Onion Juice on Hair : ಕೂದಲ ರಕ್ಷಣೆಗೆ ಈರುಳ್ಳಿ ಬಳಸಿ

  • ಅಂಚನ್ ಗೀತಾ

ಚಳಿಗಾಲ ಶುರುವಾಯಿತು ಅಂದ್ರೆ ಸಾಕು ಚರ್ಮದ ಸಮಸ್ಯೆ ಜೊತೆಗೆ ಕೂದಲು ಉದುರುವಿಕೆ ಕೂಡ ಆರಂಭವಾಗುತ್ತೆ. ಒಂದೆಡೆ ತಲೆ ಕೂದಲು ಉದುರುತ್ತಾ ಇದ್ರೆ ಇನ್ನೊಂದು ಕಡೆ ಡ್ರೈನೆಸ್ ಶುರುವಾಗುತ್ತೆ. ಹಾಗದ್ರೆ ಈ ಕೂದಲು ಉದುರುವಿಕೆ ತಡೆಗೆ ಸುಲಭ ಪರಿಹಾರ ಇಲ್ಲಿದೆ ನೋಡಿ. (Onion Juice on Hair)


ಈರುಳ್ಳಿ ಬಗ್ಗೆ ಯಾರಿಗ್ ತಾನೆ ಗೊತ್ತಿಲ್ಲ ಹೇಳಿ. ಈ ಈರುಳ್ಳಿ ಕತ್ತರಿಸಿದ್ರೆ ಸಾಕು ಕಣ್ಣಲ್ಲಿ ನೀರು ಬರುತ್ತೆ. ಆದ್ರೆ ಇದ್ರ ಪ್ರಯೋಜನ ಕೇಳಿದ್ರೆ ನೀವು ಬೆರಗಾಗ್ತಿರಾ. ಹಾಗಾದ್ರೆ ಕೂದಲು ಉದುರೋದನ್ನ ತಡೆಗಟ್ಟಲು ಈರುಳ್ಳಿ (Onion Juice on Hair ಯಾವ ರೀತಿ ಪ್ರಯೋಜನಕಾರಿ ಇಲ್ಲಿದೆ ಟಿಪ್ಸ್.

ಒಂದು ಈರುಳ್ಳಿ ಕತ್ತರಿಸಿ ಅದನ್ನ ಮಿಕ್ಸಿ ಜಾರ್ ನಲ್ಲಿ ರುಬ್ಬಿ ಚೆನ್ನಾಗಿ ರುಬ್ಬಿದ ಬಳಿಕ ಈರುಳ್ಳಿ ರಸವನ್ನು ಕೂದಲ ಬುಡಕ್ಕೆ ಕಾಟನ್ ನಲ್ಲಿ ಅಪ್ಲೈ ಮಾಡಿ. ಚೆನ್ನಾಗಿ 5 ನಿಮಿಷ ಮಸಾಜ್ ಮಾಡಿ. ಬಳಿಕ ಎರಡು ಗಂಟೆಗಳ ಕಾಲ ಬಿಟ್ಟು ಸ್ನಾನ ಮಾಡಿ ಇಲ್ಲವಾದಲ್ಲಿ ರಾತ್ರಿ ಅಪ್ಲೈ ಮಾಡಿ ಮುಂಜಾನೆ ಸ್ನಾನ ಮಾಡಬಹುದು.

ಕೆಲವರಿಗೆ ಈರುಳ್ಳಿ ಗಮ ಸಹಿಸಿಕೊಳ್ಳೊದು ಕಷ್ಟಕರ ಅಂತಹವರು ಎರಡು ತಾಸು ಬಿಟ್ಟು ಸ್ನಾನ ಮಾಡಿದ್ರೆ ಸೂಕ್ತ. ಈ ಈರುಳ್ಳಿ ಜ್ಯೂಸ್ ಬಳಕೆಯಿಂದ ಕೂದಲು ಶೈನ್ ಆಗೋದ್ರ ಜೊತೆಗೆ ಬಿಳಿ ಕೂದಲ ಜಾಗದಲ್ಲಿ ಕಪ್ಪು ಕೂದಲು ಬೆಳೆಯಲು ಸಹಾಕಾರಿಯಾಗುತ್ತದೆ ಆನಿಯನ್ ಜ್ಯೂಸ್.

ಇದ್ರಲ್ಲಿ ಕ್ಯಾಲ್ಸಿಯಂ,ವಿಟಮಿನ್ ಸಿ ಯಥೇಚವಾಗಿರೋದ್ರಿಂದ ಇದು ಕೂದಲ ಬೆಳವಣಿಗೆಗೆ ಸಹಕಾರಿ. ಈ ಜ್ಯೂಸ್ ಅನ್ನ ವಾರಕ್ಕೆರಡು ಬಾರಿ ಅಪ್ಲೈ ಮಾಡಿ ರಿಸಲ್ಟ್ ನೋಡಿ ನೀವೆ ಬೆರಗಾಗ್ತಿರಾ.

ಚಳಿಗಾಲದಲ್ಲಿ ಕೂದಲ ರಕ್ಷಣೆಗಂತೂ ಈ ಈರುಳ್ಳಿ ಜ್ಯೂಸ್ ಬಹು ಪ್ರಯೋಜನಕಾರಿ. ಮತ್ಯಾಕ್ ತಡ ನೀವೂ ಒಂದ್ಸಾರಿ ಟ್ರೈ ಮಾಡಿ.

ಇದನ್ನೂ ಓದಿ : Health Benefits of White Onion : ಬಿಳಿ ಈರುಳ್ಳಿಯ ಆರೋಗ್ಯ ಪ್ರಯೋಜನಗಳು ಏನು ಎಂಬುದು ನಿಮಗೆ ಗೊತ್ತಾ?

ಇದನ್ನೂ ಓದಿ : Coconut Oil Good Health : ಸೌಂದರ್ಯವನ್ನು ಹೆಚ್ಚಿಸುತ್ತೆ ತೆಂಗಿನ ಎಣ್ಣೆ

(Use onions for hair care)

Comments are closed.