Rakheem Cornwall : 22 ಸಿಕ್ಸರ್+17 ಬೌಂಡರಿ=200: ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ವಿಂಡೀಸ್ ದೈತ್ಯ

ಅಟ್ಲಾಂಟಾ (ಅಮೆರಿಕ): ವೆಸ್ಟ್ ಇಂಡೀಸ್’ನ ದೈತ್ಯ ಆಲ್ರೌಂಡರ್ ರಖೀಮ್ ಕಾರ್ನ್’ವಾಲ್ (Rakheem Cornwall) ಟಿ20 ಕ್ರಿಕೆಟ್’ನಲ್ಲಿ ಸಿಡಿಲಬ್ಬರದ ದ್ವಿಶತಕ ಬಾರಿಸಿದ್ದಾರೆ. ಅಟ್ಲಾಂಟಾ ಓಪನ್ ಎಂಬ ಹೆಸರಿನ ಅಮೆರಿಕನ್ ಟಿ20 ಟೂರ್ನಿಯಲ್ಲಿ (Atlanta Open American T20 competition) ಅಟ್ಲಾಂಟಾ ಫೈರ್ ತಂಡದ ಪರ ಆಡುತ್ತಿರುವ ರಖೀಮ್ ಕಾರ್ನ್’ವಾಲ್ ಡಬಲ್ ಸೆಂಚುರಿಯೊಂದಿಗೆ ಅಬ್ಬರಿಸಿದ್ದಾರೆ. ಕೇವಲ 77 ಎಸೆತಗಳನ್ನೆದುರಿಸಿ ದೈತ್ಯ ಗಾತ್ರದ ರಖೀಮ್ ಸ್ಫೋಟಕ 205 ರನ್ ಸಿಡಿಸಿದ್ದಾರೆ. ಈ ಸಿಡಿಲಬ್ಬರದ ಇನ್ನಿಂಗ್ಸ್’ನಲ್ಲಿ 22 ಸಿಕ್ಸರ್’ಗಳು ಹಾಗೂ 17 ಬೌಂಡರಿಗಳು ಇದ್ದವು. ಕಾರ್ನ್’ವಾಲ್ ಗಳಿಸಿದ 205 ರನ್’ಗಳ ಪೈಕಿ ಭರ್ತಿ 200 ರನ್’ಗಳು ಬೌಂಡರಿ-ಸಿಕ್ಸರ್’ಗಳ ಮೂಲಕವೇ ದಾಖಲಾಗಿದ್ದು ವಿಶೇಷ.


ರಖೀಮ್ ಕಾರ್ನ್’ವಾಲ್ ಅವರ ಸಿಡಿಲಬ್ಬರದ ಆಟದ ವೀಡಿಯೊವನ್ನು ಮೈನರ್ ಕ್ರಿಕೆಟ್ ಲೀಗ್ ಎಂಬ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ. ಆರು ಅಡಿ ಆರು ಎಂಚು ಎತ್ತರವಿರುವ 29 ವರ್ಷದ ರಖೀಮ್ ಕಾರ್ನ್’ವಾಲ್ 140 ಕೆ.ಜಿ ತೂಕ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ದೇಹ ತೂಕದ ಕ್ರಿಕೆಟಿಗ ಎಂಬ ವಿಶ್ವದಾಖಲೆ ರಖೀಮ್ ಕಾರ್ನ್’ವಾಲ್ ಹೆಸರಲ್ಲಿದೆ.

ವೆಸ್ಟ್ ಇಂಡೀಸ್ ಪರ 9 ಟೆಸ್ಟ್ ಪಂದ್ಯಗಳನ್ನಾಡಿರುವ ರಖೀಮ್ 238 ರನ್ ಗಳಿಸಿದ್ದಾರೆ. ಆಫ್’ಸ್ಪಿನ್ ಬೌಲರ್ ಕೂಡ ಆಗಿರುವ ರಖೀಮ್ ಕಾರ್ನ್’ವಾಲ್ 9 ಟೆಸ್ಟ್ ಪಂದ್ಯಗಳಿಂದ 34 ವಿಕೆಟ್’ಗಳನ್ನೂ ಪಡೆದಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್’ನಲ್ಲಿ ಸಿಡಿಲಬ್ಬರದ ಆಟವಾಡುವ ರಖೀಮ್, ಆಂಟಿಗಾ ಹಾವ್ಕ್’ಬಿಲ್ಸ್, ಬಾರ್ಬೆಡೋಸ್ ರಾಯಲ್ಸ್ ಮತ್ತು ಸೇಂಟ್ ಲೂಸಿಯಾ ಕಿಂಗ್ಸ್ ತಂಡಗಳ ಪರ ಆಡಿದ್ದಾರೆ. ಇಲ್ಲಿಯವರೆಗೆ ಒಟ್ಟು 66 ಟಿ20 ಪಂದ್ಯಗಳನ್ನಾಗಿರುವ ಈ ದೈತ್ಯ ಆಲ್ರೌಂಡರ್ 147.49ರ ಸ್ಟ್ರೈಕ್’ರೇಟ್’ನಲ್ಲಿ ಐದು ಅರ್ಧಶತಕಗಳ ಸಹಿತ 1146 ರನ್ ಗಳಿಸಿದ್ದಾರೆ. ಬೌಲಿಂಗ್’ನಲ್ಲಿ 31 ವಿಕೆಟ್’ಗಳನ್ನು ಕಬಳಿಸಿದ್ದಾರೆ. ಕಳೆದ ಬಾರಿ ಕೆರಿಬಿಯನ್ ಪ್ರೀಮಿಯರ್ ಲೀಗ್’ನಲ್ಲಿ ಆಡುವ ವೇಳೆ ರಖೀಮ್ ಕಾರ್ನ್’ವಾಲ್ ವೆಸ್ಟ್ ಇಂಡೀಸ್’ನ ಮತ್ತೊಬ್ಬ ಸ್ಟಾರ್ ಅಲ್ರೌಂಡರ್ ಕೀರನ್ ಪೊಲಾರ್ಡ್ ಜೊತೆ ಮೈದಾನದಲ್ಲೇ ಜಗಳವಾಡಿ ಸುದ್ದಿಯಾಗಿದ್ದರು.

ಇದನ್ನೂ ಓದಿ : Rohit Sharma : ರೋಹಿತ್ ನಾಯಕತ್ವದಲ್ಲಿ ದಶ ದಿಗ್ವಿಜಯ.. ಕಂಪ್ಲೀಟ್ ಆಗುತ್ತಾ ಮಿಷನ್ ವರ್ಲ್ಡ್ ಕಪ್ ?

ಇದನ್ನೂ ಓದಿ : India Vs South Africa 1st ODI : ಶಿಖರ್ ಧವನ್ ನಾಯಕತ್ವದ ಟೀಮ್ ಇಂಡಿಯಾ ಪ್ಲೇಯಿಂಗ್ XI ಹೀಗಿದೆ

Rakheem Cornwall Double Century in T20 Cricket

Comments are closed.