cream : ಚರ್ಮದ ಸುಕ್ಕನ್ನು ಕಡಿಮೆ ಮಾಡುತ್ತೆ ಈ ಕ್ರೀಮ್‌

cream reduces skin wrinkles : ವಯಸ್ಸಾಗುತ್ತಿದ್ದಂತೆ ಮುಖದಲ್ಲಿ ಸಾಮಾನ್ಯವಾಗಿ ವಯೋ ಸಹಜ ಗುರುತುಗಳು ಕಾಣಿಸಿಕೊಳ್ಳುತ್ತವೆ. ಮುಖ ಸುಕ್ಕು ಗಟ್ಟುವುದು, ನೆರಿಗೆ ಬೀಳುವುದು ಸರ್ವೆ ಸಾಮಾನ್ಯ. ಕೆಲವೊಮ್ಮೆ ಎಷ್ಟೇ ಮೇಕಪ್‌ ಮಾಡಿದ್ರೂ ಕೂಡ ಇಂತಹ ಗುರುತುಗಳನ್ನು ಅಡಗಿಸುವುದು ಅಸಾಧ್ಯ. ಇಂತಹ ಗುರುತುಗಳನ್ನು ಕಡಿಮೆ ಮಾಡಲು ನೀವೇ ಮನೆಯಲ್ಲಿ ಕ್ರೀಮ್ ತಯಾರಿಸಬಹುದು.‌ ಹಾಗಾದ್ರೆ ಈ ಕ್ರಿಮ್‌ ನ್ನು ತಯಾರಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಕ್ರೀಮ್‌ ತಯಾರಿಸಲು (cream reduces skin wrinkles) ಬೇಕಾಗುವ ಸಾಮಾಗ್ರಿ

ಕಾನ್ ಪ್ಲೋರ್‌
ಅಲವೇರಾ
ಅಗಸೆ ಬೀಜದ ಪುಡಿ

ಸಣ್ಣ ಕಡಾಯಿಯಲ್ಲಿ ಅಲವೇರಾ ಲೊಳೆ, ಕಾನ್‌ ಪ್ಲೋರ್‌, ಅಗಸೆ ಬೀಜ ಪುಡಿಯನ್ನು ಹಾಕಿ ಚೆನ್ನಾಗಿ ದಪ್ಪ ಹದ ಬರುವವರೆಗೂ ಸೌಂಟನ್ನು ಆಡಿಸಬೇಕು. ಅದು ದಪ್ಪ ಹದಕ್ಕೆ ಬಂದ ನಂತರ ಬಿಸಿ ಆರಿದ ಮೇಲೆ ಒಂದು ಡಬ್ಬಿಯಲ್ಲಿ ಆ ಕ್ರಿಮ್‌ ಅನ್ನು ಶೇಖರಿಸಿ ಇಡಬೇಕು. ಪ್ರತಿದಿನ ಚರ್ಮದ ಭಾಗಕ್ಕೆ ಹಚ್ಚುತ್ತಾ ಬಂದರೆ ಸುಕ್ಕು ಕಟ್ಟುವುದು ಕಡಿಮೆಯಾಗುತ್ತದೆ. ಇದರ ಜೊತೆಗೆ ಚರ್ಮದ ಕಾಯಿಲೆಗಳು ಕಡಿಮೆಯಾಗುತ್ತದೆ. ಹುಣ್ಣು ಆದರೆ ಅದಕ್ಕೂ ಕೂಡ ಹಚ್ಚಬಹುದು.

ಆಲೋವೆರಾ
ಆಲೋವೆರಾ ಸಾಮಾನ್ಯವಾಗಿ ಎಲ್ಲಾ ಔಷಧಿಗಳ ತಯಾರಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರೆ ತಪ್ಪಾಗಲಾರದು. ಇದರ ಸಿಪ್ಪೆ ತೆಗೆದು ಅದರೊಳಗಿರುವುದನ್ನು ಮಿಕ್ಸಿಗೆ ಹಾಕಿ ನಂತರ ನೀರಿಗೆ ಹಾಕಿ ಕುಡಿದರೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಇದನ್ನೂ ಓದಿ:Deepika Padukone : ದೀಪಿಕಾ ಪಡುಕೋಣೆ ರಣವೀರ್‌ ಸಿಂಗ್‌ ದಾಂಪತ್ಯದಲ್ಲಿ ಬಿರುಕು : ಪ್ಯಾನ್ಸ್‌ಗಳ ಆತಂಕಕ್ಕೆ ಕಾರಣವಾಯ್ತು ಆ ಒಂದು ಟ್ವೀಟ್

ಇದನ್ನೂ ಓದಿ: Buddha Caves:ಹುಲಿ ಸಂರಕ್ಷಿತ ಪ್ರದೇಶದಲ್ಲಿ 26 ಬೌದ್ದ ಗುಹೆ ಪತ್ತೆ

ಇದನ್ನೂ ಓದಿ:World Heart Day : ಇಂದು ವಿಶ್ವ ಹೃದಯ ದಿನಾಚರಣೆ : ನಿಮಗೂ ಇರಲಿ ಹೃದಯದ ಕಾಳಜಿ

ಕಾನ್‌ ಪ್ಲೋರ್‌
ಕಾನ್‌ ಪ್ಲೋರ್‌ ಮುಖದಲ್ಲಿರುವ ಕಪ್ಪು ಕಲೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಕ್ರೀಮ್‌ ದಪ್ಪ ಹದಕ್ಕೆ ಬರುವಂತೆ ನೋಡಿಕೊಳ್ಳಬೇಕು. ಕಾನ್‌ಪ್ಲೋರ್‌ ಕ್ರೀಮ್‌ ಮುಖದ ಸೌಂದರ್ಯ ಹೆಚ್ಚಿಸಲು ಸಹಕಾರಿಯಾಗಿದೆ. ಕಾನ್‌ಪ್ಲೋರ್‌ ಬಳಸಿ ಕ್ರೀಮ್‌ ತಯಾರಿಸಿಕೊಳ್ಳಬಹುದಾಗಿದೆ.

This cream reduces skin wrinkles

Comments are closed.