Rohit Sharma fitness: ಬೊಜ್ಜು ಕರಗಿಸಲು ಮುಂದಾದ್ರಾ ಹಿಟ್‌ಮ್ಯಾನ್..? ಜಿಮ್‌ನಲ್ಲಿ ರೋಹಿತ್ ಶರ್ಮಾ ಭರ್ಜರಿ ವರ್ಕೌಟ್

ಮುಂಬೈ: Rohit Sharma fitness : ಆಧುನಿಕ ಕ್ರಿಕೆಟ್’ನಲ್ಲಿ ಆಟದಷ್ಟೇ ಫಿಟ್ನೆಸ್’ಗೂ ಮಹತ್ವವಿದೆ. ಕ್ರಿಕೆಟಿಗರು ದೈಹಿಕವಾಗಿ ಫಿಟ್ ಆಗಿರಲು ಬಯಸುತ್ತಾರೆ. ಫಿಟ್ನೆಸ್ ವಿಚಾರಕ್ಕೆ ಬಂದ್ರೆ ಟೀಮ್ ಇಂಡಿಯಾದ ಮಾಜಿ ನಾಯಕ, ಕ್ರಿಕೆಟ್ ಜಗತ್ತಿನ ರನ್ ಮಷಿನ್ ಅವರೇ ಟ್ರೆಂಡ್ ಸೆಟ್ಟರ್, ರೋಲ್ ಮಾಡೆಲ್. ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಬಗ್ಗೆ ಎರಡು ಮಾತೇ ಇಲ್ಲ. 34ನೇ ಕಿಂಗ್ ಕೊಹ್ಲಿ 20ರ ಹರೆಯದ ಯುವಕನನ್ನು ಮೀರಿಸುವ ಫಿಟ್ನೆಸ್ ಹೊಂದಿದ್ದಾರೆ.

ಆದರೆ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Indian Cricket team Captain Rohit Sharma) ದೈಹಿಕವಾಗಿ ಅಷ್ಟೇನು ಫಿಟ್ ಆಟಗಾರನಲ್ಲ. ರೋಹಿತ್ ಅವರ ಫಿಟ್ನೆಸ್ ಬಗ್ಗೆ ಸಾಕಷ್ಟು ಟೀಕೆ-ಟಿಪ್ಪಣಿಗಳು ಕೇಳಿ ಬಂದದ್ದೂ ಇವೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಲೂ ರೋಹಿತ್ ಶರ್ಮಾ ಅವರ ಫಿಟ್ನೆಸ್ ಕುರಿತಾಗಿ ಚರ್ಚೆಗಳು ನಡೆಯುತ್ತಿರುತ್ತವೆ. ಈ ಟೀಕೆಗಳಿಗೆಲ್ಲಾ ಉತ್ತರ ಎಂಬಂತೆ ರೋಹಿತ್ ಶರ್ಮಾ ಇದೀಗ ಫಿಟ್ನೆಸ್ ಇಂಪ್ರೂವ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಕ್ರಿಕೆಟ್’ನಿಂದ ಬಿಡುವ ಪಡೆದಿರುವ ರೋಹಿತ್ ಜಿಮ್’ನಲ್ಲಿ ಬೆವರಿಳಿಸುತ್ತಿದ್ದಾರೆ.

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಸೆಮಿಫೈನಲ್’ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್’ಗಳ ಹೀನಾಯ ಸೋಲು ತಂಡು ಟೂರ್ನಿಯಿಂದ ಹೊರ ಬಿದ್ದಿತ್ತು. ಟಿ20 ವಿಶ್ವಕಪ್ ನಂತರ ಟೀಮ್ ಇಂಡಿಯಾ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದು, ಕಿವೀಸ್ ನೆಲದಲ್ಲಿ ಈಗಾಗ್ಲೇ 1-0 ಅಂತರದಲ್ಲಿ ಟಿ20 ಸರಣಿ ಗೆದ್ದಿದೆ. ಶುಕ್ರವಾರದಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.

ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ಕೆ.ಎಲ್ ರಾಹುಲ್ ಅವರಿಗೆ ನ್ಯೂಜಿಲೆಂಡ್ ಪ್ರವಾಸದಿಂದ (India tour of New Neeland) ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಕಿವೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ರೆ, ಏಕದಿನ ಸರಣಿಯಲ್ಲಿ ಅನುಭವಿ ಎಡಗೈ ದಾಂಡಿಗ ಶಿಖರ್ ಧವನ್ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಡಿಸೆಂಬರ್ ಮೊದಲ ವಾರದಲ್ಲಿ ಆರಂಭವಾಗಲಿರುವ ಏಕದಿನ ಸರಣಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಟೀಮ್ ಇಂಡಿಯಾಗೆ ವಾಪಸ್ಸಾಗಲಿದ್ದಾರೆ.

ಇದನ್ನೂ ಓದಿ : ಕುಕ್ಕೆ ಸುಬ್ರಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್ ರಾಹುಲ್ ಭೇಟಿ, ಸುಬ್ರಮಣ್ಯನಿಗೆ ವಿಶೇಷ ಪೂಜೆ

ಇದನ್ನೂ ಓದಿ : MS Dhoni tennis : ಟೆನಿಸ್ ಡಬಲ್ಸ್ ಚಾಂಪಿಯನ್‌ಷಿಪ್ ಗೆದ್ದ ಕ್ರಿಕೆಟ್ ಮೈದಾನದ ಕೂಲ್ ಕ್ಯಾಪ್ಯನ್ ಎಂ.ಎಸ್ ಧೋನಿ

Rohit Sharma fitness ready to melt obesity intense workout at the gym

Comments are closed.