koodli Sharadamba Temple Shivamogga : ಶಾರದಾಂಬೆ , ಅಂದ ಕೂಡಲೇ ನೆನಪಾಗೋದು ಶ್ರೀ ಕ್ಷೇತ್ರ ಶೃಂಗೇರಿ. ಈ ಶಾರದಾ ಪೀಠದಲ್ಲಿ ವಿದ್ಯಾದಾಯಿನಿ ಯಾಗಿ ಅಮ್ಮ ಶಾರದೆ ನೆಲೆಸಿದ್ದಾಳೆ. ಇಲ್ಲಿನ ಪೂಜಿಸಿದ್ರೆ ಯಾವುದೇ ವಿದ್ಯೆಯಾಗಲೀ ನಮಗೆ ಸಿದ್ಧಿಸುತ್ತೆ ಅನ್ನೋ ನಂಬಿಕೆ ಇದೆ. ಅದಕ್ಕಾಗಿ ಹೆಚ್ಚಿನ ಭಕ್ತರು ಇಲ್ಲೇ ಬಂದು ಅಕ್ಷರಾಭ್ಯಾಸವನ್ನು ಆ ತಾಯಿಯ ಮುಂದೆ ಮಾಡಿಸುತ್ತಾರೆ. ಆದರೆ ಆ ಶೃಂಗೇರಿಗೆ ಶಾರದಾಂಬೆ ಬಂದಿದ್ದು ಎಲ್ಲಿಂದ ಅಂತ ಗೊತ್ತಾ? ಶೃಂಗೇರಿಯ ಮೂಲ ಸ್ಥಾನ ಇರೋದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಕೂಡ್ಲಿಯಲ್ಲಿ ಅನ್ನೋದೇ ವಿಶೇಷ.

ಇದು ಶೃಂಗೇರಿಯ ಮೂಲ ಸ್ಥಾನ ಅನ್ನಿಸಿಕೊಂಡಿರೋ ದೇವಾಲಯ. ಇಲ್ಲಿ ಶೃಂಗೇರಿಗಿಂತ ಮುನ್ನವೇ ತಾಯಿ ಶಾರದಾಂಬೆ ನೆಲೆ ನಿಂತಿದ್ದಳಂತೆ. ಖುದ್ದು ಶಂಕರಾಚಾರ್ಯರೇ ಇದನ್ನು ಸ್ಥಾಪಿಸಿದರು ಅನ್ನೋ ನಂಬಿಕೆ ಇಲ್ಲಿದೆ. ಶಂಕಾರಾಚಾರ್ಯರಿಂದ ಮೊದಲು ಪೂಜಿತವಾದ ದೇವಾಲಯವಾ ಇದಾಗಿದ್ದು, ಇಲ್ಲಿ ತಾಯಿ ಶಾರದಾಂಬೆಯನ್ನು ಶ್ರೀ ಚಕ್ರದೊಂದಿಗೆ ಪೂಜಿಸಲಾಗುತ್ತೆ . ಹೀಗಾಗಿ ಇಲ್ಲಿಗೆ ಸಾವಿರಾರು ಮಂದಿ ಭಕ್ತರು ಬಂದು ದೇವಿ ಸೇವೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.
ಇನ್ನು ದೇವಾಲಯ ಉಳಿದ ದೇವಾಲಯಗಳಂತಲ್ಲ. ಇಲ್ಲಿ ತಾಯಿ ಶಾರದೆ ನಿಂತ ಭಂಗಿಯಲ್ಲಿ ಪೂಜಿಸಲ್ಪಡುತ್ತಾಳೆ. ಸಾಮಾನ್ಯವಾಗಿ ಶಾರದಾ ದೇವಾಲಯಗಳಲ್ಲಿ ತಾಯಿಯ ವಿಗ್ರಹವು ವೀಣೆಯ ಜೊತೆಯಲ್ಲಿ ಕೂತ ಭಂಗಿಯಲ್ಲಿ ಇರುತ್ತದೆ. ಆದರೆ ಇಲ್ಲಿ ನಿಂತ ಭಂಗಿಯಲ್ಲಿ ಅಭಯ ಹಸ್ತಳಾಗಿ ಕಾಣಿಸಿಕೊಳ್ಳುತ್ತಾಳೆ. ಇದನ್ನು ವಿಶ್ವದಲ್ಲೇ ನಿಂತ ಭಂಗಿಯ ಏಕೈಕ ಶಾರದಾಂಬೆ ದೇವಾಲಯ ಅಂತಾನು ಕರೆಯುತ್ತಾರೆ. ಈ ರೀತಿ ಕಾಣಿಕೊಳ್ಲೋದಕ್ಕೂ ಕಾರಣವಿದೆ.
ಇದನ್ನೂ ಓದಿ : ರಾಜ್ಯ ಕಾಯೋ ರೂಪದಲ್ಲಿ ನೆಲೆನಿಂತಿದ್ದಾಳೆ ರಾಜ ರಾಜೇಶ್ವರಿ- ನಿಂಬೆ ದೀಪ ಬೆಳಗಿದ್ರೆ ಮನೆಮನಗಳಲ್ಲಿ ನೆಮ್ಮದಿ ಶಾಂತಿ
ಇಲ್ಲಿನ ಸ್ಥಳ ಪುರಾಣಗಳ ಪ್ರಕಾರ ಶಂಕರಾಚಾರ್ಯರಿಗೆ ಕಾಶ್ಮೀರದಲ್ಲಿ ತಾಯಿಯ ದರ್ಶನವಾದಾಗ ಅವರು ತಾಯಿಯನ್ನು ದಕ್ಷಿಣದಲ್ಲಿ ಬಂದು ನೆಲೆ ನಿಲ್ಲುವಂತೆ ಕೇಳಿಕೊಂಡರಂತೆ . ಆಗ ತಾಯಿ ತಾನು ತೇಜಸ್ಸಿನ ರೂಪದಲ್ಲಿ ಶಂಕರರ ಹಿಂದೆ ಬರುವುದಾಗಿಯೂ, ತನ್ನನ್ನು ಹಿಂದೆ ನೋಡದೆ ಕರೆದುಕೊಂಡು ಹೋಗಬೇಕಾಗಿಯೂ , ಹಿಂದೆ ನೋಡಿದ ಕ್ಷಣ ಅಲ್ಲೇ ನಿಲ್ಲುವುದಾಗಿಯೂ ಹೇಳುತ್ತಾಳೆ. ಆಗ ಅದಕ್ಕೆ ಶಂಕರರು ಒಪ್ಪುತ್ತಾರೆ.
ಆದರೆ ತುಂಗ ಭದ್ರಾ ನದಿಯ ಸಂಗಮ ಸ್ಥಳವಾದ ಕೂಡಗಿಯ ಬಳಿ ಬಂದಾಗ ನೀರಿನ ಹರಿವಿನ ಸದ್ದಿಗೆ ತಾಯಿಯ ಗೆಜ್ಜೆ ಶಬ್ಥ ಶಂಕರರಿಗೆ ಕೇಳೋದಿಲ್ಲ . ಆಗ ತಾಯಿ ಮಾತನ್ನು ಮರೆತು ಹಿಂದೆ ನೋಡುತ್ತಾರೆ . ಆಗ ದೇವಿ ಅಲ್ಲಿಯೇ ನಿಂತು ಬಿಡುತ್ತಾಳಂತೆ. ನಂತರ ದೇವಿಯನ್ನು ಶೃಂಗೇರಿಗೆ ಬರುವಂತೆ ಪರಿಪರಿಯಾಗಿ ಬೇಡಿಕೊಂಡಾಗ ,ತಾನು ನವರಾತ್ರಿಯಲ್ಲಿ ಮಾತ್ರ ಶೃಂಗೇರಿಗೆ ಬರುವುದಾಗಿ ಒಪ್ಪುತ್ತಾಳಂತೆ . ಹೀಗಾಗಿ ಇಂದಿಗೂ ಶೃಂಗೇರಿಯಲ್ಲಿ ನವರಾತ್ರೆಯಲ್ಲಿ ವಿಶೇಷ ಪೂಜೆ ಇರುತ್ತಂತೆ . ಉಳಿದಂತೆ ತಾಯಿ ಇಲ್ಲೇ ನೆಲೆಸಿದ್ದಾಳೆ ಅನ್ನೋ ನಂಬಿಕೆ ಭಕ್ತರದು .
ಇದನ್ನೂ ಓದಿ : ಇದು ಜಗತ್ತಿನ ಮೊದಲ ಜೋರ್ತಿಲಿಂಗ- ದೇವಾಲಯಕ್ಕೆ ಚಂದ್ರನೇ ನಿರ್ಮಾತೃ
ಇನ್ನು ಶೃಂಗೇರಿಯ ಪೀಠಾಧಿಪತಿಯಾಗಿದ್ದ ಗುರುಗಳಿಂದಲೇ ಇಲ್ಲಿ ಶಾರದಾ ಪೀಠ ಆರಂಭವಾಯಿತು ಅನ್ನೋದು ಮತ್ತೊಂದು ವಿಶೇಷ.. ಇಲ್ಲಿ ಶೃಂಗೇರಿ ಶಾರದ ಪೀಠದ ನರಸಿಂಹ ಭಾರತೀಯವರು ಇಲ್ಲಿ ಪೀಠವನ್ನು ಸ್ಥಾಪಿಸಿದ್ರಂತೆ . ಈ ಕುರಿತು ಒಂದು ಕಥೆ ಇದೆ. ಒಮ್ಮೆ ನರಸಿಂಹ ಭಾರತೀ ತೀರ್ಥರು ಕಾಶಿ ಯಾತ್ರೆಗೆ ಹೋಗಿದ್ದರಂತೆ.

ಆದರೆ ಹಲವು ತಿಂಗಳು ಅವರು ಬರದಿದ್ದಾಗ , ಅವರ ಶಿಷ್ಯನನ್ನೇ ಶೃಂಗೇರಿಯ ಪೀಠಾಧಿಪತಿಯನ್ನಾಗಿ ಮಾಡಿದ್ರಂತೆ . ನಂತರ ಅವರು ಹಿಂತಿರುಗಿ ಬಂದಾಗ ತಮ್ಮಶಿಷ್ಯನನ್ನು ಕಂಡು ಆಶೀರ್ವದಿಸಿ ಕೂಡಗಿ ಕ್ಷೇತ್ರದಲ್ಲಿ ಬಂದು ನೆಲೆಸಿದರಂತೆ . ಮತ್ತು ಅಲ್ಲಿಯೇ ಶಾರದಾ ಪೀಠ ಸ್ಥಾಪಿಸಿದರು ಅನ್ನೊ ನಂಬಿಕೆ ಇದೆ. ಈಗಾಗಲೇ ಇಲ್ಲಿ 24 ಪೀಠಾಧಿಪತಿಗಳು ಆಗಿ ಹೋಗಿದ್ದಾರೆ.
ಇನ್ನು ಈ ದೇವಾಯಲದಲ್ಲಿ ಶೃಂಗೇರಿಯಂತೆ ಪೂಜಾವಿಧಿಗಳು ನಡೆಯುತ್ತದೆ . ಇಲ್ಲಿ ಶುಕ್ರವಾರದಂದು ದೇವಿಗೆ ವಿಶೇಷ ಪೂಜೆ ಮಾಡಲಾಗುತ್ತೆ. ಇನ್ನು ಶೃಂಗೇರಿಯಂತೆ ಅಕ್ಷರಾಭ್ಯಾಸ ಮಾಡಿಸೋಕೆ ಭಕ್ತರು ತಮ್ಮ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. ಈ ಕ್ಷೇತ್ರ ತುಂಗಭದ್ರಾ ನದಿಯ ಸಂಗಮವಾಗಿದ್ದು, ಸಂಗಮ ಕ್ಷೇತ್ರಕ್ಕೆ ಅಂತಾನೆ ಭಕ್ತರು ಆಗಮಿಸುತ್ತಾರೆ.
ಇದನ್ನೂ ಓದಿ : ಇದು ಹನುಮನ ಮೊದಲ ದೇವಾಲಯ – ಇಲ್ಲಿ ತೀರ್ಥ ಸೇವಿಸಿದ್ರೆ ಸರ್ಪದೋಷ ಪರಿಹಾರ
ಇನ್ನು ಈ ಕ್ಷೇತ್ರ ಶಿವಮೊಗ್ಗ ಜಿಲ್ಲೆಯಿಂದ 17 ಕಿಲೋ ಮೀಟರ್ ದೂರದ ಕೂಡ್ಲಿ ಅನ್ನೋ ಜಾಗದಲ್ಲಿದೆ . ಇಲ್ಲಿಗೆ ಬರೋಕೆ ಶಿವಮೊಗ್ಗದಿಂದ ಸಾಕಷ್ಟು ಸಾರಿಗೆ ಸೌಕರ್ಯವಿದೆ. ಇನ್ನು ಇಲ್ಲಿ ಮಧ್ಯಾಹ್ನ ಭೋಜನ ಪ್ರಸಾದದ ವ್ಯವಸ್ಥೆ ಕೂಡಾ ಇದೆ . ಕೆಲವೊಂದು ವಿಶೇಷ ಸಂದರ್ಭದಲ್ಲಿ ರಾತ್ರಿ ಕೂಡಾ ಅನ್ನಪ್ರಸಾದವನ್ನು ವಿತರಿಸಲಾಗುತ್ತೆ ಅನ್ನೋದು ವಿಶೇಷ .
koodli Sharadamba Temple Shivamogga kudli is Origin of Sringeri