Reason For Not Having Boyfriend : ನಿಮಗೆ ಬಾಯ್‌ಫ್ರೆಂಡ್ ಸಿಗದೇ ಇರಲು ಕಾರಣ ಏನಿರಬಹುದು?

ಒಂಟಿತನ ಇಂದು ಎಲ್ಲರನ್ನೂ ಕಾಡುವ ಸಮಸ್ಯೆ. ಕೊರೊನ ಬಂದ ಮೇಲಂತೂ ನಾವೆಲ್ಲರೂ ಏಕಾಂಗಿತನದ ವಿವಿಧ ಹಂತಗಳ ಮೂಲಕ ಹೋಗಿರುತ್ತೇವೆ. ಕೆಲವೊಮ್ಮೆ ಎಲ್ಲರೂ ಇದ್ದೂ, ಯಾರೂ ಇಲ್ಲ ಎಂಬ ಭಾವನೆ ಕಾಡಬಹುದು.ನಾವೆಲ್ಲರೂ ಒಂದಲ್ಲ ಒಂದು ಸಮಯದಲ್ಲಿ ಸಿಂಗಲ್(single) ಆಗಿದ್ದೇವೆ. ಆದರೆ ನಮಗೆಲ್ಲರಿಗೂ ತಿಳಿದಿರುವಂತೆ ಕೆಲ ಹುಡುಗಿಯರು ಶಾಶ್ವತವಾಗಿ ಸಿಂಗಲ್(being single) ಆಗಿರುವಂತೆ ತೋರುತ್ತಾರೆ. ಅವರು ಸುಂದರವಾಗಿ, ಫನ್ನಿಯಾಗಿ,ಇಂಟರೆಸ್ಟಿಂಗ್ ಹಾಗೂ ಹಲವು ವರ್ಷಗಳವರೆಗೆ ಸಿಂಗಲ್ ಆಗೇ ಇರುತ್ತಾರೆ. ಅದಕ್ಕೆ ಕಾರಣ ಹಲವು ಇರಬಹುದು.(reason for not having boyfriend) ಹಾಗಂತ ನೀವು ಸಿಂಗಲ್ ಆಗಿ ಇರುವುದರ ಬಗ್ಗೆ ದುಃಖಿಸುತ್ತಾ ಇನ್ನೊಂದು ಮನೆಯಲ್ಲಿ ಒಬ್ಬಂಟಿಯಾಗಿ ಕಳೆಯುವ ಮೊದಲು – ಇದನ್ನು ಓದಿ. ನಿಮಗೆ ಬಾಯ್‌ಫ್ರೆಂಡ್ ಇಲ್ಲದಿರುವುದಕ್ಕೆ ಐದು ನೈಜ ಕಾರಣಗಳು ಇಲ್ಲಿವೆ.

ನೀವು ಬಾಯ್ ಫ್ರೆಂಡ್ ಬೇಕೆಂದು ಬಯಸುವುದಿಲ್ಲ.
ಒಂಟಿ ಹುಡುಗಿ ಸಂತೋಷವಾಗಿರಬಹುದೇ? ಖಂಡಿತ ಸಾಧ್ಯ. ಒಬ್ಬ ಹುಡುಗಿಯು ಮೋಸ ಮಾಡುವ ಗೆಳೆಯನನ್ನು ಹೊಂದುವ ಬದಲು ಒಂಟಿಯಾಗಿ ಇರುವುದೇ ಲೇಸು. ಅದೆಷ್ಟೋ ಮಂದಿ ಹುಡುಗರು ಮಾಡಿದ ವಂಚನೆಯಿಂದ ಜೀವ ಕಳೆದುಕೊಂಡಿದ್ದಾರೆ.

ನೀವು ಹತಾಶರಾಗಿದ್ದೀರಿ.
ಹತಾಶೆ ಬಹಳ ನಿಜವಾದ ವಿಷಯ.ಹಾಗೆಂದು ಅಪರಿಚಿತ ಹುಡುಗರ ಜೊತೆ ಸಮಯ ವ್ಯಯಿಸುವುದೂ ಅಪಾಯ. ಟೈಮ್ ಪಾಸ್ ಮಾಡಲು ಯಾರೊಂದಿಗೋ ನಿಮ್ಮ ಖಾಸಗಿ ವಿಷಯ ಹಂಚುವುದು ಮಾಡಲೇಬಾರದು.ಸಮಯವನ್ನು ಕೊಲ್ಲಲು ಯಾರೊಂದಿಗಾದರೂ ಇರುವುದಕ್ಕಿಂತ ಸಿಂಗಲ್ ಆಗಿ ಇರುವುದು ಉತ್ತಮ.

ಮನೆ ಬಿಟ್ಟು ಹೋಗಲು ಇಷ್ಟವಿಲ್ಲದಿರಬಹುದು
ಒಂದಷ್ಟು ಮಂದಿ ಹುಡುಗಿಯಾರು ಮನೆ ಬಿಟ್ಟು ಬೇರೆ ಕಡೆ ಹೋಗುವುದನ್ನು ಇಷ್ಟ ಪಡುವುದಿಲ್ಲ. ಬದಲಿಗೆ ಮನೆಯಲ್ಲಿದ್ದು ಟಿವಿ ನೋಡುತ್ತಾ ಸಮಯ ಕಳೆಯುತ್ತಾರೆ. ಹಾಗೆ ಮಾಡುವ ಬದಲು, ಹೊರಗೆ ಹೋಗಿ ಒಂದಷ್ಟು ಜನರನ್ನು ಭೇಟಿಯಾಗಿ.

ಕಾಯುವುದನ್ನು ಬಿಟ್ಟು ಬಿಡಿ
ಕೆಲವರು ತಮ್ಮ ಸಮಯ ಬರಬಹುದು ಎಂದು ಕಾಯುತ್ತಾ ಇರುತ್ತಾರೆ. ಹಾಗೆಂದು ಬಾಯ್ ಫ್ರೆಂಡ್ ನಿಮ್ಮನ್ನು ಹುಡುಕಿ ಬರುತ್ತಾರೆ ಎಂದು ಕಾಯಬೇಡಿ. ನಿಮ್ಮ ಇಷ್ಟದ ಕೆಲಸಗಳನ್ನು ಮಾಡಿ, ಹೊಸ ಹೊಸ ಜನರನ್ನು ಭೇಟಿಯಾಗಿ. ಬಿಡುವಿನ ವೇಳೆಯಲ್ಲಿ ಹೊಸ ಸ್ಥಳಗಳಿಗೆ ಭೇಟಿ ನೀಡಿ. ಹಾಗೆ ಮಾಡಿದಾಗ ನಿಮ್ಮ ವ್ಯಕ್ತಿತ್ವಕ್ಕೆ ಹೊಂದುವ ಹುಡುಗ ಸಿಗಲೂಬಹುದು! ಟ್ರೈ ಮಾಡಿ ನೋಡಿ.

ಇದನ್ನೂ ಓದಿ: Kerala God’s Own Country: ಕೇರಳದಲ್ಲಿ ಮಿಸ್ ಮಾಡ್ದೆ ನೋಡಬೇಕಾದ ಪ್ರವಾಸಿ ತಾಣಗಳಿವು

(Reasons for not having a boyfriend)

Comments are closed.