Neelavara kshethra: ಶಂಕಚೂಡನ ಪಂಚಮ ಪುತ್ರಿಯಾದ ನಾಗರತಿ ಮಹಿಷಮರ್ಧಿನಿಯಾಗಿ ನೆಲೆನಿಂತ ಕಥೆ..!

(Neelavara kshethra) ಕರ್ನಾಟಕ ಅನೇಕ ಹಿಂದು ದೇವಸ್ಥಾನಗಳಿಗೆ ಹೆಸರುವಾಸಿಯಾದ ನಾಡು. ನಮ್ಮ ಸಂಸ್ಕ್ರತಿ, ಆಚಾರ ವಿಚಾರಗಳ ಒಳನೋಟವನ್ನು ನಮ್ಮ ದೇವಾಲಯಗಳು ಪ್ರತಿಬಿಂಬಿಸುತ್ತವೆ. ಅನೇಕ ಧಾರ್ಮಿಕ, ಆಧ್ಯಾತ್ಮಿಕ ನಂಬಿಕೆಗಳನ್ನುಹೊರಹಾಕುವಲ್ಲಿ ಅನೇಕ ದೇವಾಲಯಗಳು ತಮ್ಮದೆ ಆದ ಚಾಪನ್ನು ಮೂಡಿಸಿವೆ. ಇಂತಹ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲಿ ಈ ಕ್ಷೇತ್ರವು ಒಂದು. ನಾನಿಂದು ನಿಮಗೆ ಪರಿಚಯಿಸಲು ಹೊರಟ ದೇವಾಲಯ ಶಂಕಚೂಡನೆಂಬ ಮಹಾರಾಜನ ಐವರು ಪುತ್ರಿಯರಲ್ಲಿ ಒಬ್ಬರಾದ ಪಂಚಮ ಪುತ್ರಿ ನಾಗರತಿ ದೇವಿಯ ಕ್ಷೇತ್ರದ ಬಗ್ಗೆ. ನಾಗರತಿ ದೇವಿಯು ಮಹಿಷಮರ್ಧಿನಿಯಾದ ಕಥೆ ನಿಮ್ಮ ಮುಂದಿದೆ.

ಹಿಂದಿನ ಪುರಾಣದಲ್ಲಿ ಶಂಕಚೂಡನೆಂಬ ಮಹಾರಾಜನಿದ್ದನು . ಆತನಿಗೆ ವರಪ್ರಸಾದವಾಗಿ ಜನಿಸಿದವರೇ ದೇವರತಿ , ನಾಗರತಿ , ಚಾರುರತಿ , ಮಂದರತಿ ಹಾಗೂ ನೀಲರತಿ (Neelavara kshethra) . ಶಿವನ ಮಗನಾದ ಸುಬ್ರಹ್ಮಣ್ಯನ ವಿವಾಹವಾಗಲೆಂದು ಈ ಐವರು ಕೈಲಾಸಕ್ಕೆ ತೆರಳಿ ಅಲ್ಲಿ ದ್ವಾರಪಾಲಕನಾದ ನಂದಿಯಿಂದ ಶಾಪಕ್ಕೆ ಗುರಿಯಾಗಿ ಸರ್ಪರೂಪದಲ್ಲಿ ಸಹ್ಯಾದ್ರಿ ಪರ್ವತದ ಕಾಡ್ಗಿಚ್ಚಿನಲ್ಲಿ ಸಿಲುಕಿ ಒದ್ದಾಡುತಿದ್ದರು. ಅದೇ ಕಾಡಿನಲ್ಲಿ ವ್ಯಾಘ್ರಪಾದ ಮುನಿಗಳು ಸಂಚರಿಸುವ ಸಂದರ್ಭ ಈ ಐವರನ್ನು ನೋಡಿ ಬಿದಿರು ಮಳೆಗೆ ಸೀಮಿತವಾದಂತಹ ಶಾಪಕ್ಕೆ ಗುರಿಯಾಗಿದ್ದು, ರಾಜಪುರುಷನೊಬ್ಬನಿಂದ ಶಾಪ ವಿಮೋಚನೆಯಾಗುವುದು ಎಂದು ಹರಸಿದಂತೆ, ಆವಂತಿಯ ರಾಜ ದೇವವರ್ಮನು ವ್ಯಾಘ್ರಬ್ರಷ್ಟನಾಗಿ ವೇಷ ಮರೆಸಿಕೊಂಡು ಸಹ್ಯಾದ್ರಿಯ ತಪ್ಪಲಿನಲ್ಲಿ ಒಡಾಡುತ್ತಿರುವಾಗ ಕಾಡ್ಗಿಚ್ಚಿನ ಬೆಂಕಿಯಲ್ಲಿ ಬೇಯುತ್ತಿರುವ ಸರ್ಪಗಳನ್ನು ರಕ್ಷಿಸಿ ಅವುಗಳನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಪಶ್ಚಿಮಾಭಿಮುಖವಾಗಿ ಹೊಗುವಾಗ ಒಂದೊಂದೆ ಸರ್ಪಗಳು ಒಂದೊಂದಾಗಿ ಹುತ್ತವನ್ನು ಸೇರಿದವು .ಅದರಲ್ಲಿ ಮಂದರತಿಯೆಂಬ ಸರ್ಪವು ಸೇರಿದ ಜಾಗವು ಮಂದರತಿ ಕಾನನ ( ಮಂದಾರ್ತಿ ) ಎಂದು ಹೆಸರಾಯಿತು. ಪಂಚಮ ಪುತ್ರಿಯಾದ ನೀಲರತಿ ಎಂಬ ಸರ್ಪವು ಸೇರಿದ ಸ್ಥಳವು ಪಂಚಮಿಕಾನನ ಎಂದು ಹೆಸರಾಯಿತು .

Neelavara kshethra: The story based on Nagarati Mahishamardhini, the fifth daughter of Shankachuda..!

ಕಾಲನಂತರದಲ್ಲಿ ವ್ಯಾಘ್ರಪಾದ ಮುನಿ ಮತ್ತು ತಾಮಸ ಗುಣದ ಮಾಲಿನಿಯೊಂದಿಗಿನ ಸಂಪರ್ಕದಿಂದ ಅಕಾಲಿಕ ಗರ್ಭವತಿಯಾದ ಮಾಲಿನಿಯಿಂದ ಜನಿಸಿದ ಮಹಿಷನು, ರಾಜ ದೇವವರ್ಮನ ಪತ್ನಿಯನ್ನು ಕಂಡು ಆಕೆಯ ರೂಪ ಲಾವಣ್ಯಕ್ಕೆ ಮನಸೋತು, ತನ್ನ ಮನೋಭಿಲಾಷೆಯನ್ನು ತಿರಸ್ಕರಿಸಿದ ಆಕೆಯನ್ನು ಬಲತ್ಕರಿಸಲು ಮುಂದಾದಾಗ ಆಕೆ ತಪ್ಪಿಸಿಕೊಂಡು ಅರಮನೆಯನ್ನು ಸೇರುತ್ತಾಳೆ . ನಂತರ ರಾಜದಂಪತಿಗಳು ಸುದೇವ ಮುನಿಯ ಆಶ್ರಯದಲ್ಲಿದ್ದಾಗ , ಮಹಿಷನ ಅಣತಿಯಂತೆ ಮಹೋಧರ ರಕ್ಕಸನು ಸುದೇವ ಮುನಿಯ ಮೇಲೆ ಶರಪ್ರಯೋಗ ನಡೆಸುತ್ತಾನೆ. ಆಗ ಮುನಿಯು ದೇವಿಯಲ್ಲಿ ಮೊರೆಯಿಡುತ್ತಾನೆ .ಆಗ ದೇವಿಯು ತನ್ನ ಪರಿವಾರ ದೈವಗಳೊಂದಿಗೆ ನಿಂತು ರಕ್ಕಸನ ಜೊತೆಗೆ ಹೋರಾಡುವಳು. ನಂತರ ಮಹಿಷನು ಸ್ವತಃ ದೇವಿಯೊಂದಿಗೆ ಯುದ್ಧಕ್ಕೆ ನಿಂತನು . ಅತನ ಆರ್ಭಟವನ್ನು ತಿಳಿದು ದೇವಿಯು ಆತನನ್ನು ಸಂಹರಿಸಲು ಮುಂದಾಗುತ್ತಾಳೆ . ಈ ರೀತಿಯಾಗಿ ಶ್ರೀ ದೇವಿಯು ಮಹಿಷನ ಮರ್ಧನ ಮಾಡುತ್ತಾಳೆ .

ನಂತರದಲ್ಲಿ ಗಾಲವ ಮಹರ್ಷಿಯು ಪಂಚಮಿಕಾನನ ಸ್ಥಳದಲ್ಲಿ ಘೋರವಾದ ತಪಸ್ಸನ್ನು ಆಚರಿಸಿ, ಆತನ ತಪಸ್ಸಿಗೆ ಒಲಿದು ಆತನ ಕೋರಿಕೆಯಂತೆ ಪಂಚಮಿಕಾನನ ಪ್ರದೇಶದಲ್ಲಿಯೇ ಪಂಚಮಪುತ್ರಿ ನೀಲರತಿ ದೇವಿಯು ನೆಲೆನಿಲ್ಲುತ್ತಾಳೆ. ಅಂದಿನಿಂದ ದೇವಿಯು ಶ್ರೀ ಕ್ಷೇತ್ರದಲ್ಲಿ ಮಹಿಷಮರ್ಧಿನಿಯಾಗಿ ಸೀತಾನದಿಯ ತಟದಲ್ಲಿ ನೆಲೆನಿಂತಳು. ದೇವಿಯ ನೀಲರತಿ ಎಂಬ ನಾಮಾಂಕಿತದಿಂದ ಈ ಕ್ಷೇತ್ರಕ್ಕೆ ನೀಲಾವರ ಎಂಬ ಹೆಸರು ಬಂತು. ಶ್ರೀ ಮಹಿಷಮರ್ಧಿನಿಯು ಶಂಕಚಕ್ರಧಾರಿಣಿಯಾಗಿ , ಚತುರ್ಭುಜೆಯಾಗಿಯೂ , ದೇವಿಯ ಬಲಭಾಗದಲ್ಲಿ ಗಣಪತಿ ದೇವರು ಹಾಗೂ ಎಡಬಾಗದಲ್ಲಿ ಕ್ಷೇತ್ರಪಾಲ ಮತ್ತು ವೀರಭದ್ರ ದೇವರುಗಳನ್ನು ತನ್ನ ಸಹಪಾಲಕರನ್ನಾಗಿಸಿಕೊಂಡು ಕ್ಷೇತ್ರದಲ್ಲಿ ನೆಲೆನಿಂತಿದ್ದಾಳೆ.
ಪರಿವಾರ ದೈವಗಳಾಗಿ ಚಾಮುಂಡೇಶ್ವರಿ ( ಹುಲಿ ದೇವರು ) , ಶ್ರೀ ವೀರಕಲ್ಲುಕುಟಿಗ ದೇವರು ನೆಲೆನಿಂತಿದ್ದಾರೆ.

ಇಲ್ಲಿನ ವೀರಕಲ್ಲುಕುಟಿಗ ದೇವರ ಒಂದು ವಿಶೇಷವೆಂದರೆ , ಇಲ್ಲಿ ನಮ್ಮ ಬೇಡಿಕೆಗಳನ್ನು ದೇವರ ಮುಂದಿಟ್ಟು ಚಿಕ್ಕ ಚಿಕ್ಕ ಕಲ್ಲುಗಳನ್ನು ಆ ಸ್ಥಳದಲ್ಲಿ ಹಾಕಿದರೆ ನಮ್ಮ ಬೇಡಿಕೆಗಳು ನೆರವೇರುವುದು ಎಂಬುದು ಭಕ್ತರ ಒಂದು ನಂಬಿಕೆ .

ಪ್ರತಿವರ್ಷ ಶುಕ್ಲಪಕ್ಷದ ಪಂಚಮಿಯಂದು ಪಂಚಮಿ ಕಾನನದಲ್ಲಿ ಪಂಚಮಿ ತೀರ್ಥಸ್ನಾನ , ದೀಪೋತ್ಸವ , ತೆಪ್ಪೋತ್ಸವ , ಸಣ್ಣ ರಥೋತ್ಸವ ಹಾಗೂ ಷೃಷ್ಠಿ ಮಹೋತ್ಸವವು ಅದ್ಧೂರಿಯಾಗಿ ನಡೆಯುತ್ತದೆ. ಚೈತ್ರ ಪೌರ್ಣಮಿಯ ಕೃಷ್ಣಪಕ್ಷದ ದಿನದಂದು ವರ್ಷಂಪ್ರತಿ ಶ್ರೀ ದೇವಿಗೆ ಅದ್ಧೂರಿಯಾಗಿ ಶ್ರೀ ಮನ್ಮಹಾರಥೋತ್ಸವ ನಡೆಯುತ್ತದೆ. ಈ ಜಾತ್ರಾ ಸಮಯದಲ್ಲಿ ದೇವಿಗೆ ಸುಪ್ರಭಾತೋತ್ಸವ, ಹಂಸೋತ್ಸವ , ಸಿಂಹವಾಹನೋತ್ಸವ , ಪಲ್ಲಕ್ಕಿ ಉತ್ಸವ , ರಂಗಪೂಜೆ ಹಾಗೂ ಇತ್ಯಾದಿ ಸೇವೆಗಳು ವಿಜ್ರಂಭಣೆಯಿಂದ ನಡೆಯುತ್ತದೆ.

Neelavara kshethra: The story based on Nagarati Mahishamardhini, the fifth daughter of Shankachuda..!

ಈ ಕ್ಷೇತ್ರದ ದೇವಿಯ ವಿಗ್ರಹವು ಅಭೂತಪೂರ್ವವಾದ ರುಧ್ರಾಕ್ಷಿ ಶಿಲೆಯಿಂದ ನಿರ್ಮಿಸಿರುವುದು ಇಲ್ಲಿನ ವಿಶೇಷ . ಶ್ರೀ ದೇವಿಯು ಗ್ರಾಮವನ್ನು ರಕ್ಷಿಸುವ ಗ್ರಾಮದೇವತೆಯಾಗಿಯೂ , ಕುಲವನ್ನು ಕಾಯುವ ಕುಲದೇವತೆಯಾಗಿಯೂ, ಇಷ್ಟದೇವತೆಯಾಗಿಯೂ , ತನ್ನ ನಂಬಿ ಬರುವ ಭಕ್ತರ ಸಂಕಷ್ಟಗಳ ಪರಿಹರಿಸುವ ಕಾಮಧೇನುವಾಗಿಯೂ ಇಲ್ಲಿ ನೆಲೆನಿಂತಿದ್ದಾಳೆ.

ಬ್ರಹ್ಮಾವರದಿಂದ ೭ ಕಿ. ಮೀ. ದೂರದಲ್ಲಿ ಶ್ರೀ ಕ್ಷೇತ್ರವಿದೆ. ಬ್ರಹ್ಮಾವರ ,ಕುಂಜಾಲು ,ಹೆಬ್ರಿ ಮಾರ್ಗವಾಗಿ ಹೋದರೆ ಕುಂಜಾಲು ಎಂಬಲ್ಲಿ ನೀಲಾವರ ಕ್ಷೇತ್ರದ ಸ್ವಾಗತ ಗೋಪುರ ಸಿಗುತ್ತದೆ. ಗೋಪುರದ ಒಳಗೆ ಸ್ವಲ್ಪ ದೂರ ಕ್ರಮಿಸಿದರೆ ನೀಲಾವರ ಮಹಿಷಮರ್ಧಿನಿ ದೇವಾಲಯ ಸಿಗುತ್ತದೆ.

ಇದನ್ನೂ ಓದಿ : Idagunji ganapathi: 1500 ವರ್ಷಕ್ಕೂ ಹಳೆಯದಾದ ದೇವಾಲಯದ ಪೌರಾಣಿಕ ಹಿನ್ನಲೆಯನ್ನು ನೀವು ಬಲ್ಲಿರಾ..?

(Neelavara kshethra) Karnataka is a land famous for many Hindu temples. Our temples reflect the insight of our culture and customs. Many temples have created their arc in exuding many religious and spiritual beliefs. This field is one of many such religious fields. The temple that I am going to introduce to you is about the realm of Nagarati Devi, one of the five daughters of a Maharaja called Shankachuda. The story of Nagarati Devi Mahishamardhinia is before you.

Comments are closed.