ಬೀದರ್ ನ ಆ ಬಾಬಾ ಭಾನಾಮತಿಯನ್ನ ಹೇಗೆ ಮಾಡ್ತಾರೆ ಮತ್ತು ಅದಕ್ಕೆ ಬೇಕಾದ ಸಾಮಾಗ್ರಿಗಳ ಬಗ್ಗೆ ಎಲ್ಲಾ ಮಾಹಿತಿ ಕೊಡುತ್ತಿದ್ದ. ಸುಮಾರು ಎರಡು ಗಂಟೆ ಹೊತ್ತು ಅವನೊಂದಿಗೆ ಕೂತಿದ್ದ ನಮಗೆ ಅದ್ಯಾಕೆ ಅಷ್ಟು ಸಮಯ ಕೊಟ್ನೋ ಗೊತ್ತಿಲ್ಲ.. ಬಹುಶಃ ಅದುವರೆಗೂ ಆತನನ್ನ ಯಾರೊಬ್ಬರು ಭಾನಾಮತಿ ಅಂದ್ರೆ ಏನು ಅಂತ ಕೇಳಿರಲಿಲ್ವ. ಅವನು ಎಲ್ಲವನ್ನೂ ತಿಳಿದಿರೋ ಮಾಂತ್ರಿಕ ಅಂತ ಹುಬ್ಬಿಸಿರಲಿಲ್ಲ. ಆ ಕೆಲಸವನ್ನ ನಾನು ಮಾಡಿದ್ದೇ ಅನ್ಸುತ್ತೆ..ಹೌದು.. ಮಾತಿನ ನಡುವೆ ನಾನು ಆತನ ಜ್ಞಾನವನ್ನ ಹೊಗಳುತ್ತಿದ್ದ ಕಾರಣವೋ ಏನೋ… ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದ. ಅಂದಾಗೆ ಭಾನಾಮತಿ ಮಾಡೋಕೆ ತುಂಡು ಬಟ್ಟೆ, ತಲೆಗೂದಲು, ವೀರ್ಯ, ಖುತುಸ್ರಾವವಾದ ಬಟ್ಟೆ, ಮೂತ್ರ ಅಂಟಿದ ಮಣ್ಣು…ಹೀಗೆ ಇಂತಿಂಥವು ಇದ್ರೆ ಸಾಕು ಅಂತೇಳಿದ್ದ. ಅದರೊಟ್ಟಿಗೆ ಅವನು ಮತ್ತೂ ಒಂದಷ್ಟು ವಿಷಯಗಳನ್ನ ಹೊರ ಹಾಕಿದ್ದ.

ಈ ಭಾನಾಮತಿಯನ್ನ ಮೂರು ಬಗೆಯಲ್ಲಿ ಪ್ರಯೋಗ ಮಾಡಬಹುದು ಅಂದಿದ್ದ..
1.ಮಾನವನ ಮೇಲಿನ ಪ್ರಯೋಗ
2.ಪ್ರಾಣಿಗಳ ಮೇಲಿನ ಪ್ರಯೋಗ
3.ನಿರ್ಜಿವ ವಸ್ತುಗಳ ಮೇಲಿನ ಪ್ರಯೋಗ
ಹೀಗೆ ಮೂರು ಬಗೆಯಲ್ಲಿ ಭಾನಾಮತಿಯನ್ನ ಮಾಡ್ತಾರಂತೆ… ಅಂದಾಗೆ ಮಾನವನ ಮೇಲಿನ ಪ್ರಯೋಗ ಅಂದ್ರೆ ವ್ಯಕ್ತಿಯ ಮೇಲೆ ಭಾನಾಮತಿ ಮಾಡೋದು… ಈ ರೀತಿ ಭಾನಾಮತಿ ಮಾಡೋದು ಮನುಷ್ಯನ ಕೈ ಕಾಲು ಬಿದ್ದು ಹೋಗುತ್ತವಂತೆ.. ಸಾಯೋಕು ಆಗದೆ ಬದುಕೋಕು ಆಗದೆ ನರಳ್ತಾನಂತೆ… ಇದ್ದಕ್ಕಿದ್ದಂಗೆ ಖಾಯಿಲೆಗಳು ಕಾಣಿಸಿಕೊಳ್ಳುತ್ತವಂತೆ.. ಬಹುಶಃ ನಾವು ನೀವು ಗಮನಿಸರಬೇಕು… ವೈದ್ಯರ ಬಳಿಗೆ ಹೋಗಿ ತೋರಿಸಿದ್ರು ಕೆಲವೊಂದು ಖಾಯಿಲೆ ಗುಣವಾಗೋದಿಲ್ಲ.. ಅಲ್ಲದೆ ವೈದ್ಯರು ಬಳಿಯೂ ಬಂದಿರೊ ಖಾಯಿಲೆ ಏನು ಅಂತ ಗೊತ್ತಾಗೋದಿಲ್ಲ… ಇಷ್ಟು ಆದ್ರೆ ಸಾಕು ನಮ್ಮ ಜನ ಅದಕ್ಕೆ ಮಾಟ ಮಂತ್ರ ಅಂತಾರೆ… ಉತ್ತರ ಕರ್ನಾಟಕ ಭಾಗದ ಜನ ಈ ರೀತಿ ಪತ್ತೆಯಾಗದ ಕಾಯಿಲೆಗೆ ಇಡೋ ಹೆಸ್ರು ಭಾನಾಮತಿ…

ಈ ಭಾನಾಮತಿಗೆ ಒಳಗಾದ ವ್ಯಕ್ತಿ ವಿಚಿತ್ರವಾಗಿ ಆಡ್ತಾನಂತೆ.. ಕೆಲವೊಮ್ಮೆ ಕೈ ಕಾಲುಗಳಲ್ಲಿ ಊತ ಕಾಣಿಸಿಕೊಳ್ತದಂತೆ.. ವೈಧ್ಯರ ಬಳಿಗೆ ಹೋದ್ರೆ ನೋ ಯೂಸ್… ಅದು ಯಾವ ಖಾಯಿಲೆ ಅನ್ನೋದು ಗೊತ್ತಾಗೋದಿಲ್ಲವಂತೆ… ಇನ್ನು ಮೈ ಮೇಲೆ ಇದ್ದಕ್ಕಿದ್ದಂಗೆ ಕೆಂಪು ಬರೆಗಳು ಮೂಡ್ತವೆ.. ಇದಕ್ಕೆ ಕಾರಣವೇನು ಅಂತ ಮೂಢ ಜನ ಹತ್ತಾರು ವೈದ್ಯರ ಬಳಿಗೆ ಹೋಗೋದೆ ಇಲ್ಲ..ತಮ್ಮೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸ್ತಾರೆ… ಅಲ್ಲಿ ಯಾವ ಖಾಯಿಲೆ ಅಂತ ಗೊತ್ತಾಗಲಿಲ್ಲ ಅಂದ ತಕ್ಷಣ ಮಾಂತ್ರಿಕನ ಬಳಿಗೆ ಓಡೋಡಿ ಬರ್ತಾರೆ…

ಇನ್ನು ಎರಡನೇಯದು ಪ್ರಾಣಿಗಳ ಮೇಲಿನ ಪ್ರಯೋಗ… ಚೆನ್ನಾಗಿದ್ದ ಹಸು ಕಾರಣವೇ ಇಲ್ಲದೆ ಸೊರಗಿ ಹೋಗೋದು… ಇದ್ದಕ್ಕಿದ್ದಂತೆ ಸಾವನ್ನಪ್ಪೋದು, ಕೆಚ್ಚಲಿನಿಂದ ಹಾಲಿನ ಬದಲು ರಕ್ತ ಬರೋದು… ಈ ರೀತಿ ಆದ್ರೆ ಅದಕ್ಕೆ ಭಾನಾಮತಿಯ ಹೆಸ್ರು… ಪಶು ವೈದ್ಯರನ್ನ ಸಂಪರ್ಕಿಸಿ ಖಾಯಿಲೆಗೆ ಕಾರಣವೇನು ಅಂತ ತಿಳಿದುಕೊಳ್ಳೊ ಯತ್ನವನ್ನ ಜನ ಮಾಡೋದೆ ಇಲ್ಲ… ಇನ್ನು ನಿರ್ಜಿವ ವಸ್ತುಗಳ ಮೇಲೆ ಭಾನಾಮತಿ… ಬಟ್ಟೆ ಹೊತ್ತಿಕೊಂಡು ಉರಿಯೋದು, ಇದ್ದ ವಸ್ತು ಇದ್ದ ಜಾಗದಲ್ಲಿ ಇಲ್ಲದೆ ಮತ್ತೆಲ್ಲೋ ಕಾಣಿಸೋದು, ಭೂಮಿ ಬರಡಾಗೋದು,. ಹೀಗೆ ಹತ್ತು ಹಲವು ರೀತಿಯಲ್ಲಿ ನಿರ್ಜಿವ ವಸ್ತುಗಳ ಮೇಲೆ ಭಾನಾಮತಿ ಮಾಡಲಾಗುತ್ತದೆ ಎಂದಿದ್ದ ಬೀದರ್ ಬಾಬಾ…

ಅಂದಾಗೆ ಉತ್ತರಕರ್ನಾಟಕ ಭಾಗದಲ್ಲಿ ಇಂದಿಗೂ ಈ ಭಾನಾಮತಿಯ ಭಯವಿದೆ. ಮನೆ ಮೇಲೆ ಕಲ್ಲುಗಳು ಬೀಳ್ತವೆ. ಕಾರಣ ಗೊತ್ತಾಗೋದಿಲ್ಲ. 1980ರಿಂದಲೂ ಈ ಭಾಗದ ಜನರಲ್ಲಿರೋ ಮೂಢನಂಬಿಕೆಯನ್ನ ಹೋಗಲಾಡಿಸೋಕೆ ಅನೇಕ ಯತ್ನಗಳು ಸರ್ಕಾರದ ಕಡೆಯಿಂದ ಆಗುತ್ತಿದೆಯಾದ್ರೂ ಜನರಿಗೆ ದೇವರ ಮೇಲೆ ಎಷ್ಟರ ಮಟ್ಟಿಗೆ ಭಕ್ತಿ ಇದೆಯೋ ಅಷ್ಟೆ ಮಟ್ಟದ ನಂಬಿಕೆ ಭಾನಾಮತಿ ಮೇಲಿದೆ.. ಅಂದಾಗೆ ಈ ಹಾವು ಚೇಳುಗಳು ಕಾಣಿಸೋದು, ಮನೆಗಳ ಮೇಲೆ ಕಲ್ಲು ಬೀಳೋದು, ಮೈ ಮೇಲೆ ಬರೆ ಮೂಡೋದು, ಎಲ್ಲವೂ ನಾಟಕವೇ… ಅದು ಹೇಗೆ ಅಂತ ನಿಮಗೆ ಉದಾಹರಣೆ ಸಮೇತ ಮುಂದಿನ ಸಂಚಿಕೆಯಲ್ಲಿ ತಿಳಿಸ್ತೀನಿ..
( ಮುಂದುವರೆಯುತ್ತದೆ…)
ಇದನ್ನೂ ಓದಿ :
A stone’s throw on the house and a scar on the hand is a problem