ಡ್ಯಾನ್ಸ್ ಕಿಂಗ್ ಜೊತೆ ಹ್ಯಾಟ್ರಿಕ್ ಹೀರೋ : ಶಿವರಾಜ್‌ ಕುಮಾರ್‌, ಪ್ರಭುದೇವ, ಯೋಗರಾಜ್‌ ಭಟ್ರ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ಬಹುತೇಕ ಮೌನಕ್ಕೆ ಜಾರಿದ್ದ ಶಿವಣ್ಣ ಬದುಕಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡಂತಿದ್ದರು. ಆದರೆ ಈಗ ಪುನೀತ್ ನೆನಪುಗಳ ಜೊತೆಯೇ ಮತ್ತೆ ಅಖಾಡಕ್ಕೆ ಇಳಿದಿದ್ದು, ಒಂದೊಂದೆ ಸಿನಿಮಾ ಘೋಷಿಸುವ ಮೂಲಕ ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತೆ ತೆರೆ ಮೇಲೆ ಮಿಂಚಲು ಸಿದ್ಧವಾಗಿದ್ದಾರೆ. ಪತ್ನಿ ಗೀತಾ ಶಿವರಾಜ್ ಕುಮಾರ್ ಹುಟ್ಟುಹಬ್ಬದ ಖುಷಿಯಲ್ಲಿ ವೇದ ಸಿನಿಮಾ ಘೋಷಿಸಿದ ಶಿವಣ್ಣ ಈಗ ಭಟ್ಟರ ಗರಡಿ ಸೇರಿದ್ದಾರೆ. ಹೌದು ಇದೇ ಮೊದಲ ಬಾರಿಗೆ ಶಿವಣ್ಣ ಹಾಗೂ ಯೋಗರಾಜ್ ಭಟ್ಟರು ಒಂದಾಗುತ್ತಿದ್ದು, ತೆರೆ ಮೇಲೆ ಹೇಗೆ ಮೋಡಿ ಮಾಡಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ. ಬೆಂಗಳೂರಿನ ರಾಕ್ ಲೈನ್ ಸ್ಟುಡಿಯೋದಲ್ಲಿ ಗುರುವಾರ ಸರಳವಾಗಿ ಶಿವಣ್ಣನಿಗೆ ಯೋಗ್ ರಾಜ್ ಭಟ್ಟರು ಡೈರೈಕ್ಟ್ ಮಾಡ್ತಿರೋ ಇನ್ನು ಹೆಸರಿಡದ ಸಿನಿಮಾದ ಮುಹೂರ್ತ ನೆರವೇರಿತು. ಇನ್ನು ಈ ಸಿನಿಮಾದ ಇನ್ನೊಂದು ವಿಶೇಷತೆ ಎಂದರೇ ಈ ಸಿನಿಮಾದಲ್ಲಿ ಶಿವಣ್ಣನ ಜೊತೆ ಡ್ಯಾನ್ಸ್ ಕಿಂಗ್ ಪ್ರಭುದೇವ (Shivaraj Kumar Prabhu Deva) ಕೂಡ ಬಣ್ಣ ಹಚ್ಚಲಿದ್ದಾರೆ.

ಶಿವಣ್ಣನ ಜೊತೆ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಲಿರುವ ಇಂಡಿಯನ್ ಡ್ಯಾನ್ಸ್ ಕಿಂಗ್ ಪ್ರಭುದೇವ ಕೂಡ ಇಂದು ಮುಹೂರ್ತದಲ್ಲಿ ಹಾಜರಿದ್ದರು. ಶಿವಣ್ಣ ಮತ್ತು ಭಟ್ಟರು ಸೇರಿರೋ ಈ ಸಿನಿಮಾ ಬಹುಭಾಷೆಯಲ್ಲಿ ನಿರ್ಮಾಣವಾಗ್ತಿದೆ. ಇದಕ್ಕೆ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ಇದು ರಾಕ್ ಲೈನ್ ವೆಂಕಟೇಶ್ ಬ್ಯಾನರ್ ನಲ್ಲಿ ಮೂಡಿ ಬರ್ತಿರುವ 47ನೇ ಚಿತ್ರವಾಗಿದ್ದು ಸಿನಿಮಾದಲ್ಲಿ ದಿಗ್ಗಜರ ಸಮಾಗಮವಿದೆ.

ಈ ಅಕ್ಷನ,ಎಮೋಷನ್ ,ಸಂಗೀತಮಯ ಚಿತ್ರಕ್ಕೆ ಹರಿಕೃಷ್ಣ ಮ್ಯೂಸಿಕ್ ನೀಡಲಿದ್ದು, ಜುಲೈ ಅಂತ್ಯ ಅಥವಾ ಅಗಸ್ಟ್ ಆರಂಭದಲ್ಲಿ ಭಟ್ಟರ ತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ. ಇನ್ನು ಸಿನಿಮಾವನ್ನು ಇದೇ ವರ್ಷ ತೆರೆಗೆ ತರಲು ಸಿದ್ಧತೆ ನಡೆದಿದ್ದು, ಪ್ರೇಕ್ಷಕರಿಗೆ ಮನೋರಂಜನೆಯ ಮಹಾಪೂರವೇ ಈ ಸಿನಿಮಾದಲ್ಲಿದೆ ಎಂದು ರಾಕ್ ಲೈನ್ ವೆಂಕಟೇಶ್ ಮಾಹಿತಿ ನೀಡಿದ್ದಾರೆ.

ಈ ಸಿನಿಮಾದ ಇನ್ನೊಂದು ವಿಶೇಷ ಎಂದರೇ ಈ ಸಿನಿಮಾದಲ್ಲಿ ಸಂಗೀತ ಹಾಗೂ ನೃತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅದರಲ್ಲೂ ಶಿವಣ್ಣ ಸಖತ್ ಡ್ಯಾನ್ಸ್ ಮಾಡಿ ರಂಜಿಸಲಿದ್ದಾರೆ ಎನ್ನಲಾಗಿದೆ. ಅದರಲ್ಲೂ ಪ್ರಭುದೇವ ಕೂಡ ಸಿನಿಮಾದಲ್ಲಿ ನಟಿಸ್ತಾ ಇರೋದರಿಂದ ಡ್ಯಾನ್ಸ್ ಪ್ರಿಯರಿಗೆ ಈ ಸಿನಿಮಾ ಭೂರಿಭೋಜನ ಬಡಿಸೋದು ಫಿಕ್ಸ್. ಇನ್ನು H2O ಚಿತ್ರದ ನಂತ್ರ ಪೂರ್ತಿ ಪ್ರಮಾಣದಲ್ಲಿ ಕನ್ನಡಕ್ಕೆ ಮತ್ತೆ ಕಂಬ್ಯಾಕ್ ಮಾಡ್ತಿರುವ ಪ್ರಭುದೇವ ಮತ್ತೊಂದು ಬ್ರೇಕ್ ನೀರಿಕ್ಷಿಸುತ್ತಿದ್ದಾರೆ ಎಂದರೇ ತಪ್ಪಿಲ್ಲ.

ಇದನ್ನೂ ಓದಿ : Chakda Xpress : ಸಿನಿಮಾಕ್ಕೆ ಮತ್ತೆ ಮರಳಿದ ಅನುಷ್ಕ ಶರ್ಮ

ಇದನ್ನೂ ಓದಿ : Tootu Madike : ‘ತೂತು ಮಡಿಕೆ’ ಟ್ರೇಲರ್ ರಿಲೀಸ್ : ಜುಲೈ 8ರಂದು ತೆರೆಗೆ ಬರ್ತಿದೆ ಸಿನಿಮಾ

New Kannada film by Shivaraj Kumar Prabhu Deva and Yogaraj Bhatt

Comments are closed.