Milk Cream Benefits : ಮುಖದ ಕಾಂತಿ ಹೆಚ್ಚಿಸಲು ಬಳಸಿ ಹಾಲಿನ ಕೆನೆ

ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಸೌಂದರ್ಯ ಪ್ರಜ್ಞೆ ತುಸು ಹೆಚ್ಚು ಅಂದರೆ ತಪ್ಪಾಗಲಾರದು. ಪ್ರತಿಯೊಬ್ಬರೂ ಸುಂದರವಾಗಿ ಕಾಣಿಸಿಕೊಳ್ಳಬೇಕೆಂದು ಆಸೆ ಪಡುತ್ತಾರೆ. ಅದಕ್ಕಾಗಿ ಅನೇಕ ಮನೆಮದ್ದುಗಳನ್ನು, ತರಹತರಹದ ಕ್ರೀಮ್‌ಗಳನ್ನು ಬಳಸುತ್ತಾರೆ. ಎಲ್ಲಾ ಕಾಲದಲ್ಲೂ ತ್ವಚೆಯ ಬಗ್ಗೆ ಕಾಳಜಿವಹಿಸುವುದು ಅಗತ್ಯವೂ ಆಗಿದೆ. ಬೇಸಿಗೆಯಲ್ಲಿ ತ್ವಚೆಯ ಆರೈಕೆ ಸ್ವಲ್ಪ ಕಷ್ಟ, ಏಕೆಂದರೆ ಸದಾ ಬಿಸಿಲು, ಬೆವರಿನಿಂದಾಗಿ ತ್ವಚೆಯನ್ನು ಕಾಪಾಡಿಕೊಳ್ಳುವುದು ಸ್ವಲ್ಪ ಕಷ್ಟಕರವಾದ ಕೆಲಸ. ಆದರೆ ಹಾಲಿನ ಕೆನೆ (Milk Cream Benefits) ಹಚ್ಚುವುದರಿಂದ ಬೇಸಿಗೆಯಲ್ಲಿ ಕಾಡುವ ಅನೇಕ ತ್ವಚೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಹಾಲಿನ ಕೆನೆ ಮತ್ತು ಅರಿಶಿಣ:
ಅರಿಶಿನದಲ್ಲಿ ಮುಖವನ್ನು ಹೊಳೆಯುವಂತೆ ಮಾಡುವ ಗುಣವಿದೆ. ಆದರೆ ಅದಕ್ಕೆ ಹಾಲಿನ ಕೆನೆ ಬೆರೆಸಿ ಹಚ್ಚುವುದು ಇನ್ನಷ್ಟು ಪರಿಣಾಮಕಾರಿಯಾಗಿದೆ. ಎರಡು ಸ್ಪೂನ್ ಕ್ರೀಂನಲ್ಲಿ ಎರಡು ಚಿಟಿಕೆ ಅರಿಶಿನವನ್ನು ಬೆರೆಸಿ ಪೇಸ್ಟ್ ಮಾಡಿ. ಈಗ ಈ ಪೇಸ್ಟ್ ಅನ್ನು ಮುಖದ ಮೇಲೆ 15 ರಿಂದ 20 ನಿಮಿಷಗಳ ಕಾಲ ಇರಿಸಿ. ಅದರ ನಂತರ ಸಾಮಾನ್ಯ ನೀರಿನಿಂದ ಮುಖವನ್ನು ತೊಳೆಯಿರಿ. ಈ ಮಿಶ್ರಣವನ್ನು ಲೇಪಿಸುವುದರಿಂದ ಮುಖದ ಮೇಲಿನ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಚರ್ಮವು ರಕ್ಷಿಸಲ್ಪಡುತ್ತದೆ.

ಕೆನೆ ಮತ್ತು ಶ್ರೀಗಂಧ:
ತ್ವಚೆಯನ್ನು ಹೊಳೆಯುವಂತೆ ಮಾಡಲು ಕೆನೆ ಮತ್ತು ಶ್ರೀಗಂಧದ ಪುಡಿಯ ಪೇಸ್ಟ್ ಅನ್ನು ಸಹ ಬಳಸಬಹುದು. ಶ್ರೀಗಂಧದ ಪುಡಿ ಮತ್ತು ಕೆನೆ ಚರ್ಮವನ್ನು ಪೋಷಿಸುವ ಜೊತೆಗೆ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಶ್ರೀಗಂಧದ ಪುಡಿ ಚರ್ಮಕ್ಕೆ ತಂಪು ನೀಡುತ್ತದೆ. ಕಪ್ಪು ಕಲೆಗಳು, ಕಿರಿಕಿರಿ ಮತ್ತು ದದ್ದುಗಳನ್ನು ಹೋಗಲಾಡಿಸುತ್ತದೆ. ಇದನ್ನು ಬಳಸಲು, ಒಂದು ಚಮಚ ಶ್ರೀಗಂಧದ ಪುಡಿಗೆ ಒಂದು ಚಮಚ ಹಾಲಿನ ಕೆನೆ ಮಿಶ್ರಣ ಮಾಡಿ ಪೇಸ್ಟ್‌ ತಯಾರಿಸಿ. ಈಗ ಈ ಮಿಶ್ರಣವನ್ನು ಚರ್ಮದ ಮೇಲೆ 20 ನಿಮಿಷಗಳ ಕಾಲ ಇರಿಸಿ. ಅದರ ನಂತರ ಸಾಮಾನ್ಯ ನೀರಿನಿಂದ ಮುಖವನ್ನು ತೊಳೆಯಿರಿ.

ಇದನ್ನೂ ಓದಿ :Watermelon : ಬೇಸಿಗೆಯ ಬಿಸಿಲಿಗೆ ತಂಪು ನೀಡುವ ಕಲ್ಲಂಗಡಿ ಹಣ್ಣಿನ ಪ್ರಯೋಜನಗಳೇನು ಎಂಬುದು ಗೊತ್ತೇ?

ಕೆನೆ ಮತ್ತು ಜೇನುತುಪ್ಪ:
ಜೇನುತುಪ್ಪದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಮೊಡವೆಗಳನ್ನು ತೆಗೆದುಹಾಕುವ ಮೂಲಕ ಚರ್ಮವನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತದೆ. ಇದನ್ನು ಬಳಸಲು, ಒಂದು ಚಮಚ ಕೆನೆಗೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ, ಹಚ್ಚಿ ಮತ್ತು ಲಘುವಾಗಿ ಕೈಗಳಿಂದ ಚರ್ಮವನ್ನು ಮಸಾಜ್ ಮಾಡಿ. 20 ನಿಮಿಷಗಳ ನಂತರ ಚರ್ಮವನ್ನು ತೊಳೆಯಿರಿ. ಈ ರೀತಿ ಕೆನೆ ಹಚ್ಚುವುದರಿಂದ ತ್ವಚೆಯು ಹೊಳೆಯುತ್ತದೆ ಮತ್ತು ಮೃದುವಾಗುತ್ತದೆ. ಶುಷ್ಕತೆಯ ಸಮಸ್ಯೆಯೂ ದೂರವಾಗುತ್ತದೆ.

ಕೆನೆ ಮತ್ತು ಕಡಲೇ ಹಿಟ್ಟು:
ಕೆನೆಯಲ್ಲಿ ಕಡಲೇ ಹಿಟ್ಟನ್ನು ಬೆರೆಸಿ ಹಚ್ಚುವುದರಿಂದ ಚರ್ಮಕ್ಕೆ ಅನೇಕ ಪ್ರಯೋಜನಗಳಿವೆ. ಇದಕ್ಕಾಗಿ ಒಂದು ಚಮಚ ಕೆನೆಯನ್ನು ಒಂದು ಚಮಚ ಕಡಲೇ ಹಿಟ್ಟಿನಲ್ಲಿ ಬೆರೆಸಿ ಪೇಸ್ಟ್‌ ತಯಾರಿಸಿ. ಈಗ ಈ ಮಿಶ್ರಣವನ್ನು ಮುಖದ ಮೇಲೆ 15 ನಿಮಿಷಗಳ ಕಾಲ ಇರಿಸಿ. ಅದರ ನಂತರ ಸಾಮಾನ್ಯ ನೀರಿನಿಂದ ಮುಖವನ್ನು ತೊಳೆಯಿರಿ. ಇದು ತ್ವಚೆಯಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ತೆಗೆದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಅಲ್ಲದೆ ಚರ್ಮದ ಮೇಲಿರುವ ಸತ್ತ ಜೀವಕೋಶಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ.

ಇದನ್ನೂ ಓದಿ : Drinking water : ನೀರು ಕುಡಿಯುವಾಗ ತಪ್ಪಿಯೂ ಈ ತಪ್ಪುಗಳನ್ನು ಮಾಡಲೇ ಬೇಡಿ

(Milk Cream Benefits. Use these tips for glowing skin this summer)

Comments are closed.