Best Summer Dresses : ಬೇಸಿಗೆ ಕಾಲದಲ್ಲಿ ಹೀಗಿರಲಿ ಮಹಿಳೆಯರ ಉಡುಪಿನ ಆಯ್ಕೆ

Best Summer Dresses : ಈಗಂತೂ ವಿಪರೀತ ಸೆಖೆ. ಹೀಗಾಗಿ ಹೊರಗಡೆ ತಿರುಗಾಡೋಕೆ ಹೋಗೋಣ ಅಂದರೂ ಸೂರ್ಯನ ಧಗೆ ನಿಮ್ಮನ್ನು ನೆಮ್ಮದಿಯಿಂದ ಇರಲು ಬಿಡದು. ಹೀಗಾಗಿ ಮಹಿಳೆಯರಿಗೆ ಈ ಬೇಸಿಗೆ ಕಾಲದಲ್ಲಿ ಯಾವ ಡ್ರೆಸ್​ಗಳನ್ನು ಹಾಕಿ ತಿರುಗಾಡೋಕೆ ಹೋಗೋದು ಎಂಬುದೇ ದೊಡ್ಡ ತಲೆನೋವು. ಫ್ಯಾಶನ್​ನ್ನು ಮರೆಯದೇ ಸೆಖೆಯನ್ನೂ ಗಮನದಲ್ಲಿಟ್ಟುಕೊಂಡು ನೀವು ಅತ್ಯಂತ ಆರಾಮಾದಾಯಕ ಎಂಬ ಧಿರಿಸುಗಳನ್ನೂ ಈ ಬೇಸಿಗೆಯಲ್ಲಿ ಧರಿಸಬಹುದು. ಸ್ಕರ್ಟ್​ಗಳು, ಜಂಪ್​ಸೂಟ್​ಗಳು ಅಷ್ಟೇ ಏಕೆ ಮ್ಯಾಕ್ಸಿಗಳು ಬೇಸಿಗೆ ಕಾಲದಲ್ಲಿ ನಿಮ್ಮ ಆಪ್ತ ಮಿತ್ರ ಎನಿಸುತ್ತವೆ. ಹಾಗಾದರೆ ಈ ಸೆಖೆಗಾಲದಲ್ಲಿ ನಿಮ್ಮ ಧಿರಿಸಿನ ಆಯ್ಕೆ ಹೇಗಿರಬೇಕು ಎಂಬುವುದಕ್ಕೆ ಇಲ್ಲಿದೆ ಮಾಹಿತಿ :

ಮ್ಯಾಕ್ಸಿ ಡ್ರೆಸ್​ :

ಬೇಸಿಗೆ ಕಾಲದಲ್ಲಿ ಮ್ಯಾಕ್ಸಿ ಡ್ರೆಸ್​ಗಳು ನೀಡುವಷ್ಟು ನೆಮ್ಮದಿಯನ್ನು ನಿಮಗೆ ಮತ್ಯಾವ ಡ್ರೆಸ್​ಗಳು ನೀಡಲು ಅಸಾಧ್ಯ. ಉದ್ದನೆಯ ತೋಳಿನ, ಮೈ ತುಂಬಾ ಕವರ್​ ಆಗುವಂತಹ ಈ ಮ್ಯಾಕ್ಸಿ ಉಡುಪುಗಳು ನಿಮ್ಮನ್ನು ಸೂರ್ಯನ ಶಾಖದಿಂದ ಸುಡದಂತೆ ನೋಡಿಕೊಳ್ಳುತ್ತವೆ. ಸಾಮಾನ್ಯವಾಗಿ ಹತ್ತಿ ಬಟ್ಟೆಯಲ್ಲಿಯೇ ನಿಮಗೆ ಮ್ಯಾಕ್ಸಿಗಳು ದೊರೆಯುವುದರಿಂದ ನಿಮಗೆ ಈ ಉಡುಪು ಅತ್ಯಂತ ಭಾರ ಎಂತಲೂ ಎನಿಸುವುದಿಲ್ಲ.

ಫ್ಲೋರಲ್​ ಪ್ರಿಂಟ್​ ಡ್ರೆಸ್​ಗಳು :


ನೀವು ಬಟ್ಟೆಗಳ ಮೇಲೆ ದೊಡ್ಡ ದೊಡ್ಡ ಹೂವುಗಳು ಅಥವಾ ಇನ್ಯಾವುದೇ ದೊಡ್ಡ ದೊಡ್ಡ ಡಿಸೈನ್​ಗಳನ್ನು ನೀವು ಇಷ್ಟಪಡುವವರಾಗಿದ್ದರೆ ಫ್ಲೋರಲ್​ ಪ್ರಿಂಟ್​ ಡ್ರೆಸ್​ಗಳು ನಿಮ್ಮ ಬೇಸಿಗೆಗೆ ಬೆಸ್ಟ್​ ಆಯ್ಕೆ ಎನಿಸಲಿವೆ. ಡ್ರೆಸ್​ಗಳ ಮೇಲೆ ಅತಿಯಾದ ಎಂಬ್ರಾಯ್ಡರಿಗಳು ನಿಮಗೆ ಈ ಸೆಖೆಯಲ್ಲಿ ಕಿರಿಕಿರಿ ಎನಿಸಬಹುದು. ಆದರೆ ಅದರ ಬದಲು ಫ್ಲೋರಲ್​ ಪ್ರಿಂಟ್​​ ಬಟ್ಟೆಗಳನ್ನು ಧರಿಸುವುದರಿಂದ ನಿಮಗೆ ಕಿರಿಕಿರಿಯೂ ಇರೋದಿಲ್ಲ. ಹಾಗೂ ಬೇಸಿಗೆಗೆ ಟ್ರೆಂಡಿ ಎಂತಲೂ ಎನಿಸುತ್ತವೆ.

ಶರ್ಟ್​ ಡ್ರೆಸ್​ಗಳು :


ಶರ್ಟ್​ ಡ್ರೆಸ್​ಗಳು ಬೇಸಿಗೆಯ ಸಂದರ್ಭದಲ್ಲಿ ಸ್ಟಾರ್ ನಟಿಯರ ಹಾಟ್​ ಫೇವರಿಟ್​ ಆಯ್ಕೆಯಾಗಿದೆ. ಇದರಲ್ಲಿ ಅನೇಕ ವಿಧಗಳು ನಿಮಗೆ ಮಾರುಕಟ್ಟೆಯಲ್ಲಿ ಸಿಗುತ್ತದೆ. ಕಾಟನ್​ ಅಥವಾ ಲಿನೆನ್​ಗಳಿಂದ ಮಾಡಲ್ಪಡುವ ಈ ಡ್ರೆಸ್​ಗಳು ನಿಮ್ಮ ಫಿಗರ್​​ನ್ನು ಅಚ್ಚುಕಟ್ಟಾಗಿ ತೋರಿಸುತ್ತದೆ. ಈ ಡ್ರೆಸ್​ಗಳ ನೆಕ್​ನಲ್ಲಿರುವ ಕಾಲರ್​ಗಳು ನಿಮಗೆ ಸಖತ್​ ಲುಕ್​ ನೀಡುತ್ತದೆ.

ಮಿಡಿ ಡ್ರೆಸ್​ಗಳು :


ನೀವು ಮಿಡಿ ಡ್ರೆಸ್​ಗಳನ್ನು ಇಷ್ಟ ಪಡುವವರಾಗಿದ್ದರೆ ನೀವು ಬೇಸಿಗೆಯಲ್ಲಿ ತಲೆ ಕೆಡಿಸಿಕೊಳ್ಳುವುದೇ ಬೇಡ. ಮಿಡಿ ಡ್ರೆಸ್​ಗಳು ಹೀಲ್ಸ್​ಗಳ ಜೊತೆಯಲ್ಲಿ ಧರಿಸುವುದರಿಂದ ನಿಮಗೆ ಸಖತ್​​ ಹಾಟ್​ ಲುಕ್​ ನೀಡುತ್ತದೆ. ಇದರಲ್ಲಿ ಬರುವ ಕೋಲ್ಡ್​ ಶೋಲ್ಡರ್​ಗಳು , ಬ್ರಾಡ್​ ನೆಕ್​ ಡ್ರೆಸ್​ಗಳು ಸಖತ್​ ಟ್ರೆಂಡಿಯಾಗಿದೆ .

ಇದನ್ನು ಓದಿ : SSLC Result : ಮೇ 20 ರೊಳಗೆ ಎಸ್ಎಸ್ಎಲ್‌ಸಿ ಫಲಿತಾಂಶ: ಮೌಲ್ಯ ಮಾಪನಕ್ಕೆ ಗೈರಾದವರಿಗೆ ನೊಟೀಸ್

ಇದನ್ನೂ ಓದಿ : School Open Postpone : ಶಾಲೆ ಆರಂಭ ಮುಂದೂಡಿ : ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಸಭಾಪತಿ ಬಸವರಾಜ್‌ ಹೊರಟ್ಟಿ

Best Summer Dresses for Reveling in Warmer Temps

Comments are closed.