Herb for glowing skin: ಚಳಿಗಾಲದಲ್ಲಿ ಚರ್ಮ ಫಳ ಫಳ ಹೊಳೆಯಲು ಈ ಗಿಡಮೂಲಿಕೆ ಬಳಸಿ

(Herb for glowing skin) ದೇಹವು ಪ್ರಕೃತಿಯ ಐದು ಅಂಶಗಳಿಂದ ಕೂಡಿದೆ. ಹಾಗಾಗಿ ಆಯುರ್ವೇದ ಪರಿಹಾರಗಳು ಎಲ್ಲಾ ಆರೋಗ್ಯ ಸಂಬಂಧಿ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತವೆ. ಪ್ರಾಚೀನ ಕಾಲದಿಂದಲೂ ಆಯುರ್ವೇದ ಗಿಡಮೂಲಿಕೆಗಳನ್ನು ಚರ್ಮ ಮತ್ತು ಕೂದಲಿಗೆ ಬಳಕೆ ಮಾಡಲಾಗುತ್ತಿದೆ. ಯಾಕಂದ್ರೆ ಈ ಆಯುರ್ವೇದ ಗಿಡಮೂಲಿಕೆಗಳು ಚರ್ಮ ಮತ್ತು ಕೂದಲಿನ ಸಮಸ್ಯೆ ನಿವಾರಣೆಗೆ ಹಾಗೂ ನೈಸರ್ಗಿಕ ಹೊಳಪು ಕಾಪಾಡಲು ಸಹಕಾರಿ ಎಂದು ಸಾಬೀತುಪಡಿಸುತ್ತದೆ. ಇದು ಸಮಸ್ಯೆ ಪರಿಹರಿಸಲು ಮತ್ತು ಅದನ್ನು ಮೂಲದಿಂದ ತೆಗೆದು ಹಾಕಲು ಸಹಾಯ ಮಾಡುತ್ತದೆ. ಆದರೆ ತ್ವಚೆಯ ಮೇಲೆ ಯಾವ ಆಯುರ್ವೇದ ಮೂಲಿಕೆಯನ್ನು ಹೇಗೆ ಬಳಸಬೇಕು ಎಂಬುದನ್ನು ಇಲ್ಲಿ ಹೇಳಲಾಗಿದೆ.

ಚರ್ಮದ ಸಮಸ್ಯೆ (Herb for glowing skin) ನಿವಾರಣೆಗೆ ಯಾವ ಗಿಡಮೂಲಿಕೆಗಳನ್ನು ಹೇಗೆ ಬಳಸಬೇಕು ಅಂತಾ ನೋಡೋಣ.
ತುಳಸಿ
ತುಳಸಿ ಅನೇಕ ಚರ್ಮದ ಸಮಸ್ಯೆ ನಿವಾರಣೆಗೆ ಸಹಕಾರಿ. ತುಳಸಿಯಲ್ಲಿ ಉತ್ತಮ ಪ್ರಮಾಣದ ಉತ್ಕರ್ಷಣ ನಿರೋಧಕಗಳಿವೆ. ಹಾನಿಗೊಳಗಾದ ಚರ್ಮದ ವಿರುದ್ಧ ಹೋರಾಡಲು ಮತ್ತು ಸೂಕ್ಷ್ಮ ರೇಖೆ, ಸುಕ್ಕುಗಳ ಸಮಸ್ಯೆ ನಿವಾರಿಸುತ್ತದೆ. ಚರ್ಮದ ಮೇಲೆ ಪಿಗ್ಮೆಂಟೇಶನ್ ಕಡಿಮೆ ಮಾಡಿ, ಆರೋಗ್ಯಕರವಾಗಿಸುತ್ತದೆ. ಚರ್ಮಕ್ಕೆ ತುಳಸಿ ಬಳಕೆ ಮೊಡವೆ ಸಮಸ್ಯೆ ಕಡಿಮೆ ಮಾಡುತ್ತದೆ.

ತುಳಸಿ ಫೇಸ್ ಪ್ಯಾಕ್
ಒಣ ತ್ವಚೆ ಇರುವವರು ಒಂದು ಚಮಚ ತುಳಸಿ ಪುಡಿ, ಎರಡು ಚಮಚ ಮೊಸರು ಬೆರೆಸಿ ಹಚ್ಚಿದರೆ ಒಣ ತ್ವಚೆ ನಿವಾರಣೆಯಾಗುತ್ತದೆ. ಎಣ್ಣೆಯುಕ್ತ ಚರ್ಮದವರು ಒಂದು ಚಮಚ ತುಳಸಿ ಪುಡಿ, ಶ್ರೀಗಂಧದ ಪುಡಿ, ಮುಲ್ತಾನಿ ಮಿಟ್ಟಿ, ಜೊಜೊಬಾ ಎಣ್ಣೆಯ ಕೆಲವು ಹನಿ ಮಿಶ್ರಣ ಮಾಡಿ. ರೋಸ್ ವಾಟರ್ ಸೇರಿಸಿ ಹಚ್ಚಿರಿ.

ಬೆಟ್ಟದ ನೆಲ್ಲಿಕಾಯಿ
ಆರೋಗ್ಯ ಹಾಗೂ ಚರ್ಮಕ್ಕೂ ಬೆಟ್ಟದ ನೆಲ್ಲಿಕಾಯಿ ತುಂಬಾ ಪ್ರಯೋಜನಕಾರಿ. ವಿಟಮಿನ್ ಸಿ ಇದರಲ್ಲಿ ಸಾಕಷ್ಟಿದೆ. ಚರ್ಮಕ್ಕೆ ಬಲವಾದ ಉತ್ಕರ್ಷಣ ನಿರೋಧಕವಾಗಿದೆ ವಿಟಮಿನ್ ಸಿ. ಇದು ಕೋಶಗಳನ್ನು ಹಾನಿಯಿಂದ ರಕ್ಷಿಸಿ, ವಯಸ್ಸಾದ ವಿರೋಧಿ ಗುಣ ಹೊಂದಿದೆ. ಚರ್ಮಕ್ಕೆ ಹೊಳಪು ತರುತ್ತದೆ. ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಚರ್ಮದಲ್ಲಿ ಕಾಲಜನ್ ವಿಭಜನೆ ತಡೆದು, ಚರ್ಮ ಮೃದುವಾಗಲು ಸಹಕಾರಿ.

ಆಮ್ಲಾ ಫೇಸ್ ಪ್ಯಾಕ್
ಒಂದು ಚಮಚ ಆಮ್ಲಾ ಪುಡಿ, ಜೇನುತುಪ್ಪ ಮತ್ತು ಮೊಸರು ಸೇರಿಸಿ. ಈ ಫೇಸ್ ಪ್ಯಾಕ್ ಅನ್ನು ಮುಖ ಮತ್ತು ಕುತ್ತಿಗೆಯ ಮೇಲೆ 20 ನಿಮಿಷ ಇರಿಸಿ. ನಂತರ ಸರಳ ನೀರಿನಿಂದ ಮುಖ ಸ್ವಚ್ಛಗೊಳಿಸಿ.

ಮೂಲೇತಿ
ಲೈಕೋರೈಸ್ ಚರ್ಮಕ್ಕೆ ಅತ್ಯುತ್ತಮವಾಗಿದೆ. ಲೈಕೋರೈಸ್ ಪ್ರತಿಜೀವಕ ಮತ್ತು ಆಂಟಿಆಕ್ಸಿಡೆಂಟ್ ಗುಣಲಕ್ಷಣ ಹೊಂದಿದೆ. ಚರ್ಮದ ಸೋಂಕುಗಳನ್ನು ತೊಡೆದು ಹಾಕುತ್ತದೆ. ಲೈಕೋರೈಸ್ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ಚರ್ಮದ ಸೋಂಕು ನಿವಾರಿಸುತ್ತದೆ. ಚರ್ಮದ ಸಮಸ್ಯೆಗಳಾದ ಕಲೆಗಳು ಮತ್ತು ಮೊಡವೆಗೆ ತ್ವರಿತ ಪರಿಹಾರ ನೀಡುತ್ತದೆ.

ಲೈಕೋರೈಸ್ ಫೇಸ್ ಪ್ಯಾಕ್
ಚಮಚ ಲೈಕೋರೈಸ್ ಪುಡಿ, ಚಮಚ ಶ್ರೀಗಂಧ ಪುಡಿ, ಅರ್ಧ ಚಮಚ ಜೇನುತುಪ್ಪ, 2 ಚಮಚ ಹಸಿ ಹಾಲು ಸೇರಿಸಿ, ಪೇಸ್ಟ್ ತಯಾರಿಸಿ. ಮುಖಕ್ಕೆ ಅನ್ವಯಿಸಿ, 15 ನಿಮಿಷ ಬಿಟ್ಟು ತೊಳೆಯಿರಿ.

ಅಶ್ವಗಂಧ
ಅಶ್ವಗಂಧ ಉತ್ಕರ್ಷಣ ನಿರೋಧಕ ಹೊಂದಿದ್ದು, ಚರ್ಮದ ವಯಸ್ಸಾದ ಚಿಹ್ನೆಗಳ ವಿರುದ್ಧ ಹೋರಾಡುತ್ತದೆ. ಸುಕ್ಕು, ಸೂಕ್ಷ್ಮ ರೇಖೆ ಮತ್ತು ಕಪ್ಪು ಕಲೆ ನೋಟ ಕಡಿಮೆ ಮಾಡುತ್ತದೆ. ಆಯುರ್ವೇದದಲ್ಲಿ ಅಶ್ವಗಂಧವನ್ನು ಆರೋಗ್ಯ ಮತ್ತು ಚರ್ಮಕ್ಕೆ ಔಷಧವಾಗಿ ಬಳಸಲಾಗುತ್ತದೆ. ಚರ್ಮದ ಮೆಲನಿನ್ ನಿಯಂತ್ರಿಸುತ್ತದೆ. ಹೈಪರ್ಪಿಗ್ಮೆಂಟೇಶನ್ ಕಡಿಮೆ ಮಾಡುತ್ತದೆ. ಮೊಡವೆ ಮತ್ತು ಚರ್ಮದ ಸೋಂಕು ತೊಡೆದು ಹಾಕುತ್ತದೆ.

ಇದನ್ನೂ ಓದಿ : Home Remedy For Period Pain: ಋತುಚಕ್ರದಲ್ಲಿ ಕಾಡುವ ಹೊಟ್ಟೆನೋವಿಗೆ ಇಲ್ಲಿದೆ ಮನೆಮದ್ದು

ಅಶ್ವಗಂಧ ಫೇಸ್ ಪ್ಯಾಕ್
ಒಂದು ಚಮಚ ಅಶ್ವಗಂಧ ಪುಡಿ, ಅರ್ಧ ಚಮಚ ಜೇನುತುಪ್ಪ, ಚಮಚ ಅಲೋವೆರಾ ಜೆಲ್, ರೋಸ್ ವಾಟರ್ ಸೇರಿಸಿ ಪೇಸ್ಟ್ ತಯಾರಿಸಿ, ಅನ್ವಯಿಸಿ, ನಂತರ ಸರಳ ನೀರಿನಿಂದ ಮುಖ ತೊಳೆಯಿರಿ.

(Herb for glowing skin) Body is composed of five elements of nature. So Ayurvedic remedies help in all health related problems. Ayurvedic herbs have been used for skin and hair since ancient times. As these Ayurvedic herbs prove to be helpful in treating skin and hair problems and maintaining natural glow.

Comments are closed.