Home Made Hair Oil : ಬಿಳಿಕೂದಲು ದೂರ ಮಾಡಿ : ಮನೆಯಲ್ಲೇ ತಯಾರಿಸಿ ಈ ಹೇರ್‌ ಆಯಿಲ್‌

ಹೆಣ್ಣು ಮಕ್ಕಳಿಗೆ ಕೂದಲಿನ ಬಗ್ಗೆ ವಿಶೇಷವಾದ ಕಾಳಜಿ ಇರುತ್ತದೆ. ಕೂದಲು ಕಪ್ಪಾಗಿ, ದಟ್ಟವಾಗಿ, ಉದ್ದವಾಗಿ ಇರಬೇಕು ಅಂತ ಎಲ್ಲ ಹೆಣ್ಣು ಮಕ್ಕಳಿಗೂ ಆಸೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಕೂದಲು ಉದರುವಿಕೆ ಹಾಗೂ ಬಿಳಿ ಕೂದಲು ಆಗುವುದು ಹೆಚ್ಚಿನವರಲ್ಲಿ ಕಂಡು ಬರುತ್ತದೆ. ಅದಕ್ಕೆ ಕಾರಣ ಹಾರ್ಮೋನಿನ ವ್ಯತ್ಯಾಸವಿರಬಹುದು. ಅಲ್ಲದೇ ಅತಿಯಾದ ಒತ್ತಡದ ಜೀವನದಿಂದ ಕೂಡ ಆಗುತ್ತದೆ. ಹಾಗೆ ನಾವು ತಿನ್ನುವ ಆಹಾರ ಪದ್ದತಿಯಿಂದ ಕೂಡ ಆಗುತ್ತದೆ. ಹಾಗಾಗಿ ಕೂದಲಿನ ಈ ಎಲ್ಲಾ ಸಮಸ್ಯೆಗೆ ಮನೆಯಲ್ಲಿ ಎಣ್ಣೆಯನ್ನು(Home Made Hair Oil) ತಯಾರಿಸಿ ಬಳಸುವುದರಿಂದ ಕೂದಲು ಉದರುವಿಕೆ ಹಾಗೂ ಬಿಳಿ ಕೂದಲು ಆಗುವುದನ್ನು ತಡೆಗಟ್ಟಬಹುದು. ಹಾಗಾದರೆ ಮನೆಯಲ್ಲಿ ಹೇಗೆ ತಯಾರಿಸುವುದು ಎಂದು ತಿಳಿಯೋಣ.

ಬೇಕಾಗುವ ಸಾಮಾಗ್ರಿ :

  • ಮೆಂತೆಕಾಳು
  • ಬೇವಿನಸೊಪ್ಪು
  • ತೆಂಗಿನ ಎಣ್ಣೆ

(Home Made Hair Oil)ತಯಾರಿಸುವ ವಿಧಾನ :

ಮೊದಲಿಗೆ ಆರು ಟೇಬಲ್‌ ಸ್ಪೂನ್‌ನಷ್ಟು ಮೆಂತೆಕಾಳನ್ನು ಮಧ್ಯಮ ಗ್ಯಾಸ್‌ ಉರಿಯಲ್ಲಿ ಒಂದು ಬಾಣಲೆಯಲ್ಲಿ ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಬೇಕು. ಆಮೇಲೆ ಒಂದು ಬೌಲ್‌ನಷ್ಟು ಬೇವಿನಸೊಪ್ಪುನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಮೆಂತೆಕಾಳನ್ನು ಬಿಸಿ ಆರಿಸಿ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಪುಡಿ ಮಾಡಿದ ಮೇಲೆ ಒಂದು ಬೌಲ್‌ಗೆ ಹಾಕಿ ಇಟ್ಟುಕೊಳ್ಳಬೇಕು. ನಂತರ ಅದೇ ಮಿಕ್ಸಿ ಜಾರಿಗೆ ಬೇವಿನ ಸೊಪ್ಪುನ್ನು ಹಾಕಿ ಪುಡಿ ಮಾಡಿ ಒಂದು ಬೌಲ್‌ಗೆ ತೆಗೆದು ಇಟ್ಟುಕೊಳ್ಳಬೇಕು.

ನಂತರ ಒಂದು ಪಾತ್ರೆಯಲ್ಲಿ ಸಣ್ಣ ಉರಿಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಬೇಕು. ಎಣ್ಣೆ ಬಿಸಿಯಾದ ಮೇಲೆ ಬೇವಿನ ಸೊಪ್ಪುನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ಕುದಿಸಬೇಕು. ನಂತರ ಅದಕ್ಕೆ ಪುಡಿ ಮಾಡಿ ಇಟ್ಟುಕೊಂಡ ಮೆಂತೆ ಪುಡಿಯನ್ನು ಹಾಕಿ ಎರಡು ನಿಮಿಷಗಳ ಕಾಲ ಕುದಿಸಬೇಕು. ಆಮೇಲೆ ಬೇವಿನಸೊಪ್ಪು ಹಾಗೂ ಮೆಂತೆ ಮಿಶ್ರಿತ ಎಣ್ಣೆಯನ್ನು ಪೂರ್ತಿಯಾಗಿ ತಣ್ಣಗೆ ಆಗುವುದಕ್ಕೆ ಬಿಡಬೇಕು. ತಣ್ಣಗೆ ಆದ ಎಣ್ಣೆಯನ್ನು(ಎಣ್ಣೆಯನ್ನು ಜಾರಡಿಯ ಮೂಲಕ ಸೊಸಿಕೊಳ್ಳಬಹುದು) ಒಂದು ಗಾಜಿನ ಬಾಟಲ್‌ನಲ್ಲಿ ಶೇಖರಿಸಿ ಇಡಬೇಕು. ಈ ಎಣ್ಣೆಯನ್ನು ವಾರದಲ್ಲಿ ಮೂರು ಬಾರಿ ಹಚ್ಚಿದರೆ ತುಂಬಾ ಒಳ್ಳೆಯದು, ಇಲ್ಲದಿದ್ದರೆ ತಲೆಸ್ನಾನದ ಹಿಂದಿನ ರಾತ್ರಿ ಹಚ್ಚಿ ಮಲಗಿ ಬೆಳ್ಳಗ್ಗೆ ಸ್ನಾನ ಮಾಡಿದರು ಸಾಕಾಗುತ್ತದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ಕಪ್ಪಾಗಿ, ದಟ್ಟವಾಗಿ ಹಾಗೂ ಉದ್ದನೆಯ ಆರೋಗ್ಯಕರ ಕೂದಲನ್ನು ಪಡೆಯಬಹುದು.

ಇದನ್ನೂ ಓದಿ : cream : ಚರ್ಮದ ಸುಕ್ಕನ್ನು ಕಡಿಮೆ ಮಾಡುತ್ತೆ ಈ ಕ್ರೀಮ್‌

ಇದನ್ನೂ ಓದಿ : Steaming Benefits : ಮನೆಯಲ್ಲಿಯೇ ಮುಖಕ್ಕೆ ಸ್ಟೀಮ್‌ ತೆಗೆದುಕೊಳ್ಳುವುದರಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ….

ಮೆಂತೆಕಾಳು:
ಮೆಂತೆಕಾಳು ಒಂದು ಅಡುಗೆ ಸಾಮಾಗ್ರಿ ಕೂಡ ಹೌದು. ಹಾಗೆ ಇದನ್ನು ಕೂದಲಿನ ಸೌಂದರ್ಯವರ್ಧಕವಾಗಿ ಕೂಡ ಬಳಸುತ್ತಾರೆ. ಇದನ್ನು ತಲೆಗೆ ಬಳಸುವುದರಿಂದ ನೆತ್ತಿಯ ಭಾಗ ತಂಪು ಆಗಿರುತ್ತದೆ. ಇದರಿಂದ ಕೂದಲು ಉದರುವಿಕೆ ಕಡಿಮೆ ಆಗುತ್ತದೆ. ಹಾಗೆ ಕೂದಲು ಸೊಂಪಾಗಿ ಬೆಳೆಯುತ್ತದೆ. ಖಾಲಿ ಮೆಂತೆಕಾಳನ್ನು ನೆನೆಸಿ ಅರೆದು ಹಚ್ಚಿದ್ದರೂ ಕೂದಲು ಮೃದುವಾಗಿ ದಟ್ಟವಾಗಿ ಬೆಳೆಯುತ್ತದೆ. ನೆತ್ತಿಯ ಭಾಗಕ್ಕೆ ತಂಪನ್ನು ಸಹ ನೀಡುತ್ತದೆ.

ಬೇವಿನಸೊಪ್ಪು:
ಬೇವಿನ ಸೊಪ್ಪುನ್ನು ನಾವು ಹೆಚ್ಚಿನ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಒಗ್ಗರಣೆಯಲ್ಲಿ ಬಳಸುತ್ತಾರೆ. ಇದನ್ನು ತಲೆಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗಿ ಇರುವುದಕ್ಕೆ ಸಹಾಯ ಮಾಡುತ್ತದೆ, ಹಾಗೆ ಮೃದುವಾಗಿ ಬೆಳೆಯುತ್ತದೆ. ಬೇವಿನ ಸೊಪ್ಪಿನ ಬಳಕೆಯಿಂದ ತಲೆಹೊಟ್ಟನ್ನು ನಿವಾರಣೆ ಮಾಡುತ್ತದೆ.

ತೆಂಗಿನಎಣ್ಣೆ:
ತೆಂಗಿನ ಎಣ್ಣೆಯನ್ನು ಅಡುಗೆ, ಔಷಧಿ ಹಾಗೂ ಸೌಂದರ್ಯವರ್ಧಕವಾಗಿ ಬಳಸುತ್ತಾರೆ. ತೆಂಗಿನ ಎಣ್ಣೆಯಿಂದ ನಮ್ಮ ದೇಹಕ್ಕೆ ಹೆಚ್ಚಿನ ಲಾಭವಿದೆ. ಇದನ್ನು ತಲೆಗೆ ಬಳಸುವುದರಿಂದ ನೆತ್ತಿಯ ಭಾಗವನ್ನು ತಂಪಾಗಿಸುತ್ತದೆ. ಹಾಗೆ ಕೂದಲು ಕಪ್ಪಾಗಿ, ದಟ್ಟವಾಗಿ ಬೆಳೆಯುವುದಕ್ಕೂ ಸಹಾಯ ಮಾಡುತ್ತದೆ.‌

Homemade hair oil to get rid of white hair

Comments are closed.