Banana Biscuits : ಮನೆಯಲ್ಲೇ ಮಾಡಿ ಬಾಳೆಹಣ್ಣಿನ ಬಿಸ್ಕೆಟ್

(Banana Biscuits)ಸ್ಕೂಲ್‌ ಟಿಪಿನ್‌ ಬಾಕ್ಸ್‌ ಗೆ ತಿಂಡಿಯ ಜೊತೆ ಮಕ್ಕಳಿಗೆ ಸ್ನಾಕ್‌ ಎಂದು ಅಂಗಡಿಗಳಲ್ಲಿ ಖರಿದಿಸಿದ ತಿಂಡಿಯನ್ನು ಹಾಕಿಕೊಡುತ್ತಾರೆ. ಅಂಗಡಿಯಿಂದ ಖರಿದಿಸಿದ ಆಹಾರ ಮಕ್ಕಳ ಆರೋಗ್ಯಕ್ಕೆ ಉತ್ತಮವಲ್ಲ. ಅವರ ಆರೋಗ್ಯವನ್ನು ಕೆಡಿಸಬಹುದು. ಅಂಗಡಿಗಳಲ್ಲಿ ಖರಿದಿಸಿದ ತಿಂಡಿಗಳನ್ನು ಮಕ್ಕಳ ಡಬ್ಬಿಯಲ್ಲಿ ಹಾಕಿ ಕಳುಹಿಸುವ ಬದಲು ಮನೆಯಲ್ಲೆ ರುಚಿ ರುಚಿಯಾದ ಸ್ನಾಕ್‌ ತಯಾರಿಸಿ ಕಳುಹಿಸಬಹುದು. ಇದನ್ನು ಹೇಗೆ ಮಾಡಬಹುದು ಎಂದು ಈ ಕೆಳಗೆ ತಿಳಿಸಲಾಗಿದೆ.

(Banana Biscuits)ಬೇಕಾಗುವ ಸಾಮಾಗ್ರಿಗಳು:

  • ಬಾಳೆಹಣ್ಣು
  • ಸಕ್ಕರೆ
  • ಎಲಕ್ಕಿ ಪುಡಿ
  • ಮೈದಾ

ಮಾಡುವ ವಿಧಾನ:
ಒಂದು ಬೌಲ್ ನಲ್ಲಿ ಬಾಳೆಹಣ್ಣುಒಂದು , ಸಕ್ಕರೆ ಕಾಲು ಕಪ್, ಎಲಕ್ಕಿ‌ ಪುಡಿ ಒಂದು ಚಮಚ ಹಾಕಿ ಸ್ಮಾಶ್‌ ಮಾಡಿಕೊಳ್ಳಬೇಕು. ನಂತರ ಅದಕ್ಕೆ ಒಂದು ಕಪ್‌ ಮೈದಾವನ್ನು ಹಾಕಿ ಹದಾ ಬರುವ ವರೆಗೆ ಮಿಕ್ಸ್‌ ಮಾಡಿಕೊಳ್ಳಬೇಕು . ನಂತರ ಇದನ್ನು ಮಣೆಯ ಮೇಲೆ ತುಪ್ಪವನ್ನು ಸವರಿಕೊಂಡು ದೊಡ್ಡ ಆಕಾರದಲ್ಲಿ ನಾದಿಕೊಳ್ಳಬೇಕು. ನಾದಿಕೊಂಡ ಹಿಟ್ಟಿನ ಮೇಲೆ ಸಣ್ಣ ಲೋಟವನ್ನು ತೆಗೆದುಕೊಂಡು ರೌಂಡ್‌ ಶೇಪ್ ನಲ್ಲಿ ಕತ್ತರಿಸಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿಕೊಳ್ಳಬೇಕು ಇದು ಕಾದ ನಂತರ ಅದಕ್ಕೆ ರೌಂಡ್‌ ಶೆಪ್‌ ನಲ್ಲಿ ಕತ್ತರಿಸಿಕೊಂಡ ಹಿಟ್ಟನ್ನು ಹಾಕಿದರೆ ಕರುಮ್‌ ಕುರುಮ್‌ ಆಗಿ ಬಾಳೆಹಣ್ಣಿನ ಬಿಸ್ಕೆಟ್‌ ತಿನ್ನಬಹುದು. ಇದನ್ನೂ ಓದಿ:Hair Pack : ಕೂದಲು ಉದುರುವ ಸಮಸ್ಯೆ ಕಾಡುತ್ತಿದೆಯೇ ? ಹಾಗಾದರೆ ಮನೆಯಲ್ಲೇ ಮಾಡಿ ಈ ಹೆರ್‌ ಪ್ಯಾಕ್

ಬಾಳೆಹಣ್ಣು:

ಬಾಳೆಹಣ್ಣು ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ. ಇದನ್ನು ಮಕ್ಕಳು ಸೇವಿಸುವುದರಿಂದ ಅವರ ಆರೋಗ್ಯ ಉತ್ತವಾಗಿರುತ್ತದೆ. ಬಾಳೆಹಣ್ಣಿನಲ್ಲಿ ಕಬ್ಬಿಣದ ಪ್ರಮಾಣ ಹೆರಳವಾಗಿರುವುದರಿಂದ ಇದನ್ನು ಸೇವಿಸಿದರೆ ರಕ್ತಹೀನತೆ ಸಮಸ್ಯೆಯನ್ನು ಕಡಿಮೆಮಾಡುತ್ತದೆ. ಜೊತೆಗೆ ದೇಹದಲ್ಲಿ ಕಬ್ಬಿಣದ ಅಂಶವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಬಾಳೆಹಣ್ಣು ಗರ್ಭಿಣಿಯರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಪೋಲಿಕ್‌ ಆಮ್ಲವು ಹುಟ್ಟಲಿರುವ ಮಗುವಿನ ಯಾವುದೇ ದೋಷಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ತಲೆನೋವನ್ನು ನಿವಾರಿಸುವುದಕ್ಕೂ ಕೂಡ ಸಹಕಾರಿಯಾಗಿದೆ. ಇದನ್ನೂ ಓದಿ:Nutrition Food : ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಿಸುತ್ತೆ ಈ ಮಣ್ಣಿ

ಇದನ್ನೂ ಓದಿ : Peanut Health Benefits : ಚಳಿಗಾಲದಲ್ಲಿ ಶೇಂಗಾ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು ನಿಮಗೆ ಗೊತ್ತಾ

How to prepare Homemade Banana Biscuits

Comments are closed.