ಧ್ರುವ 369 ಚಿತ್ರೀಕರಣ ಶ್ರೀಘ್ರದಲ್ಲೇ ಮುಕ್ತಾಯ

ನಟ ರಾಘ್ರವೇಂದ್ರ ರಾಜಕುಮಾರ್‌ ಅನಾರೋಗ್ಯ ಕಾರಣದಿಂದ ಒಂದಷ್ಟು ವರ್ಷ ಸಿನಿರಂಗದಿಂದ ದೂರ ಉಳಿದಿದ್ದರು. ಸದ್ಯ ನಟ ರಾಘ್ರವೇಂದ್ರ ರಾಜಕುಮಾರ್‌ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಪುನಃ ನಟನೆಯಲ್ಲಿ ಸಕ್ರಿಯಗೊಂಡಿದ್ದಾರೆ. ಇದೀಗ ನಿರ್ದೇಶಕ ಶಂಕರ್‌ ನಾಗ ಅವರ ಮುಂಬರುವ ಧ್ರುವ 369 ಸಿನಿಮಾದಲ್ಲಿ (Dhruva 369 Movie) ಮೊದಲ ಭಾರಿಗೆ ರಾಜ್ಯಪಾಲರಾಗಿ ನಟ ರಾಘ್ರವೇಂದ್ರ ರಾಜಕುಮಾರ್‌ ನಟಿಸಿದ್ದಾರೆ. ಈ ಸಿನಿಮಾದಲ್ಲಿ ರಾಜ್ಯಪಾಲರ ಪಾತ್ರವು ಚಿತ್ರಕಥೆಗೆ ಆಧಾರವಾಗಿದ್ದು, ಅದು ಸಿನಿಮಾದ ಮೂಲಕ ಬಲವಾದ ಪರಿಣಾಮವನ್ನು ಬೀರುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಗಿದ್ದು, ಇನ್ನು ಎರಡು ಹಾಡಿನ ಚಿತ್ರೀಕರಣ ಬಾಕಿ ಇದೆ ಎಂದು ಸಿನಿತಂಡ ಹೇಳಿದೆ.

ಖಾಸಗಿ ಇಂಜನಿಯರಿಂಗ್‌ ಕಾಲೇಜಿನಲ್ಲಿ ಚಿತ್ರೀಕರಿಸಿದ ಕ್ಲೈಮ್ಯಾಕ್ಸ್‌ ಸೀನ್‌ನ್ನು ನಟ ರಾಘವೇಂದ್ರ ರಾಜ್‌ಕುಮಾರ್‌ ಎರಡು ದಿನಗಳ ಕಾಲ ಚಿತ್ರೀಕರಿಸಿದ್ದಾರೆ. ಸಿನಿಮಾ ಚಿತ್ರೀಕರಣದ ನಂತರ, ರಾಘವೇಂದ್ರ ರಾಜ್‌ಕುಮಾರ್‌ ಮಾಧ್ಯಮದವರೊಂದಿಗೆ ಮಾತನಾಡಿ, “ಮೊದಲ ಬಾರಿಗೆ ಇಂತಹ ಪಾತ್ರವನ್ನು ನಿರ್ವಹಿಸುತ್ತಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ಕಥೆಯು ಧ್ರುವ ನಕ್ಷತ್ರದ ಸುತ್ತ ಸುತ್ತತ್ತದೆ. ಈ ಸಿನಿಮಾ ಕಥೆ ಪುರಾಣ ಮತ್ತು ಇಂದಿನ ಖಗೋಳಶಾಸ್ತ್ರವನ್ನು ಒಳಗೊಂಡಿದೆ.

ಇದನ್ನೂ ಓದಿ : ಕುರುಡು ಕಾಂಚಾಣ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಡಬ್ಬಿಂಗ್‌ ಕಲಾವಿದೆ ಅಮೂಲ್ಯ ಗೌಡ

ಇದನ್ನೂ ಓದಿ : ನಟ ದರ್ಶನ್‌ ಜೊತೆ ನಟಿಸುವುದು ವಿಶೇಷ ಎಂದ ಬಹುಭಾಷಾ ನಟ ತರುಣ್‌ ರಾಜ್‌ ಅರೋರಾ

ಇದನ್ನೂ ಓದಿ : ನಟ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬಕ್ಕೆ “ಗಂಧದಗುಡಿ” ಸಿನಿಮಾ ರೀ ರಿಲೀಸ್‌

ಧ್ರುವ 369 ಸಿನಮಾದಲ್ಲಿ ರಮೇಶ್‌ ಭಟ್‌, ಅತಿಶ್‌ ಶೆಟ್ಟಿ, ಚಂದನ, ನಮಿತಾ, ಸಂದೀಪ್‌ ಮಲಾನಿ, ಮೇಘಾ ಗೌಡ, ಭಾಸ್ಕರ್‌ ಮಣಿಪಾಲು ಮುಂತಾದವರು ವಿವಿಧ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅಚಿಂತ್ಯ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಗ್ರಾಫಿಕ್ ಡಿಸೈನರ್ ಮತ್ತು ಉದ್ಯಮಿ ಮಂಗಳೂರಿನ ಶ್ರೀಕೃಷ್ಣ ಕಂಠಿಲ ನಿರ್ಮಿಸುತ್ತಿದ್ದಾರೆ. ಮಂಗಳೂರು, ಉಡುಪಿ, ಮುರುಡೇಶ್ವರ, ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದಂತಹ ಸ್ಥಳಗಳಲ್ಲಿ ಧ್ರುವ 369 ಅನ್ನು ನಿರ್ಮಾಪಕರು ಚಿತ್ರಿಸಿದ್ದಾರೆ. ಈ ಸಿನಿಮಾಕ್ಕೆ ಸತೀಶ್ ಬಾಬು ಸಂಗೀತವಿದ್ದು, ಮಹಾಬಲ ಅವರ ಛಾಯಾಗ್ರಹಣವಿದೆ. ಸದ್ಯ ಸಿನಿಮಾದ ಎರಡು ಹಾಡಿನ ಸೀಕ್ವೆನ್ಸ್‌ಗಳ ಚಿತ್ರೀಕರಣ ಬಾಕಿಯಿದ್ದು, ಧ್ರುವ 369 ರ ನಿರ್ಮಾಪಕರು ಅದನ್ನು ಶೀಘ್ರವಾಗಿ ಮುಗಿಸಲು ಯೋಜಿಸುತ್ತಿದ್ದಾರೆ.

Actor Raghavendra Rajkumar is playing the role of the Governor for the first time in director Shankar Naga’s upcoming Dhruva 369 Movie.

Comments are closed.