Mahakala Loka Ujjaini : ಉಜ್ಜಯಿನಿಯಲ್ಲಿ ʼಮಹಾಕಾಲ ಲೋಕʼ : ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ

ದೆಹಲಿ : (Mahakala Loka Ujjaini )ಬೆಳಕಿನ ಚಿತ್ತಾರಗಳ ನಡುವೆ ʼಮಹಾಕಾಲ ಲೋಕʼ ಕಾರಿಡಾರ್‌ ಅನ್ನು ಪ್ರಧಾನಿ ನರೇಂದ್ರ ಅವರು ಲೋಕಾರ್ಪಣೆ ಗೊಳಿಸಿದ್ದಾರೆ.ಹಳೆಯ ರುಧ್ರಸಾಗರದ ಸುತ್ತಲೂ ನಿರ್ಮಾಣವಾದ ಕಾರಿಡಾರ್‌ ದೇಶದಲ್ಲಿಯೇ ಅತಿ ಉದ್ದದ ಕಾರಿಡಾರ್‌ (Mahakala Loka Ujjaini )ಎಂಬ ಖ್ಯಾತಿಗೆ ಒಳಗೊಂಡಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಐದನೇ ಜ್ಯೋತಿರ್ಲಿಂಗ ಈ ಮಹಾಕಾಳೇಶ್ವರ ಲಿಂಗ. 856 ಕೋಟಿ ಮೌಲ್ಯದಡಿಯಲ್ಲಿ ಮಹಾಕಾಳೇಶ್ವರ ದೇವಾಲಯದ ಮರುನಿರ್ಮಾಣವಾಗಿದ್ದು, 900 ಮೀಟರ್‌ ಉದ್ದದ ಕಾರಿಡಾರ್‌ ನಿರ್ಮಿಸಲಾಗಿದೆ. ಈ ಹಿಂದಿನ ಮಹಾಕಾಳೇಶ್ವರನ ಸನ್ನಿಧಿಗಿಂತಲೂ ಏಳು ಪಟ್ಟು ದೊಡ್ಡದಾಗಿದ್ದು, ಭಕ್ತಿಲೋಕವನ್ನೇ ಸೃಷ್ಠಿ ಮಾಡುವಂತೆ ನಿರ್ಮಾಣವಾಗಿದೆ.

ದೇಶದ ಅತೀ ಉದ್ದವಾದ ಕಾರಿಡಾರ್‌(Mahakala Loka Ujjaini )ಎಂಬ ಖ್ಯಾತಿ ಪಡೆದಿರುವ ಮಹಾಕಾಳೇಶ್ವರ ದೇವಾಲಯದ ಕಾರಿಡಾರ್ ರುಧ್ರಸಾಗರದ ಸುತ್ತ ನಿರ್ಮಾಣವಾಗಿದ್ದು, ಅತೀ ಸಣ್ಣ ಪ್ರದೇಶವನ್ನು ವಿಶಾಲಗೊಳಿಸಿ ನಿರ್ಮಿಸಿದ ಕಾರಿಡಾರ್‌ ಆಗಿದೆ. ಮಹಾಕಾಳೇಶ್ವರ ದೇವಾಲಯ ಕಾರಿಡಾರ್‌ ಆದ ಕಾರಣ ಇದಕ್ಕೆ ʼಮಹಾಕಾಲ ಲೋಕ ʼ ಎಂದು ನಾಮಕರಣ ಮಾಡಲಾಯಿತು. ಮಹಾಕಾಲ ಲೋಕದ ಕಾರಿಡಾರ್‌ ನಲ್ಲಿ ಪ್ರವೇಶಿಸುತ್ತಿದ್ದಂತೆ ಶಿವಪುರಾಣಗಳನ್ನು ಅನಾವರಣಗೊಳಿಸಲಾಗಿದ್ದು , ಪುರಾಣ ಕಥನಗಳು ಭಕ್ತರನ್ನು ಆದರದಿಂದ ಸ್ವಾಗತಿಸುತ್ತವೆ.ಪರಶಿವನ ಆನಂದ ತಾಂಡವದ ಚಿತ್ರಣ ಕೂಡ ಇಲ್ಲಿ ಸುಂದರವಾಗಿ ನಿರ್ಮಾಣವಾಗಿದ್ದು,ಜನರ ಮನ ಗೆಲ್ಲುವಂತಿದೆ.

ಇದನ್ನೂ ಓದಿ : China Omicron sub-variants BF.7 : ಚೀನಾದಲ್ಲಿ ಪತ್ತೆಯಾಯ್ತು ಹೊಸ Omicron BF.7, BA.5.1.7 ತಳಿ : 24 ಗಂಟೆಯಲ್ಲಿ 1900ಕ್ಕೂ ಅಧಿಕ ಪ್ರಕರಣ ದಾಖಲು

ಭಕ್ತಿಲೋಕವನ್ನೇ ಸೃಷ್ಠಿಸಿದ ಮಹಾಕಾಲ ಲೋಕದ ಕಾರಿಡಾರ್‌ ನಲ್ಲಿ ಅದ್ಭುತವಾದ 190 ಪ್ರತಿಮೆಗಳು ಮತ್ತು 108 ಮರಳುಗಲ್ಲಿನ ಸಾಲಂಕೃತ ಸ್ಥಂಭಗಳು ನಿರ್ಮಾಣವಾಗಿದ್ದು, ಭಕ್ತರನ್ನು ಆತ್ಮೀಯವಾಗಿ ಸ್ವಾಗತ ಕೋರುತ್ತವೆ . ಕಾಶಿ ರಾಮೇಶ್ವರ ದೇವಾಲಯದ ಮಾದರಿಯಲ್ಲಿ ನಿರ್ಮಾಣವಾದ ಕ್ಷೇತ್ರ ಇದಾಗಿದ್ದು, ಬೆಳಕಿನ ಚಿತ್ತಾರಗಳೊಂದಿಗೆ ನಮ್ಮನ್ನು ಆಕರ್ಷಿಸುತ್ತವೆ .

ಇದನ್ನೂ ಓದಿ : Bihar Accident :ಪೊಲೀಸ್ ವಾಹನಕ್ಕೆ ಬೈಕ್ ಢಿಕ್ಕಿ, ಮೂವರು ಸಾವು, ಓರ್ವ ಸಜೀವ ದಹನ

ಇದನ್ನೂ ಓದಿ : Operation Demolishan : ಬೆಂಗಳೂರಲ್ಲಿ ಆಪರೇಶನ್‌ ಡೆಮೋಲಿಶನ್ : ಪೆಟ್ರೋಲ್ ಸುರಿದು ದಂಪತಿ ಆತ್ಮಹತ್ಯೆ ಯತ್ನ

ಮಹಾಕಾಲ ಲೋಕ ಕಾರಿಡಾರ್‌ ನಿರ್ಮಾಣವಾದ ಉದ್ದೇಶವೇನು ?

ಈ ಹಿಂದೆ ದೇವಾಲಯದಲ್ಲಿ ಇಕ್ಕಟ್ಟಿನ ಪರಿಸ್ಥಿತಿ ಇತ್ತು. ಸಾಕಷ್ಟು ಭಕ್ತರು ದೇವರ ದರ್ಶನಕ್ಕೆ ಬರುವ ಕಾರಣದಿಂದಾಗಿ ಹೆಚ್ಚು ಭಕ್ತರಿಗೆ ನಿಲ್ಲಲು ಜಾಗ ಸಾಲುತ್ತಿರಲಿಲ್ಲ. 2.87 ಹೆಕ್ಟೇರ್‌ ವಿಸ್ತೀರ್ಣದಲ್ಲಿ ದೇವಾಲಯ ಇದ್ದು, ಅತೀ ಕಡಿಮೆ ಜಾಗವನ್ನು ಹೊಂದಿತ್ತು. ಜನರಿಗೆ ಓಡಾಡಲು ಕಷ್ಟವಾಗಿತ್ತು.ಮಹಾಕಾಳೇಶ್ವರನ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೆ ಸಂಕಷ್ಟ ಎದುರಾಗಬಾರದು, ನಿರಾಯಾಸವಾಗಿ ಭಕ್ತರು ಓಡಾಡಬೇಕು, ಮಹಾಕಾಳೇಶ್ವರನ ದರ್ಶನವನ್ನು ನಿರಾಯಾಸವಾಗಿ ಪಡೆಯಬೇಕು ಎನ್ನುವ ಕಾರಣಕ್ಕೆ ದೇವಾಲಯದ ಸುತ್ತಲಿನ ಪ್ರದೇಶವನ್ನು ವಿಶಾಲಗೊಳಿಸಿ ಕಾರಿಡಾರ್‌ ನಿರ್ಮಾಣಕ್ಕೆ ಮುಂದಾದರು.ಇದೀಗ ಕಾರಿಡಾರ್‌ ನಿರ್ಮಾಣ ಮುಗಿದಿದ್ದು, ನಿನ್ನೆ ಮೋದಿಯವರ ಮೂಲಕ ಲೋಕಾರ್ಪಣೆ ಗೊಂಡಿದೆ.

108 ಮರಳುಗಲ್ಲಿನ ಸಾಲಂಕೃತ ಸ್ಥಂಭಗಳು , 190 ಪ್ರತಿಮೆಗಳ ನಡುವೆ 12 ಮೀಟರ್‌ ಪ್ರದೇಶವನ್ನು ಪಾದಚಾರಿಗಳಿಗೆ ಓಡಾಡಲು ಅನುಕೂಲವಾಗುವಂತೆ ಕಾರಿಡಾರ್‌ ಅನ್ನು ನಿರ್ಮಿಸಲಾಗಿದೆ.ಕಾಶಿ ಮಾದರಿಯಲ್ಲಿ ನಿರ್ಮಾಣವಾದ ಹಾಗೂ ದೇಶದಲ್ಲೇ ಅತೀ ಉದ್ದವಾದ ಕಾರಿಡಾರ್ ನಿನ್ನೆ ಉದ್ಘಾಟನೆಗೊಂಡಿದ್ದು, ಪ್ರಧಾನಿ ಮೋದಿಯವರಿಂದ ಉಜ್ಜೈನಿಯಲ್ಲಿ ಲೋಕಾರ್ಪಣೆಗೊಂಡಿದೆ. ಪಂಚಮ ಜ್ಯೋತಿರ್ಲಿಂಗವಾದ ಮಹಾಕಾಳೇಶ್ವರನ ಪೂಜೆಯನ್ನು ಲೋಕ ಕಲ್ಯಾಣಾರ್ಥವಾಗಿ ಮೋದಿಯವರು ನಡೆಸಿದರು. ದೇವರಿಗೆ ಬಿಲ್ವ ಸಮರ್ಪಣೆ, ಪುಷ್ಪ ಸಮರ್ಪಣೆ ಮಾಡುವುದರ ಮೂಲಕ ಪೂಜೆ ಸಂಪನ್ನಗೊಳಿಸಿದರು.

(Mahakala Loka Ujjaini) The ‘Mahakala Loka’ corridor between the lights has been inaugurated by Prime Minister Narendra. The corridor built around the old Rudhrasagara has the reputation of being the longest corridor in the country (Mahakala Loka Ujjaini). The Mahakaleshwar Linga is the fifth Jyotirlinga, one of the twelve Jyotirlingas. 856 crores is the reconstruction of the Mahakaleshwar temple and a 900 meter long corridor has been constructed. It is seven times larger than the previous Mahakaleshwar and is built to create a world of devotion.

Comments are closed.