ನಾಳೆ ನಾಗರ ಪಂಚಮಿ : ಕುಕ್ಕೆ ಸುಬ್ರಹ್ಮಣ್ಯದಲ್ಲಿಲ್ಲ ಭಕ್ತರಿಗೆ ದೇವರ ದರ್ಶನ

0

ಕುಕ್ಕೆಸುಬ್ರಹ್ಮಣ್ಯ : ನಾಗಪಂಚಮಿಯನ್ನು ಕರಾವಳಿಯಲ್ಲಿ ಶ್ರದ್ದಾಭಕ್ತಿಯಿಂದ ಆಚರಿಸಲಾಗುತ್ತದೆ. ಆದರೆ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಪ್ರವೇಶ ನಿಷೇಧ ಹೇರಲಾಗಿದೆ.

Alvas1
ನಾಳೆ ನಾಗರ ಪಂಚಮಿ : ಕುಕ್ಕೆ ಸುಬ್ರಹ್ಮಣ್ಯದಲ್ಲಿಲ್ಲ ಭಕ್ತರಿಗೆ ದೇವರ ದರ್ಶನ 3

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರ ಪಂಚಮಿಯ ದಿನದಂದು ಭಕ್ತರು ಆಗಮಿಸಿ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಿದ್ದರು. ಆದ್ರೆ ಈ ಬಾರಿ ಕೊರೊನಾ ಸೋಂಕು ನಾಗರಪಂಚಮಿ ಆಚರಣೆಗೆ ಅಡ್ಡಗಾಲು ಹಾಕಿದೆ.

Kukke 2
ನಾಳೆ ನಾಗರ ಪಂಚಮಿ : ಕುಕ್ಕೆ ಸುಬ್ರಹ್ಮಣ್ಯದಲ್ಲಿಲ್ಲ ಭಕ್ತರಿಗೆ ದೇವರ ದರ್ಶನ 4

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದ್ದು, ದೇವರ ದರ್ಶನವನ್ನು ಬಂದ್ ಮಾಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

Leave A Reply

Your email address will not be published.