Foot Massage : ಹೆಚ್ಚಿನವರು ತಮ್ಮ ಪಾದಗಳ ಬಗ್ಗೆ ಅಷ್ಟಾಗಿ ಕಾಳಜಿ ಮಾಡುವುದಿಲ್ಲ. ನಮ್ಮ ದೈನಂದಿನ ಆರೈಕೆ ಕೇವಲ ನಮ್ಮ ಮುಖ, ಕೂದಲು, ದೇಹ ಮತ್ತು ಉಗುರುಗಳಿಗೆ ಸೀಮಿತವಾಗಿವೆ. ನಮ್ಮ ದೇಹದ ಇತರ ಭಾಗಗಳಷ್ಟೇ ಮಹತ್ವವನ್ನು ಪಾದಗಳಿಗೂ ನೀಡಬೇಕು. ಏಕೆಂದರೆ ಪಾದಗಳಲ್ಲಿ ಸಾಕಷ್ಟು ವಿಷ ಸಂಗ್ರಹಣೆಯಾಗುತ್ತವೆ.

ಪಾದದ ಆರೈಕೆ ಮಾಡಲು ಹಗಲಿನಲ್ಲಿ ಬಿಡುವಿಲ್ಲವೆಂದರೆ ರಾತ್ರಿಯ ಸಮಯವಾದರೂ ಪಾದಗಳಿಗೆ ಮೀಸಲಿಡಬೇಕು. ಹೆಚ್ಚೇನು ಮಾಡಬೇಕಾಗಿಲ್ಲ, ಮಲಗುವ ಮುನ್ನ ಪಾದಗಳಿಗೆ ಎಣ್ಣೆ ಹಚ್ಚಿ ಮಸಾಜ್ (Foot Massage) ಮಾಡಿದರೆ ಸಾಕು. ಅದರಿಂದ ಸಿಗುವ ಪ್ರಯೋಜನಗಳ ಪಟ್ಟಿ ಬಹಳ ದೊಡ್ಡದಿದೆ. ಇದು ಪಾದಗಳಿಗೆ ಮಾತ್ರ ಉತ್ತಮವಲ್ಲ, ಆರೋಗ್ಯದ ದೃಷ್ಠಿಯಿಂದಲೂ ಒಳ್ಳೆಯದು.
ಮಲಗುವ ಮುನ್ನ ನಿಮ್ಮ ಪಾದಗಳನ್ನು ಚೆನ್ನಾಗಿ ತೊಳೆಯಿರಿ. ಈಗ ನಿಮ್ಮ ಹಾಸಿಗೆಯ ಮೇಲೆ ಕುಳಿತು ನಿಮ್ಮ ಕಾಲುಗಳನ್ನು ಮುಂದೆ ನೀಡಿ. ಕೆಲವು ಹನಿ ಎಣ್ಣೆಯನ್ನು ತೆಗೆದು ಕೊಂಡು ನಿಮ್ಮ ಪಾದಗಳನ್ನು ಮಸಾಜ್ (Foot Massage) ಮಾಡಿ. ನಿಮ್ಮ ಪಾದಗಳ ಮೇಲೆ, ಕಾಲ್ಬೆರಳುಗಳ ನಡುವೆ ಎಣ್ಣೆಯನ್ನು ಹಚ್ಚಿ. ಪ್ರತಿ ಬೆರಳನ್ನು ನಿಧಾನವಾಗಿ ಒತ್ತಿ. ಹೆಚ್ಚು ಪರಿಣಾಮಕಾರಿತ್ವಕ್ಕಾಗಿ ಕನಿಷ್ಠ 5-10 ನಿಮಿಷಗಳ ಕಾಲ ಮಸಾಜ್ ಮಾಡುವುದನ್ನು ಮುಂದುವರಿಸಿ. ಉತ್ತಮ ವಿಶ್ರಾಂತಿಗಾಗಿ ಬೆಚ್ಚಗಿನ ಎಣ್ಣೆಯಿಂದ ಮಸಾಜ್ ಮಾಡಿ. ನಿಮ್ಮ ಪಾದಗಳು ತುಂಬಾ ಎಣ್ಣೆ ಎಣ್ಣೆ ಎಂದು ಅನಿಸಿದರೆ, ಪಾದಗಳ ಮೇಲೆ ಹಳೆಯ ಟವಲ್ ಅನ್ನು ಹಾಕಬಹುದು. ಈ ಕೊರೊನಾದ ಸಮಯದಲ್ಲಿ ವಾಕಿಂಗ್, ಜಾಗಿಂಗ್ ಎಲ್ಲವೂ ಅನಿಯಮಿತವಾಗಿರುವುದರಿಂದ ನಮ್ಮ ಪಾದಗಳಿಗೆ ರಕ್ತ ಪರಿಚಲನೆ ಆಗುವುದಿಲ್ಲ. ಆದ್ದರಿಂದ ನಿಮ್ಮ ಪಾದಗಳನ್ನು ಆರೋಗ್ಯವಾಗಿಡಲು, ಎಣ್ಣೆ ಮಸಾಜ್ ಮಾಡಲು 5 ನಿಮಿಷಗಳನ್ನು ತೆಗೆದುಕೊಳ್ಳಬಹುದು. ಮಲಗುವ ಮುನ್ನ ನಿಮ್ಮ ಪಾದಗಳನ್ನು ನಿಮಗೆ ಇಷ್ಟವಾದ ಎಣ್ಣೆಯಿಂದ ನಿಧಾನವಾಗಿ ಮಸಾಜ್ ಮಾಡಿ. ಇದರಿಂದ ಪಾದಗಳಿಗೆ ರಕ್ತಸಂಚಾರವಾಗುವುದು.

ಒತ್ತಡವನ್ನು ನಿವಾರಿಸಿ, ನರಗಳನ್ನು ಸಡಿಲಗೊಳಿಸುತ್ತದೆ. ನಿಮ್ಮ ಪಾದಗಳಲ್ಲಿ ನಿದ್ರೆಯನ್ನು ಪ್ರೇರೇಪಿಸುವ ಹಲವಾರು ಅಕ್ಯುಪಂಕ್ಚರ್ ಪಾಯಿಂಟ್‌ಗಳಿವೆ. ನೀವು ಸಂಪೂರ್ಣ ಪಾದವನ್ನು ಮಸಾಜ್ (Foot Massage) ಮಾಡಿದಾಗ, ಆ ಅಕ್ಯುಪಂಕ್ಚರ್ ಪಾಯಿಂಟ್‌ಗಳನ್ನು ಸಹ ಸಕ್ರಿಯಗೊಳಿಸುತ್ತೀರಿ. ಆದ್ದರಿಂದ, ಹೆಚ್ಚಿದ ರಕ್ತ ಪರಿಚಲನೆ ಮತ್ತು ಆರಾಮವಾಗಿರುವ ನರಗಳು, ಉತ್ತಮ ನಿದ್ರೆಯನ್ನು ನೀಡುತ್ತದೆ.

ಪಾದಗಳಲ್ಲಿರುವ ಯಾವುದೇ ರೀತಿಯ ಒತ್ತಡ ಅಥವಾ ನೋವನ್ನು ನಿವಾರಿಸುತ್ತದೆ. ಪಾದದ ಮೇಲೆ ವಿಶೇಷ ಒತ್ತು ನೀಡಿ ಇಡೀ ಪಾದಗಳನ್ನು ಮಸಾಜ್ ಮಾಡಿ. ಇದು ಆಯಾಸಗೊಂಡ ಸ್ನಾಯುಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ ನಿಮ್ಮ ಪಾದಗಳನ್ನು ಬೆಚ್ಚಗಿನ ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಪಾದದ ಉರಿಯೂತಕ್ಕೆ ಪರಿಹಾರವನ್ನು ನೀಡಬಹುದು ಎಂದು ಸಾಬೀತಾಗಿದೆ.

ಮುಟ್ಟಿನ ಸಮಯದಲ್ಲಿ ಸಾಮಾನ್ಯವಾಗಿ ಮೂಡ್ ಸ್ವಿಂಗ್, ಉಬ್ಬುವಿಕೆ, ನಿದ್ರಾಹೀನತೆ, ವಾಕರಿಕೆ ಮತ್ತು ಹೊಟ್ಟೆಯ ಸೆಳೆತದಿಂದ ಬಳಲುವಂತೆ ಮಾಡುತ್ತದೆ. ಈ ರೋಗ ಲಕ್ಷಣ ಗಳನ್ನು ನಿಯಂತ್ರಿಸುವಲ್ಲಿ ಕಾಲು ಮಸಾಜ್ ಸಹ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಇದಕ್ಕಾಗಿ ನಿಮ್ಮ ಪಾದಗಳನ್ನು ಲ್ಯಾವೆಂಡರ್ ಎಣ್ಣೆಯಿಂದ ಮಸಾಜ್ ಮಾಡಬಹುದು. ಇದರಿಂದ ಯಾವುದೇ ತೊಂದರೆಯಿಲ್ಲದ ಋತುಸ್ರಾವವನ್ನು ಕಳೆಯಬಹುದು.
ಇದನ್ನೂ ಓದಿ : hair dandruff solution : ತಲೆಹೊಟ್ಟಿನ ಸಮಸ್ಯೆಯೆ : ಇಲ್ಲಿದೆ ಮನೆ ಮದ್ದು
ಇದನ್ನೂ ಓದಿ : Good Metabolism : ಜೀರ್ಣಕ್ರಿಯೆ ಹೆಚ್ಚಿಸಿಕೊಳ್ಳ ಬೇಕಾ? ಹಾಗಾದರೆ ಈ ಆಯುರ್ವೇದ ಟಿಪ್ಸ್ ಪಾಲಿಸಿ
Foot Massage Daily Before bedtime Health tips