ನಿಮ್ಮ ಅದೃಷ್ಟ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸರಳ ಉಪಾಯ; ಮನೆಯ ಸುತ್ತ ಈ 5 ಗಿಡಗಳನ್ನು ಬೆಳೆಸಿ ನೋಡಿ
Vastu For Auspicious Plants: ಹಿಂದೂ ಧರ್ಮದಲ್ಲಿ ಪ್ರಕೃತಿಯನ್ನು ದೇವರೆಂದು ಆರಾಧಿಸುತ್ತಾರೆ. ಭೂಮಿಯ ಮೇಲಿನ ಜೀವಿಗಳು ಬದುಕಲು ಅತ್ಯವಶ್ಯಕವಾದ ಆಮ್ಲಜನಕವನ್ನು ನೀಡುವ ಗಿಡಗಳನ್ನು ಪೂಜ್ಯ ಭಾವದಿಂದ ನೋಡುತ್ತಾರೆ.
ಕೆಲವು ಗಿಡಗಳನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಸುತ್ತಾರೆ. ಏಕೆಂದರೆ ಆ ಗಿಡಗಳು ನಕರಾತ್ಮಕ ಅಂಶಗಳನ್ನು ಹೋಗಲಾಡಿಸಿ ಧನಾತ್ಮಕ ಶಕ್ತಿಯನ್ನು ಸ್ಥಾಪಿಸಲು ಸಹಾಯ ಮಾಡುತ್ತವೆ.
ಆದ್ದರಿಂದ ಮನೆಯ ಸುತ್ತಮುತ್ತ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರವೂ ಮನೆಯ ಸುತ್ತ ಕೆಲವು ಗಿಡಗಳನ್ನು ಬೆಳೆಸುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ.
ಅದರಲ್ಲಿ ಕೆಲವು ಗಿಡಗಳಂತೂ ಅತಿ ಹೆಚ್ಚು ಧನಾತ್ಮಕ ಶಕ್ತಿ ಹರಡುವಂತೆ ಮಾಡುತ್ತದೆ. ಜೊತೆಗೆ ಮನೆಯ ಎಲ್ಲ ಸದಸ್ಯರ ಮೇಲೂ ಶುಭ ದೃಷ್ಟಿ ಬೀರುವಂತೆ ಮಾಡುತ್ತದೆ. ಅಂತಹ 5 ಅದೃಷ್ಟದ ಸಸ್ಯಗಳ ಬಗ್ಗೆ ಇಂದು ತಿಳಿಯೋಣ.
ಬಾಳೆ ಗಿಡ
ಹಿಂದೂ ಧರ್ಮದಲ್ಲಿ ಬಾಳೆ ಗಿಡಕ್ಕೆ ಬಹಳಷ್ಟು ಮಹತ್ವ ನೀಡಲಾಗಿದೆ. ಎಲ್ಲಾ ಶುಭ ಕಾರ್ಯಗಳಲ್ಲಿ ಬಾಳೆ ಕಂಬ, ಬಾಳೆ ಎಲೆ, ಬಾಳೆ ಹಣ್ಣುಗಳು ಪವಿತ್ರವೆಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಬಾಳೆ ಗಿಡವನ್ನು ಮನೆಯ ಈಶಾನ್ಯ ಮೂಲೆಯಲ್ಲಿ ನೆಡುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಇದು ನಿಮಗೆ ಅದೃಷ್ಟವನ್ನು ತಂದುಕೊಡುತ್ತದೆ.
ಮಾವಿನ ಗಿಡ
ವಾಸ್ತು ಶಾಸ್ತ್ರದ ಪ್ರಕಾರ ಮಾವಿನ ಗಿಡವು ಅದೃಷ್ಟವನ್ನು ತರುವ ಸಸ್ಯವೆಂದು ಹೇಳಲಾಗಿದೆ. ಹಿಂದೂ ಧರ್ಮದಲ್ಲಿಎಲ್ಲಾ ಹಬ್ಬ ಹರಿದಿನಗಳಲ್ಲಿ ಮಾವಿನ ಎಲೆಯ ತೋರಣ ಮಾಡಿ ಹಾಕಲಾಗುತ್ತದೆ. ಏಕೆಂದರೆ ಇದು ಮನೆಗೆ ಧನಾತ್ಮಕ ಶಕ್ತಿಯನ್ನು ಆಕರ್ಷಸುತ್ತದೆ.
ನೆಲ್ಲಿಕಾಯಿ ಗಿಡ
ವಾಸ್ತು ಪ್ರಕಾರ ನೆಲ್ಲಿಕಾಯಿ ಗಿಡವು ಮನೆಯಲ್ಲಿದ್ದರೆ ಬಹಳ ಶುಭವೆಂದು ಪರಿಗಣಿಸಲಾಗಿದೆ. ಈ ಗಿಡವನ್ನು ಮನೆಯ ಸುತ್ತ ಬೆಳೆಸುವುದರಿಂದ ಕೆಲವು ಅಶುಭ ಸಸ್ಯಗಳಿಂದಾಗುವ ಹಾನಿಯನ್ನು ತಪ್ಪಿಸುತ್ತದೆ. ಅಷ್ಟೇ ಅಲ್ಲದೇ ನೆಲ್ಲಿಕಾಯಿ ಗಿಡವು ವಿಷ್ಣು ದೇವರಿಗೆ ಸಂಬಂಧಿಸಿದೆ ಎಂಬ ನಂಬಿಕೆಯಿದೆ.
ದಾಳಿಂಬೆ ಗಿಡ
ಮನೆಯಲ್ಲಿ ದಾಳಿಂಬೆ ಗಿಡವಿರುವುದು ತುಂಬಾ ಶುಭವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಗಿಡವನ್ನು ನೆಟ್ಟು ಬೆಳೆಸುವುದರಿಂದ ಮನೆಯಲ್ಲಿ ಸಂತೋಷ ನೆಲೆಸುತ್ತದೆ. ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಇದು ಕುಟುಂಬ ಸದಸ್ಯರ ನಡುವೆ ಉತ್ತಮ ಬಾಂಧವ್ಯವನ್ನು ಬೆಸೆಯುತ್ತದೆ.
ಇದನ್ನೂ ಓದಿ: Today Horoscope : ದಿನಭವಿಷ್ಯ: ಈ ರಾಶಿಗಿದೆ ಸುಕರ್ಮ ಯೋಗದ ಫಲ
ಅರಿಶಿಣ ಸಸ್ಯ
ಹಿಂದೂ ಧರ್ಮದಲ್ಲಿ ಅರಿಶಿಣಕ್ಕೆ ಬಹಳ ಮಹತ್ವವಿದೆ. ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಅರಿಶಿಣದ ಪುಡಿಯನ್ನು ಬಳಸಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಇದನ್ನು ಅತ್ಯಂತ ಶುಭ ಸಸ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಮನೆಯಲ್ಲಿ ಅರಿಶಿಣದ ಸಸ್ಯವನ್ನು ಬೆಳೆಸುವುದು ಆರ್ಥಿಕ ಸಮಸ್ಯೆಯನ್ನು ದೂರಮಾಡಿಕೊಳ್ಳಲು ಇರುವ ಉತ್ತಮ ಉಪಾಯ ಎನ್ನಲಾಗಿದೆ.



