Bharat Vidya:ಇ-ಕಲಿಕೆಗೆ ವೇದಿಕೆಯಾಗಲಿದೆ “ಭಾರತ್‌ ವಿದ್ಯಾ” : ಸಚಿವೆ ನಿರ್ಮಲಾ ಸೀತಾರಾಮನ್‌ ಚಾಲನೆ

ನವದೆಹಲಿ : ಆನ್‌ಲೈನ್‌ ಕಲಿಕಾ ವೇದಿಕೆಯಾಗಿರುವ “ಭಾರತ್‌ ವಿದ್ಯಾ” (Bharat Vidya)ಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌(Nirmala Seetharaman) ಅವರು ಪುಣೆಯಲ್ಲಿ ಚಾಲನೆ ನೀಡಲಿದ್ದಾರೆ. ಭಂಡಾರ್ಕರ್‌ ಓರಿಯೆಂಟಲ್‌ ರಿಸರ್ಚ್‌ ಇನ್ಸ್‌ ಸ್ಟಿಟ್ಯೂಟ್‌(Bhandarkar Oriental Research Institute) ಯನ್ನು ರಚಿಸಿ, ಅಭಿವೃದ್ಧಿಪಡಿಸಿರುವ “ಭಾರತ್‌ ವಿದ್ಯಾ” (Bharat Vidya)ವೇದಿಕೆಯು ವಾಸ್ತುಶಿಲ್ಪ, ಕಲೆ, ತತ್ವಶಾಸ್ತ್ರ, ಭಾಷೆ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಇಂಡಾಲಜಿಯ ವಿವಿಧ ಅಂಶಗಳನ್ನು ಒಳಗೊಂಡಿರುವ ಉಚಿತ ಮತ್ತು ಪೇಯ್ಡ್‌ ಕೋರ್ಸ್‌ಗಳನ್ನು ಒದಗಿಸುತ್ತದೆ.

(Nirmala Seetharaman)”ಭಾರತ್‌ ವಿದ್ಯಾ”(Bharat Vidya) ದಲ್ಲಿ ಮುಖ್ಯವಾಗಿ ಭಾರತೀಯ ದರ್ಶನಶಾಸ್ತ್ರ, ವೇದವಿದ್ಯೆ, ಸಂಸ್ಕೃತ ಕಲಿಕೆ, ಮಹಾಭಾರತದ 18 ಪರ್ವಗಳು, ಪುರಾತತ್ವಶಾಸ್ತ್ರದ ಮೂಲಭೂತ ಅಂಶಗಳು ಕಾಳಿದಾಸ ಮತ್ತು ಭಾಷೆ ಎಂಬ ಆರು ತರಹದ ಪಠ್ಯಕ್ರಮಗಳನ್ನು ಪ್ರಾರಂಭದಲ್ಲಿ ಘೋಷಿಸಲಾಗುತ್ತದೆ. 2020ರ ಅನ್ವಯದ ಪ್ರಕಾರ ರಾಷ್ಟ್ರೀಯ ಶಿಕ್ಷಣ ನೀತಿಯು ಅನೇಕ ಅಧ್ಯಾಯನಗಳನ್ನು ವಿನ್ಯಾಸಗೊಳಿಸಿದೆ. ಭಾರತೀಯ ಮತ್ತು ವಿದೇಶಿ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಭಂಡಾರ್ಕರ್‌ ಓರಿಯೆಂಟಲ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ (Bhandarkar Oriental Research Institute) ತನ್ನ ಕೆಲವು ಕೋರ್ಸ್‌ಗಳಿಗೆ ಪ್ರಾಮುಖ್ಯತೆಯನ್ನು ನೀಡಿ ವಿನ್ಯಾಸಗೊಳಿಸಲಾಗಿದೆ.

ಬಹಳ ಹಿಂದಿನಿಂದಲೇ ಭಾರತೀಯ ಭಾಷೆಗಳು, ಕಲೆ, ಸಂಸ್ಕೃತಿ, ವಿಜ್ಞಾನ ಮತ್ತು ತತ್ವಶಾಸ್ತ್ರದ ಕೋರ್ಸ್ ಗಳ ಅಭ್ಯಾಸಕ್ಕಾಗಿ ಪುಣೆ ಮೂಲದ (Bhandarkar Oriental Research Institute)ಭಂಡಾರ್ಕರ್‌ ಇನ್‌ ಸ್ಟಿಟ್ಯೂಟ್‌ ಇಂಡಾಲಜಿ ಕಲಿಕಾ ವೇದಿಕೆಯನ್ನು ಪ್ರಾರಂಭಿಸಲು ಸಿದ್ಧತೆಯನ್ನು ಮಾಡಿಕೊಂಡಿತ್ತು. ಮೊದಲ ಕಲಿಕಾ ವೇದಿಕೆಯಾಗಿರುವ “ಭಾರತ್‌ ವಿದ್ಯಾ”ವು ಭಾರತ ಮತ್ತು ದಕ್ಷಿಣಾ ಏಷ್ಯಾದ ಪ್ರಾಚೀನ ಜ್ಞಾನಶಿಸ್ತುಗಳ ತರಬೇತಿಗೆ ಬಹಳಷ್ಟು ವ್ಯವಸ್ಥಿತ ರೀತಿಯಲ್ಲಿ ರೂಪುಗೊಂಡಿದೆ. ಇದರ ಜೊತೆಗೆ ಕಲಿಯುವವರಿಗೆ ತಮ್ಮ ತಮ್ಮ ಇಷ್ಟದ ವಿಷಯವನ್ನು ಅವರದೇ ಆದ ವೇಗದ ರೀತಿಯಲ್ಲಿ ಅಧ್ಯಾಯನವನ್ನು ಪೂರ್ತಿಗೊಳಿಸಲು ಈ ಡಿಜಿಟಲ್‌ ವೇದಿಕೆಯು ಸಹಾಯ ಮಾಡುತ್ತದೆ.


ಭಂಡಾರ್‌ಕರ್‌ ಇನ್‌ಸ್ಟಿಟ್ಯೂಟ್‌ 1917ರಲ್ಲಿ ಸ್ಥಾಪನೆಯಾಗಿದೆ. ಭಂಡಾರ್‌ಕರ್‌ ಇನ್‌ಸ್ಟಿಟ್ಯೂಟ್‌ ಒಂದಷ್ಟು ಅಪರೂಪದ ಬುಕ್‌ಗಳನ್ನು ಮತ್ತು ಹಸ್ತಪ್ರತಿಗಳ ದೊಡ್ಡಮಟ್ಟದ ಸಂಗ್ರಹವನ್ನು ಹೊಂದಿದೆ. ಈ ಸಂಸ್ಥೆಯ ಗ್ರಂಥಾಲಯವು 90 ವರ್ಷ ಕಾಲಾವಧಿಯಲ್ಲಿ 1.25 ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳನ್ನು ಹಾಗೂ 2800ಕ್ಕೂ ಅಧಿಕ ಹಸ್ತಪ್ರತಿಯನ್ನು ಸಂಗ್ರಹಿಸಿದೆ. ಈ ಪುಸ್ತಕಗಳಲ್ಲಿ ಓರಿಯೆಂಟಾಲಜಿಯ ಎಲ್ಲಾ ಮುಖ್ಯ ಅಂಶಗಳ ಬಗ್ಗೆ ಈ ಪುಸ್ತಕಗಳಲ್ಲಿ ಸಿಗುತ್ತದೆ. ಇಲ್ಲಿನ ಹೆಚ್ಚಿನ ಬುಕ್‌ಗಳಿಗೆ ಡಿಜಿಟಲ್‌ನನ್ನು ಸ್ಪರ್ಶಿಸಲಾಗಿದೆ. ಭಂಡಾರ್‌ಕರ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಯುರೋಪಿನ್‌ ಭಾಷೆಗಳ, ಸಂಸ್ಕೃತ, ಪ್ರಾಕೃತಿಕ, ಭಾರತೀಯ ಪ್ರಾದೇಶಿಕ ಭಾಷೆಗಳು ಹಾಗೂ ಆಸಿಯನ್‌ ಭಾಷೆಯ ಪುಸ್ತಕಗಳು ಕೂಡ ಸಿಗುತ್ತದೆ.

ಇದನ್ನೂ ಓದಿ : ಸೊರಬ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ: ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ವಿರುದ್ದ ಅಸಮಾಧಾನ

ಇದನ್ನೂ ಓದಿ : ಸುಮಲತಾರ ಆಣೆ – ಪ್ರಮಾಣದ ಸವಾಲ್​ ಸ್ವೀಕರಿಸಿದ ಮೇಲುಕೋಟೆ ಶಾಸಕ ಸಿ.ಎಸ್​ ಪುಟ್ಟರಾಜು

ಭಂಡಾರ್‌ಕರ್‌ ಇನ್‌ಸ್ಟಿಟ್ಯೂಟ್‌ನ ಕಾರ್ಯನಿರ್ವಾಹಕರಾದ ಅಧ್ಯಕ್ಷ ಭೂಪಲ್‌ ಪಟವರ್ಧನ್‌ ಅವರು ಈ ಕುರಿತು ಮಾತನಾಡುತ್ತಾ, ಈ ವರ್ಷದ ಡಿಸೆಂಬರ್‌ ವೇಳೆಗೆ 100 ಗಂಟೆಗಳಷ್ಟು ಅವಧಿಯ ವಿಷಯವನ್ನು ತಯಾರಿಪಡಿಸಲು ಹಾಗೂ ಬರುವ ವರ್ಷದಲ್ಲಿ ಇದನ್ನು 500 ಗಂಟೆಗಳಿಗೆ ವಿಸ್ತರಿಸಲು ಉದ್ದೇಶಿಸಿದ್ದೇವೆ ಎಂದಿದ್ದಾರೆ. ಕೋವಿಡ್‌ ನಂತಹ ಸಾಂಕ್ರಮಿಕ ರೋಗ ಪ್ರಾರಂಭವಾದ ದಿನಗಳಲ್ಲಿ ಈ ಇನ್‌ಸ್ಟಿಟ್ಯೂಟ್‌ 12 ಆನ್‌ಲೈನ್‌ ಕೋರ್ಸ್ ಗಳನ್ನು ನೆಡೆಸುತ್ತಿದೆ. ಇದರಲ್ಲಿ ಮಹಾಭಾರತ ಮತ್ತು ಮರಾಠಾ ಇತಿಹಾಸದ ಕೋರ್ಸ್‌ಗಳು ಹೆಚ್ಚಿನ ಜನಮನ್ನಣೆಯನ್ನು ಪಡೆದುಕೊಂಡಿತ್ತು. ತಲಾ 300 ಸ್ಪರ್ಧಿಗಳ ಐದು ತಂಡಗಳಿಗೆ ಕಳೆದ ಎರಡು ವರ್ಷಗಳಿಂದ ಮಹಾಭಾರತದ ಕೋರ್ಸ್‌ಗಳನ್ನು ನೀಡಲಾಗಿತ್ತು. ಈ ಕೋರ್ಸ್‌ಗಳನ್ನು ನೇರಪ್ರಸಾರದ ಮೂಲಕ ಕಲಿಯಬಹುದಾಗಿತ್ತು. ನೇರಪ್ರಸಾರವನ್ನು ಝೂಮ್‌ ಹಾಗೂ ಅದೇ ತರಹದ ಪ್ಲಾಟ್‌ಫಾರ್ಮ್‌ಗಳಲ್ಲಿ ಕಲಿಯುವವರು ಹಾಜರಿರಬೇಕೆಂದು ನಿರೀಕ್ಷಿಸಲಾಗಿತ್ತು. ಇದರಲ್ಲಿ ಉಪಸ್ಥಿತರಿರಲು ಸಾಧ್ಯವಾಗದಿರುವ ಸ್ಪರ್ಧಿಗಳಿಗೆ ಇದೊಂದು ಸವಾಲಾಗಿತ್ತು. ಕೋರ್ಸ್‌ ಮೆಟೀರಿಯಲ್‌ನನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡುವುದರೊಂದಿಗೆ ಈ ಸಮಸ್ಯೆಯನ್ನು ಬಗೆಹರಿಸಲಾಯಿತು ಎಂದರು.

“Bharat Vidya” will be a platform for e-learning: launched by Minister Nirmala Seetharaman

Comments are closed.