Spectacle Marks : ನಿಮಗೆ ಸ್ಪೆಕ್ಟ್ಸ್‌ ಹಾಕಿ ಮೂಗಿನ ಮೇಲೆ ಮಾರ್ಕ್‌ ಆಗಿದೆಯೇ? ಮಾರ್ಕ್‌ ಹೋಗಲಾಡಿಸಲು ಹೀಗೆ ಮಾಡಿ

ಇತ್ತೀಚೆಗೆ ಸ್ಪೆಕ್ಸ್‌ (Specs) ಹಾಕುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಕಾರಣ ಹೆಚ್ಚಾದ ಸ್ಕ್ರೀನ್‌ ಟೈಮ್‌ (Screen Time). ಗಂಟೆಗಟ್ಟಲೇ ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಮೊಬೈಲ್‌, ಟಿವಿ ನೋಡುವುದರಿಂದ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಅದಕ್ಕಾಗಿ ಸ್ಪೆಕ್ಸ್‌ಗಳನ್ನು ಹಾಕಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಇದರಲ್ಲಿ ಮಕ್ಕಳು, ದೊಡ್ಡವರು ಅನ್ನುವ ಪ್ರಶ್ನೆಯೇ ಇಲ್ಲ. ಎಲ್ಲರೂ ಸ್ಪೆಕ್ಟ್ಸ್‌ ಹಾಕಿಕೊಳ್ಳುವುದನ್ನು ಕಾಣುತ್ತೇವೆ. ಹಾಗೆ ದಿನವಿಡೀ ಸ್ಪೆಕ್ಸ್‌ ಹಾಕುವುದರಿಂದ ಕಣ್ಣಿನ ಸುತ್ತ ಮತ್ತು ಮೂಗಿನ ಮೇಲೆ ಕಲೆಗಳಾಗುತ್ತದೆ (Spectacle Marks). ಆ ಕಲೆಗಳು ಮುಖದ ಅಂದವನ್ನೇ ಕೆಡಿಸುತ್ತದೆ. ಹಾಗಾಗಿ, ಕಲೆಗಳನ್ನು ಹೋಗಲಾಡಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಅನೇಕ ಕ್ರಿಮ್‌ಗಳನ್ನು ಹಚ್ಚಿಕೊಳ್ಳುವವರೂ ಇದ್ದಾರೆ. ಆದರೆ ಅದರಿಂದ ಬೇರೆ ಯಾವುದೋ ಸಮಸ್ಯೆ ಎದುರಾಗಬಹುದು. ಅದಕ್ಕಾಗಿ ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ಕಲೆಯನ್ನು ನಿವಾರಿಸಿಕೊಳ್ಳಬಹುದು.

ದಿನವಿಡೀ ಸ್ಪೆಕ್ಸ್‌ ಹಾಕಿ ಉಂಟಾಗುವ ಕಲೆಯನ್ನು ಹೋಗಲಾಡಿಸುವ ಮನೆಮದ್ದುಗಳು :

ಸವತೆಕಾಯಿ:
ಸಾಮಾನ್ಯವಾಗಿ ಕಣ್ಣಿನ ಸುತ್ತ ಆಗುವ ಡಾರ್ಕ್‌ ಸರ್ಕಲ್‌ಗಳಿಗೆ ಸವತೆಕಾಯಿ ಬಳಸುವುದನ್ನು ನೋಡಿರಬಹುದು. ಅದೇ ರೀತಿ ಸ್ಪೆಕ್ಸ್‌ನಿಂದಾದ ಕೆಲೆ ನಿವಾರಣೆಗೂ ಇದರ ರಸ ಬಳಸಲಾಗುತ್ತದೆ. ತಾಜಾ ಸೌತೆಕಾಯಿಯಿಂದ ರಸ ತೆಗೆಯಿರಿ. ಅದನ್ನು ಸ್ವಲ್ಪ ಹೊತ್ತು ಫ್ರಿಡ್ಜ್‌ ನಲ್ಲಿಡಿ. ನಂತರ ರಸವನ್ನು ಕಲೆ ಇರುವ ಜಾಗದಲ್ಲಿ ಲೇಪಿಸಿ. ವಾರದಲ್ಲಿ ನಾಲ್ಕು ದಿನ ಹೀಗೆ ಮಾಡಿ ಕ್ರಮೇಣ ಕಲೆಗಳು ಮಾಯವಾಗುತ್ತದೆ.

ಅಲೋವೆರಾ:
ಅಲೋವೆರಾ ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಅದಕ್ಕಾಗಿ ಅಲೋವೆರಾ ಜೆಲ್‌ ಅನ್ನು ಸಹ ಕಲೆಗಳ ನಿವಾರಣೆಗೆ ಬಳಸಲಾಗುತ್ತದೆ. ಅಲೋವೆರಾ ಜೆಲ್‌ ಅನ್ನು ಕಲೆ ಇರುವ ಜಾಗದಲ್ಲಿ ಹಚ್ಚಿ ಸ್ವಲ್ಪ ಸಮಯದ ನಂತರ ನೀರಿನಿಂದ ತೊಳೆಯಿರಿ. ರಾತ್ರಿಯಲ್ಲಿ ಅಲೋವೆರಾ ಜೆಲ್‌ ಅನ್ನು ಹಚ್ಚಿಕೊಳ್ಳುವುದರಿಂದ ಬಹಳ ಬೇಗನೆ ಪ್ರಯೋಜನಗಳನ್ನು ಪಡೆದುಕೋಳ್ಳಬಹುದು.

ಬಾದಾಮಿ ಎಣ್ಣೆ :
ಸ್ಪೆಕ್ಸ್‌ನಿಂದ ಉಂಟಾದ ಕಲೆಗಳನ್ನು ಹೋಗಲಾಡಿಸಲು ನೀವು ಬಾದಾಮಿ ಎಣ್ಣೆಯು ಉತ್ತಮವಾಗಿದೆ. ರಾತ್ರಿ ಮಲಗುವಾಗ ಈ ಎಣ್ಣೆಯನ್ನು ಕೆಲೆಗಳಿರುವ ಜಾಗದಲ್ಲಿ ಹಚ್ಚಿದರೆ ಉತ್ತಮ ಪರಿಣಾಮ ಬೀರುವುದು.

ಲಿಂಬು :
ನಮಗೆಲ್ಲರಿಗೂ ತಿಳಿದಿರುವಂತೆ ಲಿಂಬು ರಸವು ಕಲೆಗಳನ್ನು ಯಶಸ್ವಿಯಾಗಿ ತೆಗೆದು ಹಾಕಲು ಸಹಾಯ ಮಾಡುತ್ತದೆ. ನಿಂಬೆ ರಸವನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಮತ್ತು ಹತ್ತಿಯ ಸಹಾಯದಿಂದ ಕಲೆ ಇರುವ ಜಾಗಕ್ಕೆ ಹಚ್ಚಿ, ಸ್ವಲ್ಪ ಸಮಯದ ನಂತರ ತಣ್ಣೀರಿನಿಂದ ತೊಳೆಯಿರಿ. ಪ್ರತಿದಿನ ಹೀಗೆ ಮಾಡುವುದರಿಂದ ಕಲೆ ಕ್ರಮೇಣ ಮಾಯವಾಗುತ್ತದೆ.

ಆಲೂಗಡ್ಡೆಯ ರಸ :
ಆಲೂಗಡ್ಡೆಯ ರಸವೂ ಕಲೆ ದೂರಮಾಡಲು ಸಹಕಾರಿಯಾಗಿದೆ. ಹಸಿ ಆಲೂಗಡ್ಡೆಯನ್ನು ತೆಗೆದುಕೊಳ್ಳಿ, ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಮಿಕ್ಸರ್‌ ಜಾರ್‌ಗೆ ಹಾಕಿ, ಸ್ವಲ್ಪ ನೀರು ಸೇರಿಸಿ, ನುಣ್ಣಗೆ ರುಬ್ಬಿ ಕೊಳ್ಳಿ. ಆ ರಸವನ್ನು ಕಲೆಯಾದ ಜಾಗದಲ್ಲಿ ಹಚ್ಚಿಕೊಳ್ಳಿ. ಆಲೂಗಡ್ಡೆ ಬ್ಲೀಚಿಂಗ್‌ ಗುಣವನ್ನು ಹೊಂದಿದೆ. ಹಾಗಾಗಿ ಇದು ಕಲೆಗಳನ್ನು ನಿವಾರಿಸಬಲ್ಲದು.

ಇದನ್ನೂ ಓದಿ : Home Remedies For Dandruff : ಚಳಿಗಾಲದ ಡಾಂಡ್ರಫ್‌ ಸಮಸ್ಯೆಗೆ ಮನೆಮದ್ದುಗಳೇ ಉತ್ತಮ ಪರಿಹಾರ

ಇದನ್ನೂ ಓದಿ : Hair Care Tips : ಕೂದಲ ಸಮಸ್ಯೆಗಳಿಗೆ ತೆಂಗಿನ ಎಣ್ಣೆಯ ಮಾಸ್ಕ್ ; ಇವುಗಳನ್ನ ಬಳಸಿದ್ರೆ ನಿಮ್ಮ ಕೂದಲೂ ದಟ್ಟವಾಗಿ ಬೆಳೆಯುತ್ತೆ.

(Spectacle Marks on nose due to wearing glasses. Try these home remedies)

Comments are closed.