Beauty Tips : ಚಳಿಗಾಲದಲ್ಲಿ ಮುಖದಕಾಂತಿಯನ್ನು ಹೆಚ್ಚಿಸಿಕೊಳ್ಳಬೇಕೇ ? ಹಾಗಾದರೆ ಬಳಸಿ ಈ ಬ್ಯುಟಿ ಟಿಪ್ಸ್

ಚಳಿಗಾಲದಲ್ಲಿ ಹೆಚ್ಚಾಗಿ ಚರ್ಮ ಮತ್ತು ಮುಖದಕಾಂತಿಯನ್ನು(Beauty Tips winter) ಕಳೆದುಕೊಳ್ಳುತ್ತದೆ. ಚರ್ಮ ಮತ್ತು ಮುಖವು ಒರಟಾಗಿ ಕಾಣಿಸುವುದರೊಂದಿಗೆ ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಚಳಿಗಾಲದಲ್ಲಿ ಚರ್ಮ ಮತ್ತು ಮುಖದಕಾಂತಿಯನ್ನು ಕಾಪಾಡಿಕೊಳ್ಳಲು ಹೆಚ್ಚು ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅದರ ಜೊತೆಯಲಿ ಉತ್ತಮ ಆಹಾರ ಪದ್ಧತಿ, ಯೋಗ ವ್ಯಾಯಮಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಅದರೊಂದಿಗೆ ಮನೆಯಲ್ಲೇ ಪೇಸ್‌ ಪ್ಯಾಕ್‌ಗಳನ್ನು ತಯಾರಿಸಿಕೊಂಡು ಮುಖಕ್ಕೆ ಬಳಸುವುದರಿಂದ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಮುಖದಕಾಂತಿ ಗ್ಲಾಸ್‌ ಸ್ಕಿನ್‌ ತರ ಕಾಣಿಸಲು ಬಳಸುವ ಪೇಸ್‌ ಪ್ಯಾಕ್‌ನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿ :

  • ಮೊಸರು
  • ಕಡಲೆಹಿಟ್ಟು
  • ಗಂಧದ ಪುಡಿ
  • ವಿಟಮಿನ್‌ ಮಾತ್ರೆ

ತಯಾರಿಸುವ ವಿಧಾನ :
ಮೊದಲಿಗೆ ಒಂದು ಬಟ್ಟಲಿಗೆ ಎರಡರಿಂದ ಮೂರು ಚಮಚ ಮೊಸರು, ಒಂದು ಚಮಚ ಕಡಲೆಹಿಟ್ಟುನ್ನು ಹಾಕಿ ಉಂಡೆಯಾಗದ ಹಾಗೆ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಅರ್ಧ ಚಮಚದಷ್ಟು ಗಂಧದ ಪುಡಿಯನ್ನು ಹಾಕಿ ಮಿಕ್ಸ್‌ ಮಾಡಿಕೊಳ್ಳಬೇಕು. ಕೊನೆಯಲ್ಲಿ ಒಂದು ವಿಟಮಿನ್‌ ಮಾತ್ರೆಯನ್ನು ಓಪನ್‌ ಮಾಡಿ ಅದರಲ್ಲಿ ಇರುವಂತಹ ಆಯಿಲ್‌ನ್ನು ಹಾಕಿ ಮಿಕ್ಸ್‌ ಮಾಡಿಕೊಂಡರೆ ಮುಖದ ಕಾಂತಿಯನ್ನು ಹೆಚ್ಚಿಸುವ ಪೇಸ್‌ ಪ್ಯಾಕ್‌ ರೆಡಿಯಾಗುತ್ತದೆ. ಪೇಸ್‌ ಪ್ಯಾಕ್‌ನ್ನು ರೆಡಿ ಮಾಡಿಕೊಂಡ ಮೇಲೆ ಮುಖವನ್ನು ನೀರಿನಲ್ಲಿ ತೊಳೆದು ಒರೆಸಿಕೊಳ್ಳಬೇಕು. ಇದನ್ನೂ ಓದಿ : Hair Pack : ಕೂದಲು ಉದುರುವ ಸಮಸ್ಯೆ ಕಾಡುತ್ತಿದೆಯೇ ? ಹಾಗಾದರೆ ಮನೆಯಲ್ಲೇ ಮಾಡಿ ಈ ಹೆರ್‌ ಪ್ಯಾಕ್

ನಂತರ ಇದನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು. ಪೇಸ್‌ ಪ್ಯಾಕ್‌ ಹಚ್ಚಿಕೊಂಡ ಮೇಲೆ ಅರ್ಧ ಗಂಟೆಯವರೆಗೂ ಪೂರ್ತಿಯಾಗಿ ಒಣಗಲು ಬಿಡಬೇಕು. ಮುಖಕ್ಕೆ ಹಚ್ಚಿದ ಪೇಸ್‌ಪ್ಯಾಕ್‌ ಸಂಪೂರ್ಣವಾಗಿ ಒಣಗಿದ ನಂತರ ನೀರು ಅಥವಾ ರೋಸ್‌ ವಾಟರ್‌ನ್ನು ಬಳಸಿ ಮಸಾಜ್‌ ಮಾಡಿಕೊಳ್ಳಬೇಕು. ನಂತರ ಮುಖವನ್ನು ತೊಳೆದುಕೊಳ್ಳಬೇಕು. ಈ ಪೇಸ್‌ ಪ್ಯಾಕ್‌ನ್ನು ಬಳಸಿದ ಮೂರು ನಾಲ್ಕು ಗಂಟೆಗಳ ಕಾಲ ಸೋಪು ಅಥವಾ ಬೇರೆ ಯಾವುದನ್ನು ಬಳಸಬಾರದು. ಇದನ್ನೂ ಓದಿ : Protect your Skin Winter Season: ಚಳಿಗೆ ಚರ್ಮ ಒಡೆಯದಂತೆ ರಕ್ಷಿಸಿಕೊಳ್ಳಲು ಸುಲಭ ಪರಿಹಾರ

ಯಾಕೆಂದರೆ ಹಚ್ಚಿರುವ ಪೇಸ್‌ ಪ್ಯಾಕ್‌ ಹೆಚ್ಚು ಪರಿಣಾಮಕಾರಿ ಆಗಲು ಸ್ವಲ್ಪ ಸಮಯ ಹಾಗೆ ಬಿಡಬೇಕು. ಇದನ್ನು ರಾತ್ರಿ ಮಲಗುವ ಮುಂಚೆ ಹಚ್ಚಿಕೊಂಡು ತೊಳೆದು ಮಲಗುವುದರಿಂದ ಹೆಚ್ಚಿನ ಹೊಳಪನ್ನು ನೀಡುತ್ತದೆ. ಈ ಪೇಸ್‌ ಪ್ಯಾಕ್‌ನಿಂದಾಗಿ ಮುಖದಲ್ಲಿರುವ ಕಪ್ಪು ಕಲೆಗಳು, ಮೊಡವೆಗಳು, ಮುಖದಲ್ಲಿ ಕಾಣುವ ನೆರಿಗೆಗಳು ಮಾಯವಾಗಿ ಗ್ಲಾಸ್‌ ಸ್ಕಿನ್‌ನಂತಹ ಹೊಳಪನ್ನು ನೀಡುತ್ತದೆ. ಈ ಪೇಸ್‌ ಪ್ಯಾಕ್‌ನ್ನು ಬಳಸುವುದರಿಂದ ಬ್ಯೂಟಿ ಪಾರ್ಲರ್‌ಗೆ ಹೋಗುವುದನ್ನು ತಪ್ಪಿಸಬಹುದಾಗಿದೆ. ಇದನ್ನೂ ಓದಿ : Home Made Hair Oil : ಬಿಳಿಕೂದಲು ದೂರ ಮಾಡಿ : ಮನೆಯಲ್ಲೇ ತಯಾರಿಸಿ ಈ ಹೇರ್‌ ಆಯಿಲ್‌

Beauty Tips winter : Need to increase the glow of the face in winter? So use these beauty tips

Comments are closed.