Glowing Skin: ಬೇಸಿಗೆಯಲ್ಲಿ ಗ್ಲೋಯಿಂಗ್‌ ಸ್ಕಿನ್‌ಗಾಗಿ ಹೀಗಿರಿಲಿ ನಿಮ್ಮ ಜೀವನಶೈಲಿ

ಹೊಳೆಯುವ, ಸುಂದರವಾದ, ಆಕರ್ಷಕ ತ್ವಚೆಗಾಗಿ ಏನೆಲ್ಲಾ ಕಸರತ್ತು ಮಾಡುತ್ತಾರೆ. ನಿಯಮಿತವಾಗಿ ಪಾರ್ಲರ್‌ಗಳಿಗೆ ಭೇಟಿ ನೀಡುವುದು, ದುಬಾರಿ ಬೆಲೆಯ ಕ್ರೀಮ್‌ಗಳನ್ನು ಹಚ್ಚಿಕೊಳ್ಳುವುದನ್ನು ಮಾಡುತ್ತಾರೆ. ಆದರೂ ಹೊಳೆಯುವ ತ್ವಚೆ ಕನಸಾಗಿಯೇ ಉಳಿಯುತ್ತದೆ. ನೈಸರ್ಗಿಕವಾಗಿ ಹೊಳೆಯುವ ತ್ವಚೆಗೆ (Glowing Skin) ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ. ಅದು ದೀರ್ಘಕಾಲದವರೆಗೆ ಪರಿಣಾಮವನ್ನು ನೀಡುತ್ತದೆ. ಸೆಲೆಬ್ರಿಟಿಗಳಂತೆ ಹೊಳೆಯುವ ಸ್ಕಿನ್‌ ಪಡೆದುಕೊಳ್ಳಬಹುದಾಗಿದೆ. ಒಟ್ಟಾರೆ ಆರೋಗ್ಯ ಮತ್ತು ಹೊಳೆಯುವ ತ್ವಚೆಗಾಗಿ ನಿಮ್ಮ ದೈನಂದಿನ ಜೀವನಶೈಲಿಯನ್ನು (Lifestyle) ಹೇಗೆ ಅಳವಡಿಸಿಕೊಳ್ಳಬೇಕು ಇಲ್ಲಿದೆ ಓದಿ.

  1. ದೇಹವನ್ನು ಹೈಡ್ರೇಟ್‌ ಆಗಿರಿಸಿ :
    ಹೊಳೆಯು ಚರ್ಮದ ರಹಸ್ಯವೆಂದರೆ ದೇಹವನ್ನು ಹೈಡ್ರೇಟ್‌ ಆಗಿ ಇರಿಸುವುದು. ಅದಕ್ಕಾಗಿ ದಿನವೊಂದಕ್ಕೆ ಕನಿಷ್ಠ 3 ಲೀಟರ್‌ ನೀರು ಕುಡಿಯುವುದು ಅವಶ್ಯಕ. ಜೊತೆಗೆ ಚರ್ಮವನ್ನು ಮೇಲಿನಿಂದ ಹೈಡ್ರೀಕರಿಸುವುದು ಅವಶ್ಯಕವಾಗಿದೆ. ಅದಕ್ಕಾಗಿ ಬಾಡಿ ಲೋಷನ್‌, ಎಣ್ಣೆ ಮಸಾಜ್‌ ಮಾಡಿಕೊಳ್ಳಿ. ಬೇಸಿಗೆಯಲ್ಲಿ ಬಿಸಿ ನೀರಿನಿ ಸ್ನಾನದ ಬದಲು ಉಗುರುಬೆಚ್ಚಗಿನ ನೀರಿನ ಸ್ನಾನ ಉತ್ತಮ.
  1. ಬ್ಯೂಟಿ ಸ್ಲೀಪ್‌ :
    ಸುಂದರವಾಗಿ ಕಾಣಲು ಬ್ಯೂಟಿ ಸ್ಲೀಪ್ ತುಂಬಾ ಮುಖ್ಯ ಎನ್ನುವುದನ್ನು ನೀವು ಕೇಳಿರಬಹುದು ಮತ್ತು ಓದಿರಬಹುದು. ಹಾಗಾಗಿ ಪ್ರತಿದಿನ 7 ರಿಂದ 8 ಗಂಟೆಗಳ ನಿದ್ದೆ ಅಗತ್ಯ. ಜೊತೆಗೆ ದಿನಕ್ಕೆ 15 ರಿಂದ 20 ನಿಮಿಷಗಳ ಪವರ್‌ ಸ್ಲೀಪ್‌ ಮಾಡುವುದರಿಂದ ತ್ವಚೆಯು ರಿಫ್ರೆಶ್ ಆಗುತ್ತದೆ. ಅದಕ್ಕಾಗಿಯೇ ಬಹಳ ಸುಸ್ತನ್ನು, ನಿಶ್ಯಕ್ತಿಯ ಅನುಭವವಾದಾಗ, ಖಂಡಿತವಾಗಿಯೂ 15 ರಿಂದ 20 ನಿಮಿಷಗಳ ಕಾಲ ಮಲಗಿಕೊಳ್ಳಿ.
  2. ಕೇಸರಿ ನೀರು :
    ಕೇಸರಿ ದಳಗಳನ್ನು ರಾತ್ರಿ ಒಂದು ಲೋಟ ನೀರಿನಲ್ಲಿ ನೆನೆಸಿ. ಸುಮಾರು 6 ರಿಂದ 8 ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ಬೆಳಿಗ್ಗೆ ಎದ್ದು ಮೊದಲು ಈ ನೀರನ್ನು ಕುಡಿಯಿರಿ. ಈ ನೀರು ಚರ್ಮಕ್ಕೆ ಟಾನಿಕ್ ನಂತೆಯೇ ಕಾರ್ಯನಿರ್ವಹಿಸುತ್ತದೆ. ಸಂಪೂರ್ಣ ಆರೋಗ್ಯವನ್ನು ಸುಧಾರಿಸುತ್ತದೆ.
  3. ಉತ್ತಮ ರಕ್ತಪರಿಚಲನೆಗಾಗಿ ವಾಕ್‌ ಮಾಡಿ :
    ಪ್ರತಿದಿನ ನಡೆಯುವುದರಿಂದ ದೇಹದ ರಕ್ತ ಪರಿಚಲನೆಯು ಸರಾಗವಾಗಿ ನಡೆಯುತ್ತದೆ. ಆ ಕಾರಣದಿಂದಾಗಿ ಆಮ್ಲಜನಕದ ಮಟ್ಟವು ದೇಹದಲ್ಲಿ ಉಳಿಯುತ್ತದೆ. ಇದು ಹೊಸ ಚರ್ಮದ ಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರಿಂದಾಗಿ ಚರ್ಮವು ಹೊಳೆಯುತ್ತದೆ.
  4. ಹಣ್ಣುಗಳನ್ನು ತಿನ್ನಿ :
    ಹಣ್ಣುಗಳನ್ನು ಶಕ್ತಿಯ ಸಂಚಯಗಳು ಎಂದು ಕರೆಯಲಾಗುತ್ತದೆ. ಬಾಳೆಹಣ್ಣು, ಕಿತ್ತಳೆ, ಕಲ್ಲಂಗಡಿ ಹಣ್ಣು ಮುಂತಾದವುಗಳು ದೇಹಕ್ಕೆ ಬಿಸಿಲಿನಿಂದ ಕಳೆದುಕೊಂಡ ಶಕ್ತಿಯನ್ನು ಮರುಪೂರೈಕೆ ಮಾಡುತ್ತವೆ. ಸಿಟ್ರಿಕ್‌ ಅಂಶವಿರುವ ಹಣ್ಣುಗಳು ಚರ್ಮ ಮತ್ತು ದೃಷ್ಟಿಗೆ ಉತ್ತಮವಾಗಿದೆ. ಪ್ರತಿ ದಿನ ಯಾವುದಾದರು ಒಂದು ಹಣ್ಣನ್ನು ಖಂಡಿತ ಸೇವಿಸಿ.

ಇದನ್ನೂ ಓದಿ : Rose Petals Face pack:ಮುಖ ಅಂದವಾಗಿಸಲು ಇಲ್ಲಿದೆ ಗುಲಾಬಿ ಎಸಳಿನ ಫೇಸ್‌ ಪ್ಯಾಕ್‌

ಇದನ್ನೂ ಓದಿ : Best Summer Dresses : ಬೇಸಿಗೆ ಕಾಲದಲ್ಲಿ ಹೀಗಿರಲಿ ಮಹಿಳೆಯರ ಉಡುಪಿನ ಆಯ್ಕೆ

(To get Glowing Skin follow these tips and get healthy and shining skin)

Comments are closed.