KL Rahul T20 cricket : 22 ಅರ್ಧಶತಕ, 19 ಗೆಲುವು, ಮೂರೇ ಸೋಲು, ಟಿ20 ಕ್ರಿಕೆಟ್‌ನಲ್ಲಿ ರಾಹುಲ್ ಕಮಾಲ್

ಬೆಂಗಳೂರು: KL Rahul T20 cricket : ಕನ್ನಡಿಗ ಕೆ.ಎಲ್ ರಾಹುಲ್ ಟೀಮ್ ಇಂಡಿಯಾದ ಬ್ಯಾಟಿಂಗ್ ಆಧಾರಸ್ಥಂಭಗಳಲ್ಲಿ ಒಬ್ಬರು. ತಂಡದ ಉಪನಾಯಕನ ಜವಾಬ್ದಾರಿಯನ್ನೂ ಹೊತ್ತಿರುವ ರಾಹುಲ್, ಭಾರತದ ಆಪದ್ಬಾಂಧವನೂ ಹೌದು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕೆ.ಎಲ್ ರಾಹುಲ್ ಕನಿಷ್ಠ ಅರ್ಧಶತಕ ಬಾರಿಸಿದಾಗ ಭಾರತ ಸೋತದ್ದು ತೀರಾ ಕಡಿಮೆ. ರಾಹುಲ್ ಇದುವರೆಗೆ ಭಾರತ ಪರ 66 ಟಿ20 ಪಂದ್ಯಗಳನ್ನಾಡಿದ್ದು, 62 ಇನ್ನಿಂಗ್ಸ್’ಗಳಲ್ಲಿ ಬ್ಯಾಟಿಂಗ್ ಅವಕಾಶ ಸಿಕ್ಕಿದೆ. ಆ 62 ಇನ್ನಿಂಗ್ಸ್’ಗಳ ಪೈಕಿ ರಾಹುಲ್ 22 ಬಾರಿ ಅರ್ಧಶತಕದ ಗಡಿ ದಾಟಿದ್ದಾರೆ. ಇದರಲ್ಲಿ ಎರಡು ಶತಕಗಳೂ ಸೇರಿವೆ. ರಾಹುಲ್ 22 ಬಾರಿ ಅರ್ಧಶತಕದ ಗಡಿ ದಾಟಿದಾಗ ಭಾರತ ತಂಡ 19 ಪಂದ್ಯಗಳಲ್ಲಿ ಗೆದ್ದಿದೆ. ಸೋತಿರುವುದು ಕೇವಲ 3 ಬಾರಿ ಮಾತ್ರ.

ತಿರುವನಂತಪುರದಲ್ಲಿ ನಡೆದ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅಜೇಯ 51 ರನ್’ಗಳಿಸಿದ್ದ ರಾಹುಲ್, ಗುವಾಹಟಿಯಲ್ಲಿ ನಡೆದ 2ನೇ ಪಂದ್ಯದಲ್ಲಿ ಕೇವಲ 28 ಎಸೆತಗಳಲ್ಲಿ ಸಿಡಿಲಬ್ಬರದ 57 ರನ್ ಗಳಿಸಿದ್ದರು. ಭಾರತ ಈಗಾಗಲೇ ಸರಣಿ ಗೆದ್ದಿರುವ ಕಾರಣ ಲಕ್ನೋದಲ್ಲಿ ಮಂಗಳವಾರ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯಕ್ಕೆ ಕೆ.ಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಇದನ್ನೂ ಓದಿ : Mitchell Johnson Yusuf Pathan : ಲೆಜೆಂಡ್ಸ್ ಲೀಗ್ ಕ್ರಿಕೆಟ್: ಯೂಸುಫ್ ಪಠಾಣ್ ಮೇಲೆ ಮೈದಾನದಲ್ಲೇ ಹಲ್ಲೆ ನಡೆಸಿ ಆಸೀಸ್ ವೇಗಿ ಜಾನ್ಸನ್

ಭಾರತ ಪರ ಒಟ್ಟು 66 ಟಿ20 ಪಂದ್ಯಗಳನ್ನಾಡಿರುವ ಕೆ.ಎಲ್ ರಾಹುಲ್ 39.57ರ ಸರಾಸರಿಯಲ್ಲಿ 2 ಶತಕ, 20 ಅರ್ಧಶತಕಗಳ ಸಹಿತ 140.40 ಉತ್ತಮ ಸ್ಟ್ರೈಕ್’ರೇಟ್’ನೊಂದಿಗೆ 2137 ರನ್ ಕಲೆ ಹಾಕಿದ್ದಾರೆ.ಇದನ್ನೂ ಓದಿ : Selfless Virat Kohli: ದಾಖಲೆಗಾಗಿ ಆಡಲ್ಲ ವಿರಾಟ್, ಇಲ್ಲಿದೆ ಮತ್ತೊಂದು ಸಾಕ್ಷಿ, ಕಿಂಗ್ ಕೊಹ್ಲಿ ನಿಸ್ವಾರ್ಥತೆಗೆ ಫ್ಯಾನ್ಸ್ ಫಿದಾ

ರಾಹುಲ್ ಅರ್ಧಶತಕಗಳು (KL Rahul T20 cricket) ಭಾರತ ತಂಡದ ಸೋಲು/ಗೆಲುವು

110* Vs ವೆಸ್ಟ್ ಇಂಡೀಸ್: ಭಾರತಕ್ಕೆ 1 ರನ್ ಸೋಲು
71 Vs ಇಂಗ್ಲೆಂಡ್: ಭಾರತಕ್ಕೆ 5 ರನ್ ಗೆಲುವು
61 Vs ಶ್ರೀಲಂಕಾ: ಭಾರತಕ್ಕೆ 93 ರನ್ ಗೆಲುವು
89 Vs ಶ್ರೀಲಂಕಾ: ಭಾರತಕ್ಕೆ 88 ರನ್ ಗೆಲುವು
70 Vs ಐರ್ಲೆಂಡ್: ಭಾರತಕ್ಕೆ 143 ರನ್ ಗೆಲುವು
101* Vs ಇಂಗ್ಲೆಂಡ್: ಭಾರತಕ್ಕೆ 8 ವಿಕೆಟ್ ಗೆಲುವು
50 Vs ಆಸ್ಟ್ರೇಲಿಯಾ: ಭಾರತಕ್ಕೆ 3 ವಿಕೆಟ್ ಸೋಲು
52 Vs ಬಾಂಗ್ಲಾದೇಶ: ಭಾರತಕ್ಕೆ 30 ರನ್ ಗೆಲುವು
62 Vs ವೆಸ್ಟ್ ಇಂಡೀಸ್: ಭಾರತಕ್ಕೆ 6 ವಿಕೆಟ್ ಗೆಲುವು
91 Vs ವೆಸ್ಟ್ ಇಂಡೀಸ್: ಭಾರತಕ್ಕೆ 67 ರನ್ ಗೆಲುವು
54 Vs ಶ್ರೀಲಂಕಾ: ಭಾರತಕ್ಕೆ 78 ರನ್ ಗೆಲುವು
56 Vs ನ್ಯೂಜಿಲೆಂಡ್: ಭಾರತಕ್ಕೆ 6 ವಿಕೆಟ್ ಗೆಲುವು
57* Vs ನ್ಯೂಜಿಲೆಂಡ್: ಭಾರತಕ್ಕೆ 7 ವಿಕೆಟ್ ಗೆಲುವು
51 Vs ಆಸ್ಟ್ರೇಲಿಯಾ: ಭಾರತಕ್ಕೆ 11 ರನ್ ಗೆಲುವು
69 Vs ಅಫ್ಘಾನಿಸ್ತಾನ: ಭಾರತಕ್ಕೆ 66 ರನ್ ಗೆಲುವು
50 Vs ಸ್ಕಾಟ್ಲೆಂಡ್: ಭಾರತಕ್ಕೆ 8 ವಿಕೆಟ್ ಗೆಲುವು
54* Vs ನಮೀಬಿಯಾ: ಭಾರತಕ್ಕೆ 9 ವಿಕೆಟ್ ಗೆಲುವು
65 Vs ನ್ಯೂಜಿಲೆಂಡ್: ಭಾರತಕ್ಕೆ 7 ವಿಕೆಟ್ ಗೆಲುವು
62 Vs ಅಫ್ಘಾನಿಸ್ತಾನ: ಭಾರತಕ್ಕೆ 101 ರನ್ ಗೆಲುವು
55 Vs ಆಸ್ಟ್ರೇಲಿಯಾ: ಭಾರತಕ್ಕೆ 4 ವಿಕೆಟ್ ಸೋಲು
51* Vs ದಕ್ಷಿಣ ಆಫ್ರಿಕಾ: ಭಾರತಕ್ಕೆ 8 ವಿಕೆಟ್ ಗೆಲುವು
57 Vs ದಕ್ಷಿಣ ಆಫ್ರಿಕಾ: ಭಾರತಕ್ಕೆ 16 ರನ್ ಗೆಲುವು

ಇದನ್ನೂ ಓದಿ : India vs South Africa T20 series : ಭಾರತ Vs ದಕ್ಷಿಣ ಆಫ್ರಿಕಾ ಟಿ20 ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು!

22 fifties 19 wins 3 losses KL Rahul Record in T20 cricket

Comments are closed.