Mint Leaves And Lemon Fruit : ಗ್ಯಾಸ್ಟ್ರಿಕ್‌ ಸಮಸ್ಯೆಗೆ ಪುದೀನ ಲೆಮೆನ್‌ ಜ್ಯೂಸ್‌ ಟ್ರೈ ಮಾಡಿ

(Mint Leaves And Lemon Fruit)ಇಂದಿನ ದಿನಗಳಲ್ಲಿ ಗ್ಯಾಸ್ಟ್ರಿಕ್‌ ಸಮಸ್ಯೆ ಸಾಮಾನ್ಯ. ಹುಟ್ಟಿದ ಮಕ್ಕಳಿಂದ ಹಿಡಿದು ವಯಸ್ಕರಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಬ್ಬ ಮತ್ತು ವಿಶೇಷ ಕಾರ್ಯಕ್ರಮದ ಸಮಯದಲ್ಲಿ ಬಹಳಷ್ಟು ಖಾದ್ಯಗಳನ್ನು ಮಾಡಿರುತ್ತಾರೆ. ನಮ್ಮ ಬಾಯಿ ಚಪಲತೆಯಿಂದ ಊಟದ ಸಮಯದಲ್ಲಿ ಎಲ್ಲವನ್ನೂ ತಿನ್ನುತ್ತೇವೆ. ಆದರೆ ಊಟ ಮುಗಿಸಿದ ಸ್ವಲ್ಪ ಸಮಯದಲ್ಲೇ ಹೊಟ್ಟೆ ಉಬ್ಬರಿಸಿಕೊಳ್ಳುವುದು, ಎದೆಯುರಿ ಮತ್ತಿತರ ಸಮಸ್ಯೆ ಕಾಣಿಕೊಳ್ಳುತ್ತದೆ. ಹಾಗಾಗಿ ಯಾವುದನ್ನು ತಿನ್ನಲು ಭಯ ಪಡುವ ಸ್ಥಿತಿ ನಿರ್ಮಾಣವಾಗುತ್ತದೆ. ಈ ತರಹದ ಗ್ಯಾಸ್ಟ್ರಿಕ್‌ ಸಮಸ್ಯೆಗಳಿಗೆ ಪುದೀನ ಲೆಮೆನ್‌ ಜ್ಯೂಸ್‌ ರಾಮಬಾಣವಾಗಿದೆ. ಪುದೀನ ಲೆಮೆನ್‌ ಜ್ಯೂಸ್ ಅನ್ನು ನಾವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಕೊಳ್ಳಬಹುದಾಗಿದೆ.

ಪುದೀನ ಲೆಮೆನ್‌ ಜ್ಯೂಸ್‌ಗೆ ಬೇಕಾಗುವ ಸಾಮಾಗ್ರಿ :

  • ಪುದೀನ ಸೊಪ್ಪು
  • ಲಿಂಬೆಹಣ್ಣು
  • ಸಕ್ಕರೆ

ಪುದೀನ ಲೆಮೆನ್‌ ಜ್ಯೂಸ್‌ ತಯಾರಿಸುವ ವಿಧಾನ:
(Mint Leaves And Lemon Fruit)ಚೆನ್ನಾಗಿ ತೊಳೆದಿರುವ ಒಂದರಿಂದ ಎರಡು ಹಿಡಿಯಷ್ಟು ಪುದಿನ ಸೊಪ್ಪುವನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಪುದೀನ ಸೊಪ್ಪನ್ನು ಪಾತ್ರೆಯೊಂದಕ್ಕೆ ಜಾರಡಿಯಿಂದ ಸೊಸಿಕೊಂಡು ಅದಕ್ಕೆ ಲಿಂಬೆಹಣ್ಣಿನ (ದೊಡ್ಡ ಲಿಂಬೆಹಣ್ಣು ಆದರೆ ಒಂದು ಇಲ್ಲದಿದ್ದರೆ ಎರಡು) ರಸವನ್ನು ಮಿಕ್ಸ್‌ ಮಾಡಿಕೊಳ್ಳಬೇಕು. ಅದಕ್ಕೆ ಬೇಕಾದಷ್ಟು ಸಕ್ಕರೆ ಮತ್ತು ನೀರನ್ನು ಬೆರೆಸಿಕೊಳ್ಳಬೇಕು. ಈಗ ಪುದೀನ ಲೆಮೆನ್‌ ಜ್ಯೂಸ್‌ ಕುಡಿಯಬಹುದು.

ಇದನ್ನೂ ಓದಿ : ಹೃದಯಾಘಾತದ ಹಿಂದೆ ಇರುವ ಅಪಾಯಕಾರಿ ಅಂಶಗಳ ಬಗ್ಗೆ ನಿಮಗೆ ಗೊತ್ತಾ

ಇದನ್ನೂ ಓದಿ : ಮಕ್ಕಳಲ್ಲಿ ಕಾಡುವ ಜೆಂತು ಹುಳು, ಕ್ರಿಮಿಹುಳುಗಳಿಗೆ ಮನೆಯಲ್ಲೇ ಇದೆ ಔಷಧ

ಇದನ್ನೂ ಓದಿ : ಈ ಸಮಸ್ಯೆ ಇರುವವರು ಕಿವಿ ಹಣ್ಣು ತಿನ್ನಲೇಬೇಡಿ

ಪುದೀನ ಲೆಮೆನ್‌ ಜ್ಯೂಸ್‌ನಿಂದ ಆಗುವ ಉಪಯೋಗ:

ಇದು ಕೇವಲ ಗ್ಯಾಸ್ಟ್ರಿಕ್‌ ಸಮಸ್ಯೆಗೆ ಮಾತ್ರವಲ್ಲದೇ ಹಲವು ಆರೋಗ್ಯ ಸಮಸ್ಯೆಗೆ ಉಪಯುಕ್ತ. ಪುದೀನ ಲೆಮೆನ್‌ ಜ್ಯೂಸ್‌ನ್ನು ಪ್ರತಿದಿನ ಕುಡಿಯುವುದರಿಂದ ರಕ್ತವನ್ನು ಶುದ್ಧಿಗೊಳಿಸುತ್ತದೆ. ಈ ಜ್ಯೂಸ್‌ ಅನ್ನು ಪ್ರತಿದಿನ ಕುಡಿಯುವುದರಿಂದ ಕರಳನ್ನು ಶುದ್ಧಿಗೊಳಿಸುದರ ಜೊತೆಗೆ ಹೆಚ್ಚಿನ ಹೊಟ್ಟೆ ಸಮಸ್ಯೆಯನ್ನು ದೂರ ಮಾಡುತ್ತದೆ. ಹಾಗೆ ನಮ್ಮ ದೇಹದಲ್ಲಿ ಬೇಡದೇ ಇರುವ ಕೊಬ್ಬಿನ ಅಂಶವನ್ನು ತೆಗೆದು ಹಾಕುತ್ತದೆ. ತುಂಬಾ ತಲೆನೋವು (ಗ್ಯಾಸ್ಟ್ರಿಕ್‌ನಿಂದ ಬರುವಂತಹ ತಲೆನೋವು) ಬಂದಾಗ ಈ ಜ್ಯೂಸ್‌ ಮಾಡಿ ಕುಡಿಯುವುದರಿಂದ ತಕ್ಷಣಕ್ಕೆ ನೋವು ಶಮನವಾಗುತ್ತದೆ. ಪುದೀನವು ಆರೋಗ್ಯಕರ ಸತ್ವವುಳ್ಳ ಸೊಪ್ಪಾಗಿದ್ದು ನಿಯಮಿತವಾಗಿ ಬಳಸುವುದರಿಂದ ರಕ್ತದಲ್ಲಿ ಹಿಮಗ್ಲೋಬಿನ್‌ ಮಟ್ಟವನ್ನು ಸರಿದೂಗಿಸುತ್ತದೆ. ಹಾಗೆ ಪುದೀನ ಸೊಪ್ಪನ್ನು ದಿನನಿತ್ಯ ಸೇವಿಸುವುದರ ಮೂಲಕ ಹಿಮಗ್ಲೋಬಿನ್‌ ಸಮಸ್ಯೆಯಿಂದ ದೇಹದ ಮೇಲೆ ಉಂಟಾಗುವ ಬಿಳಿಕಲೆಗಳು ಕಡಿಮೆಯಾಗುತ್ತದೆ. ಪುದೀನ ಸೊಪ್ಪು ಸೇವನೆಯಿಂದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹೀಗಾಗಿ ದಿನನಿತ್ಯ ಪುದೀನವನ್ನು ಸೇವಿಸುವುದರಿಂದ ದೇಹಕ್ಕೆ ತುಂಬಾ ಉಪಯೋಗಗಳಿವೆ.

Try mint lemon juice for gastric problems

Comments are closed.