Custard Apple Benefits : ಈ ಋತುವಿನ ಹಣ್ಣು ‘ಸೀತಾಫಲ’ ತಿನ್ನುವುದರಿಂದ ಏನೆಲ್ಲಾ ಲಾಭ ಇದೆ ಗೊತ್ತಾ

ಸಿಹಿಯಾಗಿ ಮತ್ತು ಮೃದುವಾಗಿರುವ ಈ ಹಣ್ಣು ಬೀಜಗಳಿಂದ ಕೂಡಿದೆ. ಕಸ್ಟರ್ಡ್‌ ಆಪಲ್‌ (Custard Apple), ಚೆರಿಮೋಯ್‌ ಎಂದೆಲ್ಲಾ ಕರೆಯುವ ಈ ಹಣ್ಣಿನ ಪ್ರಾದೇಶಿಕ ಹೆಸರು ಸೀತಾಫಲ (Custard Apple Benefits). ಫೈಬರ್‌ ವಿಟಮಿನ್ಸ್‌, ಮತ್ತು ಖನಿಜಾಂಶಗಳನ್ನು ಹೊಂದಿರುವ ಈ ಅಸಮಾನ್ಯ ಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಕಣ್ಣು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಬಲ್ಲದು.

ಮೂಲತಃ ಈ ಹಣ್ಣು ಹಸಿರು ಅಥವಾ ಸ್ವಲ್ಪ ಕಂದು ಬಣ್ಣದ್ದು. ಇದು ಮಾಗಿದ ಮೇಲೆ ಪರಿಮಳಯುಕ್ತ ಸುವಾಸನೆಯನ್ನು ಪಡೆಯುತ್ತದೆ. ವಿಶಿಷ್ಟ ಪರಿಮಳದಿಂದಾಗಿ ಅದನ್ನು ಸಿಹಿತಿಂಡಿಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಅದರ ವಿಶೇಷವಾದ ರುಚಿ ಮತ್ತು ಕೆನೆಯಂತ ತಿರುಳು ನಾಲಿಗೆ ಬಹಳ ರುಚಿಯನ್ನು ಕೊಡುತ್ತದೆ. ಪೌಷ್ಟಿಕತಜ್ಞೆ ರುಜುತಾ ದಿವೇಕರ್‌ ಅವರು ಈ ಋತುಮಾನದ ಹಣ್ಣಿನ ಪ್ರಯೋಜನಗಳನ್ನು ಹೇಳಿದ್ದಾರೆ.

ಇದನ್ನೂ ಓದಿ : Iodine Deficiency : ಅಯೋಡಿನ್‌ ಕೊರತೆ ನಿವಾರಿಸುವ 5 ಸೂಪರ್‌ ಫುಡ್‌ಗಳು ಯಾವುದು ಗೊತ್ತಾ

ಸೀತಾಫಲವು ಚಯಾಪಚಯದ ಕ್ರಿಯೆಯನ್ನು ವೇಗವಾಗಿಸುತ್ತದೆ. ಇದು ಆಹಾರವನ್ನು ಅತ್ಯತ್ತಮವಾಗಿ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಅಂದರೆ ಹೆಚ್ಚಿನ ಶಕ್ತಿಯನ್ನು ದೇಹಕ್ಕೆ ನೀಡುತ್ತದೆ. ಹೇರಳವಾದ ಪೌಷ್ಟಿಕ ನಾರಿನಾಂಶ ಹೊಂದಿರುವ ಈ ಹಣ್ಣು ಹಸಿವನ್ನು ನೀಗಿಸುತ್ತದೆ ಮತ್ತು ಅತಿಯಾಗಿ ತಿನ್ನುವ ಬಯಕೆಯನ್ನು ನಿವಾರಿಸುತ್ತದೆ. ಜೀರ್ಣಕ್ರಿಯೆಯ ವೇಗವನ್ನು ಹೆಚ್ಚಿಸಿ, ಪೋಷಕಾಂಶಗಳು ಪೂರ್ತಿ ದೇಹಕ್ಕೆ ಸಿಗುವಂತೆ ಮಾಡುತ್ತದೆ.

ಸೀತಾಫಲದ (Custard Apple Benefits)ಆರೋಗ್ಯ ಪ್ರಯೋಜನಗಳು :

  • ಅಲ್ಸರ್‌ ಅನ್ನು ಗುಣಪಡಿಸುತ್ತದೆ ಮತ್ತು ಆಸಿಡಿಟಿಯನ್ನು ತಡೆಯುತ್ತದೆ.
  • ಮೃದುವಾದ ತಿರುಳಿರುವ ಸೀತಾಫಲ ಮೈಕ್ರೋನ್ಯೂಟ್ರಿಯೆಂಟ್‌ ಹೊಂದಿದ್ದು ನೀರಿನ ಅಂಶವನ್ನು ಹೊಂದಿದೆ. ಇದು ಕಣ್ಣು ಮತ್ತು ಮಿದುಳಿನ ಆರೋಗ್ಯ ಸುಧಾರಿಸುತ್ತದೆ.
  • ಸೀತಾಫಲವು ಹಿಮೋಗ್ಲೊಬಿನ್‌ (Hb) ಮಟ್ಟವನ್ನು ಸುಧಾರಿಸುತ್ತದೆ.
  • ಬಯೋಆಕ್ಟೀವ್‌ ಅಣುಗಳನ್ನು ಹೊಂದಿರುವ ಸೀತಾಫಲವು ಒಬೆಸೊಜೆನಿಕ್‌, ಮಧುಮೇಹ ಮತ್ತು ಕ್ಯಾನ್ಸರ್‌ ವಿರೋಧಿಸುವ ಗುಣಗಳನ್ನು ಹೊಂದಿದೆ.

ಇದನ್ನೂ ಓದಿ : Dry Cough : ಅತಿಯಾಗಿ ಕಾಡುವ ಒಣ ಕೆಮ್ಮು : ಕಾಳು ಮೆಣಸು ಲಿಂಬೆಯ ಅಕ್ರೂಟ್‌ ರಾಮಬಾಣ

ಇದನ್ನೂ ಓದಿ : Red Eyes : ಕಣ್ಣು ಕೆಂಪಾಗಿ ನೋವಾಗುತ್ತಿದೆಯೇ; ಅದಕ್ಕೆ ಈ 5 ಕಾರಣಗಳಿರಬಹುದು; ಎಚ್ಚರ

(Custard Apple Benefits 4 good reasons you should eat this fruit)

Comments are closed.