೆಯಾದನು ಎಂದು ಹೆಳಲಾಗುತ್ತದೆ. ಸತ್ಯುಗದಲ್ಲಿ ಬೃಹ್ಮದೇವನ ತಪಸ್ಸಿಗೆ ಒಲಿದು ಶಿವನು ಈ ಭೂಮಿಯಲ್ಲಿ ನೆಲೆಸಿದನೆಂದೂ, ಬೃಹ್ಮದೇವನು ಕೋಟಿಲಿಂಗೇಶ್ವರ ದೇವಾಲಯದ ಎಡಭಾಗಕ್ಕೆ ಇರುವ ಬೃಹತ್‌ ಅಶ್ವತ್ಥ ವೃಕ್ಷದ ಕೆಳಗೆ ತಪಸ್ಸನ್ನಾಚರಿಸಿದನೆಂದೂ ಸ್ಥಳ ಪುರಾಣಗಳು ಉಲ್ಲೇಶಿಸಿವೆ.ಅಂತಯೇ ಬೃಹ್ಮದೇವನ ಕಮಂಡಲದಿಂದ ಕೋಟಿತೀರ್ಥ ಪುಷ್ಕರ್ಣಿಯನ್ನು ನಿರ್ಮಿಸಿದನೆಂದೂ ಹೇಳಲಾಗಿದೆ.

ಏಳು ಸುತ್ತುಗಳಿಂದ ಆವೃತ್ತವಾದ ಕೋಟಿಲಿಂಗೇಶ್ವರ ದೇವಳದ ವಾಸ್ತು ನಿರ್ಮಾಣ ಬಹಳ ಅಪರೂಪದ್ದಾಗಿದೆ. ಅರವತ್ತು ಅಡಿ ಎತ್ತರದ ಏಕ ಮರದ ಧ್ವಜಸ್ಥಂಭ, ನಲ್ಕನೆ ಸುತ್ತಿನಲ್ಲಿ ತಂತ್ರ ಸಾರಾಗಮದಂತೆ ಪೂಜೆಗೊಳ್ಳುತ್ತಿರುವ ಬಲಿಕಲ್ಲುಗಳು, ಸಪ್ತ ಮಾತೃಕೆಯರು, ಕರಿಕಲ್ಲಿನಿಂದ ನಿರ್ಮಾಣವಾದ ನವರಂಗ, ಪ್ರಧಾನ ದ್ವಾರದಲ್ಲಿ ಶೂಲಪಾಣಿ-ಪರಶುಪಾಣಿ ಎಂಬ ಭವ್ಯ ಹಿತ್ತಾಳೆಯ ದ್ವಾರಪಾಲಕ ಮೂರ್ತಿಗಳು ದೇವಳದ ಅತ್ಯಂತ ಸುಂದರವಾದ ವೈಶಿಷ್ಟ್ಯಗಳು. ಗರ್ಭಗುಡಿಯ ಅಭೇದ್ಯ ಶಿಲಾನಿರ್ಮಾಣವಾಗಿದ್ದು, ಒಂದೂವರೆ ಸಾವಿರ ವರ್ಷದಷ್ಟು ಹಿಂದೆಯೇ ಇದನ್ನು ನಿರ್ಮಿಸಲಾಗಿತ್ತು ಎಂದು ಹೇಳಲಾಗುತ್ತದೆ.

ಗರ್ಭಗುಡಿಯ ಒಳಗೆ ಇರುವ ಚಿಕ್ಕ ಬಾವಿಯಲ್ಲಿ ರುದ್ರಾಕ್ಷಿ ಮಣಿಗಳಂತಿರುವ ಅನೇಕ ಶಿವಲಿಂಗಗಳಿವೆ. ಚಿಕ್ಕ ಬಾವಿಯ ಮೇಲ್ಭಾಗದಲ್ಲಿರುವ ಬೆಳ್ಳಿಯ ಗೋಲಾಕರಾದ ದೇವರು ಮೂವತ್ತು ಕೆ.ಜಿ. ಭಾರವಿದ್ದು, ಬಾವಿಯನ್ನು ಮುಚ್ಚಿಕೊಂಡಿರುವಂತೆ ವ್ಯವಸ್ಥಿತಗೊಳಿಸಲಾಗಿದೆ. ದೇವರ ತಲೆಯ ಮೇಲೆ ಸದಾ ನೀರು ತೊಟ್ಟಿಕ್ಕುವಂತೆ ತಾಮ್ರದ ಪಾತ್ರೆಯನ್ನು ತೂಗು ಹಾಕಲಾಗಿದೆ. ಪರಶಿವನೊಂದಿಗೆ ಆದಿಶಕ್ತಿ ರೂಪೀಣಿಯಾದ ಸರ್ವಮಂಗಳೆಯನ್ನು ಶಿವನ ಎಡದಲ್ಲಿ ದಕ್ಷಿಣಕ್ಕೆ ಪ್ರತಿಷ್ಟಾಪಿಸಲಾಗಿದೆ. ನಂದಿ ಅಹಗೂ ಮೂಲೆಗಣಪತಿ ದೇವರನ್ನು ಸ್ಥಾಪಿಸಲಾಗಿದೆ. ಒಳಪ್ರಕಾರದಲ್ಲಿ ಸಪ್ತಮಾತೃಕೆಯರು, ವೀರಭದ್ರ, ಸುಬ್ರಹ್ಮಣ್ಯ ಸ್ವಾಮಿ, ಜ್ಯೇಷ್ಠ ಲಕ್ಷ್ಮಿ, ಮಹಿಷಾಸುರ ಮರ್ದಿನಿ, ವೆಂಕಟರಮಣ, ತಾಂಡವೇಶ್ವರ ದೇವರುಗಳು ನೆಲೆಸಿದ್ದರೆ, ಹೊರಾಂಗಣದಲ್ಲಿ ಆದಿಗಣಪತಿ, ಮುಖ್ಯಪ್ರಾಣ, ಮಹಾವಿಷ್ಣು, ಗೋಪಾಲಕೃಷ್ಣ ದೇವರುಗಳು ನೆಲೆಸಿದ್ದಾರೆ.

ಭಾರತದ ಪವಿತ್ರ ತೀರ್ಥಗಳಲ್ಲೊಂದಾಗಿರುವ ಪುರಾಣ ಪ್ರಸಿದ್ದ ಕೋಟಿತೀರ್ಥ ಸರೋವರ ದೇವಸ್ಥಾನ ಸಮೀಪ ಸುಮಾರು ನಾಲಕೂವರೆ ಎಕರೆ ವಿಸ್ತೀರ್ಣದಷ್ಟು ಚಾಚಿಕೊಂಡಿದೆ. ಕೋಟಿ ತೀರ್ಥದಲ್ಲಿ ಸ್ನಾನ ಮಾಡುವುದರಿಂದ ಪಾಪ ಕರ್ಮಾದಿಗಳು ನಾಶವಾಗುತ್ತದೆ ಎಂಬ ಪ್ರತೀತಿ ಇದೆ.

ಕೊಡಿ ಹಬ್ಬ
ನಾಡಿನ ಪ್ರಸಿದ್ದ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ ಕರಾವಳಿಯ ಅತ್ಯಂತ ದೊಡ್ಡ ಹಬ್ಬವೆಂದೇ ಪರಿಗಣಿಸಲ್ಪಟ್ಟಿರುವ ಕೊಡಿ ಹಬ್ಬದ ಮನ್ಮಹಾರಥೋತ್ಸವ ಸತತ ಏಳು ದಿನಗಳ ಕಾಲ ನಡೆಯಲಿದ್ದು, ಅರವತ್ತು ಅಡಿ ಎತ್ತರದ ಧ್ವಜಸ್ಥಂಭದಲ್ಲಿ ಗರ್ನಪಠಾರೋಹಣ ಮಾಡುವುದರ ಮೂಲಕ ಚಾಲನೆ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಧಾರ್ಮಿಕ ಆಚರಣೆಗಳು, ಕಟ್ಟೆ ಪೂಜೆ, ರಥೋತ್ಸವದ ಮರುದಿನ ಓಕುಳಿ ಆಟ ಹೀಗೆ ಹಲವಾರು ಮೆರುಗು ನೀಡುವ ಕಾರ್ಯಕ್ರಮಗಳು ನಡೆಯುತ್ತವೆ. ಜಾತ್ರೆಯ ಪ್ರಯುಕ್ತ ಇಡೀ ಕೋಟೇಶ್ವರ ಪಟ್ಟಣ ಮದುಮಗಳಂತೆ ಸಿಂಗಾರಗೊಳ್ಳಲಿದೆ.

ಭಾವೈಕ್ಯತೆಯ ಸಂಗಮ
ಇಲ್ಲಿನ ಬ್ರಹ್ಮರಥವನ್ನು ನಿರ್ಮಿಸುವಲ್ಲಿ ಮುಸ್ಲಿಂ ಬಾಂಧವರ ಕೊಡೆಗೆಯೂ ಅಪಾರ. ಪಾರಂಪರಿಕವಾದ ಧಾರ್ಮಿಕ ಕಾರ್ಯವನ್ನು ಸ್ಥಳೀಯ ಮುಸ್ಲಿಂ ಬಂಧುಗಳು ಅತ್ಯಂತ ಭಯ ಭಕ್ತಿಯಿಂದ ನೆರವೇರಿಸುತ್ತಾರೆ. ಮೈಸೂರು ರಾಜ್ಯದ ದೊರೆ ಟಿಪ್ಪು ಸುಲ್ತಾನ್‌ ಕಾಲದಿಂದ ನಡೆದು ಬಂದಿರುವ ದೀವಟಿಕೆ ಸಲಾಂ ಎನ್ನುವ ವಿಶಿಷ್ಠ ಧಾರ್ಮಿಕ ಸೇವೆ ಇಲ್ಲಿ ಇಂದಿಗೂ ನಡೆದುಕೊಂಡುಬಂದಿದೆ.

ಕೊಡಿ ಕೊಂಡೊಯ್ಯುವ ಸೇವೆ ಮತ್ತು ಸುತ್ತಕ್ಕಿ ಸೇವೆ
ಜಾತ್ರೆಯ ಆಚರಣೆಯಲ್ಲಿ ಅತ್ಯಂತ ಪ್ರಮುಖವಾದ ಘಟ್ಟ ಈ ಕೊಡಿ ಕೊಂಡೊಯ್ಯುವ ಸೇವೆ ಮತ್ತು ಸುತ್ತಕ್ಕಿ ಸೇವೆ ಆಚರಣೆಗಳು. ಇದು ಜಿಲ್ಲೆಯಲ್ಲಿಯೇ ಅಪರೂಪವಾದ ಆಚರಣೆ. ನವದಂಪತಿ ಕೊಡಿ ಹಬ್ಬದ ದಿನದಂದು ದೇವರ ದರ್ಶನ ಮಾಡಿ ಕಬ್ಬನಿ ಕೊಡಿ ಕೊಂಡೊಯ್ದರೆ ಅವರ ಬಾಳಿನಲ್ಲಿ ಕೊಡಿ ಅರಳುತ್ತದೆ( ಅಂದರೆ ಸಂತಾನ ಪ್ರಾಪ್ತಿ) ಎನ್ನುವ ನಂಬಿಕೆ.

ದೇವಸ್ಥಾನಕ್ಕೆ ಹೊಂದಿಕೊಂಡಿರುವ ಸುಮಾರು ನಾಲ್ಕು ಎಕ್ರೆ ವಿಸ್ತೀರ್ಣದ ಕೋಟಿ ತೀರ್ಥ ಪುಷ್ಕರ್ಣಿಯ ಸುತ್ತ ಅಪೇಕ್ಷಿತರು ಬಿಳಿಯ ಬಟ್ಟೆಯನ್ನು ಹಾಕಿ ಕುಳಿತುಕೊಳ್ಳುತ್ತಾರೆ. ಭಕ್ತಾದಿಗಳು ಪುಷ್ಕರ್ಣಿಯಲ್ಲಿ ಮುಳುಗೆದ್ದು ಬಿಳಿ ಬಟ್ಟೆಹಾಸಿನ ಮೇಲೆ ಅಕ್ಕಿಯನ್ನು ಚೆಲ್ಲುತ್ತಾರೆ. ಇದನ್ನೇ ಸುತ್ತಕ್ಕಿ ಸೇವೆ ಎನ್ನಲಾಗುತ್ತದೆ. ರಥೋತ್ಸವದ ಮರುದಿನ ರಾತ್ರಿ ಚೂರ್ಣೊತ್ಸವ, ಮಧ್ಯರಾತ್ರಿ ಓಕುಳಿಯಾಟ ಹಾಗೂ ಅವಭೃತ ಸ್ನಾನ ನಡೆಯುತ್ತದೆ. ಕೊಡಿ ಹಬ್ಬಕ್ಕಾಗಿ ಜಾತಿ ಭೇದ ಮರೆತು ಪರಿಸರದ ಸಂಘ ಸಂಸ್ಥೆಗಳು, ಸ್ಥಳೀಯರು ಸಿದ್ದತೆ ನಡೆಸುತ್ತಾರೆ.

ಇದನ್ನೂ ಓದಿ : KamalaShile kshethra part-2: ಕಮಲಶಿಲೆ ದೇವಾಲಯದ ಪ್ರಾಮುಖ್ಯತೆ ಹಾಗೂ ಅಚರಣೆಗಳ ವಿವರ ನಿಮಗಾಗಿ..

(Kodi Festival) Kotilingeshwar Temple, famous as Dzhavapura, is one of the seven salvific fields of Parasurama Srishti, a famous Shiva Kshetra. Sri Kshetra, known as the Kashi of the South by devotees, is the divine abode of the Kotilinga Swarupi. Shanmukha performed penance on Koteswara who had crores of limbs. It is mentioned in the Pushkara Kanda of the Padma Purana that the Shaunakas explained to Saranika Maharaja that Shiva appeared here in the Kotilinga form so that the flame could pervade the Triloka.

Comments are closed.