ಭಾನುವಾರ, ಏಪ್ರಿಲ್ 27, 2025
HomeSpecial StoryLife StyleAloe Vera Tips : ಚರ್ಮದ ಕಾಂತಿಗಷ್ಟೇ ಅಲ್ಲಾ, ತೂಕವನ್ನು ಇಳಿಸುತ್ತೆ ಅಲೋವೆರಾ

Aloe Vera Tips : ಚರ್ಮದ ಕಾಂತಿಗಷ್ಟೇ ಅಲ್ಲಾ, ತೂಕವನ್ನು ಇಳಿಸುತ್ತೆ ಅಲೋವೆರಾ

- Advertisement -

ಅಲೋವೆರಾವನ್ನು ಹಿಂದಿನ ಕಾಲದಿಂದಲೂ ನಮ್ಮ ಹಿರಿಯರು ಬಳಸುತ್ತಾ ಬಂದಿದ್ದಾರೆ. ಅಲೋವೆರಾ ನಮ್ಮ ಹೆಚ್ಚಿನ ಮನೆಗಳಲ್ಲಿ ಬೆಳೆಯುತ್ತಾರೆ. ಅದರಲ್ಲಿರುವ ಔಷಧೀಯ ಗುಣಗಳನ್ನು ತಿಳಿದರೆ ನಿಮಗೆ ಆಶ್ಚರ್ಯವೇನಿಸುತ್ತದೆ. ಅಲೋವೆರಾ ಔಷಧೀಯ ಸಸ್ಯವಾಗಿದೆ. ಇದನ್ನು ಕಾಸ್ಮೆಟಿಕ್, ಆಹಾರ ಮತ್ತು ತ್ವಚೆ ಉತ್ಪನ್ನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಅಲೋವೆರಾ ಗಾಯವನ್ನು ಗುಣಪಡಿಸುವ ಗುಣಗಳನ್ನು ಮತ್ತು ಚರ್ಮವನ್ನು ಮೃದುಗೊಳಿಸುವ ಗುಣಗಳನ್ನು ಹೊಂದಿದೆ. ನಾವು ಈ ಸಸ್ಯವನ್ನು ನೆರಳು ಮತ್ತು ಬಿಸಿಲಿನಲ್ಲಿ ಎಲ್ಲಿಯಾದರೂ ಬೆಳೆಯಬಹುದು, ಅಲೋವೆರಾ ಪೇಸ್ಟ್ ಅನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ನೆತ್ತಿಯ ಮೇಲೆ ಹಚ್ಚಿ. ನಿಮ್ಮ ಕೂದಲು ಹೊಳೆಯುತ್ತದೆ ಮತ್ತು ಮೃದುವಾಗಿರುತ್ತದೆ. ಕೂದಲು ಉದುರುವುದಕ್ಕೆ ಭಯಪಡುವ ಜನರು ಇದನ್ನು ಮಾಡುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ.

ಅಲೋವೆರಾದಲ್ಲಿನ ಪೋಷಕಾಂಶಗಳು, ಕಿಣ್ವಗಳು, ಅಮೈನೋ ಆಮ್ಲಗಳು, ಖನಿಜಗಳು ಎಲ್ಲವೂ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ 20% ಅಲೋವೆರಾ ಪೇಸ್ಟ್ ಅನ್ನು ಒಂದು ಲೋಟ ನೀರಿನಲ್ಲಿ ಕುಡಿಯಿರಿ. ಹೊಟ್ಟೆಯ ಕೊಬ್ಬು, ಕೆಟ್ಟ ಪದಾರ್ಥಗಳು ಎಲ್ಲವನ್ನೂ ಶುದ್ಧೀಕರಿಸಲಾಗುತ್ತದೆ. ರಸವನ್ನು ಕುಡಿಯಲು ಇಷ್ಟಪಡ ದವರಿಗೆ, ಅದರಲ್ಲಿ ಸ್ವಲ್ಪ ನಿಂಬೆ ರಸ ಮತ್ತು ಜೇನುತುಪ್ಪವನ್ನು ಸೇರಿಸುವುದು ಉತ್ತಮ.

ಚರ್ಮಕ್ಕೆ ಅಲೋವೆರಾದಿಂದಾಗುವ ಪ್ರಯೋಜನಗಳೊಂದೇ ಅಲ್ಲ. ಅಲೋವೆರಾ ಪೇಸ್ಟ್ ಅನ್ನು ಸುಟ್ಟಗಾಯ ಮತ್ತು ಉರಿಯೂತಕ್ಕೆ ಹಚ್ಚಬಹುದಾಗಿದೆ. ಅಲ್ಲದೆ, ಸ್ನಾನ ಮಾಡುವ ಮೊದಲು, ಅಲೋವೆರಾ ಪೇಸ್ಟ್ ಅನ್ನು ಸೋಪಿನಂತೆ ಚರ್ಮದ ಮೇಲೆ ಹಚ್ಚಿ. ಐದು ನಿಮಿಷಗಳ ನಂತರ ಸ್ನಾನ ಮಾಡಿದರೆ ಸಾಕು. ಸಾಬೂನು ಅಗತ್ಯವಿಲ್ಲದೆ ಚರ್ಮ ಸ್ವಚ್ಚವಾಗಿ ರುತ್ತದೆ. ಅಷ್ಟೇ ಅಲ್ಲ. ಚರ್ಮದ ಮೇಲಿನ ಎಲ್ಲಾ ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಜೀವಿಗಳು ಕೊಲ್ಲಲ್ಪಡುತ್ತವೆ. ಚರ್ಮವು ಹೊಳೆಯುತ್ತದೆ ಮತ್ತು ಮೃದುವಾಗುತ್ತದೆ. ಇದನ್ನೂ ಓದಿ : ಯೋಗದಿಂದ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ

ಅಲೋವೆರಾವನ್ನು ಬಿಪಿ ಮತ್ತು ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹ ಬಳಸಬಹುದು ಎಂದು ಸಂಶೋಧನೆ ತೋರಿಸಿದೆ. ನೀವು ಪ್ರತಿದಿನ ಎರಡು ಚಮಚ ಅಲೋವೆರಾ ಜ್ಯೂಸ್ ಕುಡಿಯುತ್ತಿದ್ದರೆ. ಬಿಪಿ ಮತ್ತು ಮಧುಮೇಹವನ್ನು ನಿಯಂತ್ರಿಸಬಹುದು. ಈ ನಿಟ್ಟಿನಲ್ಲಿ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಸೂಕ್ತ. ಈ ಅನೇಕ ಪ್ರಯೋಜನ ಗಳಿಂದಾಗಿ, ಈಗ ಎಲ್ಲಾ ಕಾಸ್ಮೆಟಿಕ್ ಕಂಪನಿಗಳು ಅಲೋ ವೆರಾ ಪೇಸ್ಟ್, ಅಲೋ ವೆರಾ ಕ್ರೀಮ್, ಅಲೋ ವೆರಾ ಸೋಪ್, ಅಲೋ ವೆರಾ ಕಂಡಿಷನರ್ . ಈ ರೀತಿಯ ನೂರಾರು ಉತ್ಪನ್ನಗಳನ್ನು ತಯಾರಿಸುತ್ತಿವೆ. ಇದನ್ನೂ ಓದಿ : ಸ್ಕಿನ್‌ ಪಿಗ್ಮೆಂಟೇಷನ್‌ಗೆ ಇಲ್ಲಿದೆ ಶಾಶ್ವತ ಪರಿಹಾರ

RELATED ARTICLES

Most Popular