Manas Joshi gives birth to a baby girl : ಹೆಣ್ಣು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಮಾನಸ ಜೋಶಿ

(Manas Joshi gives birth to a baby girl ) ಕನ್ನಡ ಕಿರುತೆರೆಯ ಜನಪ್ರೀಯ ಧಾರವಾಹಿಗಳಾದ ಮಹಾದೇವಿ ಮತ್ತು ಮಂಗಳಗೌರಿ ಮದುವೆ ದಾರವಾಹಿಯಲ್ಲಿ ನಟಿಸಿರುವ ನಟಿ ಮಾನಸ ಜೋಶಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸೋಷಿಯಲ್‌ ಮೀಡಿಯಾ ಒಂದರಲ್ಲಿ ಪೋಸ್ಟ್‌ ಹಾಕುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕುವ ಮೂಲಕ “ನಗು ಮತ್ತು ಕರ್ಲಿ ಕೂದಲು , ರಿಬ್ಬನ್‌ ಮತ್ತು ಬೋ, ಅಡಿಯಿಂದ ಮುಡಿವರೆಗೆ ಆಕೆ ಎಷ್ಟು ಮುದ್ದಾಗಿದ್ದಾಳೆ.. ಹೆಣ್ಣು ಮಗುವಿಗೆ ಹೆಮ್ಮೆಯ ಪೋಷಕರು” ಎಂದು ಮಾನಸ ಜೋಶಿ(Manas Joshi gives birth to a baby girl ) ಅವರು ಬರೆದುಕೊಂಡಿದ್ದಾರೆ. ಇದೀಗ ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದು, ತಮ್ಮ ಪ್ರೆಗ್ನೆನ್ಸಿ ಜರ್ನಿಯನ್ನು ಪೋಸ್ಟ್‌ ಗಳ ಮೂಲಕ ತಮ್ಮ ಅಭಿಮಾನಿಗಳ ಜೊತೆ ಮಾನಸ ಹಂಚಿಕೊಂಡಿದ್ದಾರೆ.

https://www.instagram.com/p/CkxRzp5v3VS/?utm_source=ig_embed&ig_rid=0e937e10-bef2-453a-88c1-f4660a65d6f4

ತಮ್ಮ ಪ್ರಗ್ನೆನ್ಸಿ ಜರ್ನಿಯ ಬಗ್ಗೆ ” ಯಾವುದೇ ಫಿಲ್ಟರ್‌ ಹಾಕದೆ ನಿಮ್‌ ಜೊತೆ ಫೋಟೋ ಹಂಚಿಕೊಳ್ಳುತ್ತಿರುವೆ. ನಿಜಕ್ಕೂ ಇದೊಂದು ಅದ್ಭುತ ಪಯಣ. ಪ್ರತಿಯೊಬ್ಬರ ಪ್ರಗ್ನೆನ್ಸಿ ಪಯಣ ತುಂಬಾನೆ ವಿಭಿನ್ನವಾಗಿರುತ್ತದೆ, ಆದರೆ ನನ್ನದು ಕೊಂಚ ಕಷ್ಟಕರವಾಗಿತ್ತು. ಇಷ್ಟೊಂದು ಪೋಸ್ಟ್‌ ಹಾಕುತ್ತಿರುವುದು ಒಂದೇ ಕಾರಣಕ್ಕೆ. ಜನರಿಗೆ ಯಾವುದೇ ಸುಳ್ಳು ಹೇಳದೇ ಈ ಜರ್ನಿ ಹೇಗಿದೆ ಎಂದು ಜನರಿಗೆ ತೋರಿಸಲು.” ಎಂದು ಮಾನಸ ಜೋಶಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Vasuki Vaibhav Movie Song release: ‘ದೂರದರ್ಶನ’ದಲ್ಲಿ ವಾಸುಕಿ ವೈಭವ್ ಚಿತ್ರಗೀತೆ : ‘ಕಣ್ಣು ಕಣ್ಣು ಕಾದಾಡುತ ಇರಲಿ’ ಸಾಂಗ್ ರಿಲೀಸ್

ಪ್ರೆಗ್ನೆನ್ಸಿ ಜರ್ನಿಯಲ್ಲಿ ತಾಯಿ ಮಾತ್ರವಲ್ಲ ತಂದೆ ಕೂಡ ಪ್ರಯಾಣ ಮಾಡಬೇಕು ಅನ್ನೋದನ್ನು ಅದೆಷ್ಟೋ ಮಂದಿ ಮರೆತು ಬಿಟ್ಟಿದ್ದಾರೆ. ನನ್ನ ಪತಿಗಿಂತ ಒಳ್ಳೆ ಜೊತೆಗಾರನ್ನು ಆ ದೇವರ ಬಳಿ ಕೇಳಲು ಆಗುತ್ತಿರಲಿಲ್ಲ. ನನ್ನ ಕಷ್ಟದ ಸಮಯದಲ್ಲಿ ನನ್ನ ಬೆನ್ನೆಲುಬಾಗಿ ನಿಂತಿದ್ದರು. ಬೆಟ್ಟದಷ್ಟು ತಾಳ್ಮೆ ಸಮುದ್ರದಷ್ಟು ಪ್ರೀತಿ ಕೊಡುವ ವ್ಯಕ್ತಿ ಯಾವ ಕ್ಷಣವೂ ಆಗುವುದಿಲ್ಲ ಎಂದು ನನ್ನನ್ನು ಬಿಟ್ಟು ಕೊಡಲಿಲ್ಲ’ ಎಂದು ಮಾನಸ ತನ್ನ ಗಂಡನ ಬಗ್ಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : Mata Trailer Release : ನವೆಂಬರ್ 18ಕ್ಕೆ ರವೀಂದ್ರ ವೆಂಶಿ ನಿರ್ದೇಶನದ “ಮಠ” ಟ್ರೇಲರ್ ರಿಲೀಸ್

ಗರ್ಭಿಣಿ ಎಂದು ತಿಳಿದ ಮೊದಲ ದಿನದಿಂದಲೂ ಊಟ , ನಿದ್ರೆ, ನಡೆಯುವುದು ಹೇಗೆ ಎನ್ನುವುದು ನನಗೆ ಒಂದೊಂದೇ ಚಾಲೆಂಜ್‌ ಆಗಿತ್ತು ಹಾಗೆ ನನ್ನ ಮೂಡ್‌ ಸ್ವಿಂಗ್‌ ಕೂಡ ಒಂದು ಚಾಲೆಂಜ್‌ ಆಗಿತ್ತು. ಒಂದು ಕ್ಷಣದಲ್ಲಿ ಒಂದು ಭಾವನೆಯಿಂದ ಮತ್ತೊಂದು ರೀತಿಯ ಭಾವನೆಗೆ ಜಂಪ್ ಆಗುತ್ತಿದ್ದೆ. ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳನ್ನು ಒಪ್ಪಿಕೊಳ್ಳುವುದು ತುಂಬಾ ಮುಖ್ಯ. ದಿನಕ್ಕೊಂದು ಬದಲಾವಣೆಗಳು ಗಮನಕ್ಕೆ ಬರುತ್ತದೆ ಅದರಲ್ಲೂ ದೇಹದ ಮೇಲೆ ಆಗುವ ಮಾರ್ಕ್‌ ಮತ್ತು ವಿಚಿತ್ರ ಭಾವನೆ. ಕನ್ನಡಿ ಮುಂದೆ ನಿಂತುಕೊಂಡರೆ ನಾವು ನಮ್ಮಂತೆ ಕಾಣಿಸುವುದಿಲ್ಲ’ ಎಂದು ಮಾನಸ ಹೇಳಿದ್ದಾರೆ.

https://www.instagram.com/p/CkfMmD7vkWH/

(Manas Joshi gives birth to a baby girl) Actress Manas Joshi, who has acted in popular Kannada television serials Mahadevi and Mangalagouri, has given birth to a baby girl. He gave sweet news to his fans by posting on one of the social media.

Comments are closed.