Horoscope : ದಿನಭವಿಷ್ಯ : ಬ್ಯಾಂಕಿಂಗ್‌ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ

ಮೇಷರಾಶಿ
ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮ ಮಾಡಿ, ಉದ್ಯಮಿಗಳು ವ್ಯಾಪಾರದಲ್ಲಿ ನಷ್ಟ ಅನುಭವಿಸಲಿದ್ದಾರೆ, ವ್ಯಾಪಾರದ ಸುಧಾರಣೆಗೆ ಹಣ ವ್ಯಯಿಸಬೇಕಾದ ಸಾಧ್ಯತೆ, ಹೊಸ ಹವ್ಯಾಸವನ್ನು ರೂಢಿಸಿಕೊಳ್ಳಿ, ಕೆಲಸದ ಒತ್ತಡ ನಡುವಲ್ಲೇ ವಿರಾಮ ತೆಗೆದುಕೊಳ್ಳಲು ಪ್ರಯತ್ನಿಸಿ.

ವೃಷಭರಾಶಿ
ಅನಗತ್ಯ ಚಿಂತನೆಯನ್ನುವ್ಯರ್ಥ ಮಾಡಬೇಡಿ, ನಿಮ್ಮ ಗುರಿ ಸರಿಯಾದ ಧಿಕ್ಕಿನತ್ತ ಇರಲಿ, ಅತಿರಂಜಿತ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ, ಇತರರ ಕೋಪಕ್ಕೆ ಬಲಿಯಾಗಬೇಕಾದ ಸಾಧ್ಯತೆ, ಅಗತ್ಯವಿರುವ ಸ್ನೇಹಿತರನ್ನು ಭೇಟಿಯಾಗಿ ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ಪ್ರೀತಿಯಲ್ಲಿ ಘರ್ಷಣೆ ಉಂಟಾಗಲಿದೆ.

ಮಿಥುನರಾಶಿ
ಆರೋಗ್ಯದ ದೃಷ್ಟಿಯಿಂದ ಉತ್ತಮ ದಿನ, ನೀವಿಂದು ಹರ್ಷ ಚಿತ್ತದ ಮನಸ್ಥಿತಿಯಲ್ಲಿರುವಿರಿ, ದುಶ್ಚಟದಿಂದ ದೂರವಿರಿ, ಸಂಗಾತಿಗೆ ನಿಮ್ಮ ಬೆಲೆ ಅರ್ಥವಾಗಲಿದೆ, ನೆರೆ ಹೊರೆಯವರು ನಿಮಗೆ ಇಂದು ಸಹಕಾರವನ್ನು ನೀಡಲಿದ್ದಾರೆ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ದೂರ ಪ್ರಯಾಣ ನಿಮಗೆ ಲಾಭದಾಯಕವಾಗಲಿದೆ.

ಕರ್ಕಾಟಕರಾಶಿ
ಬ್ಯಾಂಕಿಂಗ್‌ ವ್ಯವಹಾರವನ್ನು ಜಾಗರೂಕತೆಯಿಂದ ನಿರ್ವಹಿಸಿರಿ, ಸಂಬಂಧಿಕರು ಅನಿರೀಕ್ಷಿತ ಉಡುಗೊರೆಗಳನ್ನು ನೀಡಲಿದ್ದಾರೆ, ಅನಗತ್ಯ ಅನುಮಾನ ಸಂಬಂಧವನ್ನು ಹಾಳು ಮಾಡುತ್ತದೆ, ಇತರರಿಗೆ ಎಂದಿಗೂ ಅನುಮಾನಿಸದಿರಿ, ಕುಟುಂಬದ ಸದಸ್ಯರ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯುವಿರಿ, ಸಂಗಾತಿಯ ಬೇಡಿಕೆಗೆ ಬೆಲೆ ನೀಡಿ.

ಸಿಂಹರಾಶಿ
ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಕಮಿಷನ್‌ ವ್ಯವಹಾರದಿಂದ ಲಾಭ, ಮೊಮ್ಮಕ್ಕಳು ಅಪಾರ ಆನಂದವನ್ನು ಪಡೆಯುತ್ತಾರೆ, ಶುದ್ದವಾದ ಪ್ರೀತಿಯನ್ನು ಅನುಭವಿಸಿ, ಧನಾತ್ಮಕ ಯೋಚನೆಗಳು ನಿಮಗೆ ಫಲವನ್ನು ನೀಡಲಿದೆ, ಯೋಗ್ಯ ಮದುವೆಯ ಪ್ರಸ್ತಾಪ ಒದಗಿ ಬರಲಿದೆ, ಸ್ನೇಹಿತರಿಂದ ಆರ್ಥಿಕ ಸಹಕಾರ ದೊರೆಯಲಿದೆ.

ಇದನ್ನೂ ಓದಿ : ಪಾರ್ಲಿಮೆಂಟ್ ಭವನದ ವಿನ್ಯಾಸಕ್ಕೆ ಸ್ಪೂರ್ತಿಯಾದ ದೇಗುಲ

ಕನ್ಯಾರಾಶಿ
ಹವ್ಯಾಸಗಳನ್ನು ಮುಂದುವರಿಸಿ, ಕೆಲಸದಲ್ಲಿ ಹೆಚ್ಚಿನ ಆನಂದವನ್ನು ಅನುಭವಿಸುವಿರಿ, ಪ್ರಯಾಣದ ವೇಳೆಯಲ್ಲಿ ಅಮೂಲ್ಯ ವಸ್ತುಗಳ ಬಗ್ಗೆ ಗಮನ ಹರಿಸಿ, ಆಭರಣ ಹಾಗೂ ಗೃಹೋಪಯೋಗಿ ವಸ್ತುಗಳ ಖರೀದಿ ಸಾಧ್ಯತೆ, ವೈವಾಹಿಕ ಜೀವನ ಸುಖಮಯವಾಗಿರಲಿದೆ, ಇತರರು ನಿಮ್ಮನ್ನು ತಪ್ಪಾಗಿ ತಿಳಿಯುವ ಸಾಧ್ಯತೆಯಿದೆ.

ತುಲಾರಾಶಿ
ವ್ಯಾಯಾಮದ ಮೂಲಕ ತೂಕವನ್ನು ನಿಯಂತ್ರಿಸಿಕೊಳ್ಳಿ, ಆಸ್ತಿ ವ್ಯವಹಾರಗಳು ಸಾಕಾರಗೊಳ್ಳುತ್ತವೆ, ಅಸಾಧಾರಣ ಲಾಭವನ್ನು ಪಡೆದುಕೊಳ್ಳುತ್ತವೆ, ಆಹ್ಲಾದಕರ ನಡವಳಿಕೆ ಕುಟುಂಬದ ಜೀವನವನ್ನು ಬೆಳಗಿಸುತ್ತದೆ, ನಿಮ್ಮ ನಗು ಇತರರನ್ನು ಆಕರ್ಷಿಸಲಿದೆ, ಇತರರು ನಿಮಗೆ ಸಹಾಯವನ್ನು ಮಾಡಲಿದ್ದಾರೆ, ಹೊಂದಾಣಿಕೆ ಕಾರ್ಯಸಾಧನೆ.

ವೃಶ್ಚಿಕರಾಶಿ
ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ, ಕುಟುಂಬದವರ ಜೊತೆಗೆ ಸಂತೋಷದಿಂದ ಕಾಲ ಕಳೆಯುವಿರಿ, ಭೂಮಿಗೆ ಸಂಬಂಧಿಸಿದ ಹೂಡಿಕೆಗಳು ನಿಮಗೆ ಇಂದು ಲಾಭವನ್ನು ತಂದುಕೊಡಲಿದೆ, ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ, ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ, ನೀವು ತುಂಬಾ ಪ್ರೀತಿಸುವ ವ್ಯಕ್ತಿಯ ನಡವಳಿಕೆ ಬೇಸರವನ್ನು ತರಿಸಲಿದೆ.

ಧನಸುರಾಶಿ
ಸುತ್ತಮುತ್ತಲಿನ ಜನರು ನಿಮಗೆ ಬೆಂಬಲವನ್ನು ನೀಡಲಿದ್ದಾರೆ. ಇದರಿಂದಾಗಿ ಇಡೀ ದಿನ ಸಂತೋಷದಿಂದ ಇರುತ್ತೀರಿ, ಹಣಕಾಸಿನ ವಿಚಾರದಲ್ಲಿ ರಾತ್ರಿಯ ವೇಳೆಯಲ್ಲಿ ಲಾಭವನ್ನು ಪಡೆಯಲಿದ್ದೀರಿ, ನೀವು ಈ ಹಿಂದೆ ನೀಡಿದ್ದ ಸಾಲ ಮರಳಿ ಬರಲಿದೆ, ಹಳೆಯ ಸ್ನೇಹಿತರ ಭೇಟಿಯಿಂದ ಮನಸಿಗೆ ಸಂತಸ, ಹೊಂದಾಣಿಕೆಯಿಂದ ಕಾರ್ಯ ಸಾಧನೆ.

ಮಕರರಾಶಿ
ನಿಮಗಿಂದು ಅನೇ ಸಂತೋಷದ ಕ್ಷಣಗಳು ಎದುರಾಗಲಿದೆ, ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವನ್ನು ಕಾಣಲಿದೆ, ಸಾಂದರ್ಭಿಕ ಮತ್ತು ಅನಿರೀಕ್ಷಿತ ನಡುವಳಿಕೆ ಇತರರನ್ನು ನಿರಾಸೆಗೊಳಿಸಲಿದೆ, ದೂರದ ಪ್ರವಾಸ ನಿಮಗೆ ಸಂತಸವನ್ನು ತರಲಿದೆ, ಆಸ್ತಿ ವಿಚಾರದಲ್ಲಿ ಲಾಭ ದೊರೆಯಲಿದೆ, ಹಿರಿಯ ಸಲಹೆ ಆಲಿಸುವುದರಿಂದ ಜಯ.

ಕುಂಭರಾಶಿ
ಗಾಳಿಯಲ್ಲಿ ಕೋಟೆ ಕಟ್ಟಿ ಸಮಯ ವ್ಯರ್ಥ ಮಾಡಬೇಡಿ, ದುಂದು ವೆಚ್ಚಕ್ಕೆ ಕಡಿವಾಣವನ್ನು ಹಾಕಿ, ಕುಟುಂಬದ ಸ್ಥಿತಿ ಸಾಮಾನ್ಯವಾಗಿರಲಿದೆ, ವಿವಾದಗಳು ಬಗೆ ಹರಿಯಲಿದೆ, ವ್ಯವಹಾರಕ್ಕೆ ಸಂಬಂಧಿಸಿದಂತೆ ತಜ್ಞರ ಸಲಹೆಯನ್ನು ಪಡೆಯುವುದು ಸೂಕ್ತ, ಸಾಮಾಜಿಕ ಕಾರ್ಯಗಳಲ್ಲಿ ಮನ್ನಣೆ ದೊರೆಯಲಿದೆ, ಕೆಲವೊಂದು ವಿಚಾರದಲ್ಲಿ ಅಸಮಾಧಾನ.

ಮೀನರಾಶಿ
ಕಷ್ಟದ ಪರಿಸ್ಥಿತಿಯಿಂದ ಅಸಮಧಾನಗೊಳ್ಳಬೇಡಿ, ನಿಮ್ಮ ಸಂತೋಷದ ಮೌಲ್ಯವನ್ನು ಅರಿತುಕೊಳ್ಳಿ, ಸಾಮಾಜಿಕ ಕೂಟಗಳಲ್ಲಿ ಭಾಗಿಯಾಗುವಿರಿ, ಯಾರ ಸಲಹೆಯನ್ನು ಪಡೆಯದೇ ಹಣದ ಹೂಡಿಕೆ ಮಾಡಬೇಡಿ, ಬಿಡುವಿನ ಸಮಯದಲ್ಲಿ ಇತರರ ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ಮಕ್ಕಳಿಂದ ಸಹಾಯ ದೊರೆಯಲಿದೆ.

ಇದನ್ನೂ ಓದಿ :

ಗೆಜ್ಜೆಗಿರಿಯಲ್ಲೀಗ ನವರಾತ್ರಿ ವೈಭವ : ಪುಣ್ಯಕ್ಷೇತ್ರಕ್ಕೆ ಹರಿದು ಬಂತು ಭಕ್ತ ಸಾಗರ

ನಿಂಬೆ ಹಣ್ಣಿನಿಂದ ರಕ್ತ ಜಿನುಗುವುದು ಹೇಗೆ ಗೊತ್ತಾ ? ದೀಪ ತಾನಾಗಿಯೇ ಹೊತ್ತಿಕೊಳ್ಳುತ್ತದೆ ಹೇಗೆ ಗೊತ್ತಾ ?

Horoscope today astrological prediction for October 16

Comments are closed.