Kantara OTT Release Date: ಕಾಂತಾರ OTT ರಿಲೀಸ್‌ ಡೇಟ್‌ ಮುಂದೂಡಿಕೆ; ಕಾರಣ ಇಲ್ಲಿದೆ

Kantara OTT Release Date: ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶನ ಮಾಡಿದ ಕಾಂತಾರ ಸಿನಿಮಾದ ಹವಾ ಇನ್ನೂ ಕಮ್ಮಿಯಾಗಿಲ್ಲ. ಹಲವಾರು ವಾದ ವಿವಾದಗಳ ನಡುವೆಯೂ ಕಾಂತಾರ ಐವತ್ತು ದಿನಗಳನ್ನು ಪೂರೈಸಿದ್ದು, ಇನ್ನೂ ಕೆಲವು ಕಡೆಗಳಲ್ಲಿ ಹೈಸ್‌ ಫುಲ್‌ ಪ್ರದರ್ಶನ ಕಾಣುತ್ತಿದೆ. ಈಗಾಗಲೇ 350 ಕೋಟಿ ರೂ ಕಲೆಕ್ಷನ್‌ ದಾಟಿದ್ದು, 400 ಕೋಟಿಯತ್ತ ಮುನ್ನುಗ್ಗುತ್ತಿದೆ. ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿಸಿನಿಮಾ ರಿಲೀಸ್‌ ಆಗಿದ್ದು, ಎಲ್ಲಾ ಭಾಷೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈಗಾಗಲೇ ಕಾಂತಾರ ಸಿನಿಮಾ ಒಟಿಟಿ ಸ್ಟ್ರೀಮಿಂಗ್‌(Kantara OTT Release Date) ಅನ್ನು ಪ್ರಾರಂಭಿಸಬೇಕಿತ್ತು. ಆದರೆ ಕೆಲವು ಕಾರಣಗಳಿಂದ ಒಟಿಟಿ ರಿಲೀಸ್‌ ಮುಂದೂಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿಂದೆ ನವೆಂಬರ್‌ ನಾಲ್ಕರಂದು ಕಾಂತಾರ ಸಿನಿಮಾ ಒಟಿಟಿ ಗೆ ಬರಲಿದೆ. ನವೆಂಬರ್‌ 18 ಕ್ಕೆ ರಿಲೀಸ್‌ ಆಗಲಿದೆ ಎನ್ನಲಾಗುತ್ತಿತ್ತು. ಆದರೀಗ ಕಾರಣಾಂತರದಿಂದ ಮತ್ತೆ ರಿಲೀಸ್‌ ಡೇಟ್‌ ಅನ್ನು ಮುಂದಕ್ಕೆ ಹಾಕಲಾಗಿದೆ. ಸದ್ಯ ಕಾಂತಾರ ಸಿನಿಮಾ ಅಮೆಜಾನ್‌ ಪ್ರೈಮ್‌ ನಲ್ಲಿ ಸ್ಟ್ರೀಮಿಂಗ್‌ ಆಗಲಿದ್ದು, ಕಾಂತಾರದ ಹೊಸ ಒಟಿಟಿ ರಿಲೀಸ್‌ ಡೇಟ್‌ ವೈರಲ್‌ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿರುವ ಕಾಂತಾರ ಸಿನಿಮಾ ಒಟಿಟಿ ಗೆ ಯಾವಾಗ ಬರುತ್ತದೆ ಎನ್ನುವ ಚರ್ಚೆಗಳಿಗೆ ಬ್ರೇಕ್‌ ಬಿದ್ದಿದ್ದು, ಇದೇ ನವೆಂಬರ್‌ 24 ರಂದು ಅಮೆಜಾನ್‌ ಪ್ರೈಮ್‌ ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಕಾಂತಾರ ಸಿನಿಮಾ ತಂಡ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಬಹಿರಂಗ ಮಾಡಿಲ್ಲ. ಈ ಹಿಂದೆ ಅನೇಕ ಬಾರಿ ಒಟಿಟಿ ರಿಲೀಸ್‌ ಡೇಟ್‌ ಬದಲಾಯಿಸಲಾಗಿದ್ದು, ಕಾಂತಾರ ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾರಣದಿಂದ ಒಟಿಟಿ ರಿಲೀಸ್‌ ಮುಂದೂಡಲಾಗಿದೆ. 400 ಕೋಟಿ ಕ್ಲಬ್‌ ಸೇರಿದ ನಂತರ ಸಿನಿಮಾ ಒಟಿಟಿ ಗೆ ಬರಲಿದೆ ಎಂಬ ಮಾಹಿತಿಗಳು ಕೇಳಿ ಬರುತ್ತಿವೆ.

ಇನ್ನೊಂದು ಕಡೆಯಲ್ಲಿ, ಕಾಂತಾರ ಸಿನಿಮಾ ಕೆಲವು ವಿವಾದಗಳಲ್ಲಿ ಸಿಲುಕಿದ್ದು, ʼವರಾಹ ರೂಪಮ್‌…ʼ ಹಾಡನ್ನು ಮಲಯಾಳಂನ ಆಲ್ಬಂ ಸಾಂಗ್‌ ನಿಂದ ಕಾಪಿ ಮಾಡಲಾಗಿದೆ ಎಂದು ಮೂಲ ಸಂಗೀತ ನಿರ್ಮಾಪಕರು ಕಾಪಿರೈಟ್‌ ಕೇಸ್‌ ದಾಖಲಿಸಿದ್ದರು. ನಂತರ ಹಾಡನ್ನು ಸಿನಿಮಾದಿಂದ ತೆಗೆಯಬೇಕೆಂದು ಕೇರಳದ ಕೋರ್ಟ್‌ ಆದೇಶ ನೀಡಿತ್ತು. ಆದೇಶದಂತೆ ಅನೇಕ ಆಪ್‌ ಗಳಿಂದ ಹಾಡನ್ನು ತೆಗೆಯಲಾಗಿತ್ತು. ಒಂದು ವೇಳೆ ಒಟಿಟಿ ಯಲ್ಲಿ ಸಿನಿಮಾ ರಿಲೀಸ್‌ ಆದರೆ ಸಮಸ್ಯೆ ಆಗುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಒಟಿಟಿ ರಿಲೀಸ್‌ ಡೇಟ್‌ ಮುಂದೂಡಲಾಗಿದೆ ಎಂದು ಮೂಲಗಳ ಪ್ರಕಾರ ಹೇಳಲಾಗುತ್ತಿದೆ.

ಇದನ್ನೂ ಓದಿ : Tamannaah marriage: ಟಾಲಿವುಡ್ ಅಂಗಳದಲ್ಲಿ ‘ಬಾಹುಬಲಿ ಬೆಡಗಿ’ಯ ಮದುವೆಯದ್ದೇ ಸುದ್ದಿ; ಇವರ ಜೊತೆ ಹಸೆಮಣೆ ಏರಲಿದ್ದಾರಂತೆ ಮಿಲ್ಕಿ ಬ್ಯೂಟಿ

ಇದನ್ನೂ ಓದಿ : Mission Majnu: ಥಿಯೇಟರ್ ನಲ್ಲಿ ರಿಲೀಸ್‌ ಆಗುತ್ತಿಲ್ಲ “ಮಿಷನ್‌ ಮಜ್ನು” ಚಿತ್ರ:‌ ಬಾಲಿವುಡ್‌ ನಲ್ಲಿ ರಶ್ಮಿಕಾಗೆ ಮತ್ತೊಂದು ಹಿನ್ನಡೆ

ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿದ ಚಿತ್ರ ಕಾಂತಾರ . ಸಪ್ತಮಿ ಗೌಡ ಹಾಗೂ ನಟ ಕಿಶೋರ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಚ್ಯುತ್‌ ಕುಮಾರ್‌ ಅವರು ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್‌ ಬ್ಯಾನರ್‌ ಅಡಿಯಲ್ಲಿ ಸಿನಿಮಾ ಮೂಡಿಬಂದಿದ್ದು, ಅನೇಕ ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

Kantara OTT Release Date: Kantara movie directed by Rishabh Shetty is still in the air. Despite many controversies, Kantara has completed fifty days and is still showing high performance in some places. The collection has already crossed Rs 350 crore and is inching towards Rs 400 crore. The movie was released in many languages ​​including Kannada and received good response in all languages

Comments are closed.