Skin Tips For Ageing: ಚರ್ಮದ ಸುಕ್ಕುಗಳ ನಿವಾರಣೆಗೆ ಮನೆಯಲ್ಲೇ ಇದೆ ಪರಿಹಾರ

ವೃದ್ಧಾಪ್ಯವು( ageing) ಬದುಕಿನಲ್ಲಿ ಉಂಟಾಗುವ ಬದಲಾವಣೆಯಾಗಿದ್ದು ಅದು ಕಾಲಾನಂತರದಲ್ಲಿ ಸಂಭವಿಸುತ್ತದೆ. ಚರ್ಮವು ಅತ್ಯಂತ ಸೂಕ್ಷ್ಮ ಅಂಗವಾಗಿದೆ. ಇದು ವಯಸ್ಸಾದಂತೆ ಸುಕ್ಕುಗಟ್ಟುತ್ತದೆ. ಹಾಗಾದರೆ ನಮಗೆ ವಯಸ್ಸಾಗುವುದು ಹೇಗೆ? ವೃದ್ಧಾಪ್ಯವು ಒಂದು ಜೆನೆಟಿಕ್ಸ್ ಭಾಗ ಆಗಿದೆ. ಆದರೆ ನಾವು ಹೇಗೆ ಕಾಣುತ್ತೇವೆ ಎಂಬುದು ನಮ್ಮ ಚರ್ಮಕ್ಕೆ ನಾವು ಏನು ಮಾಡುತ್ತೇವೆ ಎಂಬುದರೊಂದಿಗೆ ಸಂಬಂಧಿಸಿದೆ(Skin Tips For Ageing).

ನಿಮ್ಮ ಜೀವನಶೈಲಿ, ನಿಮ್ಮ ಚರ್ಮದ ಆರೈಕೆ ಅಭ್ಯಾಸಗಳ ಮೇಕಪ್ ಮತ್ತು ಹಾರ್ಮೋನುಗಳ ಬದಲಾವಣೆಗಳನ್ನು ಅವಲಂಬಿಸಿ ವಯಸ್ಸಾದ ಲಕ್ಷಣಗಳು ಕಾಣಿಸುತ್ತದೆ. ಅತಿಯಾದ ಕೊಬ್ಬಿನ ಅಂಶ ಸೇವನೆ, ಟೆನ್ಷನ್ , ಡೀ ಹೈಡ್ರೇಶನ್ ಮುಂತಾದವು ಬೇಗನೆ ಚರ್ಮ ಸುಕ್ಕುಗಟ್ಟಲು ಕಾರಣ ಆಗುತ್ತವೆ. ಸರಿಯಾದ ರೀತಿಯಲ್ಲಿ ಚರ್ಮದ ಆರೈಕೆ, ಸನ್ ಸ್ಕ್ರೀನ್ ಬಳಕೆ, ನೀರು ಕುಡಿಯುವುದರಿಂದ ಚರ್ಮ ಸುಕ್ಕುಗಟ್ಟುವುದನ್ನು ತಡೆಯಬಹುದು.

ಚರ್ಮ ಸುಕ್ಕುಗಟ್ಟುವುದನ್ನು ತಡೆಯಲು ಈ ರೀತಿ ಮಾಡಿ ನೋಡಿ

ಯೋಗ ಹಾಗೂ ಧ್ಯಾನ
ದಿನಕ್ಕೆ ಕನಿಷ್ಟ ಪಕ್ಷ 20ರಿಂದ 40 ನಿಮಿಷ ಯೋಗ ಮತ್ತು ಧ್ಯಾನ ಮಾಡಬೇಕು. ಇದು ಮನಸ್ಸನ್ನು ಹತೋಟಿಗೆ ತರಲು ಸಹಾಯ ಮಾಡುತ್ತದೆ.

ವಾಕಿಂಗ್ ಅಥವಾ ವ್ಯಾಯಾಮ
ದಿನಾಲು ಒಂದೆರಡು ಕಿಲೋ ಮೀಟರ್ ಆದರೂ ವೇಗದಲ್ಲಿ ನಡೆಯಬೇಕು. ಇದು ಬೊಜ್ಜನ್ನು ಕರಗಿಸುತ್ತದೇ. ವಾಕಿಂಗ್ ಸಾಧ್ಯವಿಲ್ಲ ಎಂದಾದಲ್ಲಿ, ಸಣ್ಣ ಸಣ್ಣ ವ್ಯಾಯಾಮವನ್ನು ಮನೆಯಲ್ಲೇ ಮಾಡಬಹುದು.

ಸನ್ ಸ್ಕ್ರೀನ್ ಬಳಸಿ
ಸನ್ ಸ್ಕ್ರೀನ್ ಖರೀದಿಸುವಾಗ ಎಸ್ ಪಿ ಎಫ್ 30ಕ್ಕೂ ಹೆಚ್ಚು ಇರುವ ಸನ್ ಸ್ಕ್ರೀನ್ ಖರೀದಿಸಿ. ಪ್ರತಿ 3 ಗಂಟೆಗೊಮ್ಮೆ ಸನ್ ಸ್ಕ್ರೀನ್ ಬಲಸಬೇಕು. ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ.

ಮಾಯಿಶ್ಚರೈಸರ್
ಮಲಗುವ ಮುನ್ನ ಮಾಯಿಶ್ಚರೈಸರ್ ಅಥವಾ ನೈಟ್ ಕ್ರೀಮ್ ಬಳಸಿ. ಇದು ಚರ್ಮವನ್ನು ತೇವವಾಗಿ ಇರುವಂತೆ ನೋಡಿಕೊಳ್ಳುತ್ತದೆ. ಹಾಗೇ ಎಸೆನ್ಶಿಯಲ್ ಆಯಿಲ್ ಕೂಡ ಬಳಸಿ ನೋಡಬಹುದು. ಸೆನ್ಸಿಟಿವ್ ಸ್ಕಿನ್ ಇರುವವರು ತೆಂಗಿನ ಎಣ್ಣೆ ಹಚ್ಚುವುದು ಉತ್ತಮ.

ವಿಟಮಿನ್ ಆಹಾರ
ಆಹಾರ ಸೇವಿಸುವಾಗ ಸಾಕಷ್ಟು ವಿಟಮಿನ್ ಇರುವಂತೆ ನೋಡಿಕೊಳ್ಳಿ. ಆಹಾರದಲ್ಲಿ ತರಕಾರಿ, ಹಣ್ಣು, ಡ್ರೈ ಫ್ರೂಟ್ಸ್ , ಹಾಲು , ಸೊಪ್ಪುಗಳನ್ನು ಸೇರಿಸಿ.ಇದು ಮೂಳೆ, ಚರ್ಮ ಹಾಗೂ ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ ಆಗಿವೆ.

ಇದನ್ನೂ ಓದಿ: Periods Pain: ಋತುಚಕ್ರದ ನೋವಿಗೆ ಮನೆಯಲ್ಲೇ ಸರಳ ವಿಧಾನಗಳನ್ನು ಮಾಡಿನೋಡಿ

Copper Vessel Benefits: ತಾಮ್ರದ ಪಾತ್ರೆಯ ಬಹುಪಯೋಗಿ ಗುಣಗಳೇನು ಗೊತ್ತ?
( Skin tips for ageing)

Comments are closed.