- ರಕ್ಷಾ ಬಡಾಮನೆ
ದಿನನಿತ್ಯದ ಜೀವನದಲ್ಲಿ ನಾವು ನಮ್ಮ ಮುಖ ಸೌಂದರ್ಯ, ಕೂದಲಿನ ಶರೀರದ ಅಂದ ಹೆಚ್ಚಿಸಲು ಹಲವಾರು ತರದ ಕ್ರೀಮ್ ಶಾಂಪೂ ಗಳನ್ನು ಬಳಸುತ್ತೇವೆ. ಹಲವು ತರದ ಫೇಸ್ ಪ್ಯಾಕ್ ಗಳು ಕೂಡ ನಮ್ಮ ದಿನನಿತ್ಯ ದಲ್ಲಿ ಸೇರಿ ಹೋಗಿದೆ. ಹಲವಾರು ನೈಸರ್ಗಿಕ ವಿಧಾನಗಳನ್ನು ಬಳಸುತ್ತೇವೆ. ಅದರಲ್ಲಿ ಮೊಟ್ಟೆ (Egg Massage) ಕೂಡ ಒಂದು.

.ಮೊಟ್ಟೆ ಮತ್ತು ಆಲೀವ್ ಎಣ್ಣೆಯನ್ನು ಬೆರಸಿ ಅದನ್ನು ಚೆನ್ನಾಗಿ ಕಲಸಿ ನಿಮ್ಮ ಕೂದಲಿಗೆ ಪ್ಯಾಕ್ ರೀತಿ ಹಚ್ಚಿ ಒಂದು ಗಂಟೆಯ ನಂತರ ತೊಳೆಯಿರಿ. ಇದರಿಂದ ನಿಮ್ಮ ತುಂಡಾದ ಕೂದಲು ಆರೋಗ್ಯವಾಗಿ ಬೆಳೆಯುತ್ತದೆ.

ಮೊಟ್ಟೆ ಮತ್ತು ಮೊಸರನ್ನು ಸೇರಿಸಿ ಬೆರಸಿ ಅದನ್ನು ಕೂದಲಿಗೆ ಮಾಸ್ಕ್ ರೀತಿ ಹಚ್ಚಿ 30 ನಿಮಿಷ ಗಳ ನಂತರ ತೊಳೆಯಿರಿ. ಇದರಿಂದ ಕೂದಲು ತೇವಾಂಶ ಇರುವಂತೆ ಕಾಪಾಡುತ್ತದೆ.

ಮೊಟ್ಟೆಯ ಬಿಳಿ ಭಾಗಕ್ಕೆ ನಿಂಬೆ ರಸ ಸೇರಿಸಿ ಅದನ್ನು ತಲೆಗೆ ಹಾಕಿ 30 ನಿಮಿಷದ ನಂತರ ತೊಳೆದು ಶಾಂಪೂ ಅಲ್ಲಿ ಸ್ನಾನ ಮಾಡಿದರೆ ಕೂದಲು ಜೀವ ಕಳೆಯನ್ನು ಪಡೆಯುತ್ತದೆ.

ಮೊಟ್ಟೆಯ ಬಿಳಿ ಭಾಗವನ್ನು ನಿಂಬೆ ಹಣ್ಣಿನ ರಸದಲ್ಲಿ ಬೆರಸಿ .ಮುಖವನ್ನು ತೊಳೆದು ಅದರ ಮೇಲೆ ಟಿಶ್ಯು ಪೇಪರ್ ಅಂಟಿಸಿ ಅದಕ್ಕೆ ಮಿಶ್ರಣದ ಲೇಪನ ಮಾಡಿ ಒಣಗಿದ ನಂತರ ತೆಗೆಯಿರಿ ಇದರಿಂದ ಮುಖದ ಮೇಲಿನ ರಂಧ್ರಗಳು ಮುಚ್ಚುತ್ತದೆ.

ಮೊಟ್ಟೆಯ ಬಿಳಿ ಭಾಗವನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಜೀವ ಕೋಶದ ಕಲ್ಮಶ ತೆಗೆದು ಕಾಂತಿಯುತ ತ್ವಚೆ ನಿಮ್ಮದಾಗುವುದು. ಮೊಟ್ಟೆ ಮತ್ತು ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಕೂಡ ಕಾಂತಿ ಹೆಚ್ಚಾಗುತ್ತದೆ.
ಇದನ್ನೂ ಓದಿ : Skin Care ಬಿಸಿಲಿನ ತಾಪಮಾನದಿಂದ ಚರ್ಮದ ರಕ್ಷಣೆ ಹೇಗೆ? ಇಲ್ಲಿದೆ ಉಪಯುಕ್ತ ಟಿಪ್ಸ್!
ಇದನ್ನೂ ಓದಿ : Sleeplessness ಗರ್ಭಿಣಿಯರು ನಿದ್ದೆ ಕಡಿಮೆ ಮಾಡಿದರೆ ಏನೆಲ್ಲಾ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಗೊತ್ತೇ?
( Beauty Tips : Egg Massage Face and Beauty)