Oily Skin Beauty Tips:ಆಯಿಲ್‌ ಸ್ಕಿನ್‌ ಪಿಂಪಲ್‌ ನಿವಾರಣೆಗೆ ಮನೆಯಲ್ಲಿಯೇ ತಯಾರಿಸಿಕೊಳ್ಳಿ ಫೇಸ್‌ ಪ್ಯಾಕ್‌

(Oily Skin Beauty Tips)ಆಯಿಲ್‌ ಸ್ಕಿನ್‌ ಇರುವವರು ಮುಖಕ್ಕೆ ಹಚ್ಚುವಂತಹ ಯಾವುದೇ ಫೇಸ್‌ ಪ್ಯಾಕ್‌ ಖರೀದಿ ಮಾಡಲು ಮುಂದಾದರು ಅವರ ಮುಖಕ್ಕೆ ಈ ಫೇಸ್‌ ಪ್ಯಾಕ್‌ ಹೊಂದುತ್ತದಾ ಇಲ್ಲವಾ ಎಂದು ನೋಡಿಕೊಂಡು ಖರೀದಿಸಬೇಕು. ಆದರೆ ಇನ್ನು ಆ ಚಿಂತೆ ಬೇಡ ಮನೆಯಲ್ಲಿಯೇ ಆಯಿಲ್‌ ಸ್ಕಿನ್‌ ಗೆ ಹಚ್ಚುವಂತಹ ಫೇಸ್‌ ಪ್ಯಾಕ್‌ ತಯಾರು ಮಾಡಿಕೊಳ್ಳಬಹುದು. ಈ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

(Oily Skin Beauty Tips)ಬೇಕಾಗುವ ಸಾಮಗ್ರಿಗಳು:
ಕಡಲೆ ಹಿಟ್ಟು
ಬೇವಿನ ಪುಡಿ
ಮೊಸರು
ಟಿ ಟ್ರಿ ಎಣ್ಣೆ

ಮಾಡುವ ವಿಧಾನ:
ಒಂದು ಬೌಲ್‌ ನಲ್ಲಿ ಒಂದು ಚಮಚ ಕಡಲೆ ಹಿಟ್ಟು, ಒಂದು ಚಮಚ ಬೇವಿನ ಪುಡಿ, ಮೊಸರು , 3-4 ಹನಿಯಷ್ಟು ಟಿ ಟ್ರಿ ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣಮಾಡಿ ಫೇಸ್‌ ಪ್ಯಾಕ್‌ ತಯಾರಿಸಿಕೊಳ್ಳಬೇಕು . ನಂತರ ಈ ಫೇಸ್‌ ಪ್ಯಾಕ್‌ ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಡಬೇಕು. ವಾರದಲ್ಲಿ ಎರಡು ಬಾರಿ ಫೇಸ್‌ ಪ್ಯಾಕ್‌ ಮಾಡಿ ಹಚ್ಚಿಕೊಂಡರೆ ಮುಖದಲ್ಲಿರುವ ಪಿಂಪಲ್‌ ಮಾಯವಾಗುತ್ತದೆ.

ದಾಸವಾಳ ಹೂವಿನ ಫೇಸ್‌ ಪ್ಯಾಕ್‌

ಬೇಕಾಗುವ ಸಾಮಾಗ್ರಿಗಳು
ಮುಲ್ತಾನಿ ಮಿಟ್ಟಿ
ಬೇವಿನ ಪುಡಿ
ದಾಸವಾಳದ ಪುಡಿ
ಮೊಸರು

ಮಾಡುವ ವಿಧಾನ:
ಒಂದು ಬೌಲ್ ನಲ್ಲಿ ಮುಲ್ತಾನಿ ಮಿಟ್ಟಿ,ಬೇವಿನ ಪುಡಿ, ದಾಸವಾಳ ಪುಡಿ, ಮೊಸರು ಹಾಕಿ ಮಿಶ್ರಣ ಮಾಡಿ ಫೇಸ್‌ ಪ್ಯಾಕ್‌ ಮಾಡಿಕೊಳ್ಳಬೇಕು. ನಂತರ ಅದನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಬಿಟ್ಟು ತೊಳೆದರೆ ಮುಖದಲ್ಲಿರುವ ಪಿಂಪಲ್‌ ಕಡಿಮೆ ಮಾಡುತ್ತದೆ. ಈ ಫೇಸ್‌ ಪ್ಯಾಕ್‌ ಅನ್ನು ಆಯಿಲ್‌ ಸ್ಕಿನ್‌ ಇಲ್ಲದವರೂ ಕೂಡ ಬಳಸಬಹುದು.

ಇದನ್ನೂ ಓದಿ:Cucumber Juice Reduce BellyFat:ಹೊಟ್ಟೆಯ ಬೊಜ್ಜು ಕರಗಿಸಲು ಕುಡಿಯಿರಿ ಸೌತೆಕಾಯಿ ಜ್ಯೂಸ್

ಇದನ್ನೂ ಓದಿ:Beautiful Nails :ಸುಂದರವಾದ ಉಗುರು ಪಡೆಯಲು ಇಲ್ಲಿದೆ ಟಿಪ್ಸ್

ಇದನ್ನೂ ಓದಿ:Winter Care : ಚಳಿಗಾಲದಲ್ಲಿ ನಿಮ್ಮ ಮಕ್ಕಳಿಗೆ ಇವುಗಳನ್ನು ಕೊಡಿ; ರೋಗನಿರೋಧಕ ಶಕ್ತಿ ಹೆಚ್ಚಿಸಿ

ಚಳಿಗಾಲಕ್ಕೆ ಬಳಸುವ ಫೇಸ್‌ ಪ್ಯಾಕ್‌

ಬೇಕಾಗುವ ಸಾಮಾಗ್ರಿಗಳು:
ಮುಲ್ತಾನಿ ಮಿಟ್ಟಿ
ಶ್ರೀಗಂಧ ಪುಡಿ
ಕಿತ್ತಲೆ ಸಿಪ್ಪೆಯ ಪುಡಿ
ಅರಿಶಿಣ
ಹಾಲು

ಮಾಡುವ ವಿಧಾನ:
ಒಂದು ಬೌಲ್‌ ಗೆ ಮುಲ್ತಾನಿ ಮಿಟ್ಟಿ, ಶ್ರೀಗಂಧ ಪುಡಿ, ಕಿತ್ತಲೆ ಸಿಪ್ಪೆಯ ಪುಡಿ, ಅರಿಶಿಣ, ಹಾಲು ಹಾಕಿಕೊಂಡು ಫೇಸ್‌ ಪ್ಯಾಕ್‌ ತಯಾರಿಸಿಕೊಳ್ಳಬೇಕು. ನಂತರ ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಫೇಸ್‌ ಪ್ಯಾಕ್‌ ಹಚ್ಚಿಕೊಂಡು ಹತ್ತುನಿಮಿಷ ಬಿಟ್ಟು ಮುಖವನ್ನು ತೊಳೆಯಬೇಕು. ಹೀಗೆ ಪ್ರತಿ ತಿಂಗಳು ಫೇಸ್‌ ಪ್ಯಾಕ್‌ ಹಚ್ಚುವುದರಿಂದ ಮುಖದಲ್ಲಿರುವ ಪಿಂಪಲ್‌ ಕಡಿಮೆಯಾಗುತ್ತದೆ. ಈ ಫೇಸ್‌ ಪ್ಯಾಕ್‌ ಅನ್ನು ಆಯಿಲ್‌ ಸ್ಕಿನ್‌ ಇಲ್ಲದವರೂ ಕೂಡ ಬಳಸಬಹುದು.

Make homemade face pack to get rid of oily skin pimples

Comments are closed.