Face pack:ಮುಖದಕಾಂತಿ ಕಾಂತಿ ಹೆಚ್ಚಿಸಲು ಮನೆಯಲ್ಲೇ ಮಾಡಿ ಫೇಸ್‌ಪ್ಯಾಕ್‌

(Face pack):ಹೆಂಗಳೆಯರು ಮುಖದ ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಾರೆ. ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ದುಬಾರಿ ಸೌಂದರ್ಯ ವರ್ಧಕಗಳ ಮೊರೆ ಹೋಗುತ್ತಿದ್ದಾರೆ. ಅಲಂಕಾರಿಕ ವಸ್ತುಗಳಿಂದ ಹಿಡಿದು ಫೇಸ್‌ಪ್ಯಾಕ್‌ ಮಾಡಿಸಿಕೊಳ್ಳಲು ಸಾಕಷ್ಟು ಹಣವನ್ನು ಖರ್ಚು ಮಾಡ್ತಾರೆ. ಆದರೆ ಮುಖದ ಕಾಂತಿಗೆ ಮನೆಯಲ್ಲಿಯೇ ಕುಳಿತು ಫೇಸ್‌ ಪ್ಯಾಕ್‌ ತಯಾರಿಸಬಹುದು. ಅಷ್ಟಕ್ಕೂ ಫೇಸ್‌ ಪ್ಯಾಕ್‌ ತಯಾರಿಸೋದು ಹೇಗೆ, ಅದರಿಂದ ಮುಖದ ಕಾಂತಿ ಹೇಗೆ ಅರಳುತ್ತದೆ ಅನ್ನೋ ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

ಕಡ್ಲೆಹಿಟ್ಟು
ಕಿತ್ತಲೆ ಸಿಪ್ಪೆಯ ರಸ
ಮೊಸರು
ಜೇನುತುಪ್ಪ

ಮಾಡುವ ವಿಧಾನ:

(Face pack):ಒಂದು ಬೌಲಿನಲ್ಲಿ ಕಡ್ಲೆಹಿಟ್ಟನ್ನು ಬೇಕಾದ ಪ್ರಮಾಣದಲ್ಲಿ ಹಾಕಿಕೊಳ್ಳಬೇಕು ಅದಕ್ಕೆ ಕಿತ್ತಲೆ ಸಿಪ್ಪೆಯ ರಸ, ಮೊಸರು, ಜೇನುತುಪ್ಪ ವನ್ನು ಬೇರೆಸಿ ದಪ್ಪವಾದ ಪೆಸ್ಟ ಮಾಡಿಕೊಂಡು ಒಂದು ಡಬ್ಬದಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ಮುಖದ ಮೇಲೆ ಪೆಸ್‌ ಪ್ಯಾಕ್‌ ರೀತಿಯಲ್ಲಿ ಹಚ್ಚಿಕೊಂಡು ಸ್ವಲ್ಪ ಒಣಗುವ ವರೆಗೆ ಬಿಡಬೇಕು. ನಂತರ ಮುಖ ತೊಳೆಯುವಾಗ ನಿಧಾನಕ್ಕೆ ಸ್ಕ್ರಬ್‌ ಮಾಡುತ್ತ ತೊಳೆದರೆ ಮುಖದಲ್ಲಿರುವ ಕಪ್ಪು ಕಲೆ ಮತ್ತು ಪಿಂಪಲ್‌ ಕಡಿಮೆಯಾಗುತ್ತದೆ.

ಇದನ್ನೂ ಓದಿ:Chemical free hair :ರಾಸಾಯನಿಕ ಮುಕ್ತ ಕೂದಲು ಬೇಕಾದ್ರೆ ಈ ಟಿಫ್ಸ್‌ ಫಾಲೋ ಮಾಡಿ

ಇದನ್ನೂ ಓದಿ:Monsoon Skin Care:ಮಾನ್ಸೂನ್ ಸಮಯದಲ್ಲಿ ಮೊಡವೆಗಳೊಂದಿಗೆ ಹೋರಾಡುತ್ತಿದ್ದೀರಾ? ಚರ್ಮದ ಆರೋಗ್ಯವನ್ನು ಸುಧಾರಿಸಲು ಇಲ್ಲಿವೆ ಸಲಹೆಗಳು

ಇದನ್ನೂ ಓದಿ:Night Cream Benefits : ನೈಟ್ ಕ್ರೀಮ್ ನಿಮ್ಮ ಚರ್ಮಕ್ಕೆ ಏಕೆ ಮುಖ್ಯ ಗೊತ್ತಾ !

ಕಡ್ಲೆಹಿಟ್ಟು:

ಕಡ್ಲೆಹಿಟ್ಟನ್ನು ತ್ವಚೆಗೆ ಹಚ್ಚುವುದರಿಂದ ಕಾಂತಿಯು ಹೆಚ್ಚುತ್ತದೆ. ಮಾತ್ರವಲ್ಲ ಸೌಂದರ್ಯದ ಜೊತೆಗೆ ಚರ್ಮದ ಕಾಯಿಗಳು ಬಾರದಂತೆ ತಡೆಯುವ ಸಾಮರ್ಥ್ಯ ಕಡಲೆಹಿಟ್ಟು ಹೊಂದಿದೆ. ಬರಿ ಕಡ್ಲೆ ಹಿಟ್ಟಿನಲ್ಲಿ ಮುಖ ತೊಳೆದರು ಕೂಡ ಚರ್ಮದ ಕಾಂತಿ ಹೆಚ್ಚಿಸುತ್ತದೆ.

ಕಿತ್ತಲೆ ಸಿಪ್ಪೆ:

ಕಿತ್ತಲೆ ಸಿಪ್ಪೆಯನ್ನು ಸಾಮನ್ಯವಾಗಿ ಓಣಗಿಸಿ ಪುಡಿಮಾಡಿ ಮುಖಕ್ಕೆ ಸ್ಕ್ರಬ್‌ ರೀತಿಯಲ್ಲಿ ಬಳಸುತ್ತಾರೆ. ಇದು ಕಪ್ಪು ಕಲೆಯನ್ನು ಹೊಗಲಾಡಿಸಲು ಸಹಾಯವನ್ನು ಮಾಡುತ್ತದೆ.

ಜೇನುತುಪ್ಪ:

ಜೇನುತುಪ್ಪಕ್ಕೆ ಕಾಳು ಮೆಣಸಿನ ಪುಡಿಯನ್ನು ಮಿಶ್ರಣ ಮಾಡಿ ಸೇವಿಸುವುದರಿಂದ ಕೆಮ್ಮು ಕಡಿಮೆಯಾಗುತ್ತದೆ. ಶುಂಠಿ ರಸದೊಂದಿಗೆ ಜೇನುತುಪ್ಪ ಮಿಶ್ರಣ ಮಾಡಿ ಕುಡಿದರೆ ಕೆಮ್ಮು , ಕಫ ಕಡಿಮೆಯಾಗುತ್ತದೆ.

Make a face pack at home to make your face glow

Comments are closed.