Mahashivratri jagarane: ಆಧ್ಯಾತ್ಮದ ಜೊತೆಗೆ ವೈಜ್ಞಾನಿಕ ಕಾರಣವನ್ನು ಹೊಂದಿರುವ ಪುಣ್ಯ ಆಚರಣೆ ಈ ಮಹಾಶಿವರಾತ್ರಿ ಜಾಗರಣೆ

(Mahashivratri jagarane) ಕೈಲಾಸ ವಾಸ ಶಿವ ಹಾಗೂ ದೇವಿ ಪಾರ್ವತಿ ವಿವಾಹವಾದ ದಿನವೇ ಈ ಮಹಾಶಿವರಾತ್ರಿ. ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿ ಉಪವಾಸ ಮಾಡುತ್ತಾರೆ. ಇದರ ಜೊತೆಗೆ ಜಾಗರಣೆ ನಡೆಸುವುದು ಕೂಡ ಒಂದು ವಿಶೇಷ. ರಾತ್ರಿ ಇಡೀ ನಿದ್ದೆ ಮಾಡದೇ ಶಿವನನ್ನು ಜಪಿಸಿ ಶಿವನ ಅನುಗ್ರಹಕ್ಕೊಳಗಾಗುವುದೇ ಈ ದಿನದ ವಿಶೇಷ. ಇನ್ನೂ ಈ ಮಹಾಶಿವರಾತ್ರಿ ಜಾಗರಣೆ ಮಾಡುವ ಆಚರಣೆಯನ್ನು ಕೆಲವು ಆಧ್ಯಾತ್ಮ ಎಂದು ತಿಳಿದುಕೊಂಡಿದ್ದು, ಇದಕ್ಕೂ ಕೂಡ ವೈಜ್ಞಾನಿಕ ಕಾರಣಗಳಿವೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ ಶಿವರಾತ್ರಿಯಂದು ಜಾಗರಣೆ ಮಾಡುವ ಹಿಂದಿನ ನೈಜ ಕಾರಣವೇನು?

ಶಿವ ಪಾರ್ವತಿ ವಿವಾಹವಾದ ದಿನವಾದ ಶಿವರಾತ್ರಿಯಂದು ನಿಯಮಬದ್ದ ಆಚರಣೆ ಮೂಲ ಪೂರ್ಣ ಭಕ್ತಿಯಿಂದ ಶಿವನನ್ನು ಪೂಜಿಸಿದರೆ ಶಿವನು ಪ್ರಸನ್ನನಾಗುತ್ತಾನೆ ಎಂಬ ನಂಬಿಕೆ ಇದೆ. ಶಿವನು ಸಾಮಾನ್ಯವಾಗಿ ಭಾವಪರವಶನಾದ ಸ್ಥೀತಿಯಲ್ಲಿರುತ್ತಿದ್ದು, ಇದೇ ಕಾರಣಕ್ಕೆ ಪಾರ್ವತಿಯು ಅವನತ್ತ ಆಕರ್ಷಿತಳಾದಳು. ಶಿವನನ್ನು ತನ್ನತ್ತ ಸೆಳೆಯಲು ಸಾಕಷ್ಟು ಉಪಾಯಗಳನ್ನು ಮಾಡಿದ ನಂತರದಲ್ಲಿ ಅವರಿಬ್ಬರ ಮದುವೆಯಾಗುತ್ತದೆ. ಈ ಕಾರಣದಿಂದಾಗಿ ಶಿವನಿಗೆ ಇದು ಅತ್ಯಂತ ಪ್ರಿಯವಾದ ದಿನವಾಗಿದೆ ಎಂದು ಹೇಳುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಹಾಶಿವರಾತ್ರಿಯ ದಿನ ಗ್ರಹಗಳ ಕೇಂದ್ರ ಬಲವು ವಿಶೇಷ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಬಲವು ಮೇಲಕ್ಕೆ ಚಲಿಸುವು ಕಾರಣ ನಮ್ಮ ದೇಹದ ಶಕ್ತಿಯು ಸ್ವಾಭಾವಿಕವಾಗಿ ಮೇಲಕ್ಕೆ ಹರಿಯುತ್ತದೆ. ಹೀಗಾಗಿ ವ್ಯಕ್ತಿಯೂ ಆಧ್ಯಾತ್ಮಿಕದ ಉತ್ತುಂಗದ ಕಡೆಗೆ ಸಾಗುತ್ತಾನೆ. ಇದದಿಂದಾಗಿ ದೈವಿಕತ ಆತನಲ್ಲಿ ತುಂಬುತ್ತದೆ. ಇದೇ ಕಾರಣಕ್ಕೆ ಮಹಾಶಿವರಾತ್ರಿಯ ದಿನ ಬೆನ್ನುಮೂಳೆಯನ್ನು ನೇರವಾಗಿಟ್ಟುಕೊಂಡು ಕುಳಿತು ಧ್ಯಾನ ಮಾಡಲು ಹೇಳಲಾಗುತ್ತದೆ.

ಇದನ್ನೂ ಓದಿ : Maha Shivaratri 2023: ಮಹಾಶಿವರಾತ್ರಿಯ ಹಿನ್ನಲೆ, ಹಬ್ಬದ ಆಚರಣೆ ಏಕೆ ಮಾಡುತ್ತಾರೆ ಗೊತ್ತಾ?

ಇದನ್ನೂ ಓದಿ : Maha Shivratri 2023 : ಮಹಾ ಶಿವರಾತ್ರಿ 2023 : ನೀವು ಭೇಟಿ ನೀಡಬಹುದಾದ ದಕ್ಷಿಣ ಭಾರತದ 5 ಜನಪ್ರಿಯ ದೇವಾಲಯಗಳು

ಇದನ್ನೂ ಓದಿ : Mandir of Mother India: ಕರಾವಳಿಯಲ್ಲಿ ಲೋಕಾರ್ಪಣೆಯಾಗಲಿದೆ ಮತ್ತೊಂದು ಭವ್ಯ ಮಂದಿರ: ಇದರ ವಿಶೇಷತೆಯೇನು ಗೊತ್ತಾ?

Mahashivratri jagarane: A pious ritual with a scientific rationale along with spirituality This Mahashivratri vigil

Comments are closed.