CCL Recruitment 2022 : 139 ಜೂನಿಯರ್ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

(CCL Recruitment 2022)ಕೇಂದ್ರ ಕಲ್ಲಿದ್ದಲು ಕ್ಷೇತ್ರ (CCL)ದಲ್ಲಿ ಖಾಲಿ ಇರುವ ಜೂನಿಯರ್ ಡಾಟಾ ಎಂಟ್ರಿ ಆಪರೇಟರ್ (ಟ್ರೇನಿ) ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರಾಂಚಿ ಮತ್ತು ಜಾರ್ಖಂಡ್ ನಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್16, 2022ರ ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

(CCL Recruitment 2022)ಕೇಂದ್ರ ಕಲ್ಲಿದ್ದಲು ಕ್ಷೇತ್ರ (CCL)ದಲ್ಲಿ ಖಾಲಿ ಇರುವ ಹುದ್ದೆಗಳ ವಿವರ:
ಸಂಸ್ಥೆಯ ಹೆಸರು : ಕೇಂದ್ರ ಕಲ್ಲಿದ್ದಲು ಕ್ಷೇತ್ರ (CCL)
ಹುದ್ದೆಯ ಹೆಸರು : ಜೂನಿಯರ್ ಡಾಟಾ ಎಂಟ್ರಿ ಆಪರೇಟರ್
ಹುದ್ದೆಗಳ ಸಂಖ್ಯೆ : 139
ಉದ್ಯೋಗ ಸ್ಥಳ : ರಾಂಚಿ ಮತ್ತು ಜಾರ್ಖಂಡ್

ವಯೋಮಿತಿ ವಿವರ:
ಕೇಂದ್ರ ಕಲ್ಲಿದ್ದಲು ಕ್ಷೇತ್ರ (CCL)ದಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳು ಕನಿಷ್ಠ 18 ಗರಿಷ್ಠ 30 ವಯಸ್ಸಿನವರಾಗಿರಬೇಕು.

ಇದನ್ನೂ ಓದಿ:TNPSC Recruitment 2022:24 ಸಹಾಯಕ ಪ್ರಾಧ್ಯಾಪಕ ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ:NIT Karnataka Recruitment 2022: ಜೂನಿಯರ್ ರಿಸರ್ಚ್ ಫೆಲೋ (JRF) ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ:PGCIL Recruitment 2022 :800 ಫೀಲ್ಡ್ ಇಂಜಿನಿಯರ್, ಫೀಲ್ಡ್ ಸೂಪರ್‌ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

CCL ಜೂನಿಯರ್ ಡಾಟಾ ಎಂಟ್ರಿ ಆಪರೇಟರ್ (ಟ್ರೇನಿ) ಹುದ್ದೆಗಳಿಗೆ ಅಗತ್ಯ ಅರ್ಹತೆ:
ಅರ್ಜಿದಾರರು ಮಾನ್ಯತೆ ಪಡೆದ ಮಂಡಳಿಯಿಂದ 3 ವರ್ಷಗಳ ಸೇವೆ ಮಾಡಿದ ಪ್ರಮಾಣ ಪತ್ರವನ್ನು ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ:
ಕೇಂದ್ರ ಕಲ್ಲಿದ್ದಲು ಕ್ಷೇತ್ರ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸುತ್ತಿರುವ ಅಭ್ಯರ್ಥಿಗಳನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ
ಅಭ್ಯರ್ಥಿಗಳ ಆಯ್ಕೆಗೆ ಆಪ್ಟಿಟ್ಯೂಡ್ ಪರೀಕ್ಷೆಯನ್ನು ಮಾಡಲಾಗುತ್ತದೆ
ನಂತರ ಅರ್ಹ ಅಭ್ಯರ್ಥಿಗಳ ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತದೆ.
ಅನಂತರ ಅಭ್ಯರ್ಥಿಗಳ ಆಯ್ಕೆಯು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.

ಕೇಂದ್ರ ಕಲ್ಲಿದ್ದಲು ಕ್ಷೇತ್ರ (CCL)ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ :
ಕೇಂದ್ರ ಕಲ್ಲಿದ್ದಲು ಕ್ಷೇತ್ರ (CCL)ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಇಮೇಲ್‌ ಐಡಿ, ಮೊಬೈಲ್‌ ಸಂಖ್ಯೆ,ಗುರುತಿನ ಚೀಟಿ, ವಯಸ್ಸು,ಶೈಕ್ಷಣಿಕ,ಅರ್ಹತೆ, ಇತ್ಯಾದಿ ದಾಖಲೆ) 16-11-2022 ರಿಂದ16-12- 2022 ರವರೆಗೆ ಕೇಂದ್ರ ಕಲ್ಲಿದ್ದಲು ಕ್ಷೇತ್ರ (CCL)ದ ಅಧಿಕೃತ ವೆಬ್‌ ಸೈಟ್‌ ಆದ www.centralcoalfields.in ನಲ್ಲಿ ಆನ್ ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 16 ನವೆಂಬರ್ 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಡಿಸೆಂಬರ್ 2022

CCL Recruitment 2022:Application Invitation for 139 Junior Data Entry Operator Posts

Comments are closed.