Netflix India :ಗ್ರಾಹಕರನ್ನು ಸೆಳೆಯಲು ಪ್ಲಾನ್​ ದರಗಳಲ್ಲಿ ಭರ್ಜರಿ ಇಳಿಕೆ ಮಾಡಿದ ನೆಟ್​ಫ್ಲಿಕ್ಸ್​

ಕೊರೊನಾ ಸಾಂಕ್ರಾಮಿಕ ಆರಂಭವಾದ ಬಳಿಕ ಒಟಿಟಿ ವೇದಿಕೆಗಳಿಗೆ ಬಹುಬೇಡಿಕೆ ಬಂದಿತ್ತು. ಸಿನಿಮಾ ಮಂದಿರಗಳು ಬಂದ್​ ಆದಮೇಲಂತೂ ಬಹುತೇಕರು ಒಟಿಟಿ ವೇದಿಕೆಗಳ ಮೂಲಕವೇ ತಮ್ಮ ನೆಚ್ಚಿನ ಸಿನಿಮಾಗಳನ್ನು ವೀಕ್ಷಿಸುತ್ತಿದ್ದಾರೆ. ವೆಬ್​ಸಿರೀಸ್​ಗಳು ಕೂಡ ಜನರಿಗೆ ಒಳ್ಳೆಯ ಮನರಂಜನೆ ನೀಡುತ್ತಿದೆ. ಈ ರೀತಿಯ ಒಟಿಟಿ ಪ್ರಿಯರಿಗೆ ನೆಟ್​ಫ್ಲಿಕ್ಸ್(Netflix India)​ ಗುಡ್​ನ್ಯೂಸ್​ ನೀಡಿದೆ.


ಒಟಿಟಿ ವೇದಿಕೆಯಲ್ಲಿ ಪೈಪೋಟಿ ಹೆಚ್ಚುತ್ತಿರುವ ನಡುವೆಯೇ ಬಳಕೆದಾರರನ್ನು ತನ್ನತ್ತ ಸೆಳೆಯುವ ಸಲುವಾಗಿ ನೆಟ್​ಫ್ಲಿಕ್ಸ್​​ ತನ್ನ ಚಂದಾದಾರಿಕೆ ದರದಲ್ಲಿ ಭರ್ಜರಿ ಇಳಿಕೆ ಮಾಡಿದೆ. ಅಮೆಜಾನ್​ ಪ್ರೈಮ್​, ಡಿಸ್ಲೆ ಪ್ಲಸ್​ ಹಾಟ್​ಸ್ಟಾರ್​ ಸೇರಿದಂತೆ ಪ್ರತಿಸ್ಪರ್ಧಿ ಒಟಿಟಿ ವೇದಿಕೆಗಳಿಗೆ ಠಕ್ಕರ್​ ನೀಡುವ ಸಲುವಾಗಿ ನೆಟ್​ಫ್ಲಿಕ್ಸ್​ ಭರ್ಜರಿ ಆಫರ್​ ನೀಡಿದೆ.


ಹ್ಯಾಪಿ ನ್ಯೂ ಪ್ರೈಸಸ್​​ ಎಂಬ ಹೆಸರಿನಲ್ಲಿ ನೆಟ್​ಫ್ಲಿಕ್ಸ್​​ ಈ ಭರ್ಜರಿ ಆಫರ್​ ನೀಡಿದೆ. ಈ ಹಿಂದೆ ಮಾಸಿಕ 199 ರೂಪಾಯಿ ಇದ್ದ ಮೊಬೈಲ್​ ಪ್ಲಾನ್​ ಇದೀಗ 149 ರೂಪಾಯಿಗೆ ಲಭ್ಯವಿದೆ. ಸ್ಟಾಂಡರ್ಡ್​ ಪ್ಲಾನ್​ಗೆ ಈ ಹಿಂದೆ ಮಾಸಿಕೆ 499 ರೂಪಾಯಿ ಪಾವತಿ ಮಾಡಬೇಕಿತ್ತು. ಆದರೆ ಈಗ ಪರಿಷ್ಕೃತ ದರದ ರೂಪದಲ್ಲಿ ನೀವು ಕೇವಲ 199 ರೂಪಾಯಿ ಪಾವತಿ ಮಾಡಿದರೆ ಸಾಕು. ಅದೇ ರೀತಿ 799 ರೂಪಾಯಿಗೆ ಲಭ್ಯವಿದ್ದ ಪ್ರೀಮಿಯಂ ಪ್ಲಾನ್​ ಕೇವಲ 649 ರೂಪಾಯಿಗೆ ಲಭ್ಯವಿದೆ.


ಈ ರೀತಿ ನೆಟ್​ಫ್ಲಿಕ್ಸ್​ ಯೋಜನೆಗಳ ದರ ಕಡಿತ ಮಾಡುವುದರ ಹಿಂದೆ ಹೊಸ ವಿಷಯಗಳು ಅಡಗಿದೆ. ಕಳೆದ ಮೂರು ವಾರಗಳಿಂದ ನೆಟ್​ಫ್ಲಿಕ್ಸ್​​ನಲ್ಲಿ ದೊಡ್ಡ ಮಟ್ಟದಲ್ಲಿ ಕಂಟೆಂಟ್​ಗಳನ್ನು ತರಲಾಗುತ್ತಿದೆ. ಹೊಸ ಪ್ರೇಕ್ಷಕರು ಸಹ ಇದನ್ನು ಎಂಜಾಯ್​ ಮಾಡಬೇಕು ಎಂಬ ಕಾರಣಕ್ಕೆ ಈ ರೀತಿ ದರ ಇಳಿಕೆ ಮಾಡಿದ್ದೇವೆ ಎಂದು ನೆಟ್​ಫ್ಲಿಕ್ಸ್​ ಇಂಡಿಯಾ ಕಂಟೆಂಟ್​ ಉಪಾಧ್ಯಕ್ಷೆ ಮೋನಿಕಾ ಶೆರ್ಗಿಲ್​ ಹೇಳಿದ್ರು.
ಅಮೆಜಾನ್​ ಪ್ರೈಮ್​​ ಕೆಲ ದಿನಗಳ ಹಿಂದಷ್ಟೇ ತನ್ನ ವಾರ್ಷಿಕ ಪ್ಲಾನ್​ ದರವನ್ನು ಏರಿಕೆ ಮಾಡಿತ್ತು. ಈ ಹಿಂದೆ 999 ರೂಪಾಯಿಗೆ ಲಭ್ಯವಿದ್ದ ಪ್ರೈಮ್​ ವಾರ್ಷಿಕ ಪ್ಲಾನ್​ನ್ನು 1499 ರೂಪಾಯಿಗೆ ಏರಿಕೆ ಮಾಡಿತ್ತು. ಈ ಪರಿಷ್ಕೃತ ದರವು ಇಂದಿನಿಂದ ಜಾರಿಗೆ ಬಂದಿದೆ.

Netflix India cuts prices across its streaming plans

ಇದನ್ನು ಓದಿ: Corona Mask Test : ಇನ್ಮುಂದೆ ಮಾಸ್ಕ್ ಮೂಲಕವೂ ಕೋವಿಡ್ ಪತ್ತೆಹಚ್ಚಬಹುದು

ಇದನ್ನೂ ಓದಿ: Jobs: ಮನೆಯಲ್ಲೇ ಕುಳಿತು ಇಂಗ್ಲಿಷ್ ಕಲಿಯಿರಿ ಮತ್ತು ಉದ್ಯೋಗ ಪಡೆಯಿರಿ

Comments are closed.