Miracle Temple in Gabbur : ಬಿಸಿನೀರಿನಲ್ಲಿ ದೇವರಿಗೆ ಅಭಿಷೇಕ ; ಭಕ್ತರ ಮುಂದೆಯೇ ಪವಾಡ ಮಾಡ್ತಾನೆ ನಾರಾಯಣ

ಪವಾಡ ಅಂದ್ರೆ ದೇವರು ಅನ್ನೋ ನಂಬಿಕೆ ನಮ್ಮಲ್ಲಿದೆ . ಅವನಿಗೆ ಕೈ ಮುಗಿದರೆ ಯಾವುದಾದ್ರು ಪವಾಡ ಮಾಡಿಯಾದ್ರೂ ನಮ್ಮನ್ನು ಕಾಪಾಡುತ್ತಾನೆ ಅನ್ನೋದು ಎಲ್ಲಾ ಭಕ್ತರ ನಂಬಿಕೆ. ಕೆಲವು ದೇವಾಲಯದಲ್ಲಂತು ದೇವರು ಹಾಲು ಕುಡಿಯೋದು , ಕಣ್ಣು ಬಿಡೋದು ಇಂತಹ ಪವಾಡಗಳು ಭಕ್ತರಿಗೆ ದೇವರು ಇದ್ದಾನೆ ಅನ್ನೋ ನಂಬಿಕೆಯನ್ನು ಜಾಸ್ತಿ ಮಾಡಿದೆ. ಆದ್ರೆ ಈ (Miracle Temple in Gabbur) ದೇವಾಲಯದಲ್ಲಿರೋ ದೇವರ ವಿಗ್ರಹ ಇದೆಲ್ಲಕ್ಕಿಂತ ಅಚ್ಚರಿಯನ್ನು ಉಂಟು ಮಾಡುತ್ತೆ. ಯಾಕಂದ್ರೆ ಇಲ್ಲಿ ನಡೆಯುವ ಪವಾಡವೇ ಅಂತದ್ದು.

ಹೌದು ಇಲ್ಲಿ ದೇವರ ವಿಗ್ರಹವೇ ಅಚ್ಚರಿಯ ಕೇಂದ್ರ ಬಿಂದು. ಇಲ್ಲಿ ತನ್ನ ಭಕ್ತರ ಮುಂದೆಯೇ ಲಕ್ಮೀನಾರಾಯಣ ಪವಾಡವನ್ನು ಮಾಡ್ತಾನೆ . ಇಲ್ಲಿ ದೇವರ ವಿಗ್ರಹಕ್ಕೆ ನಿತ್ಯ ಅಭಿಷೇಕ ನಡೆಯುತ್ತೆ. ಅದರಲ್ಲೇನು ವಿಶೇಷ ಅಂತ ನೀವು ಅಂದುಕೊಳ್ಳಬಹುದು. ಇಲ್ಲಿ ದೇವರಿಗೆ ತಣ್ಣಿರಿನ ಬದಲಾಗಿ ಬಿಸಿ ನೀರಿನಲ್ಲಿ ಅಭಿಷೇಕ ನಡೆಯುತ್ತೆ. ಆದ್ರೆ ದೇವರ ತಲೆಯಿಂದ ಎರೆದ ಕುದಿಯೋ ನೀರು ಆತನ ಕಾಲ ಬಳಿಗೆ ಬರುತ್ತಿದ್ದಂತೆ ತಣ್ಣನೆ ನೀರಾಗಿ ಪರಿ ವರ್ತನೆ ಆಗುತ್ತೆ. ಇದೆಲ್ಲಾ ಭಕ್ತರ ಮುಂದೆನೇ ನಡೆಯುವುದೇ ವಿಶೇಷ.

ಇಷ್ಟೇ ಅಲ್ಲ ಇಲ್ಲಿ ಇನ್ನೊಂದು ಅಚ್ಚರಿ ಪಡುಯವ ವಿಷಯವಿದೆ. ಅದೇನು ಗೊತ್ತಾ? ಹೀಗೆ ನೀರು ತಣ್ಣಗಾಗಿ ಬರೋಕೆ ದೇವರ ತಲೆಯಿಂದನೇ ಅಭಿಷೇಕ ಮಾಡಬೇಕು. ಒಂದು ವೇಳೆ ದೇವರ ಎದೆಯ ಕೆಳ ಭಾಗದಿಂದ ಅಭೀಷೇಕ ಮಾಡಿದ್ರೆ ನೀರು ತಣ್ಣಗಾಗೋದಿಲ್ಲ. ಬದಲಾಗಿ ಕುದಿಯುವ ನೀರಾಗಿಯೇ ಉಳಿಯುತ್ತೆ ಅನ್ನೋದೆ ವಿಶೇಷ . ಇದು ಇಲ್ಲಿಗೆ ಬರುವ ಭಕ್ತರನ್ನು ನಿಬ್ಬೆರಗಾಗುವಂತೆ ಮಾಡುತ್ತೆ.

ಹಾಗಾದ್ರೆ ವಿಗ್ರಹ ತುಂಬ ದೊಡ್ಡದಾಗಿರಬೇಕು ಅಂತ ನೀವು ಅಂದುಕೊಳ್ಳಬಹುದು. ಆದ್ರೆ ಇದು 4 ರಿಂದ 5 ಅಡಿ ಮಾತ್ರ ಎತ್ತರವಿದೆ. ಇದು ವಿಜ್ಞಾನಕ್ಕೂ ಸವಾಲಾಗಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ವಿಜ್ಞಾನಿಗಳು ಕೂಡಾ ಇದರ ಕುರಿತಂತೆ ಅಧ್ಯಯನ ನಡೆಸುತ್ತಿದ್ದಾರೆ , ಆದ್ರೆ ಇದರ ಗುಟ್ಟನ್ನು ಇನ್ನೂ ಕಂಡು ಹಿಡಿಯೋಕೆ ಆಗಿಲ್ಲ. ಕೆಲವರ ಪ್ರಕಾರ ನಮ್ಮ ಹಿರಿಯರಿಗೆ ಅಪೂರ್ವವಾದ ವಿಜ್ಞಾನ ದ ತಿಳುವಳಿಕೆ ಇತ್ತು. ಅದನ್ನು ಮುಂದಿನ ಜನಾಂಗಕ್ಕೆ ತಿಳಿಸಲು ದೇವಾಲಯಗಳನ್ನು ಬಳಸಿದ್ರು ಅಂತ ಹೇಳುತ್ತಾರೆ.

ಅಂದ ಹಾಗೆ ಇಂತಹ ವಿಸ್ಮಯವನ್ನು ಹೊಂದಿರುವ ದೇವಾಲಯ ಇರೋದು ಎಲ್ಲಿಗೊತ್ತ ? ಅದು ನಮ್ಮ ಕರ್ನಾಟಕದಲ್ಲಿಯೇ . ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆಯ ಗಬ್ಬುರು ಗ್ರಾಮದ ಲಕ್ಷೀ ನಾರಾಯಣ ದೇವಾಲಯವಿದು. ಈ ದೇವಾಲಯಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ. ಇದನ್ನು ಚಾಲುಕ್ಯರು ಕಟ್ಟಿಸಿದ್ರು ಅಂತ ಹೇಳಲಾಗುತ್ತೆ. ಇನ್ನು ಈ ದೇವಾಲಯದಲ್ಲಿ ಲಕ್ಷೀನಾರಾಯಣ ದೇವರ ಜೊತೆ ಹನುಮಂತ, ಗಣೇಶನ ವಿಗ್ರಹಗಳೂ ಇವೆ. ಇಲ್ಲಿ ಹೋಗೋಕೆ ರಾಯಚೂರಿನಿಂದ ಮಂತ್ರಾಲಯದ ಮಾರ್ಗವಾಗಿ ತೆರಳಬೇಕು. ಇಂತಹ ವಿಸ್ಮಯಕಾರಿ ದೇವಾಲಯಗಳು ನಮ್ಮಲ್ಲಿ ಸಾಕಷ್ಟಿವೆ. ಒಂದು ಬಾರಿಯಾದ್ರೂ ಇಲ್ಲಿಗೆ ಭೇಟಿಕೊಡಿ.

ಇದನ್ನೂ ಓದಿ : Mallam Durga Parmeshwari : ತೀರ್ಥಸ್ನಾನ ಮಾಡಿದ್ರೆ ಸಂತಾನ ಭಾಗ್ಯ, ಕಂಕಣ ಭಾಗ್ಯ ಕರುಣಿಸುತ್ತಾಳೆ ಈ ತಾಯಿ

ಇದನ್ನೂ ಓದಿ : Nelli Teerta : ದುರ್ಗಮ ಗುಹೆಯಲ್ಲಿ ನೆಲೆನಿಂತ ಮಹಾದೇವ ; ಈತನ ಪ್ರಸಾದದಿಂದ ಸರ್ವರೋಗ ಮಾಯ

(Miracle Temple in Gabbur Raichur)

Comments are closed.