PSI exam postponed : ತನಿಖೆ ಪೂರ್ಣಗೊಳ್ಳುವವರೆಗೂ ಪಿಎಸ್​ಐ ಪರೀಕ್ಷೆ ನಡೆಯುವುದಿಲ್ಲ : ಪ್ರವೀಣ್​ ಸೂದ್​

ಬೆಂಗಳೂರು : PSI exam postponed : ರಾಜ್ಯದಲ್ಲಿ ಪಿಎಸ್​ಐ ನೇಮಕಾತಿ ಅಕ್ರಮ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಸಿಐಡಿ ಅಧಿಕಾರಿಗಳು ಈ ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಪಿಎಸ್​ಐ ಅಕ್ರಮ ಪ್ರಕರಣದ ಕಿಂಗ್​ ಪಿನ್​ ಎನ್ನಲಾದ ರುದ್ರೇಶ್​ ಗೌಡನನ್ನು ಇಂದು ಮಹಾರಾಷ್ಟ್ರದ ಸೊಲ್ಹಾಪುರದಲ್ಲಿ ಬಂಧಿಸಲಾಗಿದೆ. ನಿನ್ನೆಯಷ್ಟೇ ಪೊಲೀಸರು ಕಲಬುರಗಿಯ ಅಫಜಲಪುರದಲ್ಲಿ ರುದ್ರೇಶ್​ ಗೌಡ ಸಹೋದರ ಮಹಂತೇಶ್​ ಗೌಡನನ್ನು ಬಂಧಿಸಿದ್ದರು.


545 ಪಿಎಸ್​ಐ ನೇಮಕಾತಿ ಹುದ್ದೆಯಲ್ಲಿ ಅಕ್ರಮ ನಡೆದಿರುವ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ 405 ಪಿಎಸ್​ಐ ಹುದ್ದೆಗಳಿಗೆ ಪರೀಕ್ಷೆ ನಡೆಯುವ ಮುನ್ನವೇ ಅಕ್ರಮ ನೇಮಕಾತಿಗೆ ಪ್ಲಾನ್​ ಮಾಡಿದ್ದ ಆಡಿಯೋವನ್ನು ಕಾಂಗ್ರೆಸ್​ ಶಾಸಕ ಪ್ರಿಯಾಂಕ್​ ಖರ್ಗೆ ರಿಲೀಸ್​ ಮಾಡಿದ್ದು ಮತ್ತೊಂದು ಅಕ್ರಮದ ವಾಸನೆ ಹೊಗೆಯಾಡುತ್ತಿದೆ.


ಈ ಎಲ್ಲದರ ನಡುವೆ ಡಿಜಿಪಿ ಪ್ರವೀಣ್​ ಸೂದ್​​ 545 ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆ ಪೂರ್ಣಗೊಂಡ ಬಳಿಕವೇ 402 ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.


ಈ ಸಂಬಂಧ ಟ್ವೀಟ್​ ಮಾಡಿರುವ ಡಿಜಿಪಿ ಪ್ರವೀಣ್​ ಸೂದ್​,ಪಿಎಸ್​ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ ಎಸಗಿದವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಪಿಎಸ್​ಐ ಪಟ್ಟಿಯಿಂದ ಹೊರಗಿಟ್ಟಿದ್ದೇವೆ. ಈ ಪ್ರಕರಣದ ತನಿಖೆ ಪೂರ್ಣಗೊಂಡ ಬಳಿಕವೇ 402 ಪೊಲೀಸ್​ ಸಬ್​ ಇನ್​ಸ್ಪೆಕ್ಟರ್ ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ ಎಂದು ಹೇಳಿದರು.


ರಾಜ್ಯ ಪೊಲೀಸ್​ ಇಲಾಖೆ ಕರೆದಿರುವ 402 ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ ಹುದ್ದೆಗಳಲ್ಲಿ 26 ಹುದ್ದೆಗಳನ್ನು ಕಲ್ಯಾಣ ಕರ್ನಾಟಕಕ್ಕೆ ಮೀಸಲಿಡಲಾಗಿದೆ. ಉಳಿದ 376 ಹುದ್ದೆಗಳಿಗೆ ಯಾರು ಬೇಕಿದ್ದರೂ ಅರ್ಜಿ ಸಲ್ಲಿಸಬಹುದು. ಕಲ್ಯಾಣ ಕರ್ನಾಟಕದವರಿಗೆ ಮಾತ್ರ 402 ಹುದ್ದೆಗಳಿಗೆ ಪರಿಗಣಿಸಲಾಗುತ್ತದೆ. ಆದರೆ ಇದೀಗ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿರುವುದರಿಂದ ಪರೀಕ್ಷೆಯನ್ನು ಮುಂದೂಡಲಾಗಿದೆ.

ಇದನ್ನು ಓದಿ : psi appointment scam : ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದ ಕಿಂಗ್​ ಪಿನ್​ ರುದ್ರೇಗೌಡ ವಶಕ್ಕೆ

ಇದನ್ನೂ ಓದಿ : JDS: 2023 ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಎಲ್ಲವೂ ಸುಲಭವಿಲ್ಲ: ಆಮ್ ಆದ್ಮಿ, ಎನ್‌ಸಿಪಿ ಸ್ಪರ್ಧೆಗೆ ಇಳಿಯಲಿದೆ

PSI exam postponed until investigation is over

Comments are closed.