MahaShivratri 2023 : ಶಿವನ ಆರಾಧನೆಯ ಮಹಾಶಿವರಾತ್ರಿ ಯಾವಾಗ? ದಿನ, ಮಹತ್ವ, ಮತ್ತು ಪೂಜಾ ವಿಧಿ

ಶಿವನ ಕೃಪೆಗೆ ಪಾತ್ರರಾಗಲು ಪ್ರಮುಖ ಮಾರ್ಗವೆಂದರೆ ಶಿವರಾತ್ರಿಯ ಆಚರಣೆ (MahaShivratri 2023) ಎಂದು ಹಲವಾರು ಶಿವ ಭಕ್ತಾದಿಗಳು ನಂಬಿದ್ದಾರೆ. ಹಾಗಾಗಿ ಶಿವರಾತ್ರಿಯನ್ನು ವಿಶೇಷವಾಗಿ ಉಪವಾಸ, ಜಾಗರಣೆ ಮಾಡುವುದರ ಮೂಲಕ ಮಹಾಶಿವರಾತ್ರಿಯನ್ನು ಆಚರಿಸುತ್ತಾರೆ. ಪ್ರತಿ ವರ್ಷ ಮಹಾಶಿವರಾತ್ರಿಯನ್ನು ಫಾಲ್ಗುಣ ಮಾಸದ, ಕೃಷ್ಣ ಪಕ್ಷದ, ಚತುರ್ದಶಿಯ ತಿಥಿಯಂದು ಆಚರಿಸಲಾಗುತ್ತದೆ. ಶಿವರಾತ್ರಿಯ ಕುರಿತು ಅನೇಕ ಕಥೆಗಳಿವೆ. ಶಿವ ಮತ್ತು ಪಾರ್ವತಿಯರ ವಿವಾಹವು ಈ ದಿನದಂದೇ ನಡೆಯಿತು ಎಂಬುದು ಧಾರ್ಮಿಕ ನಂಬಿಕೆ. ಈ ದಿನ, ಶಿವನು ತನ್ನ ಏಕಾಂತ ಜೀವನವನ್ನು ತ್ಯಜಿಸಿ, ಹಿಮಾಂಚಲ ರಾಜ ಮತ್ತು ರಾಣಿ ಮೈನಾ ದೇವಿಯ ಮಗಳು ಪಾವರ್ತಿಯನ್ನು ತನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಂಡನು ಎಂಬುದು ಒಂದು ನಂಬಿಕೆ. ಇನ್ನೊಂದು ಪುರಾಣಕಥೆಯ ಪ್ರಕಾರ ಈ ದಿನದಂದು ಶಿವನು ಸೃಷ್ಟಿಯ ರಚನೆ ಮಾಡಲು ತಾಂಡವ ನೃತ್ಯವನ್ನು ಮಾಡಿದನು ಎಂದೂ ಹೇಳುತ್ತಾರೆ. ಮಹಾಶಿವರಾತ್ರಿಯನ್ನು ಭಕ್ತರು ಉಪವಾಸ, ಜಾಗರಣೆ, ಶಿವ ಸ್ತೋತ್ರಗಳ ಪಠಣೆ ಮಾಡುವುದರ ಮೂಲಕ ಆಚರಿಸುತ್ತಾರೆ. ಈ ವರ್ಷದ ಮಹಾಶಿವರಾತ್ರಿಯ ದಿನಾಂಕದ ಬಗ್ಗೆ ಅನುಮಾನವಿದೆ. ಈ ಬಾರಿಯ ಮಹಾಶಿವರಾತ್ರಿಯ ವ್ರತವನ್ನು ಯಾವ ದಿನದಂದು ಆಚರಿಸಲಾಗುತ್ತದೆ ಮತ್ತು ಶಿವನ ಆರಾಧನೆಯ ಶುಭ ಸಮಯ ಯಾವುದು ಇಲ್ಲಿದೆ ಓದಿ.

ಮಹಾಶಿವರಾತ್ರಿ ಯಾವಾಗ?
ಪ್ರತಿ ವರ್ಷ ಶಿವರಾತ್ರಿಯನ್ನು ಫಾಲ್ಗುಣ ಮಾಸದ, ಕೃಷ್ಣ ಪಕ್ಷದ, ಚತುರ್ದಶಿಯ ತಿಥಿಯಂದು ಆಚರಿಸಲಾಗುತ್ತದೆ. ಈ ವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯು ಫೆಬ್ರವರಿ 18, 2023 ರಂದು ರಾತ್ರಿ 08:02 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ 19 ಫೆಬ್ರವರಿ 2023 ರಂದು ಸಂಜೆ 04:18 ಕ್ಕೆ ಕೊನೆಗೊಳ್ಳುತ್ತದೆ.

ಮಹಾಶಿವರಾತ್ರಿಯಂದು ರಾತ್ರಿಯ ನಾಲ್ಕು ಪ್ರಹರಗಳಲ್ಲಿ ಪೂಜೆ ಮಾಡಬೇಕೆಂಬ ವಿಧಾನವಿದೆ. ಈ ಸಮಯದಲ್ಲಿ ಶಿವ-ಪಾರ್ವತಿಯರನ್ನು ಪೂಜಿಸಲಾಗುತ್ತದೆ. ಹಾಗಾಗಿ, ಶಿವರಾತ್ರಿ ಉಪವಾಸ ಮತ್ತು ಪೂಜೆಯನ್ನು ಫೆಬ್ರವರಿ 18, 2023 ರಂದೇ ಮಾಡಲಾಗುತ್ತದೆ. ಚತುರ್ದಶಿ ತಿಥಿಯು ಫೆಬ್ರವರಿ 19, 2023 ರಂದು ಸಂಜೆ ಕೊನೆಗೊಳ್ಳುತ್ತದೆ.

ಇದನ್ನೂ ಓದಿ : Mahashivratri jagarane: ಆಧ್ಯಾತ್ಮದ ಜೊತೆಗೆ ವೈಜ್ಞಾನಿಕ ಕಾರಣವನ್ನು ಹೊಂದಿರುವ ಪುಣ್ಯ ಆಚರಣೆ ಈ ಮಹಾಶಿವರಾತ್ರಿ ಜಾಗರಣೆ

ಮಹಾಶಿವರಾತ್ರಿ ಪೂಜಾ ಮಹೂರ್ತ:
ಪ್ರಥಮ ಪ್ರಹರ ರಾತ್ರಿ ಪೂಜೆ : – (18 ಫೆಬ್ರವರಿ 2023) ಸಂಜೆ 06:21 pm ರಿಂದ ರಾತ್ರಿ 09.31 pm ರವರೆಗೆ
ದ್ವಿತೀಯ ಪ್ರಹರ ರಾತ್ರಿ ಪೂಜೆ – (18 ಫೆಬ್ರವರಿ 2023) ರಾತ್ರಿ 09:31 pm ರಿಂದ (19 ಫೆಬ್ರವರಿ 2023) 12:41am
ತೃತೀಯಾ ಪ್ರಹರ ರಾತ್ರಿ ಪೂಜೆ – (19 ಫೆಬ್ರವರಿ 2023) 12:41 am – 03:51 am
ಚತುರ್ಥ ಪ್ರಹರ ರಾತ್ರಿ ಪೂಜೆ – (19 ಫೆಬ್ರವರಿ 2023) 03:51 am – ಬೆಳಿಗ್ಗೆ 07:00 am

ಮಹಾಶಿವರಾತ್ರಿ ವ್ರತದ ಮಹತ್ವ:
ಮಹಾಶಿವರಾತ್ರಿಯು ಶಿವನ ಭಕ್ತರಿಗೆ ಬಹಳ ಮಹತ್ವದ್ದಾಗಿದೆ. ಈ ದಿನದಂದು, ಶಿವ ಮತ್ತು ತಾಯಿ ಪಾರ್ವತಿಯನ್ನು ಪೂಜಿಸುವವರ ದಾಂಪತ್ಯ ಜೀವನವು ಸುಖಮಯದಿಂದ ಕೂಡಿರುತ್ತದೆ ಎಂದು ನಂಬಲಾಗಿದೆ. ಮಾತೆ ಪಾರ್ವತಿಯು ಶಿವನನ್ನು ಪತಿಯಾಗಿ ಪಡೆಯಲು ವರ್ಷಗಟ್ಟಲೆ ತಪಸ್ಸು ಮಾಡಿದಳು. ಅದೇ ರೀತಿ ಮಹಾಶಿವರಾತ್ರಿಯಂದು ಉಪವಾಸದ ಪರಿಣಾಮದಿಂದ ಶಿವನಂತಹ ಜೀವನ ಸಂಗಾತಿಯನ್ನು ಪಡೆಯುವ ಬಯಕೆಯು ಈಡೇರುತ್ತದೆ ಎಂದು ಹೇಳಲಾಗುತ್ತದೆ. ಮತ್ತೊಂದೆಡೆ, ವಿವಾಹಿತ ಮಹಿಳೆಯರು ಅಖಂಡ ಸೌಭಾಗ್ಯದ ವರವನ್ನು ಪಡೆಯುತ್ತಾರೆ. ಈ ದಿನದಂದು ಶಿವನು 12 ವಿಶ್ವ ಪ್ರಸಿದ್ಧ ಜ್ಯೋತಿರ್ಲಿಂಗಗಳ ರೂಪದಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ನಂಬಲಾಗಿದೆ.

ಇದನ್ನೂ ಓದಿ : Maha Shivaratri 2023: ರೈಲ್ವೇ ಇಲಾಖೆಯಿಂದ 12 ಶಿವನ ದೇವಾಲಯಗಳಿಗೆ ಟೂರ್ ಪ್ಯಾಕೇಜ್

When is MahaShivratri 2023 celebrated this year? Know the date, time, and significance

Comments are closed.