Tirumala Tirupati Darshan Tickets : ತಿರುಮಲ ತಿರುಪತಿ ದರ್ಶನ ಮಾಡಲು ಸದವಕಾಶ; ಟಿಕೆಟ್‌ಗಳ ಸಂಖ್ಯೆ ಹೆಚ್ಚಿಸಲಿರುವ ಟಿಟಿಡಿ

ದೇಶಾದ್ಯಂತ ಕೋವಿಡ್-19 ಪ್ರಕರಣಗಳು ಇಳಿಮುಖವಾಗಿದ್ದು, ಇದರ ಪರಿಣಾಮವಾಗಿ ತಿರುಪತಿಯ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ (TTD Online Seva) ಹೆಚ್ಚಳವಾಗಿದೆ. ಹೀಗಾಗಿ ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) ಸರ್ವದರ್ಶನ (ಎಸ್‌ಎಸ್‌ಡಿ) ಟೋಕನ್‌ಗಳ ಸಂಖ್ಯೆ ಮತ್ತು ವೆಂಕಟೇಶ್ವರನ ದರ್ಶನಕ್ಕಾಗಿ ನೀಡಲಾಗುವ ಟಿಕೆಟ್‌ಗಳ (Tirumala Tirupati Darshan Tickets) ಸಂಖ್ಯೆಯನ್ನು ಹೆಚ್ಚಿಸಲು  ಟಿಟಿಡಿ (TTD Online Booking) ತೀರ್ಮಾನಿಸಿದೆ.

ಫೆಬ್ರವರಿ 1 ರಿಂದ 21 ರ ನಡುವೆ ತಿರುಪತಿ ದೇವಸ್ಥಾನದಲ್ಲಿ ದರ್ಶನ ಪಡೆಯುವ ಭಕ್ತರ ಸಂಖ್ಯೆ ಸುಮಾರು 50 ಪ್ರತಿಶತದಷ್ಟು ಏರಿಕೆ ಕಂಡಿದೆ. ಫೆಬ್ರವರಿ 1 ರಂದು ಸುಮಾರು 29,000 ಭಕ್ತರು ಪವಿತ್ರ ದೇಗುಲಕ್ಕೆ ಭೇಟಿ ನೀಡಿದರೆ, ಫೆಬ್ರವರಿ 21 ರಂದು ಸಂಖ್ಯೆ 39,000 ದಾಟಿದೆ. ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಾರ್ಚ್ ತಿಂಗಳ ದರ್ಶನ ಕೋಟಾವನ್ನು ಬುಧವಾರ ಬಿಡುಗಡೆ ಮಾಡಲಿದೆ. ಫೆಬ್ರವರಿ ಕೊನೆಯ ವಾರದ ದರ್ಶನ ಟಿಕೆಟ್‌ಗಳ ಹೆಚ್ಚುವರಿ ಕೋಟಾವನ್ನು ಮಾರ್ಚ್‌ನ ಕೋಟಾದೊಂದಿಗೆ ಬಿಡುಗಡೆ ಮಾಡುವುದಾಗಿ ದೇವಾಲಯದ ಸಂಸ್ಥೆ ಹೇಳಿದೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, TTD ಭಕ್ತರ ಸಂಖ್ಯೆಯನ್ನು ಕೋವಿಡ್-19 ಸೋಂಕಿಗಿಂತ ಪೂರ್ವದಲ್ಲಿ ದರ್ಶನ ನೀಡುತ್ತಿದ್ದ ಭಕ್ತರ ಸಂಖ್ಯೆಯಷ್ಟು ಏರಿಸಲು ನಿರ್ಧರಿಸಿದೆ. ಬುಧವಾರ, ಟಿಟಿಡಿ ಫೆಬ್ರವರಿ 24ರಿಂದ 28 ರ ಅವಧಿಗೆ ಹೆಚ್ಚುವರಿ 13,000 ಟಿಕೆಟ್‌ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಶ್ರೀನಿವಾಸಂ ಕಾಂಪ್ಲೆಕ್ಸ್, ಶ್ರೀ ಗೋವಿಂದರಾಜ ಸ್ವಾಮಿ ಚೌಲ್ಟ್ರಿಸ್ ಮತ್ತು ಭೂದೇವಿ ಕಾಂಪ್ಲೆಕ್ಸ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ 5000 ಆಫ್‌ಲೈನ್ SSD ಟೋಕನ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಇಂದು ಬುಧವಾರ ರೂ. 300ರ 25000 ಸ್ಲಾಟೆಡ್ ಸರ್ವ ದರ್ಶನ ಟಿಕೆಟ್‌ಗಳನ್ನು  ಬಿಡುಗಡೆಗೊಳಿಸಲು ನಿರ್ಧರಿಸಿರುವ ಟಿಟಿಡಿ ಅವುಗಳಲ್ಲಿ ಒಟ್ಟು 20,000 ಸ್ಲಾಟೆಡ್ ಸರ್ವ ದರ್ಶನ ಟಿಕೆಟ್‌ಗಳನ್ನು ಆಫ್‌ಲೈನ್ ಬುಕಿಂಗ್‌ಗಾಗಿ ನೀಡಲು ನಿರ್ಧರಿಸಿದೆ. ಕಳೆದ ವಾರದಿಂದ, ಟಿಟಿಡಿ ದಿನಕ್ಕೆ 15,000 ಆಫ್‌ಲೈನ್ ಸರ್ವದರ್ಶನ ಟೋಕನ್‌ಗಳನ್ನು ನೀಡಿದ್ದು ಈ ವಾರ ಅವುಗಳನ್ನು ಇನ್ನಷ್ಟು ಹೆಚ್ಚಿಸಲು ಮುಂದಾಗಿದೆ.

ಇದನ್ನೂ ಓದಿ: Jeevan Jyoti Bima Yojana: ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ದರದ ಟರ್ಮ್ ಇನ್ಶೂರೆನ್ಸ್ ಯೋಜನೆ ಹೊಂದಿದೆ ಭಾರತ

(Tirumala Tirupati Darshan TTD Tickets more SSD tokens release today)

Comments are closed.